Thursday, March 16, 2023

ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಇದುವರೆಗಿನ ಅತ್ಯಂತ ಬಲಶಾಲಿ ಟೆಲಿಸ್ಕೋಪ್ ಆಗಿ ಕೆಲಸ ಪ್ರಾರಂಭ ಮಾಡಲಿದೆ. ಅದರ ವಿಶೇಷತೆಗಳೇನು?

 ಜೇಮ್ಸ್ ವೆಬ್ ಗಿಂತಲೂ ಮೊದಲು ,ಹಲವಾರು ದೇಶಗಳು ಉಡಾವಣೆ ಮಾಡಿದ ಕೆಲವು ಮುಖ್ಯವಾದ ಸ್ಪೇಸ್ ಟೆಲಿಸ್ಕೋಪ್ ಗಳನ್ನು ನೋಡೋಣ.

ಮೇಲೆ ತೋರಿಸಿದ ಚಿತ್ರವು ದೂರದರ್ಶಕಗಳ ಕನ್ನಡಿಗಳ ವ್ಯಾಸವನ್ನು ತೋರಿಸಿದೆ.

1). ಅಕಾರಿ ಸ್ಪೇಸ್ ಟೆಲಿಸ್ಕೋಪ್ - ಯುರೋಪಿಯನ್ ಸ್ಪೇಸ್ ಏಜೆನ್ಸಿ (ESA), ಕೊರಿಯಾ, ಜಪಾನ್ ಸಹಯೋಗ/. ,2006 ರಲ್ಲಿ ಉಡಾವಣೆ, ಅವಧಿ — 5 ವರ್ಷ 9 ತಿಂಗಳು.

ಕನ್ನಡಿ ವ್ಯಾಸ - 0.69 ಮೀಟರ್

2) ಸ್ವಿಟ್ಜರ್ ಸ್ಪೇಸ್ ಟೆಲಿಸ್ಕೋಪ್ - ನಾಸಾ/ 2003 ರಲ್ಲಿ ಉಡಾವಣೆ. ಅವಧಿ - 7 ವರ್ಷ. ಕಕ್ಷೆಯ ಎತ್ತರ - 568 ಕಿಮೀ.

ಕನ್ನಡಿ ವ್ಯಾಸ - 0.85 ಮೀಟರ್.

3) ಕೆಪ್ಲರ್ ಸ್ಪೇಸ್ ಟೆಲಿಸ್ಕೋಪ್ - ನಾಸಾ/ 2009,

ಅವಧಿ - 3.5 ವರ್ಷ, ಕಕ್ಷೆಯ ಎತ್ತರ - 15 ಲಕ್ಷ ಕಿಮೀ.

ಕನ್ನಡಿ ವ್ಯಾಸ : 0.95 ಮೀಟರ್.

4) XMM ನ್ಯುಟಾನ್ - ಇಎಸ್ಎ/ 1999, ಅವಧಿ - 10 ವರ್ಷ

ಕನ್ನಡಿ ವ್ಯಾಸ : 3* 0.70 ಮೀಟರ್.

5) ಚಂದ್ರ x ray ಟೆಲಿಸ್ಕೋಪ್ - ನಾಸಾ/ 1999, ಕಕ್ಷೆ - 2.6 ಲಕ್ಷ ಕಿಮೀ.

ಕನ್ನಡಿ ವ್ಯಾಸ : ,1.2 ಮೀಟರ್.

6) GAIA ಸ್ಪೇಸ್ ಟೆಲಿಸ್ಕೋಪ್ : ಇಎಸ್ಎ/ 2013

ಕಕ್ಷೆ - 2.6 ಕಿಮೀ, ಅವಧಿ - 5 ವರ್ಷ.

ಕನ್ನಡಿ ವ್ಯಾಸ : 1.45 × 0.5 ಮೀಟರ್.

7) ಹಬಲ್ ಸ್ಪೇಸ್ ಟೆಲಿಸ್ಕೋಪ್ - ನಾಸಾ/ 1990, ಕಕ್ಷೆ - 600 ಕಿಮೀ.

ಕನ್ನಡಿ ವ್ಯಾಸ - 2.4 ಮೀಟರ್.

8) ಹರ್ಷೆಲ್ ಸ್ಪೇಸ್ ಟೆಲಿಸ್ಕೋಪ್ - ಇಎಸ್ಎ/ 2009,ಅವಧಿ - 3 ವರ್ಷ,

ಕನ್ನಡಿ ವ್ಯಾಸ - 3.5 ಮೀಟರ್. ಮೂರು ಕನ್ನಡಿ.

9) ಜೇಮ್ಸ್ ವೆಬ್ — ನಾಸಾ, ಇಎಸ್ ಎ, ಕೆನೆಡಿಯನ್ ಸ್ಪೇಸ್ ಆರ್ಗನೈಸೇಷನ್./ 2021,

ಕನ್ನಡಿ ವ್ಯಾಸ - 6.5 ಮೀಟರ್.

ಜೇಮ್ಸ್ ವೆಬ್ ಎನ್ನುವ ಹೆಸರು ಬಂದದ್ದು ನಾಸಾದ ಮಾಜಿ ಅಡಳಿತಾಧಿಕಾರಿ ಜೇಮ್ಸ್ ವೆಬ್ ರವರಿಂದ.

ಇದು ಡಿಸೆಂಬರ್ 25, 2021, ನಾಸಾ ಸಂಸ್ಥೆ ಅರಿಯಾನೆ 5 ರಾಕೆಟ್ ಮೂಲಕ ಉಡಾವಣೆ ಮಾಡಿದೆ. ಉಡಾವಣೆ ಯಾದ 30 ನಿಮಿಷಗಳಲ್ಲಿ ದೂರದರ್ಶಕವು ರಾಕೆಟ್ ನಿಂದ ಪ್ರತ್ಯೇಕ ಗೊಂಡಿದೆ.30ದಿನಗಳ ಬಳಿಕ ದೂರದರ್ಶಕವು L2 (ಲ್ಯಾಗ್ ರೇಂಜ್ ಪಾಯಿಂಟ್ 2 ) ತಲುಪಲಿದೆ.

ಇದಕಿಂತ ಮೊದಲು ನಾಸಾವು 1990 ರಲ್ಲಿ ಉಡಾವಣೆ ಮಾಡಿದ ಹಬ್ಬಲ್ ಟೆಲಿಸ್ಕೋಪ್ ದೂರದರ್ಶಕವು ಭೂಮಿಯ ಕಕ್ಷೆಯಲ್ಲಿ ಸುತ್ತುತಿದ್ದರೆ, ಜೇಮ್ಸ್ ವೆಬ್ ದೂರದರ್ಶನವು ಭೂಮಿಯಿಂದ ಸುಮಾರು 15 ಲಕ್ಷ ಕಿಮೀ ದೂರದಲ್ಲಿ ಸೂರ್ಯನ ಕಕ್ಷೆಯಲ್ಲಿ ಸುತ್ತಲಿದೆ.ಹಾಗಾಗಿಯೇ ಜೇಮ್ಸ್ ವೆಬ್ ದೂರದರ್ಶಕದ ಉಡಾವಣೆ ಮತ್ತು ನಿಯೋಜನೆಯು ಅತ್ಯಂತ ಸವಾಲಿನ ಕೆಲಸ ಎನ್ನುತ್ತಾರೆ ನಾಸಾ, ಇಎಸ್ಓ, ಕೆನೆಡಾ ಸ್ಪೇಸ್ ಆರ್ಗ್. ನ ವಿಜ್ಞಾನಿಗಳು.

ಹಬಲ್ ದೂರದರ್ಶಕವು ಈ ಬ್ರಮ್ಹಾಂಡದ ಕುರಿತು ನಮಗೆ ಅಗಾಧ ಮಾಹಿತಿಯನ್ನು ಒದಗಿಸಿದೆ.ಈಗ ಜೇಮ್ಸ್ ವೆಬ್ ಬ್ರಹ್ಮಾಂಡವು ಆರಂಭದಲ್ಲಿ ಸೃಷ್ಟಿಯಾದ ಕೆಲವು ನಕ್ಷತ್ರ ಪುಂಜಗಳನ್ನು ಪತ್ತೆಹಚ್ಚಲು ಹಾಗೂ ನಮ್ಮ ಕ್ಷೀರಪಥ ( ಮಿಲ್ಕಿ ವೆ ಗ್ಯಾಲಾಕ್ಸಿ) ಸೇರಿದಂತೆ ವಿವಿಧ ತಾರಾಪುಂಜಗಳು ಸೃಷ್ಟಿಯಾಗಿದ್ದು ಹೇಗೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ನೆರವಾಗಲಿದೆ. ಹಬಲ್ ಟೆಲಿಸ್ಕೋಪ್ ಗಿಂತ , ಜೇಮ್ಸ್ ವೆಬ್ ಟೆಲಿಸ್ಕೋಪ್ ತುಂಬಾ ಶಕ್ತಿಯುತವಾಗಿದೆ.

ಜೇಮ್ಸ್ ವೆಬ್ , ಹಬಲ್ ಗಿಂತ ನೂರು ಪಟ್ಟು ಶಕ್ತಿಯುತವಾಗಿರುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಜೇಮ್ಸ್ ವೆಬ್ (JWST), ಹಬಲ್ ಗಿಂತ ಹೇಗೆ ಶಕ್ತಿಯುತ ಮತ್ತು ಭಿನ್ನ ಎಂದು ನೋಡೋಣ.

1). ಹಬಲ್ ದೂರದರ್ಶಕದ ಮೂಲ.ಕನ್ನಡಿಯ ಅಗಲ — 2.4 ಮೀಟರ್.

ಜೇಮ್ಸ್ ವೆಬ್ ದೂರದರ್ಶಕದ ಮೂಲ ಕನ್ನಡಿಯ ಅಗಲ — 6.5 ಮೀಟರ್. ( ಟೆನಿಸ್ ಕೋರ್ಟ್ ಗಾತ್ರ). ಇದರ ಮೂಲದರ್ಪಣವು ಚಿನ್ನದಿಂದ ಲೇಪಿತವಾಗಿದೆ.

2) ಹಬಲ್ ಒಂದೇ ಒಂದು ಟೆಲಿಸ್ಕೋಪ್ ಕನ್ನಡಿ ಹೊಂದಿದೆ.

ಜೇಮ್ಸ್ ವೆಬ್ ನಲ್ಲಿ 18 ಕನ್ನಡಿಗಳಿವೆ.

3) ಹಬಲ್ 570 ಕಿಮೀ ಎತ್ತರದಲ್ಲಿ ಕಾರ್ಯಾಚರಣೆ ಮಾಡುತ್ತಲಿದೆ.

ಜೇಮ್ಸ್ ವೆಬ್ 15 ಲಕ್ಷ ಕಿಮೀ ಎತ್ತರದಲ್ಲಿ (L2) ನಿಯೋಜನೆಗೊಳ್ಳಲಿದೆ.

4) ಹಬಲ್ ಭೂಮಿಯ ಸುತ್ತ ಸುತ್ತುತ್ತಿದೆ.

ಜೇಮ್ಸ್ ವೆಬ್ ಸೂರ್ಯನ ಸುತ್ತ ಸುತ್ತಲಿದೆ.

5) ಹಬಲ್ 1250 ಕೋಟಿ ವರ್ಷಗಳ ಹಿಂದಿನ ಗ್ಯಾಲಕ್ಸಿ ಗಳನ್ನು ನೋಡಬಹುದು.

ಜೇಮ್ಸ್ ವೆಬ್ 1350 ಕೋಟಿ ವರ್ಷಗಳ ಗ್ಯಾಲಾಕ್ಸಿ ಗಳನ್ನು ನೋಡಬಹುದು.

ಹಬಲ್ ಟೆಲಿಸ್ಕೋಪ್ , ಬಿಗ್ ಬ್ಯಾಂಗ್ ಆದನಂತರದ ಕೇವಲ 480 ದಶಲಕ್ಷ ವರ್ಷಗಳ ನಂತರ ರೂಪುಗೊಂಡ ಗೆಲಾಕ್ಸಿಗಳ ಸ್ನಾಪ್ ಶಾಟ್ ತೆಗೆದುಕೊಳ್ಳಬಹುದು. ನಾಸಾ ಈ ಗೆಲಾಕ್ಸಿಗಳನ್ನು " ಟಾಡ್ಲರ್ ಗೆಲಾಕ್ಸಿಗಳು " ಎಂದು ವಿವರಿಸುತ್ತಾರೆ. ಆದರೆ ಈ ಗೆಲಾಕ್ಸಿಗಳು ಬ್ರಹ್ಮಾಂಡದಲ್ಲಿ ರೂಪುಗೊಂಡ ಮೊದಲನೆಯ ಗೆಲಾಕ್ಸಿಗಳು ಅಲ್ಲ.

ಆದರೆ ಜೇಮ್ಸ್ ವೆಬ್ , ಬಿಗ್ ಬ್ಯಾಂಗ್ ನಂತರ 200 ಮಿಲಿಯನ್ ವರ್ಷಗಳ ನಂತರ ರೂಪುಗೊಂಡ ಗೆಲಾಕ್ಸಿಗಳ ನ್ನು ನೋಡುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ. ನಾಸಾ ಈ ಗೆಲಾಕ್ಸಿಗಳನ್ನು "ಬೇಬಿ" ಗೆಲಾಕ್ಸಿ ಎನ್ನುವರು.

6) ಹಬಲ್ ಅತಿ ನೇರಳೆ ಕಿರಣಗಳನ್ನು ಅಧ್ಯಯನ ಮಾಡುತ್ತದೆ.

ಜೇಮ್ಸ್ ವೆಬ್ ಆವಗೆಂಪು ( Infrared ಕಿರಣ) ಗಳನ್ನು ಅಧ್ಯಯನ ಮಾಡುತ್ತದೆ.

ಲ್ಯಾಂಗ್ರೇಜ್ ಪಾಯಿಂಟ್—ಜೇಮ್ಸ್ ವೆಬ್ ಟೆಲಿಸ್ಕೋಪ್ ಭೂಮಿಯ ಕಕ್ಷೆಯಾಚೆಗಿನ " ಲ್ಯಾಂಗ್ರೇಜ್ ಪಾಯಿಂಟ್ " ನಲ್ಲಿ ಇರಿಸಲಾಗುತ್ತದೆ.ಇದು ಸದಾ ಭೂಮಿಯ ನೆರಳಿನಲ್ಲೇ ಇರುತ್ತದೆ. ಸೂರ್ಯ ಮತ್ತು ದೂರದರ್ಶಕದ ಮಧ್ಯ ಭೂಮಿ ಇರುತ್ತದೆ. ಸೂರ್ಯ, ಭೂಮಿ, ಮತ್ತು ಜೇಮ್ಸ್ ವೆಬ್ ಮೂರು ಒಂದೇ ಸರಳ ರೇಖೆಯಲ್ಲಿ ಇರುತ್ತವೆ. ಈ ಸಂಯೋಜನೆಯಲ್ಲಿ ಭೂಮಿಯ ನೆರಳಿನ ಪ್ರದೇಶದಲ್ಲಿ ಸೂರ್ಯನ ಗುರುತ್ವ ಬಲ ಸ್ವಲ್ಪ ಕಡಿಮೆ ಇರುತ್ತದೆ. ಹೀಗಾಗಿ ಸೂರ್ಯನ ಗುರುತ್ವ ಬಲವನ್ನು ತಪ್ಪಿಸಿಕೊಂಡು ಸೂರ್ಯನನ್ನು ಸುತ್ತಲು ಈ ದೂರದರ್ಶಕವು ಹೆಚ್ಚಿನ ಶಕ್ತಿ ವ್ಯಯ ಮಾಡಬೇಕಾಗುವುದಿಲ್ಲ. ಈ ಕಾರಣದಿಂದ ಲ್ಯಾಂಗ್ ರೇಜ ಪಾಯಿಂಟ್ ಅನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಬಾಹ್ಯಾಕಾಶವು ನಿರಂತರವಾಗಿ ವಿಸ್ತರಿಸುತ್ತಿರುವ ವದರಿಂದ , ವಿಶ್ವದಲ್ಲಿ ನಮ್ಮಿಂದ ದೂರವಿರುವ ವಸ್ತುಗಳು ನಮ್ಮಿಂದ ದೂರ ದೂರ ಸರಿಯುತ್ತಿವೆ.ಆಗ ಬೆಳಕಿನ ಕಿರಣಗಳು ಕೂಡಾ ವಿಸ್ತರಿಸುತ್ತಾ ಹೋಗುತ್ತಿವೆ.ನಕ್ಷತ್ರಗಳು ದೂರ ಹೋದಂತೆ ಅತಿ ನೇರಳೆ ಕಿರಣಗಳು (ultraviolet) ,ಅವಿಗೆಂಪು (Infrared) ಕಿರಣಗಳಾಗಿ ಬದಲಾವಣೆ ಹೊಂದುತ್ತವೆ.

ಈ ನೇರಳೆ ಕಿರಣಗಳಿಗೆ (ultraviolet) ಬಾಹ್ಯಾಕಾಶದಲ್ಲಿರುವ ಅನಿಲ ಮತ್ತು ಧೂಳಿನ ಕಿರಣಗಳನ್ನು ದಾಟಿಕೊಂಡು ಬರಲಾಗುವುದಿಲ್ಲ, ಆದರೆ ಆವಿಗೆಂಪು (Infrared)ಕಿರಣಗಳು ಈ ಅನಿಲ ಮತ್ತು ಧೂಳಿನ ಕಿರಣಗಳನ್ನು ದಾಟಿಕೊಂಡು ಬರುವ ಶಕ್ತಿಯಿದೆ. ಈ ಆವಗೆಂಪು ಕಿರಣಗಳನ್ನು ನೋಡುವ ಶಕ್ತಿ ಜೇಮ್ಸ್ ವೆಬ್ ಟೆಲಿಸ್ಕೋಪ್ ಗಿದೆ.

ಜೇಮ್ಸ್ ವೆಬ್ ನಿಂದ ವಿಜ್ಞಾನಿಗಳು ಬ್ಬಹ್ಮಾಂಡ ಹೇಗೆ ಹುಟ್ಟಿತು ಎಂದು ತಿಳಿದುಕೊಳ್ಳುವ ಸಾಧ್ಯತೆಯಿದೆ. ಹಾಗಾಗಿ ಎಲ್ಲಾ ಸ್ಪೇಸ್ ಟೆಲಿಸ್ಕೋಪ್ ಗಳಿಗಿಂತಲೂ ಜೇಮ್ಸ್ ವೆಬ್ ಶಕ್ತಿಶಾಲಿಯಾಗಿದೆ..

No comments:

ಚರ್ಮದ ತುರಿಕೆ? ಹಾಗಾದರೆ ಈ 6 ಮನೆಮದ್ದುಗಳನ್ನು ಪ್ರಯತ್ನಿಸಿ

  ಚರ್ಮದ ತುರಿಕೆ ತುಂಬಾ ಕಿರಿಕಿರಿ ಉಂಟುಮಾಡುತ್ತದೆ. ನೀವು ಹೆಚ್ಚು ಕೆರೆದುಕೊಂಡರೆ ಮಾಡಿದರೆ, ಅದು ಹೆಚ್ಚು ತುರಿಕೆಯಾಗುತ್ತದೆ. ಅತಿಯಾದ ಕೆರೆಯುವಿಕೆ ಚರ್ಮವನ್ನು ಹಾನಿಗ...