ಅಯೋಟಾವನ್ನು ಅರ್ಥ ಮಾಡಿಕೊಳ್ಳಲು ನಂಬರ್ ಲೈನ್ ಬಗ್ಗೆ ಸ್ವಲ್ಪ ನೆನಪು ಮಾಡಿಕೊಂಡರೆ ಅನುಕೂಲ.
ಇದು ನಂಬರ್ ಲೈನ್.
ಸೊನ್ನೆಯಿಂದ ಬಲಕ್ಕೆ ಪಾಸಿಟಿವ್ ಅಂಕೆಗಳು ಮತ್ತು ಎಡಕ್ಕೆ ನೆಗೆಟಿವ್ ಅಂಕೆಗಳಿವೆ.
ಪಾಸಿಟಿವ್ ಅಂಕೆಯನ್ನು ಪಾಸಿಟಿವ್ ಅಂಕೆಯಿಂದ ಗುಣಿಸಿದರೆ ಅಂಕೆ ಬಲದಿಕ್ಕಿನಲ್ಲಿ ಮುಂದೆ ಹೋಗುತ್ತದೆ; ನೆಗೆಟಿವ್ ಅಂಕೆಯಿಂದ ಗುಣಿಸಿದರೆ ಅಂಕೆ ಎಡದಿಕ್ಕಿನಲ್ಲಿ ಹಿಂದೆ ಹೋಗುತ್ತದೆ.
ನೆಗೆಟಿವ್ ಅಂಕೆಯನ್ನು ಪಾಸಿಟಿವ್ ಅಂಕೆಯಿಂದ ಗುಣಿಸಿದರೆ ಅಂಕೆ ಎಡದಿಕ್ಕಿನಲ್ಲಿ ಹಿಂದೆದೆ ಹೋಗುತ್ತದೆ; ನೆಗೆಟಿವ್ ಅಂಕೆಯಿಂದ ಗುಣಿಸಿದರೆ ಅಂಕೆ ಬಲದಿಕ್ಕಿನಲ್ಲಿ ಮುಂದೆ ಹೋಗುತ್ತದೆ.
ಯಾವುದಾದರೂ ವಿಶೇಷ ರೀತಿಯ ಅಂಕಿ ಇದ್ದು ಅದರಿಂದ ನಮ್ಮ ಸಾಮಾನ್ಯ ಪಾಸಿಟಿವ್ ಅಂಕೆಯನ್ನು ಗುಣಿಸಿದರೆ ಅಂಕಿ 90 ಡಿಗ್ರಿ ತಿರುಗಿ ಬೇರೆ ದಿಕ್ಕಿನಲ್ಲಿ ಹೋದರೆ ಎಷ್ಟು ಚೆಂದ ಅಲ್ಲವೇ! ಆ ತರಹದ ವಿಶೇಷ ರೀತಿಯ ಅಂಕಿಯೇ ಅಯೋಟಾ. ಇದನ್ನು i ಎಂದು ಬರೆಯುತ್ತೇವೆ.
***
ಬೇರೆ ಶಬ್ದಗಳಲ್ಲಿ ಹೇಳಬೇಕೆಂದರೆ ಪಾಸಿಟಿವ್ ಅಂಕಿಗಳನ್ನು i ಇಂದ ಗುಣಿಸಿದರೆ 90 ಡಿಗ್ರಿ ಎಡಕ್ಕೆ ತಿರುಗಿ y ಅಕ್ಷದ ಮೇಲೆ ಉತ್ತರ ದಿಕ್ಕಿನ ಅಂಕಿಗಳನ್ನು ತೋರಿಸುತ್ತದೆ. ಉದಾಹರಣೆಗೆ 1i , 2i, 3i...
***
ಈ ಅಂಕಿಗಳನ್ನು ಮತ್ತೆ i ಇಂದ ಗುಣಿಸಿದರೆ ಮತ್ತೆ 90 ಡಿಗ್ರಿ ಎಡಕ್ಕೆ ತಿರುಗಿ x ಅಕ್ಷದ ಎಡಗಡೆಗೆ (ಪಶ್ಚಿಮ ದಿಕ್ಕಿಗೆ) ನೆಗೆಟಿವ್ ಅಂಕಿಗಳನ್ನು ತೋರಿಸುತ್ತದೆ. ಉದಾಹರಣೆಗೆ 1i^2, 2i^2, 3i^2,...
ಇದರ ಅರ್ಥ 1i^2 = -1 (ಅಂದರೆ i^2 = -1)
2i^2 = -2
3i^2 = -3
ಇತ್ಯಾದಿ.
i^2 ಇಂದ ಗುಣಿಸುವುದೆಂದರೆ -1 ಇಂದ ಗುಣಿಸಿದ ಹಾಗೆ. ಬೇರೆ ಶಬ್ದಗಳಲ್ಲಿ i^2 = -1. ಆದ್ದರಿಂದ i = √-1.
***
ನೆಗೆಟಿವ್ ಅಂಕಿಗಳನ್ನು i ಇಂದ ಗುಣಿಸಿದರೆ 90 ಡಿಗ್ರಿ ಎಡಕ್ಕೆ ತಿರುಗಿ ಅಂದರೆ y ಅಕ್ಷದ ಕೆಳಗಡೆಗೆ ದಕ್ಷಿಣ ದಿಕ್ಕಿನ ಅಂಕಿಗಳನ್ನು ತೋರಿಸುತ್ತದೆ. ಉದಾಹರಣೆಗೆ 1i^3, 2i^3, 3i^3,...
ಇದರ ಅರ್ಥ 1i^3 = -1i
2i^3 = -2i
3i^3 = -3i
ಇತ್ಯಾದಿ.
i^3 ಇಂದ ಗುಣಿಸುವುದು ಮತ್ತು -i ಇಂದ ಗುಣಿಸುವುದು ಎರಡೂ ಒಂದೇ. ಎರಡರ ಪರಿಣಾಮವೂ ಸಂಖ್ಯೆಯನ್ನು 270 ಡಿಗ್ರಿಯ ಅಪ್ರದಕ್ಷಿಣೆ ಅಥವಾ 90 ಡಿಗ್ರಿಯ ಪ್ರದಕ್ಷಿಣೆ ಮಾಡಿಸಿದ ಹಾಗೆ.
-1i ತರಹದ ಅಂಕಿಗಳನ್ನು ಮತ್ತೆ i ಇಂದ ಗುಣಿಸಿದರೆ ಮತ್ತೆ 90 ಡಿಗ್ರಿ ಎಡಕ್ಕೆ ತಿರುಗಿ x ಅಕ್ಷದ ಬಲಗಡೆಗೆ ಪೂರ್ವ ದಿಕ್ಕಿನ ಪಾಸಿಟಿವ್ ಅಂಕಿಗಳನ್ನು ತೋರಿಸುತ್ತದೆ.
1i^3 * i = (-1i)*i = -1 * -1 = +1
2i^3 * i = -2i*i = -2 * -1 = +2
3i^3 * i = -3i*i = -3 * -1 = +3
ಇತ್ಯಾದಿ.
ಅಯೋಟಾ ಇರುವಂತಹ ಸಂಖ್ಯೆಗಳು ಸಾಮಾನ್ಯ(ರಿಯಲ್) ಸಂಖ್ಯೆಗಳು ಎಷ್ಟು ಸತ್ಯವೋ ಅಷ್ಟೇ ಸತ್ಯ. ಆದರೆ ಹಿಂದಿನ ಕಾಲದಲ್ಲಿ ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಇಂತಹ ಸಂಖ್ಯೆಗಳನ್ನು ಇಮ್ಯಾಜಿನರಿ (ಕಾಲ್ಪನಿಕ) ಸಂಖ್ಯೆಗಳು ಎಂದು ಕರೆದರು. ಆ ತಪ್ಪು ಹೆಸರೇ ಈಗಲೂ ಉಳಿದುಕೊಂಡು ಬಿಟ್ಟಿದೆ.
ಸಾಮಾನ್ಯ ಸಂಖ್ಯೆ ಮತ್ತು ಇಮ್ಯಾಜಿನರಿ ಸಂಖ್ಯೆಗಳನ್ನು ಕೂಡಿಸಿದರೆ ಬರುವ ಸಂಖ್ಯೆಗಳನ್ನು ಕಾಂಪ್ಲೆಕ್ಸ್ ಸಂಖ್ಯೆಗಳೆಂದು ಕರೆಯುತ್ತಾರೆ.
ಉದಾಹರಣೆಗೆ 1+2i, 3+I, 5–7i, a+bi ಇತ್ಯಾದಿ.
1+1i, 2+2i, 3+3i ಮುಂತಾದ ಸಂಖ್ಯೆಗಳು 45 ಡಿಗ್ರಿ ರೇಖೆಯಲ್ಲಿ ಇರುತ್ತವೆ.
a+bi ಕಾಂಪ್ಲೆಕ್ಸ್ ಸಂಖ್ಯೆ ಎಷ್ಟು ಡಿಗ್ರಿಯ ರೇಖೆಯ ಮೇಲೆ ಇದೆ ಎಂಬುದು a ಮತ್ತು b ನಡುವಿನ ಅನುಪಾತದ ಮೇಲೆ ಅವಲಂಬಿಸಿರುತ್ತದೆ.
No comments:
Post a Comment