ತುಂಗಾಭದ್ರಾ ಅಣೆಕಟ್ಟು (ಟಿಬಿ ಅಣೆಕಟ್ಟು) ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ತುಂಗಾ ಭದ್ರಾ ನದಿಗೆ ಅಡ್ಡವಾಗಿ ನಿರ್ಮಿಸಲಾದ ವಿವಿಧೋದ್ದೇಶ ಅಣೆಕಟ್ಟು. ಅಣೆಕಟ್ಟು ಕರ್ನಾಟಕದ ಹೊಸಪೇಟೆ ನಗರದ ಹತ್ತಿರದಲ್ಲಿದೆ. ಇದು ನೀರಾವರಿ ಸೇವೆಯ ವಿವಿಧೋದ್ದೇಶವುಳ್ಳ ಅಣೆಕಟ್ಟು., ವಿದ್ಯುತ್, ಪ್ರವಾಹ ನಿಯಂತ್ರಣ, ಇತ್ಯಾದಿ ಈ ಹಿಂದಿನ ಹೈದರಾಬಾದ್ ರಾಜ್ಯದ ಹಿಂದಿನ ಮದ್ರಾಸ್ ಪ್ರಾಂತ್ಯದ ಜಂಟಿ ಯೋಜನೆಯಲ್ಲಿ ನಿರ್ಮಾಣ ಆರಂಭಿಸಿದರು. ನಂತರ 1953 ರಲ್ಲಿ ಅದು ಕರ್ನಾಟಕ ಮತ್ತು ಆಂಧ್ರ ಪ್ರದೇಶ ಜಂಟಿ ಯೋಜನೆಯ ಆಯಿತು.ಬಳ್ಳಾರಿ ಜಿಲ್ಲೆ ಹೊಸಪೇಟೆ ಬಳಿ ಕರ್ನಾಟಕ-ಆಂಧ್ರಪ್ರದೇಶ ಸರ್ಕಾರಗಳು ಜಂಟಿಯಾಗಿ ನಿರ್ಮಿಸಿರುವ ತುಂಗಭದ್ರಾ ಅಣೆಕಟ್ಟೆ ರಾಜ್ಯದ ಅತಿ ದೊಡ್ಡ ಅಣೆಕಟ್ಟೆ ಎನ್ನುವ ಹಿರಿಮೆಗೆ ಪಾತ್ರವಾಗಿದೆ. 2441ಮೀಟರ್ ಉದ್ದ ಹಾಗೂ 49.38 ಮೀಟರ್ ಎತ್ತರ ಹೊಂದಿರುವ ತುಂಗಭದ್ರಾ ಅಣೆಕಟ್ಟು ನೀರಾವರಿ ಉದ್ದೇಶದಿಂದ ನಿರ್ಮಾಣಗೊಂಡಿದೆ. ಇದು ಹೊಸಪೇಟೆಯಿಂದ ಕೇವಲ 5 ಕಿಲೋಮೀಟರ್ ದೂರದಲ್ಲಿದೆ. 33 ಬಹುದೊಡ್ಡ ಗೇಟುಗಳನ್ನು ಹೊಂದಿರುವ ತುಂಗಾಭದ್ರಾ ಅಣೆಕಟ್ಟು ಬಹುದೊಡ್ಡ ಗಾತ್ರವನ್ನು ಹೊಂದಿದೆ. ಈ ಅಣೆಕಟ್ಟಿನಿಂದ ಸಂಗ್ರಹಿಸಲಾದ ನೀರನ್ನು ಕಾಲುವೆಗಳ ಮೂಲಕ ಕರ್ನಾಟಕದ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ರಾಯಚೂರು, ಕೊಪ್ಪಳ, ಹಾವೇರಿ ಹಾಗೂ ಆಂದ್ರಪ್ರದೇಶದ ಕರ್ನೂಲು, ಮೆಹಬೂಬ್ ನಗರ ಮುಂತಾದ ಜಿಲ್ಲೆಗಳಿಗೆ ನಿರಾವರಿ ಉದ್ದೇಶಕ್ಕಾಗಿ ಬಳಸಲಾಗುತ್ತದೆ.
ಅಣೆಕಟ್ಟೆ ನಿರ್ಮಾಣ ಆರಂಭ: 28ನೇ ಫೆಬ್ರುವರಿ 1945ರಂದು ಇಂದಿನ ಮುನಿರಾಬಾದ್ ಬಳಿ ಹೈದರಾಬಾದ್ ನಿಜಾಮ, ಇತ್ತ ಹೊಸಪೇಟೆಯ ಕಡೆ ಮದ್ರಾಸ್ ಪ್ರಾಂತೀಯ ಸರ್ಕಾರದ ಗವರ್ನರ್ ಆಗಿದ್ದ ಸರ್ ಆರ್ಥರ್ ಹೋಪ್ ಅಡಿಗಲ್ಲನ್ನು ಹಾಕಿ ಯೋಜನೆಯನ್ನು ಉದ್ಘಾಟಿಸಿದರು. ತಿರುಮಲೆ ಅಯ್ಯಂಗಾರ್ ನೇತೃತ್ವದಲ್ಲಿ ನಿರ್ಮಾಣ ಕಾರ್ಯ ಭರದಿಂದ ಆರಂಭವಾಯಿತು. ಆದರೆ ನಿರ್ಮಾಣ ವಸ್ತುಗಳ ಬಳಕೆಯ ವಿವಾದ, ನಿಜಾಮರ ಆಳ್ವಿಕೆಯ ಅಂತ್ಯ, ದೇಶಕ್ಕೆ ದೊರೆತ ಸ್ವಾತಂತ್ರ್ಯ, ಬದಲಾದ ಆಡಳಿತ ಮುಂತಾದ ಕಾರಣಗಳಿಂದ ಯೋಜನೆ ಕುಂಟುತ್ತಾ ಸಾಗಿತು.
ಸರ್ ಎಂ.ವಿಶ್ವೇಶ್ವರಯ್ಯ ನೇತೃತ್ವದ ಎಂಜಿನಿಯರ್‌ಗಳ ಮಂಡಳಿಯ ಮೇಲ್ವಿಚಾರಣೆಯಲ್ಲಿ ಪುನಃ ನಿರ್ಮಾಣ ಕಾರ್ಯ ಭರದಿಂದ ಸಾಗಿತು. 90 ಗ್ರಾಮಗಳು ಮುಳುಗಡೆಯಾಗಿ ಸುಮಾರು 55 ಸಾವಿರ ಜನರನ್ನು ಸ್ಥಳಾಂತರಿಸಲಾಯಿತು. 1953ರಲ್ಲಿ ಮೊದಲ ಬಾರಿಗೆ ಕಾಲುವೆಯಲ್ಲಿ ನೀರು ಹರಿಯಿತು. ನೂರಾರು ಕಿಲೋ ಮೀಟರ್ ಉದ್ದದ ಮೂರು ಕಾಲುವೆಗಳ ನಿರ್ಮಾಣವೂ ಮುಂದುವರೆದು 1960ರ ವೇಳೆಗೆ ಸಂಪೂರ್ಣಗೊಂಡಿತು. ಈಗಿನ ಹಾಗೆ ಅತ್ಯಾಧುನಿಕ ಯಂತ್ರಗಳು ಇಲ್ಲದೇ 340 ಕಿ.ಮೀ ಉದ್ದದ ಕಾಲುವೆಗಳ ನಿರ್ಮಾಣಕ್ಕೆ ಮಾನವ ಶಕ್ತಿ ಬಳಕೆಯಾಯಿತು! ಕಲ್ಲು ಗುಡ್ಡಗಳಲ್ಲಿ ಕಿಲೋಮೀಟರ್‌ಗಟ್ಟಲೆ ಸುರಂಗವನ್ನು ಕೊರೆದು ಕಾಲುವೆ ನಿರ್ಮಿಸಿದರು. ಕಠಿಣ ಸವಾಲುಗಳನ್ನು ಎದುರಿಸಿ ಅಣೆಕಟ್ಟನ್ನು ನಿರ್ಮಿಸಿದ ತಿರುಮಲೆ ಅಯ್ಯಂಗಾರ್ ಆಧುನಿಕ ಭಗೀರಥನೇ ಸರಿ. ತುಂಗಭದ್ರ ಅಣೆಕಟ್ಟು ಒಟ್ಟು101 ಟಿಎಂಸಿಅಡಿ(tmcft ) ಶೇಖರಣಾ ಸಾಮರ್ಥ್ಯದ ದೊಡ್ಡ ಜಲಾಶಯ. ಅದರ ಪೂರ್ಣ ಶೇಖರಣಾ ಮಟ್ಟ 498 ಮೀ ಸರಾಸರಿ ಸಮುದ್ರ ಮಟ್ಟದಿಂದ (ಒSಐ); ಹಾಗೂ ನೀರಿನ ಹರಡುವಿಕೆ 378 ಚದರ ಕಿಲೋಮೀಟರ್ ಪ್ರದೇಶವನ್ನು ಆಕ್ರಮಿಸಿ ತುಂಗಭದ್ರ ನದಿಯ ದೊಡ್ಡ ಜಲಾಶಯ ಸೃಷ್ಟಿಸುತ್ತದೆ. ಅಣೆಕಟ್ಟು ತನ್ನ ಆಳದ/ತಳಮಟ್ಟದ ಅಡಿಪಾಯದ ಮೇಲೆ 49.5 ಮೀಟರ್ಗಳಷ್ಟು ಎತ್ತರವಿದೆ. ಟಿಬಿ ಅಣೆಕಟ್ಟು ಹಲವಾರು ಪ್ರವಾಸಿ ಆಕರ್ಷಣೆಗಳನ್ನು ಹೊಂದಿದೆ. ಹಂಪಿಗೆ ಭೇಟಿ ನೀಡುವ ಹೆಚ್ಚಿನ ಪ್ರವಾಸಿಗರು ಟಿಬಿ ಅಣೆಕಟ್ಟಿಗೂ ಭೇಟಿ ನೀಡುತ್ತಾರೆ.
ಟಿಬಿ ಅಣೆಕಟ್ಟಿ ಸಮೀಪದ ಆಕರ್ಷಣೆಗಳು: ಸೌಂಡ್ ಮತ್ತು ಲೈಟ್ ಶೋ: ಟಿಬಿ ಡ್ಯಾಮ್ ರಾತ್ರಿಯಲ್ಲಿ ಬೆಳಕಿನ ಅಲಂಕಾರದಿಂದ ಪ್ರಕಾಶಿಸುವಾಗ ವೀಕ್ಷಿಸಲು ಬಹಳ ಸುಂದರವಾಗಿ ಕಾಣುತ್ತದೆ. 33 ಕ್ರೆಸ್ಟ್ ಗೇಟ್‌ಗಳಿದ್ದು ಪ್ರತಿ ಗೇಟಿನಿಂದ ಧುಮ್ಮಿಕ್ಕುವ ನೀರಿಗೆ ವಿಭಿನ್ನ ಬಣ್ಣಗಳ ಬೆಳಕಿನ ದೀಪ ಅಳವಡಿಸಲಾಗಿದ್ದು ವರ್ಣರಂಜಿತ ದೃಶ್ಯ ವೈಭವ ನೋಡಬಹುದಾಗಿದೆ. ಟಿಬಿ ಅಣೆಕಟ್ಟು ದೀಪಾಲಂಕಾರವನ್ನು ಪ್ರತಿದಿನ ಸಂಜೆ 7.15 ರಿಂದ ರಾತ್ರಿ 8.30 ರವರೆಗೆ ನಡೆಸಲಾಗುತ್ತದೆ. ನೀರಿನ ಮಟ್ಟ ಕಡಿಮೆಯಾದಾಗ ದೀಪಾಲಂಕಾರ ನಡೆಯದೇ ಇರಬಹುದು.
ಉದ್ಯಾನಗಳು: ಟಿಬಿ ಅಣೆಕಟ್ಟು ಬಳಿ ಉತ್ತಮವಾಗಿ ನಿರ್ವಹಿಸಲ್ಪಟ್ಟ ಉದ್ಯಾನಗಳಿದ್ದು ವಿಶ್ರಾಂತಿ ಪಡೆಯಲು ಉತ್ತಮ ಸ್ಥಳವಾಗಿದೆ.
ಮಾಹಿತಿ ಕೃಪೆ: ವಿಕಿಪೀಡಿಯ ಮತ್ತು ಕರ್ನಾಟಕ ರಾಜ್ಯ ಸರಕಾರ ದ ಮಾಹಿತಿ ತಾಣ.