ಭಾರತದಲ್ಲಿ ಒಟ್ಟು ಒಂಭತ್ತು ಅಂಚೆ ವಲಯಗಳಿವೆ.
ಅವುಗಳಲ್ಲಿ ಎಂಟು ಪ್ರಾದೇಶಿಕ ಅಂಚೆ ವಲಯಗಳು ಮತ್ತು , ಒಂಭತ್ತನೇ ವಲಯವು ಕೇವಲ ಮಿಲಿಟರಿಗಾಗಿ ಮೀಸಲಾಗಿರುವ ವಲಯವಾಗಿದೆ.
ಅವುಗಳೆಂದರೆ,
- 1 - ದೆಹಲಿ, ಹರಿಯಾಣ, ಪಂಜಾಬ್, ಹಿಮಾಚಲಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಹಾಗೂ ಚಂಡೀಗಡ.
- 2 - ಉತ್ತರಪ್ರದೇಶ ಮತ್ತು ಉತ್ತರಾಖಂಡ.
- 3 - ರಾಜಸ್ಥಾನ, ಗುಜರಾತ್, ದಿಯು ಮತ್ತು ದಮನ್, ದಾದ್ರಾ ಮತ್ತು ನಗರ್ ಹವೇಲಿ.
- 4 - ಗೋವಾ, ಮಹಾರಾಷ್ಟ್ರ, ಮಧ್ಯಪ್ರದೇಶ, ಮತ್ತು ಛತ್ತೀಸ್ಗಢ.
- 5 - ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ.
- 6 - ತಮಿಳುನಾಡು, ಕೇರಳ, ಪಾಂಡಿಚೇರಿ ಮತ್ತು ಲಕ್ಷದ್ವೀಪ.
- 7 - ಓರಿಸ್ಸಾ, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಝೋರಾಂ, ತ್ರಿಪುರ, ಮೇಘಾಲಯ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಆಸ್ಸಾಂ ಮತ್ತು ಸಿಕ್ಕಿಂ.
- 8 - ಬಿಹಾರ , ಜಾರ್ಖಂಡ್.
- 9 -ಆರ್ಮಿ ಪೋಸ್ಟ್ ಆಫೀಸ್.
ಈ ಅಂಚೆ ವಲಯಗಳು ಪಿನ್ (PIN) Postal Index Number ಅನ್ನುವ ಆರು ಅಂಕಿಗಳ ಸಂಖ್ಯೆಯಿಂದ ವರ್ಗೀಕರಿಸಲ್ಪಟ್ಟಿವೆ.
ಪೋಸ್ಟಲ್ ಇಂಡೆಕ್ಸ್ ನಂಬರ್ ಅಥವಾ ಪಿನ್ (PIN) ಅನ್ನು ಪ್ರಥಮವಾಗಿ ೧೫ನೇ ಅಗಸ್ಟ್ ೧೯೭೫ ರಲ್ಲಿ ಜಾರಿಗೊಳಿಸಲಾಯಿತು.
ಈ ಪಿನ್ ಗೆ ಅದರದ್ದೇ ಆದ ವ್ಯಾಖ್ಯಾನವಿದೆ. ಅದೆಂದರೆ,
- ಪಿನ್ ನ ಮೊದಲ ಅಂಕೆಯು ವಲಯವನ್ನ ಸೂಚಿಸುತ್ತದೆ.
- ಎರಡನೇ ಅಂಕೆಯು ಆ ವಲಯದ ಉಪವಲಯವನ್ನ ಸೂಚಿಸುತ್ತದೆ.
- ಮೂರನೇ ಅಂಕೆಯು ಉಪವಲಯದ ಜಿಲ್ಲೆಯನ್ನ ತೋರಿಸುತ್ತದೆ.
- ಕೊನೆಯ ಮೂರು ಅಂಕೆಗಳಿಂದ ಇಂತಹುದೇ ಅಂಚೆ ಕಛೇರಿ ಅನ್ನುವುದನ್ನ ತಿಳಿಯಬಹುದು.
ಅಂಚೆ ಸೇವೆಯು ಭಾರತದಲ್ಲಿ ಪ್ರಾರಂಭವಾಗಿ ಸುಮಾರು ನೂರಾ ಐವತ್ತು ವರುಷಗಳಾದವು.
ಇಂದು ಸುಮಾರು ೧೫೫೦೦೦ ಅಂಚೆ ಕಛೇರಿಗಳ ಮೂಲಕ ದೇಶದ ಮೂಲೆ ಮೂಲೆಗಳನ್ನ ಅಂಚೆಯಣ್ಣ ತಲುಪುತ್ತಾನೆ.
ಒಂದು ಕಾಲದಲ್ಲಿ ಭಾರತೀಯ ಜನರ ಜೀವನಾಡಿಯಾಗಿದ್ದ ಅಂಚೆ ಇತ್ತೀಚಿನ ದಿನಗಳಲ್ಲಿ ತನ್ನ ಇರುವಿಕೆಯನ್ನ ಹೇಳಿಕೊಳ್ಳಬೇಕಾಗಿ ಬಂದಿದೆ.
ಪತ್ರ ವ್ಯವಹಾರದ ಜೊತೆಗೆ, ನಾಗರಿಕ ಸಮುದಾಯಕ್ಕೆ ಸರಕಾರದಿಂದ ಕೊಡುವ ಸವಲತ್ತುಗಳನ್ನ ತಲುಪಿಸುವ ಸರಕಾರದ ಪ್ರತಿನಿಧಿಯಾಗಿ ಕೂಡಾ ಕೆಲಸ ಮಾಡುತ್ತಿದೆ.
ಜೊತೆಗೆ ಜೀವವಿಮೆ, ಹಣಕಾಸು ಮತ್ತು ಬ್ಯಾಂಕಿಂಗ್ ವ್ಯವಹಾರವನ್ನ ಕೂಡಾ ಪ್ರಾರಂಭಿಸಿದೆ.
ಸುಕನ್ಯಾ ಸಮೃದ್ಧಿ ಯಂತಹ ಜನಪ್ರಿಯ ಠೇವಣಿ ಯೋಜನೆಯನ್ನು ಕೂಡಾ ಪರಿಚಯಿಸಲಾಯಿತು.
ಈ ಎಲ್ಲ ಸೇವೆಯನ್ನ ಜನರಿಗೆ ಒದಗಿಸುತ್ತಿರುವ ಅಂಚೆ ನಡೆದು ಬಂದ ದಾರಿ, ಒದಗಿಸಿದ ಮತ್ತು ಒದಗಿಸುತ್ತಿರುವ ಸೇವೆ ಮಾತ್ರ ಅಪೂರ್ವವಾದದ್ದು ಮತ್ತು ಸ್ಮರಣೀಯವಾದದ್ದು.