==================
'ಬ್ರಹ್ಮಾಸ್'ತ್ರವೆಂದೇ ಪರಿಗಣಿತವಾದ ಸೂಪರ್‌ಸಾನಿಕ್ ಕ್ಷಿಪಣಿ ನಮ್ಮ ಸೇನೆಯ ಬತ್ತಳಿಕೆಯಲ್ಲಿದೆ. ಆಗಸದಿಂದ (ವಿಮಾನ), ನೀರೊಳಗಿಂದ (ಜಲಾಂತರ್ಗಾಮಿ) ಹಾಗೂ ನೆಲದ ಮೇಲಿಂದಲೂ ನಿಖರ ಗುರಿಯತ್ತ ತೂರಬಹುದಾದ ಶಬ್ದವೇಧಿ ಕ್ಷಿಪಣಿಯಿದು. ಸೆಕೆಂಡಿಗೆ ಒಂದು ಕಿಲೋಮೀಟರ್ ವೇಗದಲ್ಲಿ ಕ್ರಮಿಸಬಲ್ಲ'ಬ್ರಹ್ಮಾಸ್'ಗೆ ಜಗತ್ತಿನ ಅತ್ಯಧಿಕ ವೇಗದ ಶಬ್ಧವೇಧಿ ಕ್ಷಿಪಣಿಯೆಂಬ ಹೆಗ್ಗಳಿಕೆಯಿದೆ. ಈ ವೇಗಕ್ಕೆ ಕ್ಷಿಪಣಿಯನ್ನು ತೂರಲು ಎರಡು ಹಂತದ ಎಂಜಿನ್‌ಗಳಿವೆ. ಮೊದಲ ಹಂತದಲ್ಲಿ ನಮ್ಮ ಉಪಗ್ರಹ ಉಡ್ಡಯಣೆಯ ರಾಕೆಟ್‌ಗಳಲ್ಲಿ ಬಳಸುವಂಥ ಘನ-ಇಂಧನಎಂಜಿನ್ ಇದೆ. ಎರಡನೆಯ ಹಂತಕ್ಕೆ 'ರಾರಯಮ್'ಜೆಟ್ ಎಂಜಿನ್ ಇದೆ. ರಭಸದಿಂದ ಮುನ್ನುಗ್ಗುವ ಗಾಳಿಯನ್ನು ಸ್ವೀಕರಿಸಿ ಅದನ್ನು ಅದುಮಿ ನಳಿಕೆಯ ಮೂಲಕ ಶಬ್ದಕ್ಕಿಂತಲೂ ಹೆಚ್ಚಿನ ವೇಗದಲ್ಲಿಹೊರತೂರಬಲ್ಲಸಾಮರ್ಥ್ಯ ಈ ಎಂಜಿನ್‌ಗಳದು. ಇದರಿಂದಾಗಿ ಎರಡನೆಯ ಹಂತದ ಎಂಜಿನ್ ಚಾಲನೆಯಲ್ಲಿದ್ದಾಗ ಕ್ಷಿಪಣಿಯೂ ಶಬ್ದವೇಧಿ ವೇಗದಲ್ಲಿ ಮುಂದೆ ಸಾಗುತ್ತದೆ.
==================
ಈ ತಂತ್ರಜ್ಞಾನದ ಮುಂದಿನ ಹೆಜ್ಜೆ, 'ಸೂಪರ್‌ಸಾನಿಕ್' ವೇಗದಲ್ಲಿ ಗಾಳಿಯನ್ನು ಊಡಿಕೆ ಮಾಡಿ, ಅದನ್ನು ಅದುಮಿ ನಳಿಕೆಯ ಮೂಲಕ 'ಹೈಪರ್‌ಸಾನಿಕ್' ವೇಗದಲ್ಲಿ ಬಿಡುಗಡೆ ಮಾಡುವುದು. ಈ 'ಹೈಪರ್‌ಸಾನಿಕ್' ವೇಗವೆಂದರೆ ಶಬ್ದದ ವೇಗಕ್ಕಿಂತಲೂ ಐದು ಪಟ್ಟು ದಾಟುವುದು. ಇಂಥ ಎಂಜಿನ್‌ಗಳ ನಿರ್ಮಾಣಕ್ಕೆ ಬೇಕಾದ ತಂತ್ರಜ್ಞಾನಗಳನ್ನು ಕೆಲವೇ ದೇಶಗಳು ತಮ್ಮ ಸೊತ್ತಾಗಿಸಿಕೊಂಡಿವೆ. ಇದೀಗ ಭಾರತವೂ 'ಸ್ಕ್ರಾತ್ರ್ಯಮ್'ಜೆಟ್ ಎಂಜಿನ್ ಅನ್ನು ನಿರ್ಮಾಣ ಮಾಡಿ ಪರೀಕ್ಷಿಸಿದೆ. ರಾಕೆಟ್ ಒಂದರಲ್ಲಿಈ ಎಂಜಿನ್ ಅಳವಡಿಕೆಯಾದ ವಾಹನವೊಂದನ್ನು 'ಸೂಪರ್‌ಸಾನಿಕ್' ವೇಗದಲ್ಲಿ ಮೂವತ್ತು ಕಿಲೋಮೀಟರ್ ಎತ್ತರಕ್ಕೆ ಕೊಂಡೊಯ್ದು ಬಿಡುಗಡೆ ಮಾಡಲಾಗಿದೆ. ಆ ಸಮಯದಲ್ಲಿ'ಸ್ಕ್ರಾತ್ರ್ಯಮ್'ಜೆಟ್ ಎಂಜಿನ್ ಅನ್ನು ಚಾಲೂ ಮಾಡಲಾಗಿದೆ. ಇದೀಗ ವಾಹನವು ಸೆಕೆಂಡಿಗೆ ಎರಡು ಕಿಲೋಮೀಟರ್ ವೇಗದಲ್ಲಿ ಮುಂದೆ ಧಾವಿಸಿದೆ. ಈ 'ಹೈಪರ್‌ಸಾನಿಕ್' ವಾಹನ ಇಪ್ಪತ್ತು ಸೆಕೆಂಡುಗಳ ಕಾಲ ಯಶಸ್ವಿಯಾಗಿ ಕಾರ್ಯಾಚರಣೆ ಮಾಡಿದೆ.
============
ಅಬ್ದುಲ್ ಕಲಾಮ್ ಅವರ ನೇತೃತ್ವದ 'ನಿರ್ದೇಶಿತ ಕ್ಷಿಪಣಿಗಳ ಅಭಿವೃದ್ಧಿಯ ಸಮಗ್ರ ಯೋಜನೆ'ಯಲ್ಲಿ ಈ ಯೋಜನೆಯೂ ಸೇರಿತ್ತು. ಕರ್ನಾಟಕದವರೇ ಆದ ಪದ್ಮಶ್ರೀ ಪುರಸ್ಕೃತ ವಿಜ್ಞಾನಿ ಡಾ.ಪ್ರಹ್ಲಾದ ರಾಮರಾವ್ ಅವರಿಗೆ ಇಂಥ ಕ್ಷಿಪಣಿಗಳ ವಾಯುಚಲನ ವಿಜ್ಞಾನದಲ್ಲಿ ಅತ್ಯುನ್ನತ ಪರಿಣತಿಯಿತ್ತು. ಹೈದರಾಬಾದಿನ ಡಿಆರ್‌ಡಿಒದ ಕ್ಷಿಪಣಿ ಪ್ರಯೋಗ ಶಾಲೆಗೆ ಅವರು ನಿರ್ದೇಶಕರಾಗಿದ್ದ ಸಮಯದಲ್ಲಿ'ಹೈಪರ್‌ಸಾನಿಕ್' ಕ್ಷಿಪಣಿ ಅಭಿವೃದ್ಧಿ ಕಾರ್ಯ ಆರಂಭವಾಗಿತ್ತು.
===========
ಸೋಮವಾರ ಉಡ್ಡಯಣೆಯಾದ 'ಹೈಪರ್‌ಸಾನಿಕ್' ವಾಹನದ ಯಶಸ್ಸು ಎರಡು ಸ್ಪಷ್ಟ ಸಂದೇಶಗಳನ್ನು ನೀಡಿದೆ. ಮೊದಲನೆಯದಾಗಿ, ಅಮೆರಿಕ, ರಷ್ಯಾ, ಚೀನಾಗಳ ನಂತರ ಈ ತಂತ್ರಜ್ಞಾನ ಕರಗತ ಮಾಡಿಕೊಂಡ ನಾಲ್ಕನೆಯ ರಾಷ್ಟ್ರವಾಗಿ ಭಾರತ ಹಿರಿಮೆ ಸಾಧಿಸಿದೆ. ಎರಡನೆಯದಾಗಿ, 'ಸ್ಕ್ರಾತ್ರ್ಯಮ್'ಜೆಟ್ ಎಂಜಿನ್‌ಗಳ ನೆರವಿನಿಂದ ಬರಲಿರುವ ದಿನಗಳಲ್ಲಿ ಅತ್ಯಂತ ಅಗ್ಗದ ದರದಲ್ಲಿ ಸಣ್ಣ ಉಪಗ್ರಹಗಳನ್ನು ಕೆಳಮಟ್ಟದ ಕಕ್ಷೆಗಳಿಗೆ ಸುಲಭವಾಗಿ ತೂರಬಲ್ಲ ತಂತ್ರಜ್ಞಾನವನ್ನೂ ಸಾಬೀತು ಮಾಡಿದೆ.
==============
No comments:
Post a Comment