Sunday, September 6, 2020

ನೆಗಡಿಗೆ ಮನೆ ಮದ್ದು

ಈ ಹಾಳಾದ್ದು ಶೀತ, ಮೂಗನ್ನೇ ಕಟ್ ಮಾಡಿ ಎಸೆಯಬೇಕು ಎನಿಸುವಂತೆ ಮಾಡುತ್ತಿದೆಯೇ? ಇನ್ನಂತೂ ಮಳೆಗಾಲ. ಈ ಸಮಸ್ಯೆ ಎಲ್ಲರನ್ನೂ ಕಾಡುವುದು ಸಹಜ. ಜೊತೆಗೆ ಗಂಟಲು ಕೆರೆತ, ನೋವು, ಕಣ್ಣುರಿ ನಿಮ್ಮನ್ನು ಬಾಧಿಸುತ್ತಿದೆಯೇ? ತಲೆ ಕೆಡಿಸಿಕೊಳ್ಳಬೇಡಿ. ಇಲ್ಲಿದೆ ಮನೆ ಔಷಧಿ...

 ಅರ್ಧ ಲೋಟ ನೀರು, ಅರ್ಧ ಲೋಟ ಹಾಲಿಗೆ ಒಂದು ಬೆಳ್ಳುಳ್ಳಿ ಎಸಳು, ಒಂದು ಲವಂಗ, ಎರಡು ಚಿಟಕಿ ಅರಿಶಿಣ, ರುಚಿಗೆ ತಕ್ಕಷ್ಟು ಬೆಲ್ಲ ಹಾಕಿ, 2-3 ನಿಮಿಷ ಕುದಿಸಿ. ಶೋಧಿಸಿ. ಬಿಸಿ ಕಷಾಯ ಕುಡಿದು ಬಿಡಿ. ದಿನಕ್ಕೆ 2 ರಿಂದ 4 ಬಾರಿ ಸೇವಿಸಿದರೆ ಶೀತದಿಂದ ಬೇಗ ಮುಕ್ತರಾಗುವಿರಿ.

 ಸಿಪ್ಪೆ ತೆಗೆದ ಅರ್ಧ ಅಂಗುಲ ಹಸಿ ಶುಂಠಿಯನ್ನು ಜಜ್ಜಿದ ರಸ, ಓಮದ ಕಾಳು ಮತ್ತು ಬೆಲ್ಲವನ್ನು ಬೆರೆಸಿ, ಒಟ್ಟಾಗಿ ಕುದಿಸಿದ ಕಷಾಯವನ್ನು ದಿನಕ್ಕೆರಡು ಬಾರಿಯಂತೆ ನಾಲ್ಕು ದಿನಗಳ ಕಾಲ ಕುಡಿಯಿರಿ.
ತಲಾ 5 ಗ್ರಾಂ ಧನಿಯಾ, ಜೀರಿಗೆ, ಶುಂಠಿ, ಹಿಪ್ಪಲಿ, ಕಾಳುಮೆಣಸುಗಳನ್ನು ಪುಡಿಮಾಡಿ ಅರಿಶಿಣ 2 ಚಮಚ, ತುಳಸಿ ಎಲೆಗಳನ್ನು ಸೇರಿಸಿ ಒಂದು ಲೋಟ ನೀರಿನೊಂದಿಗೆ ಕುದಿಸಿ ಶೋಧಿಸಿ. ರುಚಿಗೆ ತಕ್ಕಷ್ಟು ಬೆಲ್ಲ ಹಾಗೂ ಹಾಲನ್ನು ಸೇವಿಸಿ. ಈ ಕಷಾಯವನ್ನು ದಿನಕ್ಕೆರಡು ಬಾರಿ ಊಟಕ್ಕಿಂತ ಮುಂಚೆ, ಅರ್ಧ ಲೋಟ ಸೇವಿಸಿ.

ಬಿಸಿ ನೀರಿನಲ್ಲಿ ನೀಲಗಿರಿ ಎಣ್ಣೆ ಹಾಕಿ ಹಬೆಯನ್ನು ಸೇವಿಸಿದರೆ ಮೂಗು ಕಟ್ಟುವುದು ನಿವಾರಣೆಯಾಗುತ್ತದೆ.

ಒಣಶುಂಠಿ ಬಿಲ್ಲೆಯನ್ನು ನೀರಿನೊಂದಿಗೆ ಸಾಣೆಕಲ್ಲಿನಲ್ಲಿ ತೇಯ್ದ ಲೇಪವನ್ನು ಹಣೆ ಮೇಲೆ, ಬದಿಗೆ ಸವರಿ ನಿದ್ರಿಸಿದರೆ ಶೀತದಿಂದ ಕಾಡುವ ತಲೆನೋವು, ತಲೆಭಾರ ಕಡಿಮೆಯಾಗುತ್ತದೆ.

No comments:

ಚರ್ಮದ ತುರಿಕೆ? ಹಾಗಾದರೆ ಈ 6 ಮನೆಮದ್ದುಗಳನ್ನು ಪ್ರಯತ್ನಿಸಿ

  ಚರ್ಮದ ತುರಿಕೆ ತುಂಬಾ ಕಿರಿಕಿರಿ ಉಂಟುಮಾಡುತ್ತದೆ. ನೀವು ಹೆಚ್ಚು ಕೆರೆದುಕೊಂಡರೆ ಮಾಡಿದರೆ, ಅದು ಹೆಚ್ಚು ತುರಿಕೆಯಾಗುತ್ತದೆ. ಅತಿಯಾದ ಕೆರೆಯುವಿಕೆ ಚರ್ಮವನ್ನು ಹಾನಿಗ...