Friday, September 4, 2020

Interesting News

• ಋಗ್ವೇದದ 10 ನೇ ಮಂಡಲದ 129ನೇ ನಾಸದೀಯ ಸೂಕ್ತದಲ್ಲಿ ಖಭೌತ ಶಾಸ್ತ್ರದ (ಕಾಸ್ಮೋಲೊಜಿ) ಗೆ ಸಂಬಂಧಪಟ್ಟ ಕೆಲವು ಶ್ಲೋಕಗಳವೆ. ಅವು ವಿಶ್ವದ ಆರಂಭದ ಮತ್ತು ಜನನದ ಬಗೆಗೆ ಹೇಳುತ್ತವೆ.

• ಪ್ರೋಟಾನಿನಲ್ಲಿರುವ ಉಪಕಣಗಳನ್ನು ಕ್ವಾರ್ಕ್ ಗಳೆಂದು ಕರೆಯುತ್ತಾರೆ.

• ನಮ್ಮ ಭೂಮಿಗೆ ಅತ್ಯಂತ ಹತ್ತಿರದ ನೀಹಾರಿಕೆ (ಗ್ಯಾಲಾಕ್ಸಿ) ಆಂಡ್ರೋಮೀಡಾ ನಮ್ಮಿಂದ 2.6 ಮಿಲಿಯನ್ ಬೆಳಕಿನ ವರ್ಷದ ದೂರದಲ್ಲಿದೆ.

• 1.3 ನೂರು ಕೋಟಿಯಷ್ಟು ವರ್ಷಗಳ ಹಿಂದೆ ಎರಡು ಬೃಹತ್ ಕಪ್ಪುರಂಧ್ರಗಳು ಡಿಕ್ಕಿ ಹೊಡೆದಾಗ ಹೊರಸೂಸಿದ ಅಲೆಯೊಂದು ವೇಗವಾಗಿ ಚಲಿಸುತ್ತಾ ಸೆ.14, 2015ರಂದು ಭೂಮಿಯನ್ನು ತಲುಪಿರುವುದನ್ನು ಅತ್ಯಾಧುನಿಕ ವೈಜ್ಞಾನಿಕ ಸಲಕರಣೆಗಳು ಹಿಡಿದಿಟ್ಟುಕೊಳ್ಳುವಲ್ಲಿ ಸಫಲವಾಗಿವೆ.

ಗುರುತ್ವಾಕರ್ಷಣ ತರಂಗಗಳು ವ್ಯೋಮದಲ್ಲಿ ನಡೆದ ಬೃಹತ್ ಕಾಯಗಳ ಘರ್ಷಣೆಯ ಅಳತೆಗೋಲಾಗಿವೆ. ಗುರುತ್ವಾಕರ್ಷಣ ಅಲೆಗಳನ್ನು ಗುರುತಿಸುವ ಸಲುವಾಗಿಯೇ ಇಡಲಾದ ಅಮೆರಿಕ ಮೂಲದ ಎರಡು ಭೂಗರ್ಭ ಪತ್ತೆಸಾಧನಗಳಲ್ಲಿ ಈ ಅಪರೂಪದ ವಿದ್ಯಮಾನ ದಾಖಲಾಗಿದೆ. ಇದಕ್ಕಾಗಿ ಲೇಸರ್ ಇಂಟರ್‌ಫೆರೋಮೀಟರ್ ಗ್ರಾವಿಟೇಶನಲ್-ವೇವ್ ಅಬ್ಸರ್ವೇಟರಿ(ಲಿಗೋ) ಎಂಬ ಪ್ರಾಜೆಕ್ಟ್ ಕೈಗೊಳ್ಳಲಾಗಿತ್ತು.

ದೊರೆತ ಮಾಹಿತಿಗಳನ್ನು ತಿಂಗಳಾನುಗಟ್ಟಲೆ ಲೆಕ್ಕಾಚಾರಕ್ಕೆ ಹಚ್ಚಿದ ವಿಜ್ಞಾನಿಗಳು ಈ ಗುರುತ್ವದ ಅಲೆಗಳು 1.3 ನೂರು ಕೋಟಿಯಷ್ಟು ವರ್ಷಗಳ ಹಿಂದೆ ಎರಡು ಬೃಹತ್ ಕಪ್ಪುರಂಧ್ರಗಳು ಡಿಕ್ಕಿಯಿಂದ ಹೊರಹೊಮ್ಮಿದವು ಎಂಬುದನ್ನು ಕಂಡುಕೊಂಡಿದ್ದಾರೆ.

No comments:

ಚರ್ಮದ ತುರಿಕೆ? ಹಾಗಾದರೆ ಈ 6 ಮನೆಮದ್ದುಗಳನ್ನು ಪ್ರಯತ್ನಿಸಿ

  ಚರ್ಮದ ತುರಿಕೆ ತುಂಬಾ ಕಿರಿಕಿರಿ ಉಂಟುಮಾಡುತ್ತದೆ. ನೀವು ಹೆಚ್ಚು ಕೆರೆದುಕೊಂಡರೆ ಮಾಡಿದರೆ, ಅದು ಹೆಚ್ಚು ತುರಿಕೆಯಾಗುತ್ತದೆ. ಅತಿಯಾದ ಕೆರೆಯುವಿಕೆ ಚರ್ಮವನ್ನು ಹಾನಿಗ...