Friday, September 4, 2020

ಪಿತ್ತಕ್ಕೆ ಮನೆ ಮದ್ದು

ಆಧುನಿಕ ಯುಗದ ಜಂಜಾಟದ ಜೀವನದಲ್ಲಿ ಚಿಕ್ಕವರಿಂದ ಹಿಡಿದು ವಯಸ್ಸಾದವರವರೆಗೂ ಒಂದಲ್ಲ ಒಂದು ಸಮಸ್ಸ್ಯೆ ಇದ್ದೆ ಇರತ್ತೆ ಅದರಲ್ಲಿ ಈ ಪಿತ್ತ ಕೂಡ ಒಂದು. ಪಿತ್ತ ಆಸಿಡಿಟಿ ಅಂತ ನಾವು ಹೇಳುವ ಈ ರೋಗ ನೋಡೋದಕ್ಕೆ ತೀರಾ ಸಣ್ಣ ರೋಗ ಎನಿಸಿದರೂ ಪಿತ್ತದಿಂದ ಆಗೋ ಬಾಧೆ ಅನುಭವಿಸಿದವರಿಗೆ ಮಾತ್ರ ಗೊತ್ತು. ಹಾಗಿದ್ರೆ ನಾವು ಇವತ್ತು ಈ ಪಿತ್ತ ಯಾಕಾಗಿ ಆಗತ್ತೆ ಅದಕ್ಕೆ ಕಾರಣ ಏನು ಹಾಗೂ ಅದನ್ನ ನಿವಾರಣೆ ಮಾಡೋದು ಹೇಗೆ ಅಂತ ನೋಡೋಣ ಬನ್ನಿ.

ಉದರ ವಾಯು, ಆಮ್ಲ, ಪಿತ್ತಾಮ್ಲ, ಹೊಟ್ಟೆ ಹುಣ್ಣು ಇವುಗಳಿಗೆ ಪಿತ್ತ ಅಂತ ಹೇಳ್ತಾರೆ. ಪಿತ್ತ ಆಗೊಕ್ಕೆ ಕಾರಣ ಏನು ಅಂದ್ರೆ ಅತಿಯಾದ ಚಹಾ ಕಾಫೀ ಸೇವನೆ, ನಿದ್ರಾಹೀನತೆ, ಅತಿಯಾದ ಒತ್ತಡ, ತಡವಾಗಿ ಅನಿಯಮಿತವಾಗಿ ಆಹಾರ ಸೇವಿಸುವುದು, ಅಜೀರ್ಣವಾಗದೆ ಇರುವುದು, ಮಧ್ಯಪಾನ, ಧೂಮ್ರ ಪಾನ, ಕಡಿಮೆ ನೀರು ಕುಡಿಯುವುದು ಮುಂತಾದ ತೊಂದರೆಗಳಿಂದ ಪಿತ್ತ ಬರುತ್ತದೆ. ಹಾಗಾದ್ರೆ ಇದಕ್ಕೆ ಪರಿಹಾರ ಏನು ನೋಡೋಣ. 

ಪಿತ್ತಕ್ಕೆ ಮನೆ ಮದ್ದು ಎಂದರೆ, ಕೃಷ್ಣ ತುಳಸಿ ಸೇವಿಸಿದರೆ ಪಿತ್ತ ನಿವಾರಣೆ ಆಗತ್ತೆ. ಒಂದು ಲೋಟ ಜೀರಿಗೆ ನೀರಿಗೆ ಚಿಟಕಿ ಏಲಕ್ಕಿ ಪುಡಿ ಸೇರಿಸಿ ಕುಡಿದರೆ ಪಿತ್ತ ನಿವಾರಣೆ ಆಗತ್ತೆ. ಹಾಗೆ ದಾಳಿಂಬೆ ಹಾಗೂ ನೇರಳೆ ಹಣ್ಣನ್ನು ತಿನ್ನುವುದರಿಂದ ಸಹ ಪಿತ್ತ ಶಮನ ಆಗತ್ತೆ.

ಬೇಲದ ಹಣ್ಣಿನ ತಿರುಳಿಗೆ ಸಮ ಭಾಗದ ಸಕ್ಕರೆ ಸೇರಿಸಿ ತಿಂದರೆ ಪಿತ್ತ ಶಮನ ಆಗತ್ತೆ. ಎಳೆಯ ಹಲಸಿನಕಾಯಿಯಿಂದ ಮಾಡಿದ ಪಲ್ಯ ಹಾಗೂ ಹುಳಿ ಸೇವಿಸಿದರೆ ಪಿತ್ತ ಕಡಿಮೆ ಆಗತ್ತೆ.
ಮೆಂತೆ ಸೊಪ್ಪನ್ನು ತುಪ್ಪದಲ್ಲಿ ಹುರಿದು ಸೇವಿಸುವುದರಿಂದಲೂ ಪಿತ್ತ ಹೋಗುತ್ತದೆ.

ಪ್ರತಿದಿನ ರಾತ್ರಿ ಊಟದ ನಂತರ ಒಂದು ಚೂರೂ ಶುಂಠಿ ಜಗಿಯುವುದರಿಂದ ಪಿತ್ತ, ಅಜೀರ್ಣ, ಹೊಟ್ಟೆ ಹುಣ್ಣು ಕಡಿಮೆ ಆಗತ್ತೆ. ಚಪ್ಪರದ ಅವರೆಕಾಯಿ ಸೇವಿಸುವುದರಿಂದಲೂ ಸಹ ಪಿತ್ತ ನಿವಾರಣೆ ಆಗತ್ತೆ. ಅಳಲೇ ಕಾಯಿಯ ಕಷಾಯ ಅಥವಾ ಚೂರ್ಣವನ್ನು ಜೇನು ತುಪ್ಪ ಹಾಗೂ ಬಿಸಿ ನೀರಿನ ಜೊತೆ ಸೇರಿಸಿ ಕುಡಿದರು ಕಡಿಮೆ ಆಗತ್ತೆ. ಅನಾನಸ್ ಆಕ್ರೂಡ್ ಇವುಗಳನ್ನು ತಿನ್ನುವುದರಿಂದ ಪಿತ್ತ, ವಾತದ ಸಮಸ್ಯೆ ದೂರವಾಗುತ್ತದೆ.

No comments:

ಚರ್ಮದ ತುರಿಕೆ? ಹಾಗಾದರೆ ಈ 6 ಮನೆಮದ್ದುಗಳನ್ನು ಪ್ರಯತ್ನಿಸಿ

  ಚರ್ಮದ ತುರಿಕೆ ತುಂಬಾ ಕಿರಿಕಿರಿ ಉಂಟುಮಾಡುತ್ತದೆ. ನೀವು ಹೆಚ್ಚು ಕೆರೆದುಕೊಂಡರೆ ಮಾಡಿದರೆ, ಅದು ಹೆಚ್ಚು ತುರಿಕೆಯಾಗುತ್ತದೆ. ಅತಿಯಾದ ಕೆರೆಯುವಿಕೆ ಚರ್ಮವನ್ನು ಹಾನಿಗ...