Monday, August 31, 2020

Presidents of India


NameTenure
Dr Rajendra Prasad (1884-1963)January 26, 1950 - May 13, 1962
Dr Sarvepalli Radhakrishnan (1888-1975)May 13, 1962 - May 13, 1967
Dr Zakir Hussain (1897-1969)May 13, 1967 - May 03, 1969
Varahagiri Venkatagiri (1884-1980) (Acting)May 03, 1969 - July 20, 1969
Justice Mohammad Hidayatullah (1905-1992) (Acting)July 20, 1969 - August 24, 1969
Varahagiri Venkatagiri (1884-1980)August 24, 1969 - August 24, 1974
Fakhruddin Ali Ahmed (1905-1977)August 24, 1974 - February 11, 1977
B.D. Jatti (1913-2002) (Acting)February 11, 1977 - July 25, 1977
Neelam Sanjiva Reddy (1913-1996)July 25, 1977 - July 25, 1982
Giani Zail Singh (1916-1994)July 25, 1982 - July 25, 1987
R. Venkataraman (1910-2009)July 25, 1987 - July 25, 1992
Dr Shankar Dayal Sharma (1918-1999)July 25, 1992 - July 25, 1997
K.R. Narayanan (1920-2005)July 25, 1997 - July 25, 2002
Dr. A.P.J. Abdul Kalam (1931-2015)July 25, 2002 - July 25, 2007
Smt. Pratibha Devisingh Patil (Birth-1934)July 25, 2007 - July 25, 2012
Shri Pranab Mukherjee (Birth-1935)July 25, 2012 - July 25, 2017
Sri Ram Nath Kovind  (Birth-1945)July 25, 2017 - Incumbent

Friday, August 28, 2020

ಕಾಡುವ ಉಗುರು ಸುತ್ತಿಗೆ ಇಲ್ಲಿದೆ ಪರಿಹಾರ!

ಕೆಲವರಿಗೆ ಉಗುರು ಸುತ್ತು ಆಗಿರುತ್ತದೆ ಕೈಯ ಬೆರಳಲ್ಲಿ ಅಥವಾ ಕಾಲ ಬೆರಳಲ್ಲಿ ಆಗಿರುತ್ತದೆ,ಇದರಿಂದ ಅನೇಕರು ತೊಂದರೆಗೀಡಾಗುತ್ತಾರೆ.ಈ ಉಗುರು ಸುತ್ತಿಗೆ ಒಂದು ಸಿಂಪಲ್ ಪರಿಹಾರವನ್ನು ಈ ಲೇಖನದಲ್ಲಿ ತಿಳಿಸುತ್ತೇವೆ ಬನ್ನಿ ಓದಿ .

ಉಗುರು ಸುತ್ತು ಆಗುವುದಕ್ಕೆ ಮುಖ್ಯ ಕಾರಣ ಕೈ ಬೆರಳು ಅಥವಾ ಕಾಲ ಬೆರಳು ತೇವ ಆಗುವುದರಿಂದ,ಕೊಳೆಗಳು ಸೇರಿಕೊಂಡಾಗ,ಪಾತ್ರೆ ತೊಳೆಯುವಾಗ ಹೆಚ್ಚಾಗಿ ಸುಣ್ಣದ ಅಂಶ ಇರುವ ಸೋಪ್ ಅನ್ನು ಬಳಸಿದಾಗ ಹೀಗೆ ಇನ್ನೂ ಅನೇಕ ಕಾರಣಗಳಿಂದ ನಮ್ಮ ಉಗುರುಗಳಿಗೆ ಫಂಗಲ್ ಇನ್ಫೆಕ್ಷನ್ ಆಗುವ ಚಾನ್ಸಸ್ ಹೆಚ್ಚಾಗಿ ಇರುತ್ತದೆ.ಇದರಿಂದ ಉಗುರು ಸುತ್ತು ಕೈ ಬೆರಳುಗಳಲ್ಲಿ ಹಾಗೂ ಕಾಲು ಬೆರಳುಗಳಲ್ಲಿ ಕಾಣಿಸುತ್ತದೆ . ಉಗುರು ಸುತ್ತು ಎಲ್ಲಾ ಚರ್ಮದವರಿಗೂ ಆಗುವುದಿಲ್ಲ ಇದು ಕೇವಲ ಮೃದು ಚರ್ಮವನ್ನು ಹೊಂದಿರುವವರಿಗೆ ಮಾತ್ರ ಹೆಚ್ಚಾಗಿ ಈ ಉಗುರು ಸುತ್ತು ಕಾಣಿಸಿಕೊಳ್ಳುತ್ತದೆ .
ಕ್ಲೋಟ್ರಿ ಲೋಷನ್
ಈ ಲೋಷನ್ ಅನ್ನು ಹಚ್ಚುವ ಮೊದಲು ಕೈ ಬೆರಳು ಅಥವಾ ಕಾಲು ಬೆರಳು ಉಗುರು ಸುತ್ತು ಆಗಿರುವ ಜಾಗಕ್ಕೆ ಒಂದು ಕರ್ಚೀಫ್ ಅಥವಾ ಒಂದು ಸಣ್ಣ ಟವಲ್ ತೆಗೆದುಕೊಂಡು ಕ್ಲೀನ್ ಆಗಿ ಒರೆಸಿಕೊಳ್ಳಿ ನಂತರ ಉಗುರು ಸುತ್ತು ಆಗಿರುವ ಜಾಗಕ್ಕೆ ಈ ಲೋಷನ್ ಅನ್ನು ಡ್ರಾಪ್ನ ರೀತಿ ಹಾಕಿಕೊಳ್ಳಿ .ಈ ಲೋಷನ್ ಅನ್ನು ಪ್ರತಿದಿನ ಒಂದು ಒಂದು ಡ್ರಾಪ್ ಉಗುರು ಸುತ್ತು ಆಗಿರುವ ಜಾಗಕ್ಕೆ ಹಾಕಿ ನಂತರ 15 ನಿಮಿಷ ಬಿಟ್ಟು ನಂತರ ಕೆಲಸವನ್ನು ಮಾಡಬೇಕು.

ಇನ್ನು ಈ ಲೋಷನ್ ಎಲ್ಲಾ ಮೆಡಿಕಲ್ ಶಾಪ್ ಗಳಲ್ಲಿ ದೊರೆಯುತ್ತದೆ ಇದು ಕೇವಲ 30 ರೂ ಮಾತ್ರ.ಮತ್ತೊಂದು ಉಪಾಯ ಎಂದರೆ ಜೀರಿಗೆ ಕಷಾಯವನ್ನು ಪ್ರತಿನಿತ್ಯ ಸೇವಿಸುವುದರಿಂದ ನಮಗೆ ಫಂಗಲ್ ಇನ್ಫೆಕ್ಷನ್ ಆಗುವುದು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.ಬೆರಳಿಗೆ ವಿಟಮಿನ್ ಈ ಮಾತ್ರೆ ಅಥವಾ ಜೆಲ್ಲನ್ನು ಬಳಸುವುದು ಉತ್ತಮ .

Thursday, August 27, 2020

ಬಾಯಿ ಹುಣ್ಣು

ಇದು ಎಲ್ಲಾ ಬಗೆಯ ವಯಸ್ಸಿನವರಲ್ಲೂ ಕಂಡು ಬರುವಂತಹ ಸಮಸ್ಯೆ. ಬಾಯಿ ಹುಣ್ಣು ಆದರೆ ಬಾಯಲ್ಲಿ ಊಟ ಮಾಡುವುದಿರಲಿ ನೀರನ್ನು ಸಹ ಕುಡಿಯಲು ಆಗುವುದಿಲ್ಲ, ಅಷ್ಟರ ಮಟ್ಟಿಗೆ ನೋವು ನೀಡುತ್ತದೆ. ಈ ಬಾಯಿ ಹುಣ್ಣು ನಾವು ಏನೇ ಮಾಡಿದರೂ ಮೂರರಿಂದ ನಾಲ್ಕು ದಿನಗಳವರೆಗೆ ಕಡಿಮೆಯಾಗುವುದಿಲ್ಲ, ಇದಕ್ಕೆ ನಾವು ಹಲವು ಮಾತ್ರೆಗಳನ್ನು ಸಹ ತೆಗೆದುಕೊಳ್ಳುತ್ತೇವೆ, ಆದರೆ ಇದು ಮಾತ್ರೆಗಳಿಂದ ಗುಣವಾಗುವಂತದ್ದಲ್ಲ, ಇದಕ್ಕೆ ಮನೆ ಔಷಧ ಬೇಕು, ಇಲ್ಲಿದೆ ನೋಡಿ ಇದಕ್ಕೆ ಸುಲಭ ಮನೆ ಮದ್ದು….
 
 ೧. ಬಿ ಕಾಂಪ್ಲೆಕ್ಸ್ ಅಧಿಕವಾಗಿರುವ ಆಹಾರವನ್ನು ಹೆಚ್ಚಾಗಿ ಸೇವಿಸುವುದರಿಂದ ನೀರು ಮತ್ತು ಎಳನೀರನ್ನು ಹೆಚ್ಚಾಗಿ ಸೇವಿಸುವುದರಿಂದ ಬಾಯಿ ಹುಣ್ಣು ಬರದಂತೆ ನೋಡಿಕೊಳ್ಳ ಬಹುದು.
 
೨. ಖಾಲಿ ಹೊಟ್ಟೆಯಲ್ಲಿ ಒಂದೆರಡು ತುಳಸಿ ಎಲೆಗಳನ್ನು ಅಗೆದು ತಿನ್ನುವುದರಿಂದ ಬಾಯಿ ಹುಣ್ಣಿನಿಂದ ಉಪಶಮನ ಪಡೆಯ ಬಹುದು.
                                                                                   ೩. ಬಾಯಿ ಹುಣ್ಣು ಇರುವ ಜಾಗದಲ್ಲಿ ಜೇನುತುಪ್ಪವನ್ನು ಅಥವಾ ಅರಿಶಿನಪುಡಿಯನ್ನು ಬೆರೆಸಿದ ನೀರನ್ನು ನಯವಾಗಿ ಹಚ್ಚುವುದರಿಂದ ಬಾಯಿ ಹುಣ್ಣು ಕಡಿಮೆಯಾಗುತ್ತದೆ.
                                                                                                   ೪. ತೆಂಗಿನ ಕಾಯಿಯ ಹಾಲಿನಲ್ಲಿ ಆಗಾಗ್ಗೆ ಬಾಯಿಯನ್ನು ಮುಕ್ಕಳಿಸಿದರೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ, ಅಥವಾ ಅದು ಸಾಧ್ಯವಾಗದೆ ಇರುವಾಗ ಬೆಚ್ಚಗಿನ ನೀರಿನಲ್ಲಿ ಉಪ್ಪನ್ನು ಬೆರೆಸಿಕೊಂಡು ಬಾಯಿಯನ್ನು ಮುಕ್ಕಳಿಸಿದರೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ.
                                                                                                         ೫. ನೀರಿನಲ್ಲಿ ಮೆಂತೆಯನ್ನು ಮಿಕ್ಸ್ ಮಾಡಿ ಕುದಿಸಿ ನಂತರ ಆ ನೀರನ್ನು ಸೋಸಿ ಸ್ವಲ್ಪ ತಣ್ಣಗಾದ ಮೇಲೆ ಅದರಿಂದ ಬಾಯಿಯನ್ನು ಮುಕ್ಕಳಿಸಿದರೆ ಬಾಯಿ ಹುಣ್ಣಿಗೆ ಮುಕ್ತಿ ಸಿಗುತ್ತದೆ.

ಜ್ಞಾನ ಹನಿ

*1 ಕಲ್ಯಾಣ ಕರ್ನಾಟಕ ಎಂಬ ಪರಿಕಲ್ಪನೆಯು ಭಾರತ ಸಂವಿಧಾನದ ಈ ಭಾಗದಲ್ಲಿ ಕಂಡು ಬರುತ್ತದೆ*
A)ಮೂಲಭೂತ ಕರ್ತವ್ಯಗಳು
B)ನಿರ್ದೇಶಕ ತತ್ವಗಳು✅
C)ಪ್ರಸ್ತಾವನೆ
D)ಮೂಲಭೂತ ಹಕ್ಕುಗಳು
 
*2 ನಿರ್ಜಲೀಕರಣ ಉಂಟಾದಾಗ ದೇಹವು ಯಾವ ಅಂಶವನ್ನು ಕಳೆದುಕೊಳ್ಳುತ್ತದೆ*
A)ಸಕ್ಕರೆ
B)ಕ್ಯಾಲ್ಸಿಯಂ ಫಾಸ್ಫೇಟ್
C)ಸೋಡಿಯಂ ಕ್ಲೋರೈಡ್✅
D)ಪೊಟಾಷಿಯಂ ಕ್ಲೋರೈಡ್

*3 ಭಾರತ ಮತ್ತು ಬಾಂಗ್ಲಾದೇಶದ ನಡುವೆ ಗಂಗಾನದಿಯ ನೀರಿನ ಹಂಚಿಕೆಗೆ ಸಂಬಂಧಪಟ್ಟಂತೆ ಯಾವಾಗ ಒಪ್ಪಂದ ಏರ್ಪಟ್ಟಿತು..?*
A)1997
B)1996✅
C)1995
D)1998

*4 'ICERT' ಇದರ ವಿಸ್ತೃತ ರೂಪವೇನು...?*
A) Indian cyber emergency revue team
B)Indian cyber crime emergency restance team
C)Indian computer enter prenersrestance team
D)Indian computer emergency rastance team✅

*5 ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಪ್ರಥಮವಾಗಿ ಪಡೆದವರು ಯಾರು*
A)ವಿಶ್ವನಾಥನ್ ಆನಂದ್✅
B)ಲಿಯಾಂಡರ್‌ ಪೇಸ್
C)ಕಪಿಲ್ ದೇವ್
D)ಬಿಂಬಾರಾಮ್

Wednesday, August 26, 2020

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

1) ದ್ವೈತ ಸಿದ್ದಾಂತದ ಪ್ರತಿಪಾದಕರು ಯಾರು?
 * ಮಧ್ವಾಚಾರ್ಯರು.

2) "ರಾಮಚರಿತಮಾನಸ" ರಚಿಸಿದವರು ಯಾರು?
 * ತುಲಸೀದಾಸರು.

3) ಉತ್ತರ ಭಾರತದಲ್ಲಿ ಭಕ್ತಿ ಪಂಥದ ಮೊದಲ ಸಂತರು ಯಾರು?
 * ರಾಮಾನಂದರು.

4) ರಾಮ ಮತ್ತು ರಹೀಮ್ ರಲ್ಲಿ ಬೇಧವಿಲ್ಲವೆಂದು ಹೇಳಿದವರು ಯಾರು?
 * ಕಬೀರದಾಸರು.

5) ಸಿಖ್ಖರ ಪವಿತ್ರ ಗ್ರಂಥ ಯಾವುದು?
 * ಗುರುಗ್ರಂಥ ಸಾಹೇಬ್.

6) "ಸೂರ್ ಸಾಗರ್" ಕೃತಿ ರಚಿಸಿದವರು ಯಾರು?
 * ಸೂರ್ ದಾಸರು.

7) ಬಾಬರ್ ಮೊಘಲ್ ಸಾಮ್ರಾಜ್ಯ ಸ್ಥಾಪಿಸಿದ್ದು ಯಾವಾಗ?
 * 1526 ರಲ್ಲಿ.

8) ಶೇರ್ ಷಾ ನ ಮೊದಲ ಹೆಸರೇನು?
 * ಫರೀದ್.

9) ಅಕ್ಬರನ ಮಾವ ಯಾರು?
 * ಬೈರಾಂಖಾನ್.

10) "ಆಲಂಗಿರ್" ಎಂಬ ಬಿರುದುವಿನೊಂದಿಗೆ ಪಟ್ಟವೇರಿದವನು ಯಾರು?
 * ಔರಂಗಜೇಬ್.

11) ಮನ್ಸಬ್ ಎಂದರೇ ----.
 * ಸ್ಥಾನ, ಶ್ರೇಣಿ ಎಂದರ್ಥ.

12) "ದಾದಾಜಿಕೊಂಡದೇವ" ಯಾರು?
 * ಶಿವಾಜಿಯ ಗುರು.

13) ಮರಾಠ ಸಾಮ್ರಾಜ್ಯ ಬೆಳೆದದ್ದು ಯಾವ ರಾಜ್ಯದಲ್ಲಿ?
 * ಮಹಾರಾಷ್ಟ್ರ.

14) ಒಂದನೇ ಬಾಜಿರಾಯನ ಮಗ ಯಾರು?
 * ಬಾಲಾಜಿ ಬಾಜೀರಾಯ.

15) ಶಿವಾಜಿ ಕಾಲವಾದದ್ದು ಯಾವಾಗ?
 * 1680.

16) "ಇಬಾದತ್ ಖಾನ್" ಎಲ್ಲಿದೆ?
 * ಫತೇಪುರ್ ಸಿಕ್ರಿ.

17) ಜೋದಾಬಾಯಿಯ ಮಗ ಯಾರು?
 * ಜಹಾಂಗೀರ್.

18) ಅಕ್ಬರನ ಪ್ರಮುಖ ಆಸ್ಥಾನ ಕವಿ ಯಾರು?
 * ಅಬುಲ್ ಫಜಲ್.

19) ಬಾಬರ್ ನಂತರ ಪಟ್ಟಕ್ಕೆ ಬಂದವನು ಯಾರು?
 * ಹುಮಾಯುನ್.

20) ಬಿಹಾರದ ಸಸರಾಂನಲ್ಲಿ ಯಾರ ಗೋರಿಯಿದೆ?
 * ಶೇರ್ ಷಾ.

21) ಡಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದದ್ದು ಯಾವಾಗ?
 * 1602.

22) ಬಿಸ್ಮಾರ್ಕ್ ----  ದೊರೆ?
 * ಪ್ರಷ್ಯಾ.

23) ಅಮೆರಿಕ ಸ್ವಾತಂತ್ರ್ಯ ಘೋಷಣೆಯಾದದ್ದು ಯಾವಾಗ?
 * 1776, ಜುಲೈ 4.

24) ಸಪ್ತ ವಾರ್ಷಿಕ ಯುದ್ಧ ನಡೆದದ್ದು ಯಾರ ನಡುವೆ?
 * ಫ್ರಾನ್ಸ್ ಮತ್ತು ಇಂಗ್ಲೆಂಡ್.

25) 1769 ರಲ್ಲಿ ಕೈಗಾರಿಕಾ ಉಗಿಯಂತ್ರ ಬಳಸಿದವನು ಯಾರು?
 * ಜೇಮ್ಸ್ ವ್ಯಾಟ್.

26) 1761 ರ ವಿಶೇಷವೇನು?
 * ಮೂರನೇ ಪಾಣಿಪತ್ ಕಾಳಗ ನಡೆಯಿತು.

27) ಔರಂಗಜೇಬನು ಮರಣ ಹೊಂದಿದ್ದು ಯಾವಾಗ?
 * 1707 ರಲ್ಲಿ.

28) ಶಿವಾಜಿಯ ಮರಣದ ನಂತರ ಪಟ್ಟವೇರಿದವನು ಯಾರು?
 * ಸಂಬಾಜಿ.

29) ಶಿವಾಜಿ ರಾಯಗಡ ವಶಪಡಿಸಿಕೊಂಡಿದ್ದು ಯಾವಾಗ?
 * 1646 ರಲ್ಲಿ.

30) ನವೋದಯ ಎಂದರೇ -----.
 * ಮರುಹುಟ್ಟು / ಪುನರುಜ್ಜೀವನ.

31) ನವೋದಯ ಚಳುವಳಿ ಎಲ್ಲಿ ಆರಂಭವಾಯಿತು?
 * ಇಟಲಿ.

32) ಇಸ್ತಾನ್ ಬುಲ್ ಈಗಿನ ಯಾವ ದೇಶದ ಬಂದರು ನಗರ.
 * ಟರ್ಕಿ.

33) ನವೋದಯ ಕಾಲದ ಲೇಖಕರಲ್ಲಿ ಮೊದಲಿಗ ಯಾರು?
 * ಪೆರ್ಟ್ರಾಕ್.

34) "ದ ಡಿವೈನ್ ಕಾಮಿಡಿ" ಯಾರ ಮಹಾಕಾವ್ಯ?
 * ಡಾಂಟೆ.

35) "ಸಂತ ಪೀಟರ್ ಚರ್ಚು" ಎಲ್ಲಿದೆ?
 * ರೋಮ್.

36) "ಮೋನಾಲಿಸಾ" ವರ್ಣ ಚಿತ್ರದ ಚಿತ್ರಕಾರ ಯಾರು?
 * ಲಿಯೋನಾಡೋ ಡಾ ವಿಂಚಿ.

37) ಪ್ರತಿ ಸುಧಾರಣಾ ಚಳುವಳಿಯ ನಾಯಕ ಯಾರು?
 * ಇಗ್ನೇಶಿಯಸ್ ಲಯೋಲಾ.

38) 1453 ರಲ್ಲಿ ಕಾನ್ ಸ್ಟಂಟಿನೋಪಲ್ ನಗರವನ್ನು ವಶಪಡಿಸಿಕೊಂಡವರು ಯಾರು?
 * ಟರ್ಕರು.

39) ವಾಸ್ಕೋಡಿಗಾಮ ಯಾವ ದೇಶದ ನಾವಿಕ?
 * ಪೊರ್ಚಗಲ್.

40) ಕಲ್ಲಿಕೋಟೆಯಿಂದ ಸುಮಾರು ಎಷ್ಟು ಕಿ.ಮೀ ದೂರದಲ್ಲಿ ಕಪ್ಪಡ್ ಎಂಬ ಸ್ಥಳವಿದೆ?
 * 10.

41) ಕ್ರಿಸ್ಟೋಪರ್ ಕೋಲಂಬಸ್ ಯಾವ ದೇಶದ ನಾವಿಕ?
 * ಸ್ಪೇನ್.

42) ಭೂ ಪ್ರದಕ್ಷಿಣೆ ಮಾಡಿದ ಮೊದಲ ಹಡಗು ಯಾವುದು?
 * ವಿಕ್ಟೋರಿಯಾ.

43) "ಕೊಲಂಬಸ್" ಅಮೇರಿಕಾ ತಲುಪಿದ್ದು ಯಾವಾಗ?
 * 1492 ರಲ್ಲಿ.

44) ಡಚ್ಚರು ಯಾವ ದೇಶದವರು?
 * ಹಾಲೆಂಡ್.

45) ಕೊನೆಯವರಗೆ ಪೋರ್ಚಗೀಸರ ವಶದಲ್ಲಿದ್ದ ಸ್ಥಳಗಳು ಯಾವು?
 * ಗೋವಾ, ದಿಯು ಮತ್ತು ದಮನ್.

46) ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಸ್ಥಾಪನೆಗೆ ಭದ್ರ ಬುನಾದಿ ಹಾಕಿದ ಯುದ್ಧ ಯಾವುದು?
 * ಪ್ಲಾಸಿ ಕದನ (1757).

47) ಪೇಶ್ವೆ ಎಂದರೆ ಯಾರು?
 * ಮರಾಠ ರಾಜನ ಪ್ರಧಾನಮಂತ್ರಿ.

48) "2ನೇ ಶಿವಾಜಿ" ಎಂಬ ಕಿರ್ತಿಗೆ ಪಾತ್ರನಾದವನು ಯಾರು?
 * ಒಂದನೇ ಬಾಜಿರಾವ್.

49) ನಾದಿರ್ ಷಾ ಮೊಗಲ್ ರಾಜ್ಯದ ಮೇಲೆ ದಾಳಿ ಮಾಡಿದ್ದು ಯಾವಾಗ?
 * 1739 ರಲ್ಲಿ.

50) "ದಿವಾನಿ" ಎಂದರೆ-----.
 * ಭೂಕಂದಾಯವನ್ನು ಸಂಗ್ರಹಿಸುವ ಹಕ್ಕು.

51) ಬಕ್ಸಾರ್ ಕದನ ನಡೆದದ್ದು ಯಾವಾಗ?
 * 1764.

ವಿಟಮಿನ್ ಗಳ ಬಗ್ಗೆ ಪ್ರಶ್ನೋತ್ತರಗಳು

Q:1 ವಿಟಮಿನ್ ಗಳನ್ನು ಕಂಡು ಹಿಡಿದವರು ಯಾರು?
Ans:- ಪಂಕ್

Q:2 ವಿಟಮಿನ್ ಗಳಲ್ಲಿನ ಬಗೆಗಳು
Ans:- ಎ,ಬಿ,ಸಿ,ಡಿ,ಇ, ಕೆ

Q:3 ನೀರಿನಲ್ಲಿ ಕರಗುವ ವಿಟಮಿನ್ ಗಳು
Ans:- ಬಿ,ಸಿ

Q:4 ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳು
Ans:- ಎ,ಡಿ,ಇ,ಕೆ

Q:5 ಎ ವಿಟಮಿನ್ ಅನ್ನು ಯಾವುದಕ್ಕೆ ಬಳಸಲಾಗುತ್ತದೆ?
Ans:- ಕಣ್ಣಿನ ದೃಷ್ಟಿ ವೃದ್ಧಿಗೊಳಿಸಲು

Q:6 ಈ ವಿಟಮಿನ್ ಯಾವುದರಲ್ಲಿ ಅಧಿಕವಾಗಿದೆ
Ans:- ಕಾಡ್ ಲಿವರ್ ಕ್ಯಾರೆಟ್

Q:7 ಬಿ ವಿಟಮಿನ್ ದೋಷದಿಂದ ಎದುರಾಗುವ ಸಮಸ್ಯೆ
Ans:- ಬೇರಿಬೇರಿ

Q:8 ಬಿ ವಿಟಮಿನ್ ಯಾವುದರಲ್ಲಿ ಲಭ್ಯ
Ans:- ಕಡಲೆ

Q:9 ಡಿ ವಿಟಮಿನ್ ಕೊರತೆಯಿಂದ ಬರಬಹುದಾದ ರೋಗ
Ans:- ರಿಕೆಟ್ಸ್

Q:24 ರಕ್ತ ಗಡ್ಡೆ ಕಟ್ಟದಂತೆ ತಡೆಗಟ್ಟುವ ವಿಟಾಮಿನ್
Ans:- ವಿಟಮಿನ್ ಕೆ

Q:11 ಮಾನವನಲ್ಲಿನ ಕ್ರೋಮೋಜೋಮ್ ಸಂಖ್ಯೆ
Ans:- 46

Q:12 ಮಾನವನ ಶರೀರದಲ್ಲಿ ಎಷ್ಟು ಮೂಳೆಗಳಿವೆ
Ans:- 206

Q:13 ಮಾನವನ ಅಂಗಾಂಗಗಳಲ್ಲಿ ಅತ್ಯಂತ ದೊಡ್ಡ ಅಂಗ ಯಾವುದು
Ans:- ಪಿತ್ತ ಜನಕಾಂಗ

Q:14 ಮನುಷ್ಯನ ಹೃದಯ ನಿಮಿಷಕ್ಕೆ ಎಷ್ಟು ಬಾರಿ ಬಡಿದುಕೊಳ್ಳುತ್ತದೆ
Ans:- 72 ಬಾರಿ

Q:15 ಮಾನವನ ದೇಹದ ಅತಿ ದೊಡ್ಡ ಜೀರ್ಣಕೋಶ
Ans:- ಲಿವರ್

Q:16 ಮೆದುಜೀರಕ ಗ್ರಂಥಿ ಏನನ್ನು ಉತ್ಪಾದಿಸುತ್ತದೆ
Ans:- ಇನ್ಸುಲಿನ್

Q:17 ಕೊಬ್ಬಿನಲ್ಲಿರುವ ಅಂಶಗಳು
Ans:- ಕಾರ್ಬನ್ ನೈಟ್ರೋಜನ್ ಆಕ್ಸಿಜನ್

Q:18 ಐರನ್ ಕೊರತೆಯಿಂದ ಬರುವ ಕಾಯಿಲೆ
Ans:- ರಕ್ತಹೀನತೆ

Q:19 ಶ್ವಾಸಕೋಶದ ಕೆಲಸ
Ans:- ಆಮ್ಲಜನಕದ ಸರಬರಾಜು

Q: 20 ಹಾಲನ್ನು ಮೊಸರಾಗಿ ಸುವ ಆಮ್ಲ
Ans:- ಲ್ಯಾಕ್ಟಿಕ್ ಆಸಿಡ್

Q:21 ಅಡಿಗೆ ಗ್ಯಾಸ್ ನಲ್ಲಿರುವ ಅನಿಲ
Ans:- ಬ್ಯೂಟೇನ್

Q:22 ಗೊಬ್ಬರ ಗ್ಯಾಸ್ ನಲ್ಲಿ ಇರುವ ಅನಿಲ
Ans:- ಮೀಥೇನ್

Q:23 ಮೊಟ್ಟಮೊದಲ ಬಾರಿಗೆ ಕಂಡುಹಿಡಿದ ಆಂಟಿಬಯೋಟಿಕ್
Ans:- ಪೆನ್ಸಿಲಿನ್

Q:24 ಎಬೋಲಾ ಯಾವುದರಿಂದ ಹರಡುತ್ತದೆ
Ans:- ವೈರಸ್

Q:25 ಹಿಮೋಗ್ಲೋಬಿನ್ ಯಾವುದರಲ್ಲಿ ಇರುತ್ತದೆ
Ans:- ಕೆಂಪು ರಕ್ತಕಣ ದಲ್ಲಿ.

Saturday, August 22, 2020

ಸರ್ಪ ಸುತ್ತಿಗೆ ಮನೆಮದ್ದು

ಆಯುರ್ವೇದದಲ್ಲಿ ಅತ್ಯುತ್ತಮ ಚಿಕಿತ್ಸೆ ಇದೆ. ಹಳೆ ಅಕ್ಕಿ ಗಂಜಿ, ಬೇಯಿಸಿದ ನೀರು, ಕೊತ್ತಂಬರಿ ಹಿಮ, ಎಳನೀರು ಸೇವಿಸಬೇಕು. ಇದರ ಜತೆಗೆ ಕೆಲವು ಔಷಧೋಪಚಾರ ಕೂಡ ಅಗತ್ಯ.

* ಒಣಗಿದ ನೆಲ್ಲಿ ತುಂಡುಗಳು, ಲಾವಂಚದ ಬೇರು, ಸೊಗದ ಬೇರು ಪ್ರತಿಯೊಂದನ್ನು ಒಂದೊಂದು ಚಮಚದಷ್ಟು ತೆಗೆದು ಕೊಂಡು ಬೇರೆ ಬೇರೆಯಾಗಿ ಕುಟ್ಟಿ ಪುಡಿಮಾಡಿ ಎರಡು ಲೋಟ ನೀರಿನಲ್ಲಿ ಸೇರಿಸಿ ಕುದುಸಿ, ಇದನ್ನು 1 ಅಥವಾ 4 ಲೋಟದಷ್ಟಾದಾಗ ದಿನಕ್ಕೆ ಎರಡುಬಾರಿ ಮೂರು ಚಮಚದಷ್ಟು ಸೇವಿಸಬೇಕು.ಇದನ್ನು ಮೂರು ವಾರಗಳ ಕಾಲ ಮಾಡಿದರೆ ಸರ್ಪಸುತ್ತು ಕಡಿಮಡಯಾಗುತ್ತದೆ.

* ಸರ್ಪ ಸುತ್ತು ಸಮಸ್ಯೆ ಇದ್ದಾಗ ನೆಲ್ಲಿಕಾಯಿ ಚೂರ್ಣ, ಲಾವಂಚ ಬೇರಿನ ಚೂರ್ಣ, ಸೊಗದ ಬೇರಿನ ಚೂರ್ಣ, ಇವನ್ನು ತಲಾ ಒಂಧು ಚಮಚದಷ್ಟು ತೆಗೆದುಕೊಂಡು 8 ಲೋಟ ನೀರಿಹಾಕಿ ನಿಧಾನವಾಗಿ ಕುದಿಸಿ ಅದು ಒಂದು ಲೋಟದಷ್ಟು ಆದಾಗ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಸೇವಿಸಬೇಕು.

* ಸರ್ಪಸುತ್ತು ಸಮಸ್ಯೆ ಇದ್ದಾಗ ಗೋಟಡಿಕೆಯನ್ನು ಅಕ್ಕಿ ತೊಳೆದ ನೀರಿನಲ್ಲಿ ಅರೆದು ದಿನದಲ್ಲಿ ನಾಲ್ಕು ಅಥವಾ ಐದುಬಾರಿ ಮೈಗೆಲ್ಲ ಲೇಪಿಸಬೇಕು.
ಹಾವಿನ ಶಾಪ ಅಂತಲೇ ಹೇಳಲಾಗುವ ಸರ್ಪ ಸುತ್ತಿನ ಲಕ್ಷಣಗಳು ಹಾಗೂ ಚಿಕಿತ್ಸೆ*            ‌                                ‌                           ‌                                        ನಮ್ಮಲ್ಲಿ ಹಲವರಿಗೆ ಜೀವನದಲ್ಲೊಂದು ಬಾರಿಯಾದರೂ ದೇಹದ ಕೆಲವು ಭಾಗಗಳಲ್ಲಿ ಚರ್ಮ ಕೆಂಪಗಾಗಿ ಚಿಕ್ಕ ಚಿಕ್ಕ ಗುಳ್ಳೆಗಳೆದ್ದು ತೀವ್ರ ಉರಿ ಮತ್ತು ನೀರು ಸೋರುವುದು ಎದುರಾಗಿರಬಹುದು. ಸರ್ಪಸುತ್ತು ಅಥವಾ Psoriasis ಎಂದು ವೈದ್ಯರು ಕರೆಯುವ ಈ ಚರ್ಮವ್ಯಾಧಿಯೂ ಈ ಲಕ್ಷಣಗಳನ್ನು ನೀಡುತ್ತದೆ ಹಾಗೂ ಈ ಬಗ್ಗೆ ಅರಿತುಕೊಂಡಿರುವುದು ಅಗತ್ಯವಾಗಿದ್ದು ಇದರ ಲಕ್ಷಣಗಳು ಕಾಣತೊಡಗಿದ ತಕ್ಷಣವೇ ಚಿಕಿತ್ಸೆ ಪ್ರಾರಂಭಿಸುವ ಮೂಲಕ ಶೀಘ್ರ ಗುಣವಾಗುವ ಸಾಧ್ಯತೆಯೂ ಹೆಚ್ಚುತ್ತದೆ....

*ಸರ್ಪಸುತ್ತು ಎಂದರೇನು?*
herpes zoster ಎಂಬ ವೈದ್ಯಕೀಯ ಹೆಸರಿನಿಂದ ಗುರುತಿಸಲ್ಪಡುವ ಈ ಚರ್ಮವ್ಯಾಧಿ ಸಿಡುಬು ಅಥವಾ chickenpox ಎಂಬ ಚರ್ಮ ರೋಗಕ್ಕೆ ಕಾರಣವಾಗುವ ವೈರಸ್ಸಿನ ಪುನಃಸಕ್ರಿಯಗೊಳಿಸುವ ಮೂಲಕ ಎದುರಾಗುತ್ತದೆ. varicella zoster ಎಂಬ ಹೆಸರಿನ ಈ ವೈರಸ್ಸು ನರಗಳ ಅಂಗಾಂಶದ ಮೇಲೆ ಧಾಳಿಯಿಟ್ಟು ಸಿಡುಬನ್ನು ಪುನಃಸಕ್ರಿಯಗೊಳಿಸುತ್ತದೆ. ಪ್ರಾರಂಭದಲ್ಲಿ ಇದು ಚರ್ಮದ ಮೇಲೆ ಕೆಂಪನೆಯ ಗೆರೆ ಎಳೆದಂತೆ ಪ್ರಾರಂಭವಾಗಿ ಕ್ರಮೇಣ ಇದರಲ್ಲಿ ಚಿಕ್ಕ ಚಿಕ್ಕ ಗುಳ್ಳೆಗಳು ಮೂಡತೊಡಗುತ್ತವೆ. ಸಾಮಾನ್ಯವಾಗಿ ಈ ಗೆರೆಗಳು ವಕ್ರಾಕಾರವಾಗಿರುವುದರಿಂದಲೇ ಇದಕ್ಕೆ ಸರ್ಪಸುತ್ತು ಎಂದು ಕರೆಯುತ್ತಾರೆ.

ತುರಿಕೆ, ಉರಿ ಮತ್ತು ಚರ್ಮದ ಆಳದಲ್ಲಿ ನೋವು ಕಾಣಿಸಿಕೊಳ್ಳುತ್ತದೆ
ಯಾವಾಗ ಈ ಗೆರೆ ಮೂಡತೊಡಗಿತೋ, ಆಗಿನಿಂದಲೇ ತುರಿಕೆ, ಉರಿ ಮತ್ತು ಚರ್ಮದ ಆಳದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಚರ್ಮ ಕೆಂಪಗಾಗಿರುವುದರಿಂದ ವೈದ್ಯರಿಗೆ ಇದೇ ಸರ್ಪಸುತ್ತು ಎಂದು ಕಂಡುಹಿಡಿಯಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಈ ಸ್ಥಿತಿ ಎದುರಾದಾಗ ಎಷ್ಟು ಬೇಗನೇ ಸಾಧ್ಯವೋ ಅಷ್ಟೂ ಬೇಗನೇ ಚಿಕಿತ್ಸೆಯನ್ನು ಆರಂಭಿಸಬೇಕು. ಸೂಕ್ತ ಲಸಿಕೆಯನ್ನು ದೇಹಕ್ಕೆ ಚುಚ್ಚಿಸಿಕೊಳ್ಳುವ ಮೂಲಕ ಈ ರೋಗ ಬರದಂತೆ ರಕ್ಷಿಸುವುದೇ ಜಾಣತನದ ಕ್ರಮವಾಗಿದೆ.

*ಸರ್ಪಸುತ್ತಿನ ಪ್ರಾರಂಭಿಕ ಲಕ್ಷಣಗಳು ಯಾವುವು?*
ಈ ಗೆರೆಗಳು ಮೂಡುವ ಮುನ್ನ ಚರ್ಮದ ಅಡಿಯಲ್ಲಿರುವ ನರದಲ್ಲಿ ವೈರಸ್ಸು ಧಾಳಿಯಿಟ್ಟು ಸೋಂಕು ಹರಡಿದ ಕ್ಷಣದಿಂದಲೇ ಈ ಭಾಗದ ಚರ್ಮದಲ್ಲಿ ನವಿರಾಗಿ ಕಚಗುಳಿ ಇಟ್ಟಂತೆ ಚಿಕ್ಕದಾಗಿ ನೋವಿನ ಅನುಭವವಾಗುತ್ತದೆ. ಜೊತೆಗೇ ಈ ವೈರಸ್ಸನ್ನು ಎದುರಿಸಲು ದೇಹ ತಾಪಮಾನವನ್ನು ಏರಿಸುವ ಕಾರಣ ಜ್ವರವೂ, ಕೊಂಚ ಸುಸ್ತು ಸಹಾ ಆವರಿಸತೊಡಗುತ್ತವೆ. ಇವೇ ಸರ್ಪಸುತ್ತಿನ ಪ್ರಾರಂಭಿಕ ಲಕ್ಷಣಗಳಾಗಿವೆ. ನಿಧಾನವಾಗಿ ಈ ಭಾಗದಲ್ಲಿ ಉರಿಯಾಗತೊಡಗುತ್ತದೆ ಮತ್ತು ಕೊಂಚ ನೋವಿನಿಂದಲೂ ಕೂಡಿರುತ್ತದೆ. ಹೀಗೇ ಕೆಲವು ದಿನ ಮುಂದುವರೆಯುತ್ತದೆ ಹಾಗೂ ಬಳಿಕ ವಕ್ರಾಕಾರದ ಗೆರೆಯಂತೆ ಚರ್ಮ ಕೆಂಪಗಾಗತೊಡಗುತ್ತದೆ.

*ಗುಳ್ಳೆಗಳು*
ಯಾವಾಗ ಚರ್ಮ ಕೆಂಪಗಾಗಲು ತೊಡಗುತ್ತದೆಯೋ, ನಂತರದ ಕೆಲವೇ ದಿನಗಳಲ್ಲಿ, ಸುಮಾರು ಎರಡನೆಯ ಅಥವಾ ಮೂರನೆಯ ದಿನದಂದು ಚಿಕ್ಕ ಚಿಕ್ಕ ಗುಳ್ಳೆಗಳು ಮೂಡತೊಡಗುತ್ತವೆ. ಮೊದಲ ನೋಟಕ್ಕೆ ಇವು ಸಿಡುಬಿನ (chickenpox) ಗುಳ್ಳೆಗಳಂತೆಯೇ ತೋರುತ್ತವೆ. ಈ ಗುಳ್ಳೆಗಳು ಈ ಗೆರೆಯ ಅಕ್ಕಪಕ್ಕದಲ್ಲಿಯೇ ಕಾಣಿಸಿಕೊಳ್ಳುತ್ತವೆಯೇ ವಿನಃ ದೇಹದ ಇತರ ಯಾವುದೇ ಭಾಗದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಈ ಲಕ್ಷಣವನ್ನೇ ವೈದ್ಯರು ಸರ್ಪಸುತ್ತಿನ ಲಕ್ಷಣವನ್ನಾಗಿ ಪರಿಗಣಿಸುತ್ತಾರೆ. ಸಾಮಾನ್ಯವಾಗಿ ಈ ಗುಳ್ಳೆಗಳು ಬೆನ್ನು, ಮುಖ ಮತ್ತು ತೊಡೆಸಂಧಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.

*ಹುರುಪೆ ಏಳುವುದು*
ಈ ಗುಳ್ಳೆಗಳ ಹೊರಪದರ ತೀರಾ ತೆಳುವಾಗಿದ್ದು ನೀರಿನಿಂದ ತುಂಬಿಕೊಂಡು ಸುಲಭವಾಗಿ ಉಬ್ಬಿಕೊಂಡು ತಾವಾಗಿಯೇ ಒಡೆಯುತ್ತವೆ. ತುರಿಸಿಕೊಂಡಾಗ ಕೊಂಚ ಉಗುರು ತಾಕಿದರೂ ಸಿಡಿದು ಬಿರಿಯುತ್ತವೆ. ಬಳಿಕ ನಿಧಾನವಾಗಿ ಈ ಬಿರಿದ ಚರ್ಮ ಒಣಗಿ ಹಳದಿಬಣ್ಣಕ್ಕೆ ತಿರುಗತೊಡಗುತ್ತದೆ. ಇದು ಒಣಗಲು ಪ್ರಾರಂಭವಾದ ಬಳಿಕ ಒಣಗಿದ ಚರ್ಮ ಹುರುಪೆಯಂತೆ ಕೆಳಚರ್ಮದಿಂದ ಬೇರ್ಪಟ್ಟು ಚಕ್ಕಳದಂತೆ ಮೇಲೇಳುತ್ತದೆ. ಈ ಪರಿ ಪೂರ್ಣವಾಗಲು ಸುಮಾರು ಎರಡು ವಾರ ಅವಧಿ ಬೇಕಾಗುತ್ತದೆ.

*ಸೊಂಟದ ಪಟ್ಟಿಯಂತೆ ಗೋಚರಿಸುತ್ತದೆ*
ಕೆಲವೊಮ್ಮೆ ಸೊಂಟಕ್ಕೆ ಸುತ್ತಿರುವ ಬಟ್ಟೆಯ ದಾರ ಅಥವಾ ಬೆಲ್ಟ್ ಕಟ್ಟಿದ್ದ ಭಾಗದ ತೇವದಲ್ಲಿಯೇ ಹೆಚ್ಚು ವೈರಸ್ಸುಗಳು ಧಾಳಿಯಿಟ್ಟು ಈ ಭಾಗದಲ್ಲಿಯೇ ಸರ್ಪಸುತ್ತು ಬರುವಂತೆ ಮಾಡಿ ಸೊಂಟದ ಸುತ್ತ ಬೆಲ್ಟ್ ರೂಪದಲ್ಲಿಯೇ ಸೋಂಕು ಹರಡುತ್ತದೆ. ಈ ಬಗೆಯ ಸರ್ಪಸುತ್ತಿಗೆ shingles band ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಬಿಗಿಯಾಗಿ ಸೊಂಟಕ್ಕೆ ಬೆಲ್ಟ್ ಕಟ್ಟುವ ವ್ಯಕ್ತಿಗಳಿಗೇ ಈ ತೊಂದರೆ ಹೆಚ್ಚಾಗಿ ಎದುರಾಗುತ್ತದೆ. ಹಾಗಾಗಿ ಸೊಂಟವನ್ನು ಸಾಮಾನ್ಯ ಗಾತ್ರಕ್ಕೂ ಹೆಚ್ಚು ಬಿಗಿಗೊಳಿಸಬಾರದು.

*ಕಣ್ಣಿನ ಬಳಿಯ ಸರ್ಪಸುತ್ತು*
ಒಂದು ವೇಳೆ ಮುಖದ ಕೆನ್ನೆ, ಕಣ್ಣಿನ ಕೆಳಭಾಗ ಮೊದಲಾದ ಸೂಕ್ಷ ಚರ್ಮದಡಿಯಲ್ಲಿ ನರಗಳಿಗೆ ಸೋಂಕು ಎದುರಾದರೆ ಈ ಭಾಗದಲ್ಲಿ ಸರ್ಪಸುತ್ತು ಕಾಣಿಸಿಕೊಳ್ಳುತ್ತದೆ ಹಾಗೂ ಮುಖದ ಸ್ನಾಯುಗಳ ಚಲನೆ ಕಷ್ಟಕರವಾಗಿಸುತ್ತದೆ. ಸಾಮಾನ್ಯವಾಗಿ ಕಣ್ಣಿನ ಸುತ್ತ, ಮೂಗಿನ ಪಕ್ಕ ಮತ್ತು ಹಣೆಯಲ್ಲಿ ಈ ಸೋಂಕು ಕಂಡುಬರುತ್ತದೆ. ಕಣ್ಣಿನ ಬಳಿ ಸೋಂಕು ಎದುರಾಗಿದ್ದರೆ ಚರ್ಮದಡಿಯಿಂದಲೇ ಈ ಸೋಂಕು ಕಣ್ಣಿಗೂ ತಲುಪುವ ಮೂಲಕ ಕಣ್ಣು ಕೆಂಪಗಾಗುತ್ತದೆ. ಕೆಲವೊಮ್ಮೆ ಕಣ್ಣಿನೊಳಗಿನ ಊತದಿಂದಾಗಿ ದೃಷ್ಟಿಯ ಮೇಲೂ ಪ್ರಭಾವ ಬೀರಿ ವ್ಯಕ್ತಿಗೆ ಎದುರಿನ ದೃಶ್ಯ ಎರಡೆರಡಾಗಿ ಗೋಚರಿಸಬಹುದು.

*ಸರ್ಪಸುತ್ತಿನ ಚಿಕಿತ್ಸೆ ಹೇಗೆ?*
varicella zoster ಎಂಬ ಹೆಸರಿನ ಈ ವೈರಸ್ಸು ವ್ಯಕ್ತಿಯ ರಕ್ತದಲ್ಲಿಯೇ ಮನೆಮಾಡಿ ತನ್ನ ಪ್ರಭಾವ ಬೀರಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು ಹಾಗೂ ವ್ಯಕ್ತಿಯ ದೇಹದ ಇತರ ಭಾಗಕ್ಕೆ ಹರಡುವ ಜೊತೆಗೇ ಈ ವ್ಯಕ್ತಿಯ ಚರ್ಮದಿಂದ ಒಡೆದ ಗುಳ್ಳೆಗಳಿಂದ ಸಿಡಿದ ದ್ರವ ಬೇರೆ ವ್ಯಕ್ತಿಯ ತ್ವಚೆಗೆ ದಾಟಿಕೊಂಡು ತೇವ ಅಥವಾ ಗಾಯದ ಮೂಲಕ ಈ ಸೋಂಕು ಹರಡುವ ಸಂಭವವಿದೆ. ಸಿಡುಬು ರೋಗಕ್ಕೆಂದೂ ಲಸಿಕೆ ತೆಗೆದುಕೊಳ್ಳದ ಅಥವಾ ಜೀವಮಾನದಲ್ಲಿ ಎಂದೂ ಒಂದೂ ಬಾರಿ ಸಿಡುಬು ರೋಗಕ್ಕೆ ತುತ್ತಾಗದ ವ್ಯಕ್ತಿಗಳಿಗೇ ಈ ವೈರಸ್ಸು ಧಾಳಿಯಿಡುತ್ತದೆ. ಎಲ್ಲಿಯವರೆಗೆ ಈ ವ್ಯಕ್ತಿಯ ದೇಹದ ಎಲ್ಲಾ ಗುಳ್ಳೆಗಳು ಒಡೆದು ಚಕ್ಕಳದ ರೂಪದಲ್ಲಿ ಒಣಗಿ ದೇಹದಿಂದ ಬೇರ್ಪಡುವುದಿಲ್ಲವೋ ಅಲ್ಲಿಯವರೆಗೂ ಈ ವ್ಯಕ್ತಿಯಿಂದ ಇತರರಿಗೆ ಹರಡುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ರೋಗ ನಿರೋಧಕ ವ್ಯವಸ್ಥೆ ಶಿಥಿಲವಾಗಿರುವ ವ್ಯಕ್ತಿಗಳು, ಈ ಪ್ರದೇಶಕ್ಕೆ ಮೊದಲ ಬಾರಿ ಆಗಮಿಸಿರುವ ವ್ಯಕ್ತಿಗಳು ಮತ್ತು ಮಕ್ಕಳಿಗೆ ಈ ಸೋಂಕು ಹೆಚ್ಚಾಗಿ ಹರಡುತ್ತದೆ.

*ಸರ್ಪಸುತ್ತು ಎಷ್ಟು ದಿನ ಕಾಡುತ್ತದೆ?*
ಸೂಕ್ಷ್ಮಗೆರೆಗಳು ಪ್ರಾರಂಭವಾದ ದಿನದಿಂದ ಕನಿಷ್ಟ ಎರಡು ವಾರಗಳವರೆಗಾದರೂ ಈ ಸೋಂಕು ಆವರಿಸುತ್ತದೆ ಹಾಗೂ ಗರಿಷ್ಟ ನಾಲ್ಕು ವಾರಗಳವರೆಗೂ ಇರಬಹುದು. ಹುರುಪೆಗಳು ದೇಹದಿಂದ ಕಳಚಿಕೊಂಡ ಬಳಿಕವೂ ಈ ಭಾಗದಲ್ಲಿ ಗೆರೆಗಳಂತೆ ಕಲೆ ಉಳಿದುಕೊಳ್ಳಬಹುದು ಹಾಗೂ ಈ ಕಲೆಗಳು ಪೂರ್ಣವಾಗಿ ಚರ್ಮದಿಂದ ಇಲ್ಲವಾಗಲು ಹೆಚ್ಚಿನ ಸಮಯ, ಕೆಲವೊಮ್ಮೆ ವರ್ಷಗಳೇ ಬೇಕಾಗಬಹುದು. ಕೆಲವು ಸಂದರ್ಭಗಳಲ್ಲಿ ಈ ಭಾಗದ ಹುರುಪೆ ಕಳಚಿಹೋದ ಬಳಿಕವೂ ಚರ್ಮದಡಿಯಲ್ಲಿ ಕೊಂಚ ನೋವು ಉಳಿದುಕೊಳ್ಳುತ್ತದೆ ಹಾಗೂ ಕೆಲವಾರು ತಿಂಗಳುಗಳವರೆಗೆ ಹಾಗೇ ಉಳಿದುಕೊಳ್ಳಬಹುದು. ಸಾಮಾನ್ಯವಾಗಿ ಈ ತೊಂದರೆಯೂ ಜೀವಮಾನದಲ್ಲಿ ಒಮ್ಮೆಯೇ ಬರುತ್ತದೆಯಾದರೂ ಅಪರೂಪದ ಸಂದರ್ಭಗಳಲ್ಲಿ ಒಮ್ಮೆ ಎದುರಾದ ವ್ಯಕ್ತಿಯಲ್ಲಿ ಮತ್ತೊಮ್ಮೆಯೂ ಕಾಣಿಸಿಕೊಳ್ಳಬಹುದು.

*ಚಿಕಿತ್ಸೆ*
ಈ ಕಾಯಿಲೆಗೆ ವೈರಸ್ ನಿರೋಧಕ ಔಷಧಿಗಳ ಸೇವನೆ ಅಗತ್ಯವಾಗಿದ್ದು ಸರ್ಪಸುತ್ತಿನ ಪ್ರಕೋಪ ವಿಕೋಪಕ್ಕೆ ತಿರುಗದಂತೆ ತಡೆಗಟ್ಟಬಹುದು. ಪ್ರಾರಂಭಿಕ ಹಂತ, ಅಂದರೆ ಪ್ರಾರಂಭಿಕ ಸೂಚನೆಗಳು ಕಾಣತೊಡಗಿದ 72 ಘಂಟೆಗಳ ಒಳಗಾಗಿ ಚಿಕಿತ್ಸೆ ಪ್ರಾರಂಭಿಸಿದರೆ ಶೀಘ್ರವಾಗಿ ಗುಣವಾಗುವ ಸಾಧ್ಯತೆಯೂ ಹೆಚ್ಚುತ್ತದೆ. ನಿಮಗೆ ಚಿಕಿತ್ಸೆ ನೀಡುವ ವೈದ್ಯರು acyclovir, famciclovir ಅಥವಾ valacyclovir ಎಂಬ ಔಷಧಿಗಳನ್ನು ಸೇವಿಸಲು ಸಲಹೆ ಮಾಡಬಹುದು. ಕೆಲವರಿಗೆ ಈ ನೋವನ್ನು ಸಹಿಸಲಾಗದೇ ಇದ್ದರೆ ಈ ಔಷಧಿಗಳ ಜೊತೆಗೇ ibuprofen ಅಥವಾ acetaminophen ಎಂಬ ನೋವು ನಿವಾರಕಗಳನ್ನೂ ವೈದ್ಯರು ನೀಡಬಹುದು. ಏಕೆಂದರೆ ಚರ್ಮದ ಹೊರಭಾಗದಲ್ಲಿ ಕೆಂಪಗಾಗಲು ತೊಡಗುವ ಮುನ್ನ ಚರ್ಮದಡಿಯಲ್ಲಿ ಉರಿಯೂತ ಉಂಟು ಮಾಡಿ ನೋವಿಗೆ ಕಾರಣವಾಗಿರುತ್ತದೆ. ಚರ್ಮದ ಉರಿಯನ್ನು ತಗ್ಗಿಸಲು ಚರ್ಮದ ಸಂವೇದನೆಯನ್ನು ತಗ್ಗಿಸುವ ಜೆಲ್ ಗಳು ಅಥವಾ ಪ್ರತಿಜೀವಕ ಗುಣವಿರುವ ಮುಲಾಮುಗಳನ್ನು ಹಚ್ಚಲು ನೀಡಬಹುದು. ಯಾವುದಕ್ಕೂ, ವೈದ್ಯರು ಪರೀಕ್ಷಿಸುವ ಸಮಯದಲ್ಲಿ ಈ ವ್ಯಾಧಿ ಎಷ್ಟರ ಮಟ್ಟಿಗೆ ಆವರಿಸಿ ಮುಂದುವರೆದಿದೆ ಎಂಬ ಅಂಶವನ್ನು ಆಧರಿಸಿ ವೈದ್ಯರೇ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ.

*ಎಚ್ಚರಿಕೆಗಳು*
ಯಾವಾಗ ಈ ತೊಂದರೆ ಇದೆ ಎಂದು ತಿಳಿದುಬಂದಿತೋ ಆ ಕ್ಷಣದಿಂದಲೇ ಸೋಂಕು ಎದುರಾದ ಭಾಗವನ್ನು ಸ್ವಚ್ಛ ಮತ್ತು ಒಣದಾಗಿರಿಸಲು ದೃಢನಿರ್ಧಾರ ಕೈಗೊಳ್ಳಬೇಕು. ಅಪ್ಪಿ ತಪ್ಪಿಯೂ ನೀರು ತಾಕಿಸಬಾರದು ಅಥವಾ ಗುಳ್ಳೆಗಳನ್ನು ಒಡೆಯಲು ಹೋಗಬಾರದು. ಉಗುರನ್ನಂತೂ ತಾಕಿಸಲೇಬಾರದು. ಈ ಭಾಗ ಒಣಗಿಯೇ ಇದ್ದಷ್ಟೂ ಬೇಗನೇ ಗುಣವಾಗುತ್ತದೆ. ಪೂರ್ಣವಾಗಿ ಗುಣವಾಗುವವರೆಗೂ ಈ ಭಾಗವನ್ನು ಪ್ಲಾಸ್ಟಿಕ್ಕಿನಿಂದ ಆವರಿಸಿ ನೀರು ತಾಕದಂತೆ ಎಚ್ಚರ ವಹಿಸಿಯೇ ಸ್ನಾನ ಮಾಡಬೇಕು. ಈ ವ್ಯಕ್ತಿಗಳ ಒಳ ಉಡುಪುಗಳು, ಹಾಸಿಗೆ, ಹೊದಿಕೆ, ವಸ್ತ್ರಗಳೆಲ್ಲವನ್ನೂ ಪ್ರತ್ಯೇಕವಾಗಿ, ಸೂಕ್ತ ಕ್ರಿಮಿನಾಶಕಗಳನ್ನು ಉಪಯೋಗಿಸಿ ಒಗೆಯಬೇಕು. ಒಂದು ವೇಳೆ ಚರ್ಮದಡಿಯ ನೋವು ಮತ್ತು ಉರಿ ತೀವ್ರವಾಗಿದ್ದರೆ ಚಿಕಿತ್ಸೆಯ ಜೊತೆಗೇ ಅಕ್ಯುಪಂಕ್ಚರ್ ನಂತಹ ಹೆಚ್ಚುವರಿ ಚಿಕಿತ್ಸೆಯನ್ನೂ ಪಡೆಯಬಹುದು, ಆದರೆ ಇದಕ್ಕೆ ವೈದ್ಯರ ಅನುಮತಿ ಅಗತ್ಯ. ಹೀಗೆ ವ್ಯಾಧಿ ಆವರಿಸಿದೆ ಎಂದು ತಿಳಿದ ತಕ್ಷಣ ನೂರಾರು ವ್ಯಕ್ತಿಗಳು ತಮಗೆ ತೋಚಿದ ಚಿಕಿತ್ಸೆಯನ್ನು ಸೂಚಿಸ ಬಹುದು, ಆದರೆ ಯಾವುದೇ ಚಿಕಿತ್ಸೆಯನ್ನು ಪ್ರಾರಂಭಿಸುವ ಮುನ್ನ ವೈದ್ಯರ ಅನುಮತಿ ಪಡೆಯುವುದು ಕಡ್ಡಾಯ.

*ಕಾಯಿಲೆ ಬರದಂತೆ ತಡೆಗಟ್ಟುವುದು ಹೇಗೆ?*
ಸಿಡುಬು ಸಹಿತ ಇತರ ವೈರಸ್ ಮೂಲಕ ಎದುರಾಗುವ ಕಾಯಿಲೆಗಳು ಬರದಂತೆ ಲಸಿಕೆ ಹಚ್ಚಿಸಿಕೊಳ್ಳುವುದೇ ಜಾಣತನದ ಕ್ರಮವಾಗಿದೆ. ಈ ರೋಗ ಬಾರದಂತೆ ತಡೆಯಲು Shingrix ಮತ್ತು Zostavax ಎಂಬ ಹೆಸರಿನ ಎರಡು ಲಸಿಕೆಗಳಿವೆ. ಇದರಲ್ಲಿ ಮೊದಲನೆಯದ್ದು ಹೆಚ್ಚು ಪ್ರಬಲವಾಗಿದ್ದು ಶೇಖಡಾ ತೊಂಭತ್ತರಷ್ಟು ಪ್ರಕರಣಗಳಲ್ಲಿ ಯಶಸ್ಸು ಕಂಡುಬರುತ್ತದೆ. ಒಂದು ವೇಳೆ Zostavax ಎಂಬ ಲಸಿಕೆಯನ್ನು ಈಗಾಗಲೇ ಪಡೆದಿರುವ ವ್ಯಕ್ತಿಗಳು Shingrix ಲಸಿಕೆಯನ್ನೂ ಹೆಚ್ಚುವರಿಯಾಗಿ ಪಡೆಯಬಹುದು. ಅದರಲ್ಲೂ ಐವತ್ತು ದಾಟಿದ ವ್ಯಕ್ತಿಗಳು ಈ ಲಸಿಕೆಯನ್ನು ಖಂಡಿತವಾಗಿಯೂ ಹಾಕಿಸಿಕೊಳ್ಳಬೇಕು. Shingrix ಲಸಿಕೆಯ ಎರಡು ಚುಚ್ಚುಮದ್ದುಗಳನ್ನು ಪಡೆದುಕೊಳ್ಳ ಬೇಕಾಗುತ್ತದೆ. ಮೊದಲ ಲಸಿಕೆ ಪಡೆದ ಆರು ತಿಂಗಳುಗಳ ಬಳಿಕ ಎರಡನೆಯ ಚುಚ್ಚುಮದ್ದು ಪಡೆಯ ಬೇಕಾಗುತ್ತದೆ. ಅತ್ಯಪರೂಪ ಪ್ರಕರಣಗಳಲ್ಲಿ, Shingrix ಲಸಿಕೆಯನ್ನು ಪಡೆದ ಬಳಿಕವೂ ವ್ಯಕ್ತಿಯೊಬ್ಬರಿಗೆ ಸರ್ಪಸುತ್ತು ಕಾಣಿಸಿಕೊಳ್ಳಬಹುದು. ಆದರೆ ಇವರಿಗೆ ಉರಿ ಮತ್ತು ತುರಿಕೆ ತೀರಾ ಕಡಿಮೆ ಇರುತ್ತದೆ. Shingrix ಲಸಿಕೆಯ ಅಡ್ಡಪರಿಣಾಮದ ಕಾರಣದಿಂದಾಗಿ ಚುಚ್ಚುಮದ್ದು ನೀಡಿದ ಭಾಗದಲ್ಲಿ ಊದಿಕೊಳ್ಳುವುದು, ಮುಟ್ಟಲೂ ಆಗದಷ್ಟು ನೋವು ಮತ್ತು ಬಳಲಿಕೆ, ತಲೆನೋವು, ಜ್ವರ, ನಡುಕ ಮತ್ತು ಹೊಟ್ಟೆಯಲ್ಲಿ ತೊಂದರೆ ಎದುರಾಗುತ್ತವೆ. Zostavax ಲಸಿಕೆಯಿಂದಲೂ ವ್ಯಕ್ತಿಗೆ ಅಲ್ಪ ಪ್ರಮಾಣದ ಸಿಡುಬನ್ನೇ ಹೋಲುವ ಚರ್ಮದ ಗುಳ್ಳೆಗಳು ಕಾಣಿಸಿಕೊಳ್ಳಬಹುದು. ಏಕೆಂದರೆ ಈ ಲಸಿಕೆಯಲ್ಲಿ ಜೀವಂತವಿರುವ ಬ್ಯಾಕ್ಟೀರಿಯಾಗಳನ್ನೇ ದೇಹದೊಳಗೆ ಊಡಿಸಲಾಗಿರುತ್ತದೆ.

Thursday, August 20, 2020

ಐತಿಹಾಸಿಕ ಪ್ರಸಿದ್ಧ ದೇಶ, ನಗರ, ಪ್ರಾಂತ್ಯಗಳ ಪ್ರಾಚೀನ ಹೆಸರುಗಳು

●.ಮೆಸಪೋಟೋಮಿಯ ಇಂದಿನ ಹೆಸರು ━━━━━━━► ️ಇರಾಕ್

●.ಪ್ರಾಚೀನ ಪರ್ಷಿಯದ ಈಗಿನ ಹೆಸರು ━━━━━━━► ️ಇರಾನ್

●.ಬಾದಾಮಿಯ ಪ್ರಾಚೀನ ಹೆಸರು ━━━━━━━► ️ವಾತಾಪಿ

●.ಶ್ರವಣಬೆಳಗೋಳದ ಪ್ರಾಚೀನ ಹೆಸರು ━━━━━━━► ️ಕಾಥವಪುರಿ

●.ತಾಳಗುಂದದ ಪ್ರಾಚೀನ ಹೆಸರು ━━━━━━━► ️ಸ್ಥಣ ಕುಂದೂರು 

●.ಬನವಾಸಿಯ ಪ್ರಾಚೀನ ಹೆಸರು ━━━━━━━► ️ವೈಜಯಂತಿಪುರ ( ವಿಜಯ ಪಕಾಕೆಪುರ )

●.ದೆಹಲಿಯ ಪ್ರಾಚೀನ ಹೆಸರು ━━━━━━━► ️ಇಂದ್ರಪ್ರಸ್ಥ

●.ಬಂಗಾಳದ ಪ್ರಾಚೀನ ಹೆಸರು ━━━━━━━► ️ಗೌಡ ದೇಶ

●.ಅಸ್ಸಾಂ ನ ಪ್ರಾಚೀನ ಹೆಸರು ━━━━━━━► ️ಕಾಮರೂಪ

●.ಪಾಟ್ನಾದ ಪ್ರಾಚೀನ ಹೆಸರು ━━━━━━━► ️ಪಾಟಲೀಪುತ್ರ

●.ಹೈದರಬಾದಿನ ಪ್ರಾಚೀನ ಹೆಸರು ━━━━━━━► ️ಭಾಗ್ಯನಗರ

●.ಅಹಮದಾಬಾದಿನ ಪ್ರಾಚೀನ ಹೆಸರು ━━━━━━━► ️ಕರ್ಣಾವತಿ ನಗರ

●.ಅಲಹಾಬಾದಿನ ಪ್ರಾಚೀನ ಹೆಸರು ━━━━━━━► ️ಪ್ರಯಾಗ 

●.ಮ್ಯಾನ್ಮಾರ್ ದ ದೇಶದ ಪ್ರಾಚೀನ ಹೆಸರು ━━━━━━━► ️ಬರ್ಮಾ

●.ಬರ್ಮಾದ ಪ್ರಾಚೀನ ಹೆಸರು ━━━━━━━► ️ಸುವರ್ಣಭೂಮ

●.ರಾಜಸ್ಥಾನದ ಪ್ರಾಚೀನ ಹೆಸರು ━━━━━━━► ️ರಾಜ್ ಪುತಾನ್

●.ಗುಜರಾತ್ ನ ಹಿಂದಿನ ಹೆಸರು ━━━━━━━► ️ಕಾಥಿಯವಾಡ

●.ಕರ್ಣಾವತಿಯ ಪ್ರಸ್ತುತ ಹೆಸರು ━━━━━━━► ️ಅಹಮದಾಬಾದ್

●.ಅಲಹಾಬಾದಿನ ಪ್ರಾಚೀನ ಹೆಸರು ━━━━━━━► ️ಪ್ರಯಾಗ್

●.ಕಾಶಿಯ ಪ್ರಾಚೀನ ಹೆಸರು ━━━━━━━► ️ಬನಾರಸ್

●.ಒರಿಸ್ಸಾದ ಪ್ರಾಚೀನ ಹೆಸರು ━━━━━━━► ️ಕಳಿಂಗ

●.ಮೈಸೂರಿನ ಪ್ರಾಚೀನ ಹೆಸರು -━━━━━━━► ️ಮಹಿಷಮಂಡಳ

●.ಸುವರ್ಣಗಿರಿಯ ಇಂದಿನ ಹೆಸರು ━━━━━━━► ️ಕನಕಗಿರಿ ( ರಾಯಚೂರು ಜಿಲ್ಲೆ )

●.ಇಸಿಲದ ಇಂದಿನ ಹೆಸರು ━━━━━━━► ️ಬ್ರಹ್ಮಗಿರಿ ( ಚಿತ್ರದುರ್ಗ ಜಿಲ್ಲೆ )

●.ಆಧುನಿಕ ಪೇಷವರ ಎಂದು ಕರೆಯಲ್ಪಡುವ ಪ್ರದೇಶ 
━━━━━━━► ️ಗಾಂಧಾರ

●.ಮಗಧದ ಇಂದಿನ ಹೆಸರು ━━━━━━━► ️ಬಿಹಾರ

●.ವೈಶಾಲಿ ನಗರದ ಇಂದಿನ ಹೆಸರು ━━━━━━━► ️ವೇಸಾಡ್

●.ಗುಲ್ಬರ್ಗದ ಪ್ರಾಚೀನ ಹೆಸರು ━━━━━━━► ️ಅಹ್ ಸಾನಾಬಾದ್

●.ವಿಜಯ ನಗರದ ಪ್ರಾಚೀನ ರಾಜಧಾನಿ ━━━━━━━► ️ಆನೆಗೊಂಡಿ

●.ಹಳೇಬಿಡಿನ ಪ್ರಾಚೀನ ಹೆಸರು ━━━━━━━► ️ದ್ವಾರಸಮುದ್ರ

ದೇಶ ಪರಿಚಯ : ಇಸ್ರೇಲ್

*🌕ದೇಶ ಪರಿಚಯ :  ಇಸ್ರೇಲ್🌕*

➡️ ಖಂಡ: ಏಷ್ಯಾ

➡️ ರಾಷ್ಟ್ರೀಯ ಬಣ್ಣ: ನೀಲಿ ಮತ್ತು ಬಿಳಿ

➡️ ಅಧಿಕೃತ ಭಾಷೆ: ಹೀಬ್ರೂ ಮತ್ತು ಅರೇಬಿಕ್

➡️ ವಿಸ್ತೀರ್ಣ: 20,770 / 22,072 ಚ.ಕಿ.ಮೀ. (ವಿವಾದದಲ್ಲಿದೆ)153ನೇ ಸ್ಥಾನ

➡️ ರಾಷ್ಟ್ರೀಯ ಪ್ರಾಣಿ: ಕ್ಯಾನನ್ ಡಾಗ್

➡️ ರಾಜಧಾನಿ: ಜೆರೂಸಲೇಮ್(ಇದು ಪ್ಯಾಲೆಸೆôನ್ ಮತ್ತು ಇಸ್ರೇಲ್​ನ ವಿವಾದಿತ ಸ್ಥಳವಾಗಿದೆ. ಎರಡೂ ದೇಶಗಳು ಇದನ್ನೇ ತಮ್ಮ ರಾಜಧಾನಿ ಎಂದು ಹೇಳುತ್ತವೆ.)

➡️ ಈಗಿನ ರಾಷ್ಟ್ರಾಧ್ಯಕ್ಷ: ರೂವೆನ್ ರಿವ್ಲಿನ್

➡️ ಈಗಿನ ಪ್ರಧಾನಮಂತ್ರಿ: ಬೆಂಜಮಿನ್ ನೆತನ್ಯಹು

➡️ ಇಲ್ಲಿರುವ ಡೆಡ್ ಸೀ ಅಥವಾ ಮೃತ ಸಮುದ್ರ, ಸಮುದ್ರ ಮಟ್ಟಕ್ಕಿಂತ 1400 ಅಡಿಗಳಿಗೂ ಹೆಚ್ಚು ತಳದಲ್ಲಿದ್ದು, ಭೂಮಿಯ ಅತ್ಯಂತ ತಗ್ಗು ಪ್ರದೇಶವಾಗಿದೆ. ಲವಣಾಂಶ ಅತಿ ಹೆಚ್ಚು ಇರುವುದರಿಂದ ಯಾವುದೇ ವಸ್ತು ನೀರಿನಲ್ಲಿ ಮುಳುಗುವುದಿಲ್ಲ, ತೇಲುತ್ತದೆ.

➡️ ಜೆರೂಸಲೇಮ್​ಯುಹೂದಿಗಳು, ಕ್ರಿಶ್ಚಿಯನ್ನರು ಮತ್ತು ಮುಸಲ್ಮಾನರಿಗೆ ಪವಿತ್ರ ಸ್ಥಳವಾಗಿದೆ.

➡️ ವಿಶೇಷ ಮಾಹಿತಿ: 1948ರ ಮೇ 14ರಂದು ಸ್ವಾತಂತ್ರ್ಯದಿನವನ್ನು ಆಚರಿಸುತ್ತಾರೆ.

➡️ ರಾಷ್ಟ್ರೀಯ ಹೂವು: ಕೊರೋ ನೇರಿಯಾ

➡️ ಕರೆನ್ಸಿ:  ಇಸ್ರೇಲಿ ನ್ಯೂ ಷೆಕಲ್ (ಬ್ಯಾಂಕ್ ನೋಟುಗಳಲ್ಲಿ ಬ್ರೈಲ್ ಲಿಪಿ ಇರುತ್ತದೆ.)

➡️ ರಾಷ್ಟ್ರೀಯ ಪಕ್ಷಿ:— ಮರಕುಟಿಕ

➡️ ಜನಸಂಖ್ಯೆ: —2014ರ ಜನಗಣತಿ ಪ್ರಕಾರ 82,38,300 (96ನೇ ಸ್ಥಾನ )

Saturday, August 15, 2020

ಈರುಳ್ಳಿ ತಿನ್ನುವುದರಿಂದ ಏನು ಲಾಭವಿದೆ ಗೊತ್ತೇ...?

ನಮ್ಮ ಮನೆಯಲ್ಲಿ ಮಾಡುವ ಅಡುಗೆಯಲ್ಲಾಗಲಿ ಅಥವಾ ಹೊರಗಡೆ ಎಲ್ಲೋ ಮಾಡುವ ಅಡುಗೆಯಲ್ಲಾಗಲಿ ಈರುಳ್ಳಿ ತುಂಬಾ ಮುಖ್ಯವಾದ ಪಾತ್ರವಹಿಸುತ್ತದೆ. ಮಾಂಸಾಹಾರವನ್ನು ಸೇವಿಸುವವರು ಅಥವಾ ಸೇವಿಸದೆ ಇರುವವರು ಕೂಡ ಈರುಳ್ಳಿಯನ್ನು ಸೇವಿಸುತ್ತಾರೆ. ಇದರಲ್ಲಿರುವ ಪೋಷಕಾಂಶಗಳು ನಮ್ಮ ಶರೀರದಲ್ಲಿರುವ ಎಲ್ಲಾ ಭಾಗಗಳನ್ನು ಶುದ್ಧಿಗೊಳಿಸುತ್ತದೆ. ಹಾಗೆಯೇ ಈರುಳ್ಳಿಯಲ್ಲಿ ಕ್ಯಾಲ್ಸಿಯಮ್, ಐರನ್, ವಿಟಮಿನ್ ಸಿ ಅಧಿಕವಾಗಿರುತ್ತದೆ ನಮ್ಮ ಶರೀರದಲ್ಲಿನ ರಕ್ತಪರಿಚಲನೆ ಚೆನ್ನಾಗಿ ಆಗಬೇಕಂದ್ರೆ ನಾವು ಈರುಳ್ಳಿಯನ್ನು ಸೇವಿಸಲೇಬೇಕಾಗುತ್ತದೆ. ತುಂಬಾ ಮಂದಿ ಈರುಳ್ಳಿಯನ್ನು ಅಲ್ಲಗಳೆಯುತ್ತಿರುತ್ತಾರೆ. ಆದರೆ, ಆವರಿಗೆ ಈ ಈರುಳ್ಳಿಯ ಮಹತ್ವ ಗೊತ್ತಿದ್ದರೆ ಅವರು ಹೀಗೆ ಮಾಡುವುದಿಲ್ಲ ಇನ್ನೂ ಈರುಳ್ಳಿಯನ್ನು ಸಲಾಡ್ ನಲ್ಲಿ ಅಥವಾ ಅಡುಗೆಯಲ್ಲಾಗಲಿ ಸೇವಿಸಬಹುದು.

ಈರುಳ್ಳಿಯ ರಸವನ್ನು ಎಣ್ಣೆಯ ಜೊತೆ ಮಿಶ್ರಣ ಮಾಡಿ ಕೀಲು ನೋವಿರುವ ಜಾಗಕ್ಕೆ ಮಸಾಜ್ ಮಾಡಿಕೊಳ್ಳುವುದರಿಂದ ಕೀಲು ನೋವು ತಕ್ಷಣದಲ್ಲಿ ಉಪಶಮನವಾಗುತ್ತದೆ. ಇನ್ನು ಎಲ್ಲಾ ವರ್ಗದ ಜನರನ್ನು ಕಾಡುತ್ತಿರುವ ಸಮಸ್ಯೆ ಎಂದರೆ ಕೂದಲು ಉದುರುವುದು, ಇದರಿಂದ ಬಹಳ ಜನರು ಬೇಸತ್ತುಹೋಗಿದ್ದಾರೆ ಮತ್ತು ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ. ಈರುಳ್ಳಿ ರಸವನ್ನು ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ತಲೆ ಕೂದಲಿಗೆ ಮಸಾಜ್ ಮಾಡುವುದರಿಂದ ತಲೆ ಹೊಟ್ಟು ಹಾಗೂ ಕೂದಲು ಉದುರುವಿಕೆಯ ಸಮಸ್ಯೆ ಎರಡೂ ನಿಯಂತ್ರಣಕ್ಕೆ ಬರುವುದು.

ಇನ್ನು ಎಲ್ಲಾ ಹಂತದ ಮನುಷ್ಯರಲ್ಲಿ ಸರ್ವೇಸಾಮಾನ್ಯವಾಗಿ ಕಾಡುತ್ತಿರುವ ಸಮಸ್ಯೆ ಎಂದರೆ ಕಿಡ್ನಿ ಸ್ಟೋನ್ ಸಮಸ್ಯೆ. ಈರುಳ್ಳಿಯು ಕಿಡ್ನಿ ಸ್ಟೋನ್ ಸಮಸ್ಯೆಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಈರುಳ್ಳಿ ರಸವನ್ನು ಸೇವಿಸುವುದರಿಂದ ಕಿಡ್ನಿ ಸ್ಟೋನ್ ಕರಗಿಹೋಗುತ್ತದೆ. ಇನ್ನು ಈರುಳ್ಳಿ ನಮ್ಮ ದೇಹದಲ್ಲಿನ ರಕ್ತವನ್ನು ಶುದ್ಧೀಕರಿಸುವುದಕ್ಕೆ ಸಹಾಯ ಮಾಡುತ್ತದೆ. ಈರುಳ್ಳಿಯಲ್ಲಿರುವ ಫಾಸ್ಫರಸ್ ಆಸಿಡ್ ರಕ್ತ ಶುದ್ಧಿಗೊಳ್ಳಲು ಉಪಯುಕ್ತವಾಗುತ್ತದೆ. ಇಷ್ಟಲ್ಲದೆ ಈರುಳ್ಳಿಯು ನಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ನಮ್ಮ ದೇಹದಲ್ಲಿನ ಕೆಟ್ಟ ಬೊಜ್ಜು ಕಡಿಮೆ ಮಾಡುತ್ತದೆ. ಪ್ರತಿದಿನ ಹಸಿ ಈರುಳ್ಳಿಯನ್ನು ಸೇವಿಸುವುದರಿಂದ ಅದು ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುತ್ತದೆ ಮತ್ತು ಅವುಗಳನ್ನು ಮತ್ತೆ ಬೆಳೆಯದ ಹಾಗೆ ನಿಯಂತ್ರಿಸುತ್ತದೆ. ಇನ್ನು ಹಸಿ ಈರುಳ್ಳಿ ತಿನ್ನುವುದರಿಂದ ಪುರುಷರಲ್ಲಿ ಫಲವತ್ತತೆ ಹೆಚ್ಚುವುದು.

Thursday, August 13, 2020

ಕೆಮ್ಮು, ಶೀತಕ್ಕೆ ಶುಂಠಿ ಎಂಬ ಮನೆ ಮದ್ದು

ಮಳೆಗಾಲ ಬಂತೆಂದರೆ ಹಲವಾರು ರೋಗಗಳು ಕಾಡುತ್ತವೆ. ಅವುಗಳಲ್ಲಿ ಮುಖ್ಯವಾಗಿ ಶೀತ-ಕೆಮ್ಮು. ಇನ್ನು ಶ್ವಾಸಕೋಶದ ಸಮಸ್ಯೆ ಇರುವವರಂತೂ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸದಿದ್ದರೆ, ಮಳೆಗಾಲದ ಈ ತೇವ ಭರಿತ ವಾತಾವರಣದಿಂದ ಆರೋಗ್ಯ ಮತ್ತಷ್ಟೂ ಬಿಗಡಾಯಿಸಬಹುದು. ಒಂದು ವೇಳೆ ನಿಮಗೆ ಶ್ವಾಸಕ್ಕೆ ಸಂಬಂಧಿಸಿದ ಸಮಸ್ಯೆ ಕಂಡು ಬಂದರೆ ಇಲ್ಲಿದೆ ಸಿಂಪಲ್ ಮನೆ ಮದ್ದು..

• ಒಣ ಕೆಮ್ಮಿದ್ದರೆ, ಶುಂಠಿ ರಸಕ್ಕೆ ಜೇನು, ತುಳಸಿ ರಸ ಹಾಗೂ ಕರಿಮೆಣಸಿನ ಪುಡಿ ಹಾಕಿ ಸೇವಿಸಿ.

• ಶುಂಠಿ ರಸ ಮತ್ತು ದಾಳಿಂಬೆ ರಸವನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು, ಅದಕ್ಕೆ ಒಂದಿಷ್ಟು ಜೇನು ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಿ. ಇದರಿಂದ ಅಸ್ತಮಾ ನಿಯಂತ್ರಣಕ್ಕೆ ಬರುತ್ತದೆ.

• ಶುಂಠಿಯನ್ನು ಜಜ್ಜಿ ನೀರಿಗೆ ಹಾಕಿ ಕುದಿಸಿ, ಈ ನೀರನ್ನು ತಣ್ಣಗಾದ ಮೇಲೆ ಸೇವಿಸಿ. ಇದರಿಂದ ಕಫ ನಿವಾರಣೆಯಾಗುತ್ತದೆ. 

• ಶುಂಠಿಯನ್ನು ಜಜ್ಜಿ ನೀರಿಗೆ ಹಾಕಿ, ಅದಕ್ಕೆ ಅರ್ಧ ಈರುಳ್ಳಿ, ಬೆಲ್ಲ, ಕರಿಮೆಣಸು ಹಾಕಿ ಕುದಿಸಿ. ಅದನ್ನು ಸೋಸಿ ಕುಡಿದರೆ ಗಂಟಲು  ನೋವು, ಕೆಮ್ಮು, ಶೀತ, ಗಂಟಲು ಕೆರೆತ ಸಮಸ್ಯೆಗಳಿಂದ ಮುಕ್ತರಾಗಬಹುದು.

• ರಾತ್ರಿ ಮಲಗುವಾಗ ಉಸಿರಾಟದ ಸಮಸ್ಯೆ ಕಾಣಿಸಿಕೊಂಡರೆ ಇದನ್ನು ಟ್ರೈ ಮಾಡಿ. ಮೆಂತೆ ಕಾಳುಗಳನ್ನು ನೀರಿಗೆ ಹಾಕಿ ಕುದಿಸಿ. ನಂತರ ಅದಕ್ಕೆ ಅರ್ಧ ಚಮಚ ಶುಂಠಿ ರಸ ಮತ್ತು ಜೇನು ಬೆರೆಸಿ ಸೇವಿಸಿ. ರಾತ್ರಿ ಈ ಸಮಸ್ಯೆ ಮತ್ತೆ ಮರುಕಳಿಸುವುದಿಲ್ಲ.

• ಕಾಲು ಕಪ್ ಹಾಲಿಗೆ ಒಂದು ಚಿಕ್ಕ ತುಂಡು ಶುಂಠಿ ಹಾಕಿ ಕುದಿಸಬೇಕು. ಉಗುರು ಬಿಸಿಯಾಗಿರುವಾಗಲೇ ಕುಡಿದರೆ ಹಲವು ಸಮಸ್ಯೆಗಳು ದೂರವಾಗುತ್ತವೆ.

Sunday, August 9, 2020

Health Tips

-ಬೇವಿನ ಎಲೆಯನ್ನು ಮತ್ತು ಅಗಸೆ ಬೀಜವನ್ನು ಪೇಸ್ಟ್‌ ಮಾಡಿ ಬಿಸಿ ಮಾಡಿ ಉಗುರು ಸುತ್ತು ಆದ ಬೆರೆಳಿಗೆ ಲೇಪ ಮಾಡಿ ಕಟ್ಟಿದರೆ ತಕ್ಷ ಣ ನೋವು ಕಡಿಮೆಯಾಗುತ್ತದೆ.


-ಅಕ್ಕಿ ಹಿಟ್ಟನ್ನು ಅಗಸೆ ಎಣ್ಣೆ ಜತೆ ಕಲಸಿ ಸ್ವಲ್ಪ ಬಿಸಿ ಮಾಡಿ ಲೇಪ ಮಾಡಿದರೆ ಉಗುರು ಸುತ್ತು ಗುಣವಾಗುತ್ತದೆ.

-ಬೆರಳು ಊದಿದ್ದರೆ ನುಗ್ಗೆ ಸೊಪ್ಪನ್ನು ಸೈಂಧವ ಉಪ್ಪಿನ ಜತೆ ರುಬ್ಬಿ ಬೆರಳಿಗೆ ಕಟ್ಟಿದರೆ ಊತ ಬೇಗ ಕಡಿಮೆಯಾಗುತ್ತದೆ.


-ಅಳಲೆ ಕಾಯಿ ಪುಡಿಗೆ ಹುಣಸೆ ಹಣ್ಣಿನ ರಸ ಬೆರೆಸಿ ಚೆನ್ನಾಗಿ ಕಲಸಿ ಬೆರಳಿಗೆ ಲೇಪ ಮಾಡಿ ಬಟ್ಟೆ ಕಟ್ಟಿದರೆ ಕೀವು ಹೊರಗೆ ಬಂದು ನೋವು ಬೇಗ ಕಡಿಮೆಯಾಗುತ್ತದೆ.

-ವೀಳ್ಯೆದೆಲೆಯನ್ನು ಬಿಸಿ ಮಾಡಿ ಬೆರಳಿಗೆ ಕಟ್ಟಿದರೆ ಉಗುರು ಸುತ್ತು ಬೇಗ ಗುಣವಾಗುತ್ತದೆ.


-ದಿನಕ್ಕೆ 4ರಿಂದ 5 ಬಾರಿ ತ್ರಿಫಲಾ ಕಷಾಯದಿಂದ ಬೆರಳನ್ನು ತೊಳೆದು ಬಟ್ಟೆಯಲ್ಲಿ ಒರೆಸಿದರೆ ಉಗುರು ಸುತ್ತು ಶಮನವಾಗುತ್ತದೆ.

-ಜೇಷ್ಠಮಧು ಪುಡಿಗೆ ಹಸುವಿನ ತುಪ್ಪ ಹಾಕಿ ಕಲಸಿ ಉಗುರು ಸುತ್ತು ಇರುವ ಬೆರಳಿಗೆ ಲೇಪ ಮಾಡಿದರೆ ನೋವು ಬೇಗ ಕಡಿಮೆಯಾಗುತ್ತದೆ.


-ಅರಿಶಿನ ಪುಡಿಯನ್ನು ಬೇವಿನ ಎಣ್ಣೆ ಜತೆ ಕಲಸಿ ಬೆರಳಿಗೆ ಲೇಪ ಮಾಡಿದರೂ ಪ್ರಯೋಜನವಿದೆ.

-ಉಗುರು ಸುತ್ತು ಇರುವ ಬೆರಳಿಗೆ ಉನ್ಮತ್ತಿ ಎಲೆಗೆ ಜೇನುತುಪ್ಪ ಹಚ್ಚಿ ಬೆರಳಿಗೆ ಕಟ್ಟಿದರೆ ಬೆರಳಿನಲ್ಲಿ ಇರುವ ಕೀವು ಹೊರ ಬಂದು ನೋವು, ಊತ ಕಡಿಮೆಯಾಗುತ್ತದೆ.


-ನಿಂಬೆ ಹಣ್ಣಿನಲ್ಲಿ ಸಣ್ಣ ತೂತು ಮಾಡಿ ಅದರೊಳಗೆ ಅರಿಶಿನ ಮತ್ತು ಸೈಂಧವ ಉಪ್ಪನ್ನು ತುಂಬಿ. ಬೆರಳನ್ನು ನಿಂಬೆ ಹಣ್ಣಿನ ಒಳಗೆ 3 ರಿಂದ 6 ಗಂಟೆಗಳು ಇಟ್ಟರೆ ಉಗುರು ಸುತ್ತು ಬೇಗ ಶಮನವಾಗುತ್ತದೆ .

ಡಾ. ಸುಚೇತಾ ಜಯರಾಮ್‌

Friday, August 7, 2020

ಸುಪರ್ ನಾಲೆಡ್ಜ್ ಪ್ರಶ್ನೆಗಳು

*1. ಒಂದು ನರಕೋಶ ಅಥವಾ ನ್ಯೂರಾನ್ ಕೋಶ ಕಾಯವನ್ನು ಹೊಂದಿದ್ದು ಅದರೊಳಗೆ ...........ಮತ್ತು ಸೈಟೋಪ್ಲಾಸಂ ಇರುತ್ತವೆ...?*
A) ಆಕ್ಸಾನ್
*B) ನ್ಯೂಕ್ಲಿಯಸ್*✅
C) ಡೆಂಡ್ರೈಟ್
D) ಪೇರಂಕೈಮ

*2. ಗೋಧಿ, ಅಕ್ಕಿ, ಮೆಕ್ಕೆಜೋಳ, ರಾಗಿ, & ಬಿಳಿಜೋಳಗಳಂತಹ ಧಾನ್ಯಗಳು ನಮ್ಮ ಶಕ್ತಿ ಅವಶ್ಯಕತೆಯನ್ನು ಪೂರೈಸುವ ಯಾವ ಅಂಶವನ್ನು ನಮ್ಮ ದೇಹಕ್ಕೆ ಒದಗಿಸುತ್ತವೆ...?*
*A) ಕಾರ್ಬೋಹೈಡ್ರೇಟ್*✅
B) ಪ್ರೋಟೀನ್
C) ಕೊಲೆಸ್ಟರಾಲ್‌
D) ಬರ್ ಸೀಮ್

*3. ಭಾರತದಲ್ಲಿ ಮೊಟ್ಟೆಗಳನ್ನು ಉತ್ಪಾದಿಸಲು ಯಾವ ತಳಿಯ ಕೋಳಿಗಳನ್ನು ಅಭಿವೃದ್ಧಿಪಡಿಸಿ ಸಾಕಣೆ ಮಾಡಲಾಗಿದೆ...*
A) ಪೌಲ್ಟ್ರಿ ತಳಿ
B) ಬ್ರಾಯ್ಲರ್
*C) ಲೇಯರ್ಸ್*✅
D) ಲೆಗ್ ಹಾರ್ನ್

*4. ಜೇನುತುಪ್ಪದ ವಾಣಿಜ್ಯ ಉತ್ಪಾದನೆಗಾಗಿ ಬಳಸುವ ಸ್ಥಳೀಯ ಭಾರತೀಯ ಜೇನುಹುಳು ಯಾವುದು...?*
A) ಏಪಿಸ್ ಪ್ಲೋರೆ
*B) ಏಪಿಸ್ ಸೆರೆನಾ ಇಂಡಿಕಾ*✅
C) ಏಪಿಸ್ ಮೆಲ್ಲಿಫೆರಾ
D) ಏಪಿಸ್ ಡಾರ್ ಸೆಟಾ

*5. ಸಸ್ಯವನ್ನು ದೃಡ ಮತ್ತು ಗಡುಸಾಗಿಸುವ ಅಂಗಾಂಶ ಯಾವುದು...?*
A) ಲಿಗ್ನಿನ್
*B) ಸ್ಲ್ಕೀರಂಕೈಮ*✅
C) ಎಪಿಡರ್ಮಿಸ್
D) ಸೈಟೋಪ್ಲಾಸಂ
=================================
*1. ಬಾಬರನಾಮ ( ತುಝುಕ್-ಇ-ಬಾಬರಿ ) ಈ ಕೃತಿಯನ್ನು ಪರ್ಶಿಯನ್ ಭಾಷೆಗೆ ಭಾಷಾಂತರಿಸಿದವರು‌ಯಾರು..?*
A) ಇಬಾದತ್ ಖಾನ್
*B) ಅಬ್ದುಲ್ ರಹೀಮ್ ಖಾನ್*✅
C) ಅಬುಲ್ ಫಜಲ್
D) ಖಾಜಿ ಮುಹ್ತಸೀಬ್

*2. ಸೈಮನ್ ಆಯೋಗದ ಪರವಾಗಿದ್ದ ಭಾರತೀಯ ಯಾರು..?*
*A) ಡಾ.ಬಿ.ಆರ್. ಅಂಬೇಡ್ಕರ್*✅
B) ಸುಭಾಷ್ ಚಂದ್ರ ಬೋಸ್
C) ಲಾಲ ಲಜಪತರಾಯ
D) ರಾಜ್ ಬಿಹಾರಿ ಬೋಸ್‌

*3. ಕರ್ನಾಟಕದಲ್ಲಿ ಅತಿ ಹೆಚ್ಚು ಕಬ್ಬಿಣದ ಅದಿರು ದೊರೆಯುವ ಜಿಲ್ಲೆ ಯಾವುದು..?*
A) ಚಿಕ್ಕ ಮಂಗಳೂರ
B) ದಕ್ಷಿಣ ಕನ್ನಡ
*C) ಬಳ್ಳಾರಿ*✅
D) ಚಿತ್ರದುರ್ಗ

*5. ಭಾರತದಲ್ಲಿ ಅತಿ ಹೆಚ್ಚು ಮ್ಯಾಂಗನೀಸ್ ದೊರೆಯುವ ರಾಜ್ಯ ಯಾವುದು...?*
A) ಉತ್ತರಾಖಂಡ
B) ಕರ್ನಾಟಕ
C) ಪಶ್ಚಿಮ ಬಂಗಾಳ
*D) ಒಡಿಶಾ*✅

*5. ಕರ್ನಾಟಕದ ನಯಾಗರ ಜಲಪಾತ ಎಂದು ಯಾವ ಜಲಪಾತವನ್ನು ಕರೆಯಲಾಗುತ್ತದೆ..?*
A) ಅಬ್ಬೆ ಜಲಪಾತ
*B) ಗೋಕಾಕ ಜಲಪಾತ*✅
C) ಜೋಗ ಜಲಪಾತ
D) ಬರಚುಕ್ಕಿ ಜಲಪಾತ
===============================
*1 ಅಂತರಾಷ್ಟ್ರೀಯ ಜೀವವೈವಿಧ್ಯತಾ ದಿನವನ್ನು ಎಂದು ಆಚರಿಸಲಾಗುತ್ತದೆ...?*
*A) May 22*✅
B) April 22
C) May 25
D) April 25

*2.2019-20 ನೇ ಸಾಲಿನ ಬಸವ ಪುರಸ್ಕಾರ ಪ್ರಶಸ್ತಿಗೆ ಭಾಜನರಾದವರು ಯಾರು....?*
A) ಡಾ.ವೀರೇಂದ್ರ ಹೆಗಡೆ
*B) ಬಸವಲಿಂಗ ಪಟ್ಟದ್ದೆವರು*✅
C) ಸಿ ಸೋಮೇಶ್ವರ
D) ಬಿ ಕೆ ವಸಂತಲಕ್ಷ್ಮೀ

*3 ಕಾವ್ಯಕ್ಕೆ ಶೋಭೆಯನ್ನು ತರುವ ಧರ್ಮವನ್ನು "ಅಲಂಕಾರ" ಎಂದು ಹೇಳಿದ ಕವಿ...*
A) ಬಾಮಹ
B) ವಾಮನ
*C) ದಂಡಿ*✅
D) ಕುಂತಕ

*4 ಭಾರತದ ಯುವ ಬಿಲಿಯನೇರ್ ಯಾರು...?*
A) ಜೆಫ್ ಬೆಜೋಸ್
*B) ಬೈಜು ರವಿಂದ್ರನ್*✅
C) ರಾಧಾ ಕಿಶನ್ ದಮಾನಿ
D) ರಾಕೇಶ್ ಅಂಬಾನಿ

*5. ವಿಶ್ವದ ಅತ್ಯಂತ ಎರಡನೇ ಶ್ರೀಮಂತ ವ್ಯಕ್ತಿ ಯಾರು..?* 
A) ವಾರೆನ್ ಬಫೆಟ್
B) ಬಿಲ್ ಕ್ಲಿಂಟನ್
C) ಮಾರ್ಕ್ ಜೂಕರ್ ಬರ್ಗ್
*D) ಬಿಲ್ ಗೇಟ್ಸ್‌* ✅
================================
*1 2011ರ ಗಣತಿಯ ಪ್ರಕಾರ ಕರ್ನಾಟಕದಲ್ಲಿ ನಗರ ಪ್ರದೇಶದಲ್ಲಿ ಶೇಕಡ ಎಷ್ಟು ಜನರು ವಾಸಿಸುತ್ತಾರೆ..?*
A) 40.50%
*B) 38.67%*✅
C) 67.00%
D) 35.40%

*2 ಗ್ರಾಮ ಪಂಚಾಯತಿ ನಿರ್ವಹಿಸಬೇಕಾದ 29 ಕಾರ್ಯಗಳನ್ನು ಸಂವಿಧಾನದ ಎಷ್ಟನೆ ಅನುಸೂಚಿ ತಿಳಿಸುತ್ತದೆ*
A) 10 ನೇ ಅನುಸೂಚಿ
*B) 11 ನೇ ಅ..*✅
C) 9 ನೇ ಅ..
D) 8 ನೇ ಅ....

*3 "ಫಡ್ ಕಫ್ ಹಾರ್ಟ್" ಪ್ರಶಸ್ತಿಯನ್ನು ಪಡೆದ ಭಾರತೀಯ ಮೊದಲ ಮಹಿಳಾ ಆಟಗಾರ್ತಿ ಯಾರು..‌?*
A) ಪಿ.ವಿ.ಸಿಂಧೂ
*B) ಸಾನಿಯಾ ಮಿರ್ಜಾ*✅
C) ಸ್ಮೃತಿ ಮಂದಾನ
D) ಹಿಮಾದಾಸ್

*4 2019 ರ ಪ್ರಯಾಣ ಮತ್ತು ಪ್ರವಾಸೋದ್ಯಮ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ಬಾರತದ ಸ್ಥಾನ*
A) 102 ನೇ ಸ್ಥಾನ
*B) 34 ನೇ ಸ್ಥಾನ*✅
C) 103 ನೇ ಸ್ಥಾನ
D) 35 ನೇ ಸ್ಥಾನ

*5 ಆಟೋ ಮೊಬೈಲ್ ಎಂಜಿನ್‌ಗಳಲ್ಲಿ ಘನೀಕರಣ - ನಿರೋಧಕ ( Anti Freezing ) ಆಗಿ ಬಳಸುವ ರಾಸಾಯನಿಕ ಯಾವುದು..?*
A) ಸೋಡಿಯಂ ಥಯೋಸಲ್ಪೆಟ್
*B) ಈಥಿಲಿನ್ ಗ್ಲೈಕಾಲ್*✅
C) ಮೊನೊ ಸೋಡಿಯಂ ಗ್ಲುಟಮೆಟೆ
D) ನೈಟೊಗ್ಲಿಸರಿನ್
=================================
*1 ಇತ್ತೀಚೆಗೆ BBMP ಯು covid-19 ರಾಯಭಾರಿಯಾಗಿ ಕನ್ನಡದ ಯಾವ ನಟನನ್ನು ನೇಮಕ ಮಾಡಿದೆ...?*
A) ಪುನೀತ್ ರಾಜ್‍ಕುಮಾರ್
*B) ರಮೇಶ ಅರವಿಂದ್*✅
C) ಯಶ್
D) ಸುದೀಪ್

*2 SETC ಯ ವಿಸ್ತೃತ ರೂಪವೆನು.....?*
*A) Space exploration technologies corporation*✅
B) Space experience technology corporation
C) Space executive techniques corporation
D) Space Examination training Corporation

*3 ಪಶ್ಚಿಮ ಬಂಗಾಳ ಮತ್ತು ಒರಿಸ್ಸಾ ರಾಜ್ಯಗಳಿಗೆ ಇತ್ತೀಚೆಗೆ ಅಪ್ಪಳಿಸಿದ ಚಂಡಮಾರುತ ಯಾವುದು..?*
A)ಮೂರಸು ಚಂಡಮಾರುತ
B)ಪೋಬಾಹೊ ಚಂ.
*C)ಅಂಫಾನ್ ಚಂ.*✅
D)ಜಲಧಿ & ವೇಗಾ ಚಂ.

*4 NDB Bank na ನ್ಯೂ ಡೆವಲಪ್ಮೆಂಟ್ ಬ್ಯಾಂಕ್ ನ ನೂತನ ಅದ್ಯಕ್ಷರು ಯಾರು..?*
A)K.V. ಕಾಮತ್
*B)ಮಾರ್ಕೋಸ್ ಟ್ರಾಯ್ಜೋ*✅
C)ಅನೀಲ್ ಕಿಶೋರ್
D)ಮೊಬಿಸ್ ಸ್ಟ್ರಿಪ್

*5 ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹ್ಮದ್ ಯಾಬ ದಿನದಂದು ಮರಣ ಹೊಂದಿದರು..?*
A) May 04 2020
B) May 02 2020
*C) May 03 2020*✅
D) May 05 2020

Sunday, August 2, 2020

GK Mini Notes

ಕೆ. ಕಸ್ತೂರಿ ರಂಗನ್ ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿ 2008ರಲ್ಲಿ ನೇಮಕವಾಗಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಪಶ್ಚಿಮಘಟ್ಟಗಳ ಅಧ್ಯಯನ ಸಮಿತಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು
1994 ರಿಂದ 2003 ರವರೆಗೆ ಇಸ್ರೋದ ಅಧ್ಯಕ್ಷರಾಗಿದ್ದರು.
==================================
ಭಾರತ ದೇಶದ ಮೊಟ್ಟಮೊದಲ ಐಐಟಿ ಯನ್ನು 1951 ರಲ್ಲಿ ಪಶ್ಚಿಮ ಬಂಗಾಳದ  ಖರಗ್ ಪುರದಲ್ಲಿ ಸ್ಥಾಪಿಸಲಾಯಿತು.
ಭಾರತದಲ್ಲಿ ಪ್ರಸ್ತುತವಾಗಿ 23 ಐಐಟಿಗಳು ಕಾರ್ಯನಿರ್ವಹಿಸುತ್ತಿವೆ.
 ಕರ್ನಾಟಕದ ಏಕೈಕ ಮತ್ತು 23ನೇ ಐಐಟಿಯಾಗಿ 2016 ರ ಜುಲೈನಿಂದ ಐಐಟಿ ಧಾರವಾಡವು ಕಾರ್ಯನಿರ್ವಹಿಸುತ್ತಿದೆ.
=================================
ಬಾಂಬೆ ಹೈನಲ್ಲಿ "ಸಾಗರ್ ಸಾಮ್ರಾಟ್" ಹೆಸರಿನ ತೈಲ ಕೊರೆಯುವ ಭಾವಿ ಆರಂಭವಾಗಿದ್ದು, ಇದು 18 ಸಾವಿರ ಅಡಿಯಷ್ಟು ಆಳವನ್ನು ಕೊರಗಿತ್ತು.ಇದು ಮುಂಬೈನಿಂದ 176 ಕಿ.ಮಿ ದೂರದಲ್ಲಿರುವ ಆಯಿಲ್ ಫೀಲ್ಡ್ ಆಗಿದೆ ಮತ್ತು ಭಾರತದ ಒಎನ್ ಜಿಸಿ ಸಂಸ್ಥೆಯ ಅಧೀನದಲ್ಲಿದೆ
==================================
ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳು ಮತ್ತು ಅವುಗಳ ದಿನ
1. ಅರೇಬಿಕ್ ( ಡಿಸೆಂಬರ್-18)
2. ಇಂಗ್ಲಿಷ್ (ಏಪ್ರಿಲ್ -23)
3. ಚೈನೀಸ್ (ಏಪ್ರಿಲ್ - 20)
4. ಫ್ರೆಂಚ್ ( ಮಾರ್ಚ್- 20)
5. ರಷ್ಯಾ (ಜೂನ್-6)
6. ಸ್ಪನಿಷ್ ( ಏಪ್ರಿಲ್ -23)
ಯುನೆಸ್ಕೋ ಸಂಸ್ಥೆಯು ಆಚರಿಸುತ್ತದೆ
=================================
ಭಾರತ ಸಂವಿಧಾನದ 165ನೇ ವಿಧಿಯನ್ವಯ ರಾಜ್ಯಪಾಲರು ಅಡ್ವೊಕೇಟೆ ಜನರಲ್ ಅವರನ್ನು ನೇಮಕ ಮಾಡುತ್ತಾರೆ.
ಅಡ್ವೋಕೇಟ್ ಜನರಲ್ ಅವರು ರಾಜ್ಯಮಟ್ಟದ ಉನ್ನತ ಕಾನೂನು ಸಲಹಾ ಅಧಿಕಾರಿ ಆಗಿರುತ್ತಾರೆ ಇವರಿಗೆ ರಾಜ್ಯಪಾಲರು ಪ್ರಮಾಣವಚನ ಬೋಧಿಸುತ್ತಾರೆ.

Saturday, August 1, 2020

ಕರ್ನಾಟಕದ ನದಿಗಳು

1) ಪೂರ್ವಾಭಿಮುಖವಾಗಿ ಹರಿಯುವ ನದಿಗಳನ್ನು ಹೆಸರಿಸಿ?
 * 1) ಘಟಪ್ರಭಾ.
   2) ಮಲಪ್ರಭಾ.
   3) ಭೀಮಾ.
   4) ತುಂಗಭದ್ರಾ.
   5) ಡೋಣಿ.
               - ಮುಂತಾದವು.

2) ಮಹಾರಾಷ್ಟ್ರದ "ಭೀಮಾಶಂಕರ್" ಬಳಿಯಲ್ಲಿ ಉಗಮವಾಗುವ ನದಿ ಯಾವುದು?
 * ಭೀಮಾನದಿ.

3) "ಉತ್ತರ ಪಿನಾಕಿನಿ ನದಿ"ಯ ಮತ್ತೊಂದು ಹೆಸರೇನು?
 * ಪೆನ್ನಾರ್.

4) "ಛಾಯಾ ಭಗವತಿ" ಜಲಪಾತವನ್ನು ನಿರ್ಮಿಸುವ ನದಿ ಯಾವುದು?
 * ಡೋಣಿ.

5) ಹಿರಣ್ಯಕೇಶಿ & ಮಾರ್ಕಂಡೇಯ ಇವು ಯಾವ ನದಿಯ ಉಪನದಿಗಳು?
 * ಘಟಪ್ರಭಾ.

6) ರಾಣೆಬೆನ್ನೂರಿನ ಬಳಿ ಯಾವ ನದಿಯು ತುಂಗಭದ್ರಾ ನದಿಯನ್ನು ಸೇರುವುದು?
 * ಕುಮುದ್ವತಿ.

7) "ನವಿಲುತಿರ್ಥ"ವೆಂದು ಯಾವ ನದಿಯನ್ನು ಕರೆಯುವರು?
 * ಮಲಪ್ರಭಾ.

8) "ಗೋಕಾಕ್ ಜಲಪಾತ"ವನ್ನು ಉಂಟು ಮಾಡುವ ನದಿ ಯಾವುದು?
 * ಘಟಪ್ರಭಾ.

9) ವೇದಾವತಿ & ಹಗರಿ ಯಾವ ನದಿಯ ಉಪನದಿಗಳು?
 * ತುಂಗಭದ್ರಾ.

10) ಘಟಪ್ರಭಾ ನದಿಯ ಉಗಮ ಸ್ಥಳ ಯಾವುದು?
 * ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಪಶ್ಚಿಮಘಟ್ಟ.

11) ಬಾದಾಮಿ ಯಾವ ನದಿಯ ಎಡದಂಡೆಗೆ ಸಮೀಪದಲ್ಲಿದೆ?
 * ಮಲಪ್ರಭಾ.

12) ಗುಲ್ಬರ್ಗಾ ಜಿಲ್ಲೆಯ ಜಪಾಲಪುರದ ಬಳಿ ಡೋಣಿ ಯಾವ ನದಿಯನ್ನು ಸೇರುವುದು?
 * ಕೃಷ್ಣಾ.

13) ಮಲಪ್ರಭಾ ನದಿಯ ಉಗಮ ಸ್ಥಳ ಯಾವುದು?
 * ಕನಕುಂಬಿ.

14) ಕನಕುಂಬಿ ಬೆಳಗಾವಿ ಜಿಲ್ಲೆಯ ಯಾವ ತಾಲ್ಲೂಕಿನಲ್ಲಿದೆ?
 * ಖಾನಾಪುರ.

15) ಯಾವ ನದಿಗೆ "ಪಂಪಸಾಗರ" ಜಲಾಶಯ ನಿರ್ಮಿಸಲಾಗಿದೆ?
 * ತುಂಗಭದ್ರಾ.

16) ಮಹಾರಾಷ್ಟ್ರದ ದತ್ತಪಟ್ಟಣದ ಬಳಿ ಹುಟ್ಟುವ ನದಿ ಯಾವುದು?
 * ಡೋಣಿ.

17) ಬೆಣ್ಣೆ ಹಳ್ಳ & ಹಿರೇ ಹಳ್ಳ ಯಾವ ನದಿಯ ಉಪನದಿಗಳು?
 * ಮಲಪ್ರಭಾ.

18) ತುಂಗಾಭದ್ರಾ ನದಿಯು ಆಂಧ್ರಪ್ರದೇಶದ ಯಾವ ಸ್ಥಳದಲ್ಲಿ ಕೃಷ್ಣಾ ನದಿಯನ್ನು ಸೇರುತ್ತದೆ?
 * ಕರ್ನೂಲ್ ಬಳಿ ಆಲಂಪುರದಲ್ಲಿ.

19) ಇತಿಹಾಸ ಪ್ರಸಿದ್ಧ ಪಟ್ಟದಕಲ್ಲು & ಐಹೋಳೆ ಯಾವ ನದಿಯ ಬಲದಂಡೆಗೆ ಇವೆ?
 * ಮಲಪ್ರಭಾ.

20) ಶಿವಮೊಗ್ಗದ ಮೂಲಕ ಹರಿದು ಬರುವ "ವರದಾನದಿಯು" ಬಿಲ್ವಿಗಿಯ ಬಳಿ ಯಾವ ನದಿಯನ್ನು ಸೇರುವುದು?
 * ತುಂಗಭದ್ರಾ.

21) ವರದಾ & ಕುಮದ್ವತಿ ಯಾವ ನದಿಯ ಉಪನದಿಗಳು?
 * ತುಂಗಭದ್ರಾ.

22) ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳನ್ನು ಹೆಸರಿಸಿ? * 1) ಕಾಳಿ.
  2) ಶರಾವತಿ.
  3) ನೇತ್ರಾವತಿ.
  4) ಬೇಡ್ತಿ.
  5) ಅಘನಾಶಿನಿ.
  6) ವಾರಾಹಿ.
  7) ಮಹಾದಾಯಿ.
               --- ಮುಂತಾದವು.

23) "ಬಾರಪೊಳೆ ನದಿ"ಯು ಯಾವ ಎರಡು ರಾಜ್ಯಗಳಲ್ಲಿ ಹರಿಯುತ್ತದೆ?
 * ಕರ್ನಾಟಕ & ಕೇರಳ.

24) "ಮಾಗೋಡು ಜಲಪಾತ"ವನ್ನು ಉಂಟುಮಾಡುವ ನದಿ ಯಾವುದು?
 * ಬೇಡ್ತಿ.

25) ಬೇಡ್ತಿ ನದಿಯ ಮತ್ತೊಂದು ಹೆಸರೇನು?
 * ಗಂಗಾವಳಿ.

26) ಕಾಳಿ ನದಿಯ ಉಗಮ ಸ್ಥಳ ಯಾವುದು?
 * ಉತ್ತರಕನ್ನಡ ಜಿಲ್ಲೆಯ ಸೂಪಾ ತಾಲ್ಲೂಕಿನ ಡಿಗ್ಗಿಘಾಟಿನಲ್ಲಿ.

27) "ಭಂಡಾಜೆ ಜಲಪಾತ"ವನ್ನು ಉಂಟುಮಾಡುವ ನದಿ ಯಾವುದು?
 * ನೇತ್ರಾವತಿ.

28) ಹರಿದ್ರಾತಿ & ಎಣ್ಣೆ ಹೊಳಿ ಇವು ಯಾವ ನದಿಯ ಪ್ರಮುಖ ಉಪನದಿಗಳು?
 * ಶರಾವತಿ.

29) ಶರಾವತಿ ನದಿಯ ಉಗಮಸ್ಥಳ ಯಾವುದು?
 * ಶಿವಮೊಗ್ಗ ಜಿಲ್ಲೆಯ ತಿರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥ.

30) ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಲ್ಲಿ ಉದ್ದವಾದ ನದಿ ಯಾವುದು?
 * ಕಾಳಿನದಿ.

31) "ಉಂಚಳ್ಳಿ ಜಲಪಾತ"ವನ್ನು ನಿರ್ಮಿಸುವ ನದಿ ಯಾವುದು?
 * ಅಘನಾಶಿನಿ.

32) ಭೂಗರ್ಭದಲ್ಲಿ ವಿದ್ಯುತ್ ಉತ್ಪಾದನೆಯನ್ನು ಆರಂಭಿಸಿರುವ ಏಕೈಕ ನದಿ ಯಾವುದು?
 * ವರಾಹಿ ನದಿ.

33) ನೇತ್ರಾವತಿ ನದಿಯ ಉಗಮಸ್ಥಳ ಯಾವುದು?
 * ಚಿಕ್ಕಮಗಳೂರು ಜಿಲ್ಲೆಯ ಬಲ್ಲಾಳರಾಯನದುರ್ಗದ ಬಳಿ.

34) "ಲಾಲಗುಳಿ ಜಲಪಾತ''ವನ್ನು ಉಂಟು ಮಾಡುವ ನದಿ ಯಾವುದು?
 * ಕಾಳಿ ನದಿ.

35) ಕಳಸ & ಬಂಡೂರಿ ಯಾವ ನದಿಯ ಉಪನದಿಗಳು?
 * ಮಹದಾಯಿ.

36) ಶಿವಗಂಗೆ & ಇಳಿಮನೆ ಜಲಪಾತಗಳನ್ನು ಉಂಟುಮಾಡುವ ನದಿ ಯಾವುದು?
 * ಅಘನಾಶಿನಿ.

37) ಗುರುಪುರ & ಕುಮಾರಧಾರ ಯಾವ ನದಿಯ ಉಪನದಿಗಳು?
 * ನೇತ್ರಾವತಿ.

38) ಮಹದಾಯಿ ನದಿಯು ಗೋವಾದಲ್ಲಿ ಯಾವ ಹೆಸರಿನಿಂದ ಹರಿಯುವುದು?
 * ಮಾಂಡೋವಿ.

39) ಜಗತ್ಪ್ರಸಿದ್ಧ "ಜೋಗ್ ಜಲಪಾತ"ವನ್ನು ಸೃಷ್ಟಿಸಿದ ನದಿ ಯಾವುದು?
 * ಶರಾವತಿ.

40) "ಕಪ್ಪುಕಾಳಿ" ಎಂದು ಯಾವ ನದಿಯನ್ನು ಕರೆಯುತ್ತಾರೆ?
 * ಕಾಳಿ.

41) "ಪಣಜಿ" ಯಾವ ನದಿಯ ತೀರದಲ್ಲಿದೆ?
 * ಮಹದಾಯಿ.

42) ತಟ್ಟಿಹಳ್ಳ & ಪಂಡ್ರಿ ಯಾವ ನದಿಯ ಉಪನದಿಗಳು?
 * ಕಾಳಿನದಿ.

43) ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ದೇವಾಂಗ ಎಂಬಲ್ಲಿ ಉಗಮವಾಗುವ ನದಿ ಯಾವುದು?
 * ಮಹದಾಯಿ.

44) ಚಾರ್ಮುಡಿ, ಶಿಶಿಲ & ಪಾಲ್ಗುಣಿ ಯಾವ ನದಿಯ ಉಪನದಿಗಳು?
 * ನೇತ್ರಾವತಿ.

45) ಕನೇರಿ, ವಾಕಿ &  ಇವು ಯಾವ ನದಿಯ ಉಪನದಿಗಳು?
 * ಕಾಳಿನದಿ.

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...