ಇದು ಎಲ್ಲಾ ಬಗೆಯ ವಯಸ್ಸಿನವರಲ್ಲೂ ಕಂಡು ಬರುವಂತಹ ಸಮಸ್ಯೆ. ಬಾಯಿ ಹುಣ್ಣು ಆದರೆ ಬಾಯಲ್ಲಿ ಊಟ ಮಾಡುವುದಿರಲಿ ನೀರನ್ನು ಸಹ ಕುಡಿಯಲು ಆಗುವುದಿಲ್ಲ, ಅಷ್ಟರ ಮಟ್ಟಿಗೆ ನೋವು ನೀಡುತ್ತದೆ. ಈ ಬಾಯಿ ಹುಣ್ಣು ನಾವು ಏನೇ ಮಾಡಿದರೂ ಮೂರರಿಂದ ನಾಲ್ಕು ದಿನಗಳವರೆಗೆ ಕಡಿಮೆಯಾಗುವುದಿಲ್ಲ, ಇದಕ್ಕೆ ನಾವು ಹಲವು ಮಾತ್ರೆಗಳನ್ನು ಸಹ ತೆಗೆದುಕೊಳ್ಳುತ್ತೇವೆ, ಆದರೆ ಇದು ಮಾತ್ರೆಗಳಿಂದ ಗುಣವಾಗುವಂತದ್ದಲ್ಲ, ಇದಕ್ಕೆ ಮನೆ ಔಷಧ ಬೇಕು, ಇಲ್ಲಿದೆ ನೋಡಿ ಇದಕ್ಕೆ ಸುಲಭ ಮನೆ ಮದ್ದು….
1. ಬಿ ಕಾಂಪ್ಲೆಕ್ಸ್ ಅಧಿಕವಾಗಿರುವ ಆಹಾರವನ್ನು ಹೆಚ್ಚಾಗಿ ಸೇವಿಸುವುದರಿಂದ ನೀರು ಮತ್ತು ಎಳನೀರನ್ನು ಹೆಚ್ಚಾಗಿ ಸೇವಿಸುವುದರಿಂದ ಬಾಯಿ ಹುಣ್ಣು ಬರದಂತೆ ನೋಡಿಕೊಳ್ಳ ಬಹುದು.
2. ಖಾಲಿ ಹೊಟ್ಟೆಯಲ್ಲಿ ಒಂದೆರಡು ತುಳಸಿ ಎಲೆಗಳನ್ನು ಅಗೆದು ತಿನ್ನುವುದರಿಂದ ಬಾಯಿ ಹುಣ್ಣಿನಿಂದ ಉಪಶಮನ ಪಡೆಯ ಬಹುದು.
3. ಬಾಯಿ ಹುಣ್ಣು ಇರುವ ಜಾಗದಲ್ಲಿ ಜೇನುತುಪ್ಪವನ್ನು ಅಥವಾ ಅರಿಶಿನಪುಡಿಯನ್ನು ಬೆರೆಸಿದ ನೀರನ್ನು ನಯವಾಗಿ ಹಚ್ಚುವುದರಿಂದ ಬಾಯಿ ಹುಣ್ಣು ಕಡಿಮೆಯಾಗುತ್ತದೆ.
4. ತೆಂಗಿನ ಕಾಯಿಯ ಹಾಲಿನಲ್ಲಿ ಆಗಾಗ್ಗೆ ಬಾಯಿಯನ್ನು ಮುಕ್ಕಳಿಸಿದರೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ, ಅಥವಾ ಅದು ಸಾಧ್ಯವಾಗದೆ ಇರುವಾಗ ಬೆಚ್ಚಗಿನ ನೀರಿನಲ್ಲಿ ಉಪ್ಪನ್ನು ಬೆರೆಸಿಕೊಂಡು ಬಾಯಿಯನ್ನು ಮುಕ್ಕಳಿಸಿದರೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ.
5. ನೀರಿನಲ್ಲಿ ಮೆಂತೆಯನ್ನು ಮಿಕ್ಸ್ ಮಾಡಿ ಕುದಿಸಿ ನಂತರ ಆ ನೀರನ್ನು ಸೋಸಿ ಸ್ವಲ್ಪ ತಣ್ಣಗಾದ ಮೇಲೆ ಅದರಿಂದ ಬಾಯಿಯನ್ನು ಮುಕ್ಕಳಿಸಿದರೆ ಬಾಯಿ ಹುಣ್ಣಿಗೆ ಮುಕ್ತಿ ಸಿಗುತ್ತದೆ.