Saturday, August 22, 2020

ಸರ್ಪ ಸುತ್ತಿಗೆ ಮನೆಮದ್ದು

ಆಯುರ್ವೇದದಲ್ಲಿ ಅತ್ಯುತ್ತಮ ಚಿಕಿತ್ಸೆ ಇದೆ. ಹಳೆ ಅಕ್ಕಿ ಗಂಜಿ, ಬೇಯಿಸಿದ ನೀರು, ಕೊತ್ತಂಬರಿ ಹಿಮ, ಎಳನೀರು ಸೇವಿಸಬೇಕು. ಇದರ ಜತೆಗೆ ಕೆಲವು ಔಷಧೋಪಚಾರ ಕೂಡ ಅಗತ್ಯ.

* ಒಣಗಿದ ನೆಲ್ಲಿ ತುಂಡುಗಳು, ಲಾವಂಚದ ಬೇರು, ಸೊಗದ ಬೇರು ಪ್ರತಿಯೊಂದನ್ನು ಒಂದೊಂದು ಚಮಚದಷ್ಟು ತೆಗೆದು ಕೊಂಡು ಬೇರೆ ಬೇರೆಯಾಗಿ ಕುಟ್ಟಿ ಪುಡಿಮಾಡಿ ಎರಡು ಲೋಟ ನೀರಿನಲ್ಲಿ ಸೇರಿಸಿ ಕುದುಸಿ, ಇದನ್ನು 1 ಅಥವಾ 4 ಲೋಟದಷ್ಟಾದಾಗ ದಿನಕ್ಕೆ ಎರಡುಬಾರಿ ಮೂರು ಚಮಚದಷ್ಟು ಸೇವಿಸಬೇಕು.ಇದನ್ನು ಮೂರು ವಾರಗಳ ಕಾಲ ಮಾಡಿದರೆ ಸರ್ಪಸುತ್ತು ಕಡಿಮಡಯಾಗುತ್ತದೆ.

* ಸರ್ಪ ಸುತ್ತು ಸಮಸ್ಯೆ ಇದ್ದಾಗ ನೆಲ್ಲಿಕಾಯಿ ಚೂರ್ಣ, ಲಾವಂಚ ಬೇರಿನ ಚೂರ್ಣ, ಸೊಗದ ಬೇರಿನ ಚೂರ್ಣ, ಇವನ್ನು ತಲಾ ಒಂಧು ಚಮಚದಷ್ಟು ತೆಗೆದುಕೊಂಡು 8 ಲೋಟ ನೀರಿಹಾಕಿ ನಿಧಾನವಾಗಿ ಕುದಿಸಿ ಅದು ಒಂದು ಲೋಟದಷ್ಟು ಆದಾಗ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಸೇವಿಸಬೇಕು.

* ಸರ್ಪಸುತ್ತು ಸಮಸ್ಯೆ ಇದ್ದಾಗ ಗೋಟಡಿಕೆಯನ್ನು ಅಕ್ಕಿ ತೊಳೆದ ನೀರಿನಲ್ಲಿ ಅರೆದು ದಿನದಲ್ಲಿ ನಾಲ್ಕು ಅಥವಾ ಐದುಬಾರಿ ಮೈಗೆಲ್ಲ ಲೇಪಿಸಬೇಕು.
ಹಾವಿನ ಶಾಪ ಅಂತಲೇ ಹೇಳಲಾಗುವ ಸರ್ಪ ಸುತ್ತಿನ ಲಕ್ಷಣಗಳು ಹಾಗೂ ಚಿಕಿತ್ಸೆ*            ‌                                ‌                           ‌                                        ನಮ್ಮಲ್ಲಿ ಹಲವರಿಗೆ ಜೀವನದಲ್ಲೊಂದು ಬಾರಿಯಾದರೂ ದೇಹದ ಕೆಲವು ಭಾಗಗಳಲ್ಲಿ ಚರ್ಮ ಕೆಂಪಗಾಗಿ ಚಿಕ್ಕ ಚಿಕ್ಕ ಗುಳ್ಳೆಗಳೆದ್ದು ತೀವ್ರ ಉರಿ ಮತ್ತು ನೀರು ಸೋರುವುದು ಎದುರಾಗಿರಬಹುದು. ಸರ್ಪಸುತ್ತು ಅಥವಾ Psoriasis ಎಂದು ವೈದ್ಯರು ಕರೆಯುವ ಈ ಚರ್ಮವ್ಯಾಧಿಯೂ ಈ ಲಕ್ಷಣಗಳನ್ನು ನೀಡುತ್ತದೆ ಹಾಗೂ ಈ ಬಗ್ಗೆ ಅರಿತುಕೊಂಡಿರುವುದು ಅಗತ್ಯವಾಗಿದ್ದು ಇದರ ಲಕ್ಷಣಗಳು ಕಾಣತೊಡಗಿದ ತಕ್ಷಣವೇ ಚಿಕಿತ್ಸೆ ಪ್ರಾರಂಭಿಸುವ ಮೂಲಕ ಶೀಘ್ರ ಗುಣವಾಗುವ ಸಾಧ್ಯತೆಯೂ ಹೆಚ್ಚುತ್ತದೆ....

*ಸರ್ಪಸುತ್ತು ಎಂದರೇನು?*
herpes zoster ಎಂಬ ವೈದ್ಯಕೀಯ ಹೆಸರಿನಿಂದ ಗುರುತಿಸಲ್ಪಡುವ ಈ ಚರ್ಮವ್ಯಾಧಿ ಸಿಡುಬು ಅಥವಾ chickenpox ಎಂಬ ಚರ್ಮ ರೋಗಕ್ಕೆ ಕಾರಣವಾಗುವ ವೈರಸ್ಸಿನ ಪುನಃಸಕ್ರಿಯಗೊಳಿಸುವ ಮೂಲಕ ಎದುರಾಗುತ್ತದೆ. varicella zoster ಎಂಬ ಹೆಸರಿನ ಈ ವೈರಸ್ಸು ನರಗಳ ಅಂಗಾಂಶದ ಮೇಲೆ ಧಾಳಿಯಿಟ್ಟು ಸಿಡುಬನ್ನು ಪುನಃಸಕ್ರಿಯಗೊಳಿಸುತ್ತದೆ. ಪ್ರಾರಂಭದಲ್ಲಿ ಇದು ಚರ್ಮದ ಮೇಲೆ ಕೆಂಪನೆಯ ಗೆರೆ ಎಳೆದಂತೆ ಪ್ರಾರಂಭವಾಗಿ ಕ್ರಮೇಣ ಇದರಲ್ಲಿ ಚಿಕ್ಕ ಚಿಕ್ಕ ಗುಳ್ಳೆಗಳು ಮೂಡತೊಡಗುತ್ತವೆ. ಸಾಮಾನ್ಯವಾಗಿ ಈ ಗೆರೆಗಳು ವಕ್ರಾಕಾರವಾಗಿರುವುದರಿಂದಲೇ ಇದಕ್ಕೆ ಸರ್ಪಸುತ್ತು ಎಂದು ಕರೆಯುತ್ತಾರೆ.

ತುರಿಕೆ, ಉರಿ ಮತ್ತು ಚರ್ಮದ ಆಳದಲ್ಲಿ ನೋವು ಕಾಣಿಸಿಕೊಳ್ಳುತ್ತದೆ
ಯಾವಾಗ ಈ ಗೆರೆ ಮೂಡತೊಡಗಿತೋ, ಆಗಿನಿಂದಲೇ ತುರಿಕೆ, ಉರಿ ಮತ್ತು ಚರ್ಮದ ಆಳದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಚರ್ಮ ಕೆಂಪಗಾಗಿರುವುದರಿಂದ ವೈದ್ಯರಿಗೆ ಇದೇ ಸರ್ಪಸುತ್ತು ಎಂದು ಕಂಡುಹಿಡಿಯಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಈ ಸ್ಥಿತಿ ಎದುರಾದಾಗ ಎಷ್ಟು ಬೇಗನೇ ಸಾಧ್ಯವೋ ಅಷ್ಟೂ ಬೇಗನೇ ಚಿಕಿತ್ಸೆಯನ್ನು ಆರಂಭಿಸಬೇಕು. ಸೂಕ್ತ ಲಸಿಕೆಯನ್ನು ದೇಹಕ್ಕೆ ಚುಚ್ಚಿಸಿಕೊಳ್ಳುವ ಮೂಲಕ ಈ ರೋಗ ಬರದಂತೆ ರಕ್ಷಿಸುವುದೇ ಜಾಣತನದ ಕ್ರಮವಾಗಿದೆ.

*ಸರ್ಪಸುತ್ತಿನ ಪ್ರಾರಂಭಿಕ ಲಕ್ಷಣಗಳು ಯಾವುವು?*
ಈ ಗೆರೆಗಳು ಮೂಡುವ ಮುನ್ನ ಚರ್ಮದ ಅಡಿಯಲ್ಲಿರುವ ನರದಲ್ಲಿ ವೈರಸ್ಸು ಧಾಳಿಯಿಟ್ಟು ಸೋಂಕು ಹರಡಿದ ಕ್ಷಣದಿಂದಲೇ ಈ ಭಾಗದ ಚರ್ಮದಲ್ಲಿ ನವಿರಾಗಿ ಕಚಗುಳಿ ಇಟ್ಟಂತೆ ಚಿಕ್ಕದಾಗಿ ನೋವಿನ ಅನುಭವವಾಗುತ್ತದೆ. ಜೊತೆಗೇ ಈ ವೈರಸ್ಸನ್ನು ಎದುರಿಸಲು ದೇಹ ತಾಪಮಾನವನ್ನು ಏರಿಸುವ ಕಾರಣ ಜ್ವರವೂ, ಕೊಂಚ ಸುಸ್ತು ಸಹಾ ಆವರಿಸತೊಡಗುತ್ತವೆ. ಇವೇ ಸರ್ಪಸುತ್ತಿನ ಪ್ರಾರಂಭಿಕ ಲಕ್ಷಣಗಳಾಗಿವೆ. ನಿಧಾನವಾಗಿ ಈ ಭಾಗದಲ್ಲಿ ಉರಿಯಾಗತೊಡಗುತ್ತದೆ ಮತ್ತು ಕೊಂಚ ನೋವಿನಿಂದಲೂ ಕೂಡಿರುತ್ತದೆ. ಹೀಗೇ ಕೆಲವು ದಿನ ಮುಂದುವರೆಯುತ್ತದೆ ಹಾಗೂ ಬಳಿಕ ವಕ್ರಾಕಾರದ ಗೆರೆಯಂತೆ ಚರ್ಮ ಕೆಂಪಗಾಗತೊಡಗುತ್ತದೆ.

*ಗುಳ್ಳೆಗಳು*
ಯಾವಾಗ ಚರ್ಮ ಕೆಂಪಗಾಗಲು ತೊಡಗುತ್ತದೆಯೋ, ನಂತರದ ಕೆಲವೇ ದಿನಗಳಲ್ಲಿ, ಸುಮಾರು ಎರಡನೆಯ ಅಥವಾ ಮೂರನೆಯ ದಿನದಂದು ಚಿಕ್ಕ ಚಿಕ್ಕ ಗುಳ್ಳೆಗಳು ಮೂಡತೊಡಗುತ್ತವೆ. ಮೊದಲ ನೋಟಕ್ಕೆ ಇವು ಸಿಡುಬಿನ (chickenpox) ಗುಳ್ಳೆಗಳಂತೆಯೇ ತೋರುತ್ತವೆ. ಈ ಗುಳ್ಳೆಗಳು ಈ ಗೆರೆಯ ಅಕ್ಕಪಕ್ಕದಲ್ಲಿಯೇ ಕಾಣಿಸಿಕೊಳ್ಳುತ್ತವೆಯೇ ವಿನಃ ದೇಹದ ಇತರ ಯಾವುದೇ ಭಾಗದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಈ ಲಕ್ಷಣವನ್ನೇ ವೈದ್ಯರು ಸರ್ಪಸುತ್ತಿನ ಲಕ್ಷಣವನ್ನಾಗಿ ಪರಿಗಣಿಸುತ್ತಾರೆ. ಸಾಮಾನ್ಯವಾಗಿ ಈ ಗುಳ್ಳೆಗಳು ಬೆನ್ನು, ಮುಖ ಮತ್ತು ತೊಡೆಸಂಧಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.

*ಹುರುಪೆ ಏಳುವುದು*
ಈ ಗುಳ್ಳೆಗಳ ಹೊರಪದರ ತೀರಾ ತೆಳುವಾಗಿದ್ದು ನೀರಿನಿಂದ ತುಂಬಿಕೊಂಡು ಸುಲಭವಾಗಿ ಉಬ್ಬಿಕೊಂಡು ತಾವಾಗಿಯೇ ಒಡೆಯುತ್ತವೆ. ತುರಿಸಿಕೊಂಡಾಗ ಕೊಂಚ ಉಗುರು ತಾಕಿದರೂ ಸಿಡಿದು ಬಿರಿಯುತ್ತವೆ. ಬಳಿಕ ನಿಧಾನವಾಗಿ ಈ ಬಿರಿದ ಚರ್ಮ ಒಣಗಿ ಹಳದಿಬಣ್ಣಕ್ಕೆ ತಿರುಗತೊಡಗುತ್ತದೆ. ಇದು ಒಣಗಲು ಪ್ರಾರಂಭವಾದ ಬಳಿಕ ಒಣಗಿದ ಚರ್ಮ ಹುರುಪೆಯಂತೆ ಕೆಳಚರ್ಮದಿಂದ ಬೇರ್ಪಟ್ಟು ಚಕ್ಕಳದಂತೆ ಮೇಲೇಳುತ್ತದೆ. ಈ ಪರಿ ಪೂರ್ಣವಾಗಲು ಸುಮಾರು ಎರಡು ವಾರ ಅವಧಿ ಬೇಕಾಗುತ್ತದೆ.

*ಸೊಂಟದ ಪಟ್ಟಿಯಂತೆ ಗೋಚರಿಸುತ್ತದೆ*
ಕೆಲವೊಮ್ಮೆ ಸೊಂಟಕ್ಕೆ ಸುತ್ತಿರುವ ಬಟ್ಟೆಯ ದಾರ ಅಥವಾ ಬೆಲ್ಟ್ ಕಟ್ಟಿದ್ದ ಭಾಗದ ತೇವದಲ್ಲಿಯೇ ಹೆಚ್ಚು ವೈರಸ್ಸುಗಳು ಧಾಳಿಯಿಟ್ಟು ಈ ಭಾಗದಲ್ಲಿಯೇ ಸರ್ಪಸುತ್ತು ಬರುವಂತೆ ಮಾಡಿ ಸೊಂಟದ ಸುತ್ತ ಬೆಲ್ಟ್ ರೂಪದಲ್ಲಿಯೇ ಸೋಂಕು ಹರಡುತ್ತದೆ. ಈ ಬಗೆಯ ಸರ್ಪಸುತ್ತಿಗೆ shingles band ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಬಿಗಿಯಾಗಿ ಸೊಂಟಕ್ಕೆ ಬೆಲ್ಟ್ ಕಟ್ಟುವ ವ್ಯಕ್ತಿಗಳಿಗೇ ಈ ತೊಂದರೆ ಹೆಚ್ಚಾಗಿ ಎದುರಾಗುತ್ತದೆ. ಹಾಗಾಗಿ ಸೊಂಟವನ್ನು ಸಾಮಾನ್ಯ ಗಾತ್ರಕ್ಕೂ ಹೆಚ್ಚು ಬಿಗಿಗೊಳಿಸಬಾರದು.

*ಕಣ್ಣಿನ ಬಳಿಯ ಸರ್ಪಸುತ್ತು*
ಒಂದು ವೇಳೆ ಮುಖದ ಕೆನ್ನೆ, ಕಣ್ಣಿನ ಕೆಳಭಾಗ ಮೊದಲಾದ ಸೂಕ್ಷ ಚರ್ಮದಡಿಯಲ್ಲಿ ನರಗಳಿಗೆ ಸೋಂಕು ಎದುರಾದರೆ ಈ ಭಾಗದಲ್ಲಿ ಸರ್ಪಸುತ್ತು ಕಾಣಿಸಿಕೊಳ್ಳುತ್ತದೆ ಹಾಗೂ ಮುಖದ ಸ್ನಾಯುಗಳ ಚಲನೆ ಕಷ್ಟಕರವಾಗಿಸುತ್ತದೆ. ಸಾಮಾನ್ಯವಾಗಿ ಕಣ್ಣಿನ ಸುತ್ತ, ಮೂಗಿನ ಪಕ್ಕ ಮತ್ತು ಹಣೆಯಲ್ಲಿ ಈ ಸೋಂಕು ಕಂಡುಬರುತ್ತದೆ. ಕಣ್ಣಿನ ಬಳಿ ಸೋಂಕು ಎದುರಾಗಿದ್ದರೆ ಚರ್ಮದಡಿಯಿಂದಲೇ ಈ ಸೋಂಕು ಕಣ್ಣಿಗೂ ತಲುಪುವ ಮೂಲಕ ಕಣ್ಣು ಕೆಂಪಗಾಗುತ್ತದೆ. ಕೆಲವೊಮ್ಮೆ ಕಣ್ಣಿನೊಳಗಿನ ಊತದಿಂದಾಗಿ ದೃಷ್ಟಿಯ ಮೇಲೂ ಪ್ರಭಾವ ಬೀರಿ ವ್ಯಕ್ತಿಗೆ ಎದುರಿನ ದೃಶ್ಯ ಎರಡೆರಡಾಗಿ ಗೋಚರಿಸಬಹುದು.

*ಸರ್ಪಸುತ್ತಿನ ಚಿಕಿತ್ಸೆ ಹೇಗೆ?*
varicella zoster ಎಂಬ ಹೆಸರಿನ ಈ ವೈರಸ್ಸು ವ್ಯಕ್ತಿಯ ರಕ್ತದಲ್ಲಿಯೇ ಮನೆಮಾಡಿ ತನ್ನ ಪ್ರಭಾವ ಬೀರಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು ಹಾಗೂ ವ್ಯಕ್ತಿಯ ದೇಹದ ಇತರ ಭಾಗಕ್ಕೆ ಹರಡುವ ಜೊತೆಗೇ ಈ ವ್ಯಕ್ತಿಯ ಚರ್ಮದಿಂದ ಒಡೆದ ಗುಳ್ಳೆಗಳಿಂದ ಸಿಡಿದ ದ್ರವ ಬೇರೆ ವ್ಯಕ್ತಿಯ ತ್ವಚೆಗೆ ದಾಟಿಕೊಂಡು ತೇವ ಅಥವಾ ಗಾಯದ ಮೂಲಕ ಈ ಸೋಂಕು ಹರಡುವ ಸಂಭವವಿದೆ. ಸಿಡುಬು ರೋಗಕ್ಕೆಂದೂ ಲಸಿಕೆ ತೆಗೆದುಕೊಳ್ಳದ ಅಥವಾ ಜೀವಮಾನದಲ್ಲಿ ಎಂದೂ ಒಂದೂ ಬಾರಿ ಸಿಡುಬು ರೋಗಕ್ಕೆ ತುತ್ತಾಗದ ವ್ಯಕ್ತಿಗಳಿಗೇ ಈ ವೈರಸ್ಸು ಧಾಳಿಯಿಡುತ್ತದೆ. ಎಲ್ಲಿಯವರೆಗೆ ಈ ವ್ಯಕ್ತಿಯ ದೇಹದ ಎಲ್ಲಾ ಗುಳ್ಳೆಗಳು ಒಡೆದು ಚಕ್ಕಳದ ರೂಪದಲ್ಲಿ ಒಣಗಿ ದೇಹದಿಂದ ಬೇರ್ಪಡುವುದಿಲ್ಲವೋ ಅಲ್ಲಿಯವರೆಗೂ ಈ ವ್ಯಕ್ತಿಯಿಂದ ಇತರರಿಗೆ ಹರಡುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ರೋಗ ನಿರೋಧಕ ವ್ಯವಸ್ಥೆ ಶಿಥಿಲವಾಗಿರುವ ವ್ಯಕ್ತಿಗಳು, ಈ ಪ್ರದೇಶಕ್ಕೆ ಮೊದಲ ಬಾರಿ ಆಗಮಿಸಿರುವ ವ್ಯಕ್ತಿಗಳು ಮತ್ತು ಮಕ್ಕಳಿಗೆ ಈ ಸೋಂಕು ಹೆಚ್ಚಾಗಿ ಹರಡುತ್ತದೆ.

*ಸರ್ಪಸುತ್ತು ಎಷ್ಟು ದಿನ ಕಾಡುತ್ತದೆ?*
ಸೂಕ್ಷ್ಮಗೆರೆಗಳು ಪ್ರಾರಂಭವಾದ ದಿನದಿಂದ ಕನಿಷ್ಟ ಎರಡು ವಾರಗಳವರೆಗಾದರೂ ಈ ಸೋಂಕು ಆವರಿಸುತ್ತದೆ ಹಾಗೂ ಗರಿಷ್ಟ ನಾಲ್ಕು ವಾರಗಳವರೆಗೂ ಇರಬಹುದು. ಹುರುಪೆಗಳು ದೇಹದಿಂದ ಕಳಚಿಕೊಂಡ ಬಳಿಕವೂ ಈ ಭಾಗದಲ್ಲಿ ಗೆರೆಗಳಂತೆ ಕಲೆ ಉಳಿದುಕೊಳ್ಳಬಹುದು ಹಾಗೂ ಈ ಕಲೆಗಳು ಪೂರ್ಣವಾಗಿ ಚರ್ಮದಿಂದ ಇಲ್ಲವಾಗಲು ಹೆಚ್ಚಿನ ಸಮಯ, ಕೆಲವೊಮ್ಮೆ ವರ್ಷಗಳೇ ಬೇಕಾಗಬಹುದು. ಕೆಲವು ಸಂದರ್ಭಗಳಲ್ಲಿ ಈ ಭಾಗದ ಹುರುಪೆ ಕಳಚಿಹೋದ ಬಳಿಕವೂ ಚರ್ಮದಡಿಯಲ್ಲಿ ಕೊಂಚ ನೋವು ಉಳಿದುಕೊಳ್ಳುತ್ತದೆ ಹಾಗೂ ಕೆಲವಾರು ತಿಂಗಳುಗಳವರೆಗೆ ಹಾಗೇ ಉಳಿದುಕೊಳ್ಳಬಹುದು. ಸಾಮಾನ್ಯವಾಗಿ ಈ ತೊಂದರೆಯೂ ಜೀವಮಾನದಲ್ಲಿ ಒಮ್ಮೆಯೇ ಬರುತ್ತದೆಯಾದರೂ ಅಪರೂಪದ ಸಂದರ್ಭಗಳಲ್ಲಿ ಒಮ್ಮೆ ಎದುರಾದ ವ್ಯಕ್ತಿಯಲ್ಲಿ ಮತ್ತೊಮ್ಮೆಯೂ ಕಾಣಿಸಿಕೊಳ್ಳಬಹುದು.

*ಚಿಕಿತ್ಸೆ*
ಈ ಕಾಯಿಲೆಗೆ ವೈರಸ್ ನಿರೋಧಕ ಔಷಧಿಗಳ ಸೇವನೆ ಅಗತ್ಯವಾಗಿದ್ದು ಸರ್ಪಸುತ್ತಿನ ಪ್ರಕೋಪ ವಿಕೋಪಕ್ಕೆ ತಿರುಗದಂತೆ ತಡೆಗಟ್ಟಬಹುದು. ಪ್ರಾರಂಭಿಕ ಹಂತ, ಅಂದರೆ ಪ್ರಾರಂಭಿಕ ಸೂಚನೆಗಳು ಕಾಣತೊಡಗಿದ 72 ಘಂಟೆಗಳ ಒಳಗಾಗಿ ಚಿಕಿತ್ಸೆ ಪ್ರಾರಂಭಿಸಿದರೆ ಶೀಘ್ರವಾಗಿ ಗುಣವಾಗುವ ಸಾಧ್ಯತೆಯೂ ಹೆಚ್ಚುತ್ತದೆ. ನಿಮಗೆ ಚಿಕಿತ್ಸೆ ನೀಡುವ ವೈದ್ಯರು acyclovir, famciclovir ಅಥವಾ valacyclovir ಎಂಬ ಔಷಧಿಗಳನ್ನು ಸೇವಿಸಲು ಸಲಹೆ ಮಾಡಬಹುದು. ಕೆಲವರಿಗೆ ಈ ನೋವನ್ನು ಸಹಿಸಲಾಗದೇ ಇದ್ದರೆ ಈ ಔಷಧಿಗಳ ಜೊತೆಗೇ ibuprofen ಅಥವಾ acetaminophen ಎಂಬ ನೋವು ನಿವಾರಕಗಳನ್ನೂ ವೈದ್ಯರು ನೀಡಬಹುದು. ಏಕೆಂದರೆ ಚರ್ಮದ ಹೊರಭಾಗದಲ್ಲಿ ಕೆಂಪಗಾಗಲು ತೊಡಗುವ ಮುನ್ನ ಚರ್ಮದಡಿಯಲ್ಲಿ ಉರಿಯೂತ ಉಂಟು ಮಾಡಿ ನೋವಿಗೆ ಕಾರಣವಾಗಿರುತ್ತದೆ. ಚರ್ಮದ ಉರಿಯನ್ನು ತಗ್ಗಿಸಲು ಚರ್ಮದ ಸಂವೇದನೆಯನ್ನು ತಗ್ಗಿಸುವ ಜೆಲ್ ಗಳು ಅಥವಾ ಪ್ರತಿಜೀವಕ ಗುಣವಿರುವ ಮುಲಾಮುಗಳನ್ನು ಹಚ್ಚಲು ನೀಡಬಹುದು. ಯಾವುದಕ್ಕೂ, ವೈದ್ಯರು ಪರೀಕ್ಷಿಸುವ ಸಮಯದಲ್ಲಿ ಈ ವ್ಯಾಧಿ ಎಷ್ಟರ ಮಟ್ಟಿಗೆ ಆವರಿಸಿ ಮುಂದುವರೆದಿದೆ ಎಂಬ ಅಂಶವನ್ನು ಆಧರಿಸಿ ವೈದ್ಯರೇ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ.

*ಎಚ್ಚರಿಕೆಗಳು*
ಯಾವಾಗ ಈ ತೊಂದರೆ ಇದೆ ಎಂದು ತಿಳಿದುಬಂದಿತೋ ಆ ಕ್ಷಣದಿಂದಲೇ ಸೋಂಕು ಎದುರಾದ ಭಾಗವನ್ನು ಸ್ವಚ್ಛ ಮತ್ತು ಒಣದಾಗಿರಿಸಲು ದೃಢನಿರ್ಧಾರ ಕೈಗೊಳ್ಳಬೇಕು. ಅಪ್ಪಿ ತಪ್ಪಿಯೂ ನೀರು ತಾಕಿಸಬಾರದು ಅಥವಾ ಗುಳ್ಳೆಗಳನ್ನು ಒಡೆಯಲು ಹೋಗಬಾರದು. ಉಗುರನ್ನಂತೂ ತಾಕಿಸಲೇಬಾರದು. ಈ ಭಾಗ ಒಣಗಿಯೇ ಇದ್ದಷ್ಟೂ ಬೇಗನೇ ಗುಣವಾಗುತ್ತದೆ. ಪೂರ್ಣವಾಗಿ ಗುಣವಾಗುವವರೆಗೂ ಈ ಭಾಗವನ್ನು ಪ್ಲಾಸ್ಟಿಕ್ಕಿನಿಂದ ಆವರಿಸಿ ನೀರು ತಾಕದಂತೆ ಎಚ್ಚರ ವಹಿಸಿಯೇ ಸ್ನಾನ ಮಾಡಬೇಕು. ಈ ವ್ಯಕ್ತಿಗಳ ಒಳ ಉಡುಪುಗಳು, ಹಾಸಿಗೆ, ಹೊದಿಕೆ, ವಸ್ತ್ರಗಳೆಲ್ಲವನ್ನೂ ಪ್ರತ್ಯೇಕವಾಗಿ, ಸೂಕ್ತ ಕ್ರಿಮಿನಾಶಕಗಳನ್ನು ಉಪಯೋಗಿಸಿ ಒಗೆಯಬೇಕು. ಒಂದು ವೇಳೆ ಚರ್ಮದಡಿಯ ನೋವು ಮತ್ತು ಉರಿ ತೀವ್ರವಾಗಿದ್ದರೆ ಚಿಕಿತ್ಸೆಯ ಜೊತೆಗೇ ಅಕ್ಯುಪಂಕ್ಚರ್ ನಂತಹ ಹೆಚ್ಚುವರಿ ಚಿಕಿತ್ಸೆಯನ್ನೂ ಪಡೆಯಬಹುದು, ಆದರೆ ಇದಕ್ಕೆ ವೈದ್ಯರ ಅನುಮತಿ ಅಗತ್ಯ. ಹೀಗೆ ವ್ಯಾಧಿ ಆವರಿಸಿದೆ ಎಂದು ತಿಳಿದ ತಕ್ಷಣ ನೂರಾರು ವ್ಯಕ್ತಿಗಳು ತಮಗೆ ತೋಚಿದ ಚಿಕಿತ್ಸೆಯನ್ನು ಸೂಚಿಸ ಬಹುದು, ಆದರೆ ಯಾವುದೇ ಚಿಕಿತ್ಸೆಯನ್ನು ಪ್ರಾರಂಭಿಸುವ ಮುನ್ನ ವೈದ್ಯರ ಅನುಮತಿ ಪಡೆಯುವುದು ಕಡ್ಡಾಯ.

*ಕಾಯಿಲೆ ಬರದಂತೆ ತಡೆಗಟ್ಟುವುದು ಹೇಗೆ?*
ಸಿಡುಬು ಸಹಿತ ಇತರ ವೈರಸ್ ಮೂಲಕ ಎದುರಾಗುವ ಕಾಯಿಲೆಗಳು ಬರದಂತೆ ಲಸಿಕೆ ಹಚ್ಚಿಸಿಕೊಳ್ಳುವುದೇ ಜಾಣತನದ ಕ್ರಮವಾಗಿದೆ. ಈ ರೋಗ ಬಾರದಂತೆ ತಡೆಯಲು Shingrix ಮತ್ತು Zostavax ಎಂಬ ಹೆಸರಿನ ಎರಡು ಲಸಿಕೆಗಳಿವೆ. ಇದರಲ್ಲಿ ಮೊದಲನೆಯದ್ದು ಹೆಚ್ಚು ಪ್ರಬಲವಾಗಿದ್ದು ಶೇಖಡಾ ತೊಂಭತ್ತರಷ್ಟು ಪ್ರಕರಣಗಳಲ್ಲಿ ಯಶಸ್ಸು ಕಂಡುಬರುತ್ತದೆ. ಒಂದು ವೇಳೆ Zostavax ಎಂಬ ಲಸಿಕೆಯನ್ನು ಈಗಾಗಲೇ ಪಡೆದಿರುವ ವ್ಯಕ್ತಿಗಳು Shingrix ಲಸಿಕೆಯನ್ನೂ ಹೆಚ್ಚುವರಿಯಾಗಿ ಪಡೆಯಬಹುದು. ಅದರಲ್ಲೂ ಐವತ್ತು ದಾಟಿದ ವ್ಯಕ್ತಿಗಳು ಈ ಲಸಿಕೆಯನ್ನು ಖಂಡಿತವಾಗಿಯೂ ಹಾಕಿಸಿಕೊಳ್ಳಬೇಕು. Shingrix ಲಸಿಕೆಯ ಎರಡು ಚುಚ್ಚುಮದ್ದುಗಳನ್ನು ಪಡೆದುಕೊಳ್ಳ ಬೇಕಾಗುತ್ತದೆ. ಮೊದಲ ಲಸಿಕೆ ಪಡೆದ ಆರು ತಿಂಗಳುಗಳ ಬಳಿಕ ಎರಡನೆಯ ಚುಚ್ಚುಮದ್ದು ಪಡೆಯ ಬೇಕಾಗುತ್ತದೆ. ಅತ್ಯಪರೂಪ ಪ್ರಕರಣಗಳಲ್ಲಿ, Shingrix ಲಸಿಕೆಯನ್ನು ಪಡೆದ ಬಳಿಕವೂ ವ್ಯಕ್ತಿಯೊಬ್ಬರಿಗೆ ಸರ್ಪಸುತ್ತು ಕಾಣಿಸಿಕೊಳ್ಳಬಹುದು. ಆದರೆ ಇವರಿಗೆ ಉರಿ ಮತ್ತು ತುರಿಕೆ ತೀರಾ ಕಡಿಮೆ ಇರುತ್ತದೆ. Shingrix ಲಸಿಕೆಯ ಅಡ್ಡಪರಿಣಾಮದ ಕಾರಣದಿಂದಾಗಿ ಚುಚ್ಚುಮದ್ದು ನೀಡಿದ ಭಾಗದಲ್ಲಿ ಊದಿಕೊಳ್ಳುವುದು, ಮುಟ್ಟಲೂ ಆಗದಷ್ಟು ನೋವು ಮತ್ತು ಬಳಲಿಕೆ, ತಲೆನೋವು, ಜ್ವರ, ನಡುಕ ಮತ್ತು ಹೊಟ್ಟೆಯಲ್ಲಿ ತೊಂದರೆ ಎದುರಾಗುತ್ತವೆ. Zostavax ಲಸಿಕೆಯಿಂದಲೂ ವ್ಯಕ್ತಿಗೆ ಅಲ್ಪ ಪ್ರಮಾಣದ ಸಿಡುಬನ್ನೇ ಹೋಲುವ ಚರ್ಮದ ಗುಳ್ಳೆಗಳು ಕಾಣಿಸಿಕೊಳ್ಳಬಹುದು. ಏಕೆಂದರೆ ಈ ಲಸಿಕೆಯಲ್ಲಿ ಜೀವಂತವಿರುವ ಬ್ಯಾಕ್ಟೀರಿಯಾಗಳನ್ನೇ ದೇಹದೊಳಗೆ ಊಡಿಸಲಾಗಿರುತ್ತದೆ.

1 comment:

Lokesh Rajput said...

Best contents your Https:/indiakibat.com/sslc-full-

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...