Friday, August 28, 2020

ಕಾಡುವ ಉಗುರು ಸುತ್ತಿಗೆ ಇಲ್ಲಿದೆ ಪರಿಹಾರ!

ಕೆಲವರಿಗೆ ಉಗುರು ಸುತ್ತು ಆಗಿರುತ್ತದೆ ಕೈಯ ಬೆರಳಲ್ಲಿ ಅಥವಾ ಕಾಲ ಬೆರಳಲ್ಲಿ ಆಗಿರುತ್ತದೆ,ಇದರಿಂದ ಅನೇಕರು ತೊಂದರೆಗೀಡಾಗುತ್ತಾರೆ.ಈ ಉಗುರು ಸುತ್ತಿಗೆ ಒಂದು ಸಿಂಪಲ್ ಪರಿಹಾರವನ್ನು ಈ ಲೇಖನದಲ್ಲಿ ತಿಳಿಸುತ್ತೇವೆ ಬನ್ನಿ ಓದಿ .

ಉಗುರು ಸುತ್ತು ಆಗುವುದಕ್ಕೆ ಮುಖ್ಯ ಕಾರಣ ಕೈ ಬೆರಳು ಅಥವಾ ಕಾಲ ಬೆರಳು ತೇವ ಆಗುವುದರಿಂದ,ಕೊಳೆಗಳು ಸೇರಿಕೊಂಡಾಗ,ಪಾತ್ರೆ ತೊಳೆಯುವಾಗ ಹೆಚ್ಚಾಗಿ ಸುಣ್ಣದ ಅಂಶ ಇರುವ ಸೋಪ್ ಅನ್ನು ಬಳಸಿದಾಗ ಹೀಗೆ ಇನ್ನೂ ಅನೇಕ ಕಾರಣಗಳಿಂದ ನಮ್ಮ ಉಗುರುಗಳಿಗೆ ಫಂಗಲ್ ಇನ್ಫೆಕ್ಷನ್ ಆಗುವ ಚಾನ್ಸಸ್ ಹೆಚ್ಚಾಗಿ ಇರುತ್ತದೆ.ಇದರಿಂದ ಉಗುರು ಸುತ್ತು ಕೈ ಬೆರಳುಗಳಲ್ಲಿ ಹಾಗೂ ಕಾಲು ಬೆರಳುಗಳಲ್ಲಿ ಕಾಣಿಸುತ್ತದೆ . ಉಗುರು ಸುತ್ತು ಎಲ್ಲಾ ಚರ್ಮದವರಿಗೂ ಆಗುವುದಿಲ್ಲ ಇದು ಕೇವಲ ಮೃದು ಚರ್ಮವನ್ನು ಹೊಂದಿರುವವರಿಗೆ ಮಾತ್ರ ಹೆಚ್ಚಾಗಿ ಈ ಉಗುರು ಸುತ್ತು ಕಾಣಿಸಿಕೊಳ್ಳುತ್ತದೆ .
ಕ್ಲೋಟ್ರಿ ಲೋಷನ್
ಈ ಲೋಷನ್ ಅನ್ನು ಹಚ್ಚುವ ಮೊದಲು ಕೈ ಬೆರಳು ಅಥವಾ ಕಾಲು ಬೆರಳು ಉಗುರು ಸುತ್ತು ಆಗಿರುವ ಜಾಗಕ್ಕೆ ಒಂದು ಕರ್ಚೀಫ್ ಅಥವಾ ಒಂದು ಸಣ್ಣ ಟವಲ್ ತೆಗೆದುಕೊಂಡು ಕ್ಲೀನ್ ಆಗಿ ಒರೆಸಿಕೊಳ್ಳಿ ನಂತರ ಉಗುರು ಸುತ್ತು ಆಗಿರುವ ಜಾಗಕ್ಕೆ ಈ ಲೋಷನ್ ಅನ್ನು ಡ್ರಾಪ್ನ ರೀತಿ ಹಾಕಿಕೊಳ್ಳಿ .ಈ ಲೋಷನ್ ಅನ್ನು ಪ್ರತಿದಿನ ಒಂದು ಒಂದು ಡ್ರಾಪ್ ಉಗುರು ಸುತ್ತು ಆಗಿರುವ ಜಾಗಕ್ಕೆ ಹಾಕಿ ನಂತರ 15 ನಿಮಿಷ ಬಿಟ್ಟು ನಂತರ ಕೆಲಸವನ್ನು ಮಾಡಬೇಕು.

ಇನ್ನು ಈ ಲೋಷನ್ ಎಲ್ಲಾ ಮೆಡಿಕಲ್ ಶಾಪ್ ಗಳಲ್ಲಿ ದೊರೆಯುತ್ತದೆ ಇದು ಕೇವಲ 30 ರೂ ಮಾತ್ರ.ಮತ್ತೊಂದು ಉಪಾಯ ಎಂದರೆ ಜೀರಿಗೆ ಕಷಾಯವನ್ನು ಪ್ರತಿನಿತ್ಯ ಸೇವಿಸುವುದರಿಂದ ನಮಗೆ ಫಂಗಲ್ ಇನ್ಫೆಕ್ಷನ್ ಆಗುವುದು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.ಬೆರಳಿಗೆ ವಿಟಮಿನ್ ಈ ಮಾತ್ರೆ ಅಥವಾ ಜೆಲ್ಲನ್ನು ಬಳಸುವುದು ಉತ್ತಮ .

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...