Sunday, August 2, 2020

GK Mini Notes

ಕೆ. ಕಸ್ತೂರಿ ರಂಗನ್ ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿ 2008ರಲ್ಲಿ ನೇಮಕವಾಗಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಪಶ್ಚಿಮಘಟ್ಟಗಳ ಅಧ್ಯಯನ ಸಮಿತಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು
1994 ರಿಂದ 2003 ರವರೆಗೆ ಇಸ್ರೋದ ಅಧ್ಯಕ್ಷರಾಗಿದ್ದರು.
==================================
ಭಾರತ ದೇಶದ ಮೊಟ್ಟಮೊದಲ ಐಐಟಿ ಯನ್ನು 1951 ರಲ್ಲಿ ಪಶ್ಚಿಮ ಬಂಗಾಳದ  ಖರಗ್ ಪುರದಲ್ಲಿ ಸ್ಥಾಪಿಸಲಾಯಿತು.
ಭಾರತದಲ್ಲಿ ಪ್ರಸ್ತುತವಾಗಿ 23 ಐಐಟಿಗಳು ಕಾರ್ಯನಿರ್ವಹಿಸುತ್ತಿವೆ.
 ಕರ್ನಾಟಕದ ಏಕೈಕ ಮತ್ತು 23ನೇ ಐಐಟಿಯಾಗಿ 2016 ರ ಜುಲೈನಿಂದ ಐಐಟಿ ಧಾರವಾಡವು ಕಾರ್ಯನಿರ್ವಹಿಸುತ್ತಿದೆ.
=================================
ಬಾಂಬೆ ಹೈನಲ್ಲಿ "ಸಾಗರ್ ಸಾಮ್ರಾಟ್" ಹೆಸರಿನ ತೈಲ ಕೊರೆಯುವ ಭಾವಿ ಆರಂಭವಾಗಿದ್ದು, ಇದು 18 ಸಾವಿರ ಅಡಿಯಷ್ಟು ಆಳವನ್ನು ಕೊರಗಿತ್ತು.ಇದು ಮುಂಬೈನಿಂದ 176 ಕಿ.ಮಿ ದೂರದಲ್ಲಿರುವ ಆಯಿಲ್ ಫೀಲ್ಡ್ ಆಗಿದೆ ಮತ್ತು ಭಾರತದ ಒಎನ್ ಜಿಸಿ ಸಂಸ್ಥೆಯ ಅಧೀನದಲ್ಲಿದೆ
==================================
ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳು ಮತ್ತು ಅವುಗಳ ದಿನ
1. ಅರೇಬಿಕ್ ( ಡಿಸೆಂಬರ್-18)
2. ಇಂಗ್ಲಿಷ್ (ಏಪ್ರಿಲ್ -23)
3. ಚೈನೀಸ್ (ಏಪ್ರಿಲ್ - 20)
4. ಫ್ರೆಂಚ್ ( ಮಾರ್ಚ್- 20)
5. ರಷ್ಯಾ (ಜೂನ್-6)
6. ಸ್ಪನಿಷ್ ( ಏಪ್ರಿಲ್ -23)
ಯುನೆಸ್ಕೋ ಸಂಸ್ಥೆಯು ಆಚರಿಸುತ್ತದೆ
=================================
ಭಾರತ ಸಂವಿಧಾನದ 165ನೇ ವಿಧಿಯನ್ವಯ ರಾಜ್ಯಪಾಲರು ಅಡ್ವೊಕೇಟೆ ಜನರಲ್ ಅವರನ್ನು ನೇಮಕ ಮಾಡುತ್ತಾರೆ.
ಅಡ್ವೋಕೇಟ್ ಜನರಲ್ ಅವರು ರಾಜ್ಯಮಟ್ಟದ ಉನ್ನತ ಕಾನೂನು ಸಲಹಾ ಅಧಿಕಾರಿ ಆಗಿರುತ್ತಾರೆ ಇವರಿಗೆ ರಾಜ್ಯಪಾಲರು ಪ್ರಮಾಣವಚನ ಬೋಧಿಸುತ್ತಾರೆ.

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...