ಜಿನಧರ್ಮಪಾತಕೆ' ಎಂದು ಯಾರನ್ನು ಕವಿ ರನ್ನ ಹೊಗಳಿದ್ದಾರೆ?

SANTOSH KULKARNI
By -
0

 ದಾನಚಿಂತಾಮಣಿ ಅತ್ತಿಮಬ್ಬೆ.

ಕವಿ ರನ್ನ ತನ್ನ ಅಜಿತ ಪುರಾಣದ ಪೀಠಿಕಾ ಭಾಗದಲ್ಲಿ ಅತ್ತಿಮಬ್ಬೆಯ ಜಿನ ಭಕ್ತಿಯನ್ನು 'ಜಿನಧರ್ಮಪಾತಕೆ' ಎಂದು ಕೊಂಡಾಡಿದ್ದಾನೆ.

ಅತ್ತಿಮಬ್ಬೆ ಹತ್ತನೆಯ ಶತಮಾನದ ಉತ್ತರಾರ್ಧ ಮತ್ತು ಹನ್ನೊಂದನೆಯ ಶತಮಾನದ ಮೊದಲ ಭಾಗದಲ್ಲಿ ಚಾಲುಕ್ಯ ಚಕ್ರವರ್ತಿ ಅಹವಮಲ್ಲ ತೈಲಪ(೯೭೩-೮೮೭)ನ ಮಗ ಇರಿವ ಬೆಡಂಗ ಸತ್ಯಾಶ್ರಯನ (೯೯೭-೧೦೦೮) ಕಾಲದಲ್ಲಿದ್ದರು. ಅವರ ಪೂರ್ವಜರು ವೆಂಗಿಮಂಡಲದ ಪುಂಗನೂರಿನವರು.

ಅತ್ತಿಮಬ್ಬೆಯ ಆಶ್ರಯದಲ್ಲೆ ರನ್ನ ಅಜಿತ ಪುರಾಣವನ್ನು ಬರೆದದ್ದು(೯೯೩). ಅವರು ಲಕ್ಕುಂಡಿಯಲ್ಲಿ ಬಸದಿಯನ್ನು ಕಟ್ಟಿಸಿ ಅದಕ್ಕೆ ದತ್ತಿಗಳನ್ನು ಬಿಡಿಸಿದ್ದು ೧೦೦೭ರಲ್ಲಿ ಎಂದು ಅಲ್ಲಿಯ ಶಾಸನದಿಂದ ತಿಳಿದುಬರುತ್ತದೆ.

ಅತ್ತಿಮಬ್ಬೆನಾಡಿನಾದ್ಯಂತ ನೂರಾರು ಚೈತ್ಯಾಲಯಗಳನ್ನು ನಿರ್ಮಿಸುವುದರ ಮೂಲಕ ಧಾರ್ಮಿಕ ಚೈತನ್ಯವನ್ನು ಸಾಮಾನ್ಯ ಚೇತನದಲ್ಲೂ ತುಂಬಿ ಹರಿಯಿಸಿದ ಮಹಾಚೇತನವಾದಳು.ಬೇಡಿದವರಿಗೆ ಅವರು ಬೇಡಿದ್ದನ್ನು ತಡಮಾಡದೆ ಒಡನೆಯೇ ಹಿಡಿ ಹಿಡಿಯಾಗಿ 'ಹಿಡಿ-ಹಿಡಿ' ಎಂದು ಮುಕ್ತಹಸ್ತದಿಂದ ನೀಡಿದಳು; ತನ್ನದೆಂಬ ಸರ್ವಸ್ವವನ್ನೂ ಧರ್ಮಕ್ಕಾಗಿ, ಸಹಮಾನವರ ಒಳಿತಿಗಾಗಿ ದಾನಮಾಡಿದಳು.

ಅತ್ತಿಮಬ್ಬೆಯ ಬಿರುದುಗಳು

  1. ಕವಿವರ ಕಾಮಧೇನು
  2. ಗಿಣದಂಕಕಾರ್ತಿ
  3. ಜಿನಶಾಸನದೀಪಿಕೆ
  4. ದಾನಚಿಂತಾಮಣಿ
  5. ಗುಣದಖನಿ
  6. ಜೈನ ಶಾಸನ ಲಕ್ಷ್ಮ
  7. ಅಕಲಂಕಚರಿತೆ
  8. ಸಜ್ಜನೈಕಚೂಡಾಮಣಿ
  9. ಸರ್ವಕಳಾವಿದೆ;

೧೯೯೪ನೇ ಇಸವಿಗೆ ಆಕೆ ಜೀವಿಸಿದ್ದು ಒಂದು ಸಹಸ್ರ ವರ್ಷಗಳಾಗಿದ್ದುದರಿಂದ ೧೯೯೪ನೇ ವರ್ಷವನ್ನು ಕರ್ನಾಟಕ ಸರ್ಕಾರ ಅತ್ತಿಮಬ್ಬೆ ವರ್ಷವೆಂದು ಘೋಷಿಸಿತ್ತು. ಅಂದಿನಿಂದ ಆಕೆಯ ಸ್ಮರಣಾರ್ಥ ಅತ್ತಿಮಬ್ಬೆ ಪ್ರಶಸ್ತಿಯನ್ನು ಪ್ರತಿಷ್ಠಾಪಿಸಿದೆ.

Post a Comment

0Comments

Please Select Embedded Mode To show the Comment System.*