ಮಹಾನ್ ಋಷಿ ಎಂದೇ ಅನ್ನ ಬಹುದಾದ ಶ್ರೀನಿವಾಸ ರಾಮಾನುಜನ್ ರವರು ಕಂಡುಹಿಡಿದ, 2520 ಸಂಖ್ಯೆಯನ್ನು ಗಮನಿಸೋಣ. ರಾಮಾನುಜನ್ ಅವರು ಗಣಿತಶಾಸ್ತ್ರವನ್ನು ಮೀರಿಸಿದ್ದರು, ಸಂಖ್ಯೆ ಸಿದ್ಧಾಂತ, ಅನಂತ ಸರಣಿಗಳು, ಮುಂದುವರಿದ ಭಿನ್ನರಾಶಿಗಳು ಮತ್ತು ಹೆಚ್ಚಿನವುಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. 2520 ಸಂಖ್ಯೆಯು ಅನೇಕ ಸಂಖ್ಯೆಗಳಲ್ಲಿ ಒಂದಾಗಿದೆ ಎಂದು ತೋರುತ್ತದೆ, ಆದರೆ ವಾಸ್ತವದಲ್ಲಿ ಅದು ಅಲ್ಲ. ಇದು ಪ್ರಪಂಚದಾದ್ಯಂತದ ಅನೇಕ ಗಣಿತಜ್ಞರನ್ನು ಅಚ್ಚರಿಗೊಳಿಸಿರುವ ಸಂಖ್ಯೆಯಾಗಿದೆ.
………. ……25 20
ಈ ಸಂಖ್ಯೆಯನ್ನು ಸಮಸಂಖ್ಯೆ ಮತ್ತು ಬೆಸಸೋಖ್ಯೆ, ಎರಡರಿಂದಲೂ 1 ರಿಂದ 10 ರವರೆಗಿನ ಯಾವುದೇ ಸಂಖ್ಯೆಯಿಂದ ಭಾಗಿಸಬಹುದು. ಉಳಿದದ್ದು ಶೂನ್ಯವೇ ಇರುತ್ತದೆ.
ಮಗ್ಗಿಯನ್ನು ನೋಡೋಣ.
2520 ÷ 1 = 2520
2520 ÷ 2 = 1260
2520 ÷ 3 = 840
2520 ÷ 4 = 630
2520 ÷ 5 = 504
2520 ÷ 6 = 420
2520 ÷ 7 = 360
2520 ÷ 8 = 315
2520 ÷ 9 = 280
2520 ÷ 10 = 252
ಈ ಒಂದು ನಿರ್ದಿಷ್ಟ ಸಂಖ್ಯೆಯ ಹಿಂದಿನ ಮ್ಯಾಜಿಕ್ ಅನ್ನು ಗುಣಾಕಾರದಿಂದ ವಿವರಿಸಬಹುದು.
ಭಾರತೀಯ ಹಿಂದೂ ವರ್ಷವನ್ನು ಗಮನದಲ್ಲಿಟ್ಟುಕೊಂಡು, ಈ ಸಂಖ್ಯೆಯ ಒಗಟನ್ನು ಪರಿಹರಿಸಲಾಗಿದೆ. ಕೆಳಗೆ ವಿವರಿಸಲಾಗಿದೆ…
ವಾರದಲ್ಲಿ 7 ದಿನಗಳು, ತಿಂಗಳಲ್ಲಿ 30 ದಿನಗಳು ಮತ್ತು ವರ್ಷದಲ್ಲಿ 12 ತಿಂಗಳುಗಳು,
ಅಂದರೆ, 7x 30 x12 = 2520.
ಇದು ಸಮಯದ ಪ್ರಾಬಲ್ಯವನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುತ್ತದೆ.
ಕೆಲವೊಮ್ಮೆ, ಗಣಿತವು ಉಪಾಯ, ಚಾತುರ್ಯದಿಂದ ಆಗಿರಬಹುದು. ಗಣಿತಶಾಸ್ತ್ರದಲ್ಲಿ ಯಾವುದೇ ಸಂಖ್ಯೆಯನ್ನು 1 ರಿಂದ 10 ರವರೆಗಿನ ಎಲ್ಲಾ ಸಂಖ್ಯೆಗಳಿಂದ ಭಾಗಿಸಲು ಸಾಧ್ಯವಿಲ್ಲ ಎಂದು ತಿಳಿದಿರುವ ಸಂಗತಿ. ಆದರೆ, ಈ ಮೇಲಿನ ಒಂದು ಸಂಖ್ಯೆಯು ತುಂಬಾ ವಿಚಿತ್ರವಾಗಿದೆ ಮತ್ತು ಪ್ರಪಂಚದ ಎಲ್ಲಾ ಗಣಿತಜ್ಞರನ್ನು ಕಂಗೆಡಿಸಿದೆ.
ನಮ್ಮ ಭಾರತದ ಬುದ್ಧಿ ಶಕ್ತಿಯ ವೈವಿಧ್ಯಮಯಕ್ಕೆ ಒಂದು ಉದಾಹರಣೆ ಅಷ್ಟೇ…
ಮತ್ತೊಂದು ಸಂಖ್ಯೆ 1729…