ಕ್ವಾಂಟಮ್ ಭೌತಶಾಸ್ತ್ರ ಮತ್ತು ಕಣ ಭೌತಶಾಸ್ತ್ರದ ನಡುವಿನ ವ್ಯತ್ಯಾಸವೇನು?

SANTOSH KULKARNI
By -
0

 ಕ್ವಾಂಟಮ್ ಭೌತಶಾಸ್ತ್ರ

ಕ್ವಾಂಟಮ್ ಭೌತಶಾಸ್ತ್ರವು ಭೌತಶಾಸ್ತ್ರದ ಒಂದು ಶಾಖೆ. ಹೆಚ್ಚಿನ ಜನರಿಗೆ ಭಯ ಹುಟ್ಟಿಸುವ ಶಾಸ್ತ್ರ.

ಇದನ್ನು ಅರ್ಥ ಮಾಡಿಕೊಳ್ಳಲು ಪ್ರಾರಂಭಿಸುವುದಕ್ಕೆ ಈ ಕೆಳಗಿನ ಆರು ಸೂತ್ರಗಳನ್ನು ತಿಳಿದುಕೊಂಡರೆ ಮುಂದೆ ಸುಲಭವಾಗುತ್ತದೆ.

1. ಈ ಜಗತ್ತಿನಲ್ಲಿ ಎಲ್ಲವೂ ಅಲೆಗಳಿಂದ ಮಾಡಲ್ಪಟ್ಟಿವೆ, ಹಾಗೂ ಕಣಗಳಿಂದ.

2. ಕ್ವಾಂಟಮ್ ಭೌತಶಾಸ್ತ್ರವು ಬಿಡಿ ಬಿಡಿ ಆದದ್ದು (discrete). ಅಖಂಡವಾದದ್ದಲ್ಲ.

ಚಿತ್ರ: ಅಲೆಯ ಪ್ಯಾಕೆಟ್

3. ಇದರ ಪ್ರಯೋಗಗಳಲ್ಲಿ ಅನೇಕ ಫಲಿತಾಂಶಗಳು ಸಂಭವವಿದ್ದು ಪ್ರತಿಯೊಂದು ಫಲಿತಾಂಶದ ಸಂಭವನೀಯತೆಯನ್ನು ಲೆಕ್ಕ ಹಾಕಲಾಗುತ್ತದೆ.

4. ಕ್ವಾಂಟಮ್ ಭೌತಶಾಸ್ತ್ರವು ಒಂದು ಸ್ಥಳಕ್ಕೆ ಸೀಮಿತವಾದದ್ದಲ್ಲ. ಒಂದು ಸ್ಥಳದ ಪ್ರಯೋಗದ ಫಲಿತಾಂಶ ತುಂಬಾ ದೂರದಲ್ಲಿರುವ ವಸ್ತುವಿನ ಗುಣಗಳ ಮೇಲೂ ಅವಲಂಬಿಸಿರಬಹುದು. ಇದನ್ನು entanglement ಎನ್ನುತ್ತಾರೆ.

5. ಕ್ವಾಂಟಮ್ ಭೌತಶಾಸ್ತ್ರವು ಬಹುತೇಕ ಪರಮಾಣುಗಳು ಮತ್ತು ತಳಹದಿಯ ಕಣಗಳಿಗೆ ಸಂಬಂಧಪಟ್ಟದ್ದು.

6. ಕ್ವಾಂಟಮ್ ಭೌತಶಾಸ್ತ್ರವು ಕಣ್ಕಟ್ಟಿನ ವಿದ್ಯೆ ಅಂತೂ ಅಲ್ಲ.

ಕ್ವಾಂಟಮ್ ಭೌತಶಾಸ್ತ್ರದ ಭವಿಷ್ಯದ ಗುರಿಗಳು:

  1. ಕ್ವಾಂಟಮ್ ಸಂವಹನ
  2. ಕ್ವಾಂಟಮ್ ಕಂಪ್ಯೂಟರ್
  3. ಕ್ವಾಂಟಮ್ ಸಿಮ್ಯುಲೇಟರ್ (ಅಣಕಗಳು)
  4. ಕ್ವಾಂಟಮ್ ಮೆಟ್ರಾಲಜಿ (ಅಳತೆ ಶಾಸ್ತ್ರ)
  5. ಕ್ವಾಂಟಮ್ ಹಾರ್ಡ್ವೇರ್
  6. ಕ್ವಾಂಟಮ್ ಸಾಫ್ಟ್ವೇರ್

*********

ಪಾರ್ಟಿಕಲ್ ಭೌತಶಾಸ್ತ್ರ

ಪಾರ್ಟಿಕಲ್ ಭೌತಶಾಸ್ತ್ರವು ಭೌತಶಾಸ್ತ್ರದ ಇನ್ನೊಂದು ಶಾಖೆ. ಇದೂ ಕೂಡ ಕಠಿಣವಾದ ಶಾಸ್ತ್ರವೇ ಸರಿ. ಪಾರ್ಟಿಕಲ್ ಭೌತಶಾಸ್ತ್ರಕ್ಕೆ ಕ್ವಾಂಟಂ ಭೌತಶಾಸ್ತ್ರದ ತಳಹದಿ ಮುಖ್ಯ.

ಪ್ರತಿಯೊಂದು ವಸ್ತುವಿನ ಪರಮಾಣುಗಳಲ್ಲಿ ಎಲೆಕ್ಟ್ರಾನ್, ಪ್ರೋಟಾನ್ ಮತ್ತು ನ್ಯೂಟ್ರಾನ್ ಗಳಿವೆ. ಪ್ರೋಟಾನ್ ಮತ್ತು ನ್ಯೂಟ್ರಾನ್ ಗಳನ್ನು ಕೂಡ ಸಿಗಿದರೆ ಅವಕ್ಕಿಂತಲೂ ಸಣ್ಣ ಕಣಗಳು ಇರುವುದು ತಿಳಿಯುತ್ತದೆ. ಇವಲ್ಲದೆ ಈ ಕಣಗಳನ್ನು ಹಿಡಿದಿಡುವ ಶಕ್ತಿಗಳೂ ಇವೆ. ಪರಮಾಣುವನ್ನು ಬಗೆದಷ್ಟೂ ಹೊಸ ಹೊಸ ಸಂಗತಿಗಳು ಅರಿವಿಗೆ ಬರುತ್ತವೆ. ಸಧ್ಯಕ್ಕೆ ಪರಮಾಣುವಿನ ಮಾನದಂಡದ ಮಾದರಿ (Standard Model) ಹೀಗಿದೆ. ಇದು ಕೊಟ್ಟಕೊನೆಯ ಮಾದರಿಯೇನಲ್ಲ.

ಪಾರ್ಟಿಕಲ್ ಭೌತಶಾಸ್ತ್ರ ಈ ಮಾದರಿಯನ್ನು ಪ್ರಯೋಗಗಳ ಮೂಲಕ ಉತ್ತಮಗೊಳಿಸುತ್ತಾ ಹೋಗುವ ಶಾಸ್ತ್ರ. ಇದರಲ್ಲಿ ಕಣಗಳನ್ನು ಅತಿ ಹೆಚ್ಚಿನ ವೇಗಕ್ಕೆ ಗುರಿಪಡಿಸಿ ಸಂಶೋಧನೆ ನಡೆಸುವುದರಿಂದ ಈ ಭೌತಶಾಸ್ತ್ರಕ್ಕೆ ಹೈ ಎನರ್ಜಿ ಫಿಸಿಕ್ಸ್ ಎಂದೂ ಕರೆಯುತ್ತಾರೆ.

ಚಿತ್ರ: ಪಾರ್ಟಿಕಲ್ ಆಕ್ಸಿಲರೇಟರ್

ಚಿತ್ರ: ಹಿಗ್ಸ್ ಬೋಸಾನ್ ಕಣವನ್ನು ಪತ್ತೆ ಹಚ್ಚಿದ CERN ನ ಹೆಡ್ರಾನ್ ಕೊಲೈಡರ್

ಅಗಾಧವಾದ ವಿಶ್ವದ ಕತ್ತಲಲ್ಲಿ ತಡಕಾಡಿ ಏನಾದರೂ ಕಣಗಳು ಇವೆಯೋ ಎಂದು ಪತ್ತೆ ಹಚ್ಚುವುದೂ ಒಂದು ದೊಡ್ಡ ಕೆಲಸ. ಹೀಗೆ ಹುಡುಕುತ್ತಿದ್ದರೆ ಮುಂದೊಂದು ದಿನ ಡಾರ್ಕ್ ಮ್ಯಾಟರ್ ಮತ್ತು ಡಾರ್ಕ್ ಎನರ್ಜಿ ಬಗ್ಗೆ ಮನುಷ್ಯನಿಗೆ ಯುರೇಕಾ ಕ್ಷಣಗಳು ದಕ್ಕಲಿಕ್ಕೆ ಸಾಧ್ಯ!

ಚಿತ್ರ: ಪಾರ್ಟಿಕಲ್ ಭೌತಶಾಸ್ತ್ರದ ಭವಿಷ್ಯದ ಹಾದಿ.

Post a Comment

0Comments

Post a Comment (0)