"ಡಬಲ್ ಮಳೆಬಿಲ್ಲು" ಹೇಗೆ ರೂಪುಗೊಳ್ಳುತ್ತದೆ?

SANTOSH KULKARNI
By -
0

 ಈ ಕೆಳಗಿನ ಚಿತ್ರಣವನ್ನು ಒಮ್ಮೆ ಗಮನಿಸಿ:

(ಚಿತ್ರಗಳಿಂದ ಹಲವಾರು ಕೊನಗಳನ್ನೋಳಗೊಂಡ ವಿಶ್ಲೇಷಣೆಗಳನ್ನು ಸುಲಭದಲ್ಲಿ ತೋರಿಸಬಹುದು)

ಈ ಮೇಲಿನ ಚಿತ್ರ ಸರಿಯಾಗಿ ಅರ್ಥ ಮಾಡಿಕೊಳ್ಳಲು, ಬೆಳಕಿನ ಎರಡು ಗುಣಲಕ್ಷಣಗಳನ್ನು ತಿಳಿಯುವ ಅಗತ್ಯತೆಯಿದೆ. ಇವುಗಳನ್ನು ಚಿತ್ರಣ ಹಾಗೂ ಜಿಫ್-ಗಳ ಸಹಾಯದಿಂದ ತಿಳಿಯುವ ಪ್ರಯತ್ನ ಮಾಡೋಣ.

೧. ಮೊದಲಿಗೆ ಬೆಳಕಿನ ಪ್ರಸರಣ (dispersion of light):

ಈ ಮೇಲಿನ ಜಿಫ್ ಬೆಳಕಿನ ಪ್ರಸರಣವನ್ನು ತೋರಿಸುತ್ತಿದೆ. ಇದಕ್ಕೆ ಕಾರಣ ಬೆಳಕಿನ ಒಂದೊಂದು ತರಂಗಗಳು, ಒಂದೊಂದು ವೇಗದಲ್ಲಿ ಚಲಿಸುವಿಕೆ. ಇಲ್ಲಿ ವೇಗ ಹಾಗೂ ವಕ್ರೀಭವನಕ್ಕು ಇರುವ ಸಂಭದ, ಅತೀ ಕಡಿಮೆ ಹಾದಿಯ ಹಿಡಿಯುವ ಲಕ್ಷಣ.

೨. ಮತ್ತು ಸಂಪೂರ್ಣ ಆಂತರಿಕ ಪ್ರತಿಫಲನ (total internal reflection):

ಈ ಮೇಲಿನ ಚಿತ್ರದಲ್ಲಿ , ಬೆಳಕಿನ ಕೊನ ಹೆಚ್ಚಿದಂತೆ (ಎಡದಿಂದ ಬಲಕ್ಕೆ), ಅದರ ಪ್ರತಿಫಲನದ ಅಂಶ ಕೂಡ ಹೆಚ್ಚುತ್ತಾ ಹೋಗುತ್ತದೆ. ಹಾಗೂ ಬೆಳಕಿನ ಕೋನ ಹೆಚ್ಚಿದಂತೆ, ಅದರ ವಕ್ರೀಭವನದ ಅಂಶ ಕಡಿಮೆಯಾಗುತ್ತಾ ಹೋಗುತ್ತದೆ. ಈ ಕೋನದ ಒಂದು ಮಿತಿ ಮೀರಿದ ನಂತರ, ಬೆಳಕಿನ ವಕ್ರಿಬವನ ಸಂಪೂರ್ಣ ಸ್ತಗಿತಗೊಂಡು, ಸಂಪೂರ್ಣ ಆಂತರಿಕ ಪ್ರತಿಫಲನಕ್ಕೆ ದಾರಿ ಮಾಡಿ ಕೊಡುತ್ತದೆ.

ಮೇಲಿನ ಅನಿಮೇಶನ್ ಸಂಪೂರ್ಣ ಆಂತರಿಕ ಪ್ರತಿಫಲನವನ್ನು ತೋರಿಸುತ್ತಿದೆ.

ಫಲಿತಾಂಶ:

ಈ ಎರಡೂ ಗುಣಗಳನ್ನು ಸೇರಿಸಿ, ಮಳೆ ಬಿಲ್ಲಿನ ಕಾರಣವನ್ನು ತಿಳಿಯ ಬಹುದು. ಈಗ ಈ ಸಲ್ಲಿಕೆಯ ಮೊಟ್ಟ ಮೊದಲ ಚಿತ್ರಣ ಮತ್ತೊಮ್ಮೆ ನೋಡಿ. ಒಂದು ಬಾರಿ ಬೆಳಕಿನ ಪ್ರಸರಣ ಬಳಿಕ ಒಂದು ಬಾರಿ ಬೆಳಕಿನ ಸಂಪೂರ್ಣ ಆಂತರಿಕ ಪ್ರತಿಫಲನವನ್ನು ಗಮನಿಸಿ. ಇದು ನಮಗೆ ಒಂದು ಮಳೆ ಬಿಲ್ಲಿನ ವಿಶ್ಲೇಷಣೆ ಕೊಡುತ್ತದೆ.

ಇಲ್ಲಿಗೆ ನಮ್ಮ ಅರ್ಧದಷ್ಟು ವಿವರಣೆ ಮುಗಿದಿದೆ. ಈಗ ನಮಗೆ ತಿಳಿಯ ಬೇಕಾದ ಅಂಶ ಎರಡನೇ ಮಳೆ ಬಿಲ್ಲಿನ ಕಾರಣಗಳು.

ಎರಡನೇ ಮಳೆ ಬಿಲ್ಲಿನ ವಿಶ್ಲೇಷಣೆ:

ಎರಡನೇ ಮಳೆ ಬಿಲ್ಲು ಸ್ವಲ್ಪ ಬೇರೆಯ ಕೋನದಲ್ಲಿ ಬೆಳಕಿನ ಪ್ರಸರಣದಿಂದ ಮೂಡಿ ಬರುತ್ತದೆ ಅಷ್ಟೇ. ಇದನ್ನು ಕೆಳಗಿನ ಚಿತ್ರಣದಿಂದ ದೃಢೀಕರಿಸಿಕೊಳ್ಳಬಹುದು. ಒಂದು ಬಾರಿ ಬೆಳಕಿನ ಪ್ರಸರಣ ಹಾಗೂ ಎರಡು ಬಾರಿ ಸಂಪೂರ್ಣ ಆಂತರಿಕ ಪ್ರತಿಫಲನ ಇಲ್ಲಿ ಕಾಣಬಹುದು.

ಈ ಮೇಲಿನ ಚಿತ್ರದಲ್ಲಿ ಹೆಚ್ಚು ವಿವರಗಳ ಇರುವಿಕೆಯಿಂದ ಓದುಗರಿಗೆ ಗೊಂದಲವುಂಟಾದಲ್ಲಿ , ಕೆಳಗಿನ ಚಿತ್ರಗಳು ಬಿಡಿ ಬಿಡಿಯಾಗಿ ತೋರಿಸಲಿದೆ.

Post a Comment

0Comments

Post a Comment (0)