ಯುದ್ಧ ತಂತ್ರಕ್ಕೆ ಅನುಗುಣವಾಗಿ ನಿರ್ಮಿಸಿದ ಈ ಕೋಟೆಯ ರಚನೆ, ವಿನ್ಯಾಸ ಮತ್ತು ತಂತ್ರಗಾರಿಕೆ ಚಿತ್ರದುರ್ಗದ ಪಾಳೆಯಗಾರರ ಶೌರ್ಯ ಪರಾಕ್ರಮಗಳ ಸಂಕೇತವಾಗಿದೆ. ಇವರು ಕಟ್ಟಿಸಿದ ಕೋಟೆ "ಏಳು ಸುತ್ತಿನಕೋಟೆ' ಎಂಬ ಖ್ಯಾತಿಗೆ ಪಾತ್ರವಾಗಿದೆಯಲ್ಲದೆ, ಸಿಡಿಲಿಗೂ, ಮಳೆಗೂ ಜಗ್ಗದ ಉಕ್ಕಿನ ಕೋಟೆ ಎಂಬ ಹೆಸರು ಪಡೆದಿದೆ. ಹಾಗೆಯೇ, ಇವರು ಆಳ್ವಿಕೆ ಮಾಡಿದ ಈ ನೆಲವು “ಗಂಡು ಮೆಟ್ಟಿದ ನಾಡು” ಎಂಬ ಹೆಸರು ಪಡೆಯಿತು. ಚಿತ್ರದುರ್ಗ ಕೋಟೆಯು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ವಿವರಿಸುವಂತೆ 'ಗಿರಿದುರ್ಗ' ಜಲದುರ್ಗ ಮತ್ತು ' ವನದುರ್ಗದ ಎಲ್ಲಾ ಲಕ್ಷಣಗಳನ್ನು ಒಳಗೊಂಡಿರುವ ವಿಸ್ಮಯಕಾರಿ ಸ್ಮಾರಕ. ಈ ಕೋಟೆಯಲ್ಲಿಇ 19 ಅಗಸೆ ಬಾಗಿಲುಗಳು, 38 ದಿಡ್ಡಿಬಾಗಿಲುಗಳು, 35 ಕಳ್ಳಕಿಂಡಿಗಳು, 4 ಗುಪ್ತದ್ವಾರಗಳಿವೆ. ಬೆಟ್ಟದ ಮೇಲೆ ಏಕನಾಥೇಶ್ವರಿ, ಹಿಡಂಬೇಶ್ವರಿ, ಸಂಪಿಗೆಸಿದ್ದೇಶ್ವರ, ಫಲ್ಲುಣೇಶ್ವರ ದೇವಾಲಯ ಸೇರಿದಂತೆ ಪ್ರಮುಖವಾದ 14 ದೇವಾಲಯಗಳಿವೆ. ಮುರುಘಾಮಠ, ಒನಕೆ ಕಿಂಡಿ, ಮದ್ದು ಬೀಸುವ ಕಲ್ಲುಗಳು ಅರಮನೆ ಅವಶೇಷಗಳು, ಕಣಿವೆಗಳು, ಕಣಜಗಳು, ಎಣ್ಣೆಕೊಳಗಳು, ಗರಡಿಮನೆ, ಮದ್ದಿನಮನೆಗಳು, 40 ಅಡಿ ಎತ್ತರದ ಉಯ್ಯಾಲೆ ಕಂಬ, ಪಹರೆ ಗೃಹಗಳು, ಬಂದೂಕು ಕಿಂಡಿಗಳು, ವೀಕ್ಷಣಾಗೋಪುರಗಳು, ಬುರುಜು-ಬತೇರಿಗಳು, ಸೈನಿಕ ಗೃಹಗಳು, ಪ್ರವಾಸಿಗರಿಗೆ ಸವಾಲೆನಿಸುವ ತುಪ್ಪದ ಕೊಳದ ಬತೇರಿ ಬೆಟ್ಟ, ಇಲ್ಲಿಗೆ ಹತ್ತಲು ಇರುವ ಕುದುರೆ ಹೆಜ್ಜೆಗಳು, ಮುಂತಾದ ನೂರಾರು ಸ್ಮಾರಕಗಳು ಕೋಟೆಯಲ್ಲಿವೆ. ಈ ಎಲ್ಲಾ ತಾಂತ್ರಿಕ ರಚನೆಗಳನ್ನೊಳಗೊಂಡ ಚಿತ್ರದುರ್ಗದ ಕೋಟೆಯನ್ನು “ದಿಕ್ಕು ತಪ್ಪಸ್ಥದ ತಪ್ಪಿಹೊಕ್ಕರ” ಎನ್ನುವಂತೆ ಈ "ಕೋಟೆ ನೋಡಲು ಬಹು ಸುಂದರ ಕಾದಾಡಲು ಬಲು ಭಯಂಕರ” ಎನ್ನುವ ಗಾದೆ ಮಾತು
ಕೋಟೆಗೆ ಯುದ್ಧ ತಂತ್ರಕ್ಕೆ ಅನುಗುಣವಾಗಿ ನಿರ್ಮಿಸಿದ ಈ ಕೋಟೆಯ ರಚನೆ, ವಿನ್ಯಾಸ ಮತ್ತು ತಂತ್ರಗಾರಿಕೆ ಚಿತ್ರದುರ್ಗದ ಪಾಳೆಯಗಾರರ ಶೌರ್ಯ ಪರಾಕ್ರಮಗಳ ಸಂಕೇತವಾಗಿದೆ. ಇವರು ಕಟ್ಟಿಸಿದ ಕೋಟೆ “ಏಳು ಸುತ್ತಿನಕೋಟೆ” ಎಂಬ ಖ್ಯಾತಿಗೆ ಪಾತ್ರವಾಗಿದೆ.
ಚಿತ್ರದುರ್ಗ ಕೋಟೆ: ಚಿತ್ರದುರ್ಗ ಕೋಟೆಯನ್ನು ಮೂಲತಃ 11 ನೇ ಶತಮಾನದಲ್ಲಿ ಅಂದಿನ ಚಾಲುಕ್ಯ ಸಾಮ್ರಾಜ್ಯದ ಆಡಳಿತಗಾರರು ನಿರ್ಮಿಸಿದ್ದರು. ಕಾಲಾನಂತರದಲ್ಲಿ ಈ ಕೋಟೆ ಹೊಯ್ಸಳರು ಮತ್ತು ವಿಜಯನಗರ ಸಾಮ್ರಾಜ್ಯದ ಆಡಳಿತದಲ್ಲಿತ್ತು. ಈ ರಾಜರು ಕೋಟೆಯನ್ನು ಇನ್ನಷ್ಟು ಭದ್ರಪಡಿಸಿದರು. ಚಿತ್ರದುರ್ಗ ಕೋಟೆಯು 18 ನೇ ಶತಮಾನದ ತನಕ (ಹೈದರ್ ಅಲಿ ಆಳ್ವಿಕೆಯಲ್ಲಿ ಮತ್ತು ಭಾರತದ ಬ್ರಿಟಿಷ್ ಆಕ್ರಮಣ ಸಮಯ) ಸಕ್ರಿಯ ಯುದ್ಧಗಳಿಗೆ ಸಾಕ್ಷಿಯಾಯಿತು.
ಚಿತ್ರದುರ್ಗ ಕೋಟೆ ಅದರ ಕಾಲದ ವಾಸ್ತುಶಿಲ್ಪ ಮತ್ತು ತಾಂತ್ರಿಕ ಕೌಶಲಗಳಿಗೆ ಹೆಸರುವಾಸಿಯಾಗಿದೆ. ನೀರಿನ ಜಲಾಶಯಗಳು, ಕಾಲುವೆಗಳು ಇರುವುದರಿಂದ ನೀರನ್ನು ಹೊರಗಿನಿಂದ ತರಬೇಕಾದ ಅವಶ್ಯಕತೆ ಇಲ್ಲದೇ ಕೋಟೆಯನ್ನು ಆತ್ಮನಿರ್ಭರವಾಗಿಸಿತ್ತು.
ಎಚ್ಚರಿಕೆಯಿಂದ ಯೋಜಿಸಲಾದ ಕೋಟೆಯ ಏಳು ಸುತ್ತುಗಳು ಶತ್ರು ಪಡೆಗಳಿಂದ ಬಹುತೇಕ ಅಭೇದ್ಯವಾಗಿತ್ತು. ಕೋಟೆಯ ಸುತ್ತಲೂ ಶತ್ರುಗಳು ಸುತ್ತುವರಿದಾಗ ಕೋಟೆಯ ಒಳಗೆ ಮದ್ದುಗುಂಡುಗಳು, ಆಹಾರ ಮತ್ತು ಇತರ ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಸಾಕಷ್ಟು ಗೋದಾಮುಗಳಿದ್ದವು.
ಚಿತ್ರದುರ್ಗ ಕೋಟೆ: ಚಿತ್ರದುರ್ಗ ಕೋಟೆಯನ್ನು ಮೂಲತಃ 11 ನೇ ಶತಮಾನದಲ್ಲಿ ಅಂದಿನ ಚಾಲುಕ್ಯ ಸಾಮ್ರಾಜ್ಯದ ಆಡಳಿತಗಾರರು ನಿರ್ಮಿಸಿದ್ದರು. ಕಾಲಾನಂತರದಲ್ಲಿ ಈ ಕೋಟೆ ಹೊಯ್ಸಳರು ಮತ್ತು ವಿಜಯನಗರ ಸಾಮ್ರಾಜ್ಯದ ಆಡಳಿತದಲ್ಲಿತ್ತು. ಈ ರಾಜರು ಕೋಟೆಯನ್ನು ಇನ್ನಷ್ಟು ಭದ್ರಪಡಿಸಿದರು. ಚಿತ್ರದುರ್ಗ ಕೋಟೆಯು 18 ನೇ ಶತಮಾನದ ತನಕ (ಹೈದರ್ ಅಲಿ ಆಳ್ವಿಕೆಯಲ್ಲಿ ಮತ್ತು ಭಾರತದ ಬ್ರಿಟಿಷ್ ಆಕ್ರಮಣ ಸಮಯ) ಸಕ್ರಿಯ ಯುದ್ಧಗಳಿಗೆ ಸಾಕ್ಷಿಯಾಯಿತು.
ಒನಕೆ ಓಬವ್ವಳ ಕಿಂಡಿ: ಓಬವ್ವ, ಚಿತ್ರದುರ್ಗ ಕೋಟೆಯನ್ನು ಶತ್ರು ಸೈನಿಕರಿಂದ ಕಾಯುವ ಜವಾಬ್ದಾರಿ ಹೊತ್ತ ಕಾವಲುಗಾರನ ಪತ್ನಿಯಾಗಿದ್ದಳು. ಒಂದು ದಿನ ಪತಿ ಊಟಕ್ಕೆ ಹೋಗಿದ್ದಾಗ ಓಬವ್ವ ಶತ್ರು ಸೈನಿಕರು ಕಿರಿದಾದ ಕಿಂಡಿಯ ಮೂಲಕ ಒಬ್ಬೊಬ್ಬರಾಗಿ ಕೋಟೆಗೆ ನುಸುಳುತ್ತಿರುವುದನ್ನು ಗಮನಿಸಿದಳು. ರಂಧ್ರದಿಂದ ಹೊರಬರುವ ಸೈನಿಕರ ತಲೆಯ ಮೇಲೆ ತನ್ನ ಕೈಯಲ್ಲಿದ್ದ ಏಕೈಕ ಆಯುಧ ಒನಕೆಯನ್ನು ಬಳಸಿ ಹೊಡೆದು ಹೆಣವನ್ನು ಹೊರಗೆಳೆದು ಮುಂದಿನ ಸೈನಿಕನಿಗಾಗಿ ಕಾದಳು. ಈ ರೀತಿಯಾಗಿ ಓಬವ್ವ ಹೈದರ್ ಅಲಿಯ ಹಲವಾರು ಸೈನಿಕರ ಬಲಿ ಪಡೆದಳು. ಓಬವ್ವಳ ಸಮಯೋಚಿತ ಚಿಂತನೆ, ವೀರಾವೇಶದ ಹೋರಾಟದಿಂದಾಗಿ ಶತ್ರು ಸೈನಿಕರು ನಿರೀಕ್ಷಿತ ಯಶಸ್ಸು ಪಡೆಯಲು ವಿಫಲರಾದರು. ಆದಾಗ್ಯೂ ಅಂತಿಮವಾಗಿ ಶತ್ರು ಸೈನಿಕರು ಕೋಟೆಯೊಳಗೆ ನುಸುಳಲು ಯಶಸ್ವಿಯಾದರು ಮತ್ತು ಓಬವ್ವ ಕೊನೆಯ ತನಕ ಹೋರಾಡಿ ಮತ್ತು ಆಕೆಗೆ ಒನಕೆ ಓಬವ್ವ ಎಂಬ ಹೆಸರು ತಂದುಕೊಟ್ಟಿತು. ಶತ್ರು ಸೈನಿಕರು ಪ್ರವೇಶಿಸಿದ ರಂಧ್ರಕ್ಕೆ "ಒನಕೆ ಓಬವ್ವನ ಕಿಂಡಿ' ಎಂದು ಹೆಸರಿಸಲಾಗಿದೆ. ಆಕೆಗೆ ಒನಕೆ ಓಬವ್ವ ಎಂಬ ಹೆಸರು ತಂದುಕೊಟ್ಟಿತು. ಶತ್ರು ಸೈನಿಕರು ಪ್ರವೇಶಿಸಿದ ರಂಧ್ರಕ್ಕೆ "ಒನಕೆ ಓಬವ್ವನ ಕಿಂಡಿ' ಎಂದು ಹೆಸರಿಸಲಾಗಿದೆ.
No comments:
Post a Comment