ಬ್ಯಾಂಕಿನ ಉಳಿತಾಯ ಖಾತೆಯಲ್ಲಿರುವ ಹಣಕ್ಕೆ ಪ್ರತಿ ದಿನದ ಬಡ್ಡಿ ಲೆಕ್ಕ ಹಾಕಿ ಮೂರು ತಿಂಗಳಿಗೊಮ್ಮೆ ಒಟ್ಟು ಬಡ್ಡಿಯನ್ನು ಖಾತೆಗೆ ಸೇರಿಸಲಾಗುತ್ತದೆ.
ದಿನದ ಬಡ್ಡಿ ಲೆಕ್ಕ ಹಾಕಲು ಆ ದಿನದ ಅತಿ ಕಡಿಮೆ ಬ್ಯಾಲನ್ಸ್ ಅನ್ನು ಪರಿಗಣಿಸಲಾಗುತ್ತದೆ.
ಒಂದು ದಿನದ ಬಡ್ಡಿ ದರ =
(ವಾರ್ಷಿಕ ದರ) / (ವರ್ಷದ ದಿನಗಳ ಸಂಖ್ಯೆ).
ವಾರ್ಷಿಕ ದರ 2.70% ಇದ್ದರೆ
ಇಸವಿ 2020ರ ಹಾಗೆ ಲೀಪ್ ವರ್ಷದಲ್ಲಿ
ಒಂದು ದಿನದ ಬಡ್ಡಿ ದರ = (2.7/100)/366.
ಇತರ ವರ್ಷಗಳಲ್ಲಿ
ಒಂದು ದಿನದ ಬಡ್ಡಿ ದರ = (2.7/100)/365.
ಉದಾಹರಣೆಗೆ ಯಾವುದೋ ಒಂದು ದಿನದ ಪ್ರಾರಂಭದಲ್ಲಿ 62000 ರೂ ಇದೆ ಅನ್ನಿ.
ಆ ದಿನದಲ್ಲಿ 8000 ರೂ ಡ್ರಾ ಮಾಡಿದರೆ ಆಗುವ ಬ್ಯಾಲನ್ಸ್
62000–8000=54000.
ನಂತರ ಅದೇ ದಿನದಲ್ಲಿ 15000 ರೂ ಜಮಾ ಮಾಡಿದರೆ ಆಗುವ ಬ್ಯಾಲನ್ಸ್ 54000+15000=69000.
ಆ ದಿನದ ಕನಿಷ್ಠ ಬ್ಯಾಲನ್ಸ್ 54000.
ಆ ದಿನದ ಬಡ್ಡಿ 54000*(2.7/100)/366 = 3.98 ರೂ.
ಈ ರೀತಿ ಮೂರು ತಿಂಗಳ ಪ್ರತಿ ದಿನ ಲೆಕ್ಕ ಹಾಕಿ ಬಂದ ಒಟ್ಟು ಬಡ್ಡಿಯನ್ನು ಮೂರು ತಿಂಗಳ ಕೊನೆಯ ದಿನ ಖಾತೆಗೆ ಸೇರಿಸುತ್ತಾರೆ. ಅಂದರೆ ಖಾತೆಯ ಹಣಕ್ಕೆ ತ್ರೈಮಾಸಿಕ ಚಕ್ರಬಡ್ಡಿ ದೊರೆಯುತ್ತದೆ.
No comments:
Post a Comment