ಭಾವಾರ್ಥ ರಾಮಾಯಣವನ್ನು ಬರೆದವರು ಯಾರು?

SANTOSH KULKARNI
By -
0

 ಮರಾಠಿ ಭಾಷೆ ಬಹು ಸಮೃದ್ಧ ಸಾಹಿತ್ಯ ಹೊಂದಿರುವ ಭಾಷೆ ಎಂದರೆ ತಪ್ಪಾ ಗಲಾರದು. NSD ಗೆ ಮರಾಠಿ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಮರಾಠಿಯಲ್ಲಿ ತಳೆದಂತಹ ಆಧುನಿಕ ಪರಿಕಲ್ಪನೆಯ ನಾಟಕಗಳು ಅತ್ಯ ಮೂಲ್ಯ ಎಂದು ನನಗನ್ನಿಸಿದೆ. ಉದಾ: ನಾನು ನೋಡಿದ ಗಾಂಧಿ ವಿರುದ್ಧ ಗಾಂಧಿ..ಹೀಗೆ ಅಲ್ಲಿಯ ಸಾಹಿತಿಗಳು ಬಹಳ ಮುಂದಾಲೋಚನೆ ಹೊಂದಿರುವಂತಹವರು ಎಂದರೆ ತಪ್ಪಾಗಲಾರದು.

ಭಕ್ತಿ ಚಳುವಳಿಯಲ್ಲಿ ಮರಾಠಿ ಸಾಹಿತ್ಯ ಹುಲುಸಾಗಿ ಬೆಳೆಯಿತು.

16ನೇ ಶತಮಾನದಲ್ಲಿ 1533 -1599=66 ವರ್ಷಗಳ ಕಾಲ ಬದುಕಿದ್ದ ಸಂತ ಏಕನಾಥರು - ಭಕ್ತಿಚಳುವಳಿಯ ಕಾಲದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಎಂದರೆ ತಪ್ಪಾಗಲಾರದು. ತಬ್ಬಲಿಯಾಗಿದ್ದೂ ಕೂಡ ಅಜ್ಜ-ಮಾವ- ನಾಮ ದೇವರು ಹಾಕಿಕೊಟ್ಟ ದಾರಿಯಲ್ಲಿ ಜ್ಞಾನ ದೇವರು ಹಾಕಿಕೊಟ್ಟ ಸಂಸ್ಕಾರದಲ್ಲಿ ಬೆಳೆದ ಇವರು- ಅಲೌ ಕಿಕ ಆಧ್ಯಾತ್ಮದ ಹಾದಿಯಲ್ಲಿ ಬೆಳೆದು ನಿಂತವರು .

ಸಂಸ್ಕೃತದ -ಭಾಗವತ ಪುರಾಣವನ್ನು "ಏಕನಾಥಿ ಭಾಗವಕ ಪುರಾಣ" ಎ೦ದು ರೂಪಾಂತರಿಸಿಬರೆದವರು.

ರಾಮಾಯಣವನ್ನು - ೨೫, ೫೦೦ ಶ್ಲೋಕಗಳುಳ್ಳ ರಾಮಾ ಯಣದ ರೂಪಾಂತರವಾಗಿ " ಭಾವಾರ್ಥರಾಮಾಯಣ" ಎ೦ದು ರೂಪಾಂತರಿಸಿ ಬರೆದವರು.

ಭಾಗವತವನ್ನು ಆಧರಿಸಿ ರುಕ್ಮಿಣಿ ಸ್ವಯಂವರ ಎಂದು ಬರೆದವರು.

ಹಸ್ತ ಮೂಲಕ -ಶಂಕರಾಚಾರ್ಯರ ಶ್ಲೋಕಗಳನ್ನು ಆಧರಿಸಿ ಅಭಂಗ ಶೈಲಿಯಲ್ಲಿ ಬರೆದವರು.

ಜ್ಞಾನೇಶ್ವರಿ - ಎಂಬ ಪ್ರಖ್ಯಾತವಾದ ಕಾವ್ಯ ಸಂಶೋಧಿಸಿ ಬರೆದವರಾಗಿದ್ದಾರೆ.

ಭಾವಾರ್ಥ ದೀಪಿಕ - ಎನ್ನುವುದು ಅವರ ಪ್ರಖ್ಯಾತ ಕೃತಿಯಾಗಿದೆ.

Post a Comment

0Comments

Please Select Embedded Mode To show the Comment System.*