Thursday, March 16, 2023

ಕನ್ನಡ ಸಾಹಿತ್ಯದಲ್ಲಿ ಹಳೆಯ ಕವಿಗಳು ಯಾರು? ಅವರ ಉತ್ತಮ ಕವಿತೆಗಳು ಯಾವುವು?

 ಕನ್ನಡ ಸಾಹಿತ್ಯದಲ್ಲಿ ಹಳೆಯ ಕವಿಗಳು ಮತ್ತು ಅವರ ಕಾವ್ಯಗಳು ಇಂತಿವೆ:

  • ಶ್ರೀ ವಿಜಯನ ಕವಿರಾಜಮಾರ್ಗ ಕನ್ನಡದ ಮೊದಲ ಕೃತಿ. ಮುಖ್ಯವಾಗಿ ಇದೊಂದು ಲಕ್ಷಣ ಗ್ರಂಥ.
  • ಗುಣವರ್ಮನ ಶೂದ್ರಕ ಮತ್ತು ಹರಿವಂಶ ಇವುಗಳ ಬಗ್ಗೆ ಮಾಹಿತಿ ಇದೆ ಆದರೆ ಕೃತಿಗಳು ದೊರೆತಿಲ್ಲ.
  • ಶಿವಕೋಟ್ಯಾಚಾರ್ಯರ ವಡ್ಡಾರಾಧನೆ.
  • ಆದಿಕವಿ ಪಂಪನ ಆದಿಪುರಾಣ ಮತ್ತು ಪಂಪಭಾರತ ಅಥವಾ ವಿಕ್ರಮಾರ್ಜುನ ವಿಜಯ.
  • ಪೊನ್ನನ ಶಾಂತಿಪುರಾಣ , ಭುವನೈಕ ರಾಮಾಭ್ಯುದಯ (ದೊರೆತಿಲ್ಲ) , ಜಿನಾಕ್ಷರಮಾಲೆ, ಗತಪ್ರತ್ಯಾಗತ (ದೊರೆತಿಲ್ಲ) .
  • ರನ್ನನ ಅಜಿತನಾಥಪುರಾಣ, ಗದಾಯುದ್ಧ ಅಥವಾ ಸಾಹಸಭೀಮ ವಿಜಯ , ಪರಶುರಾಮ ಚರಿತ ಮತ್ತು ಚಕ್ರೇಶ್ವರ ಚರಿತ ಕೃತಿಗಳು ದೊರೆತಿಲ್ಲ.
  • ಎರಡನೇ ನಾಗವರ್ಮ ವರ್ಧಮಾನ ಪುರಾಣ.
  • ಶಾಂತಿನಾಥನ ಸುಕುಮಾರ ಚರಿತೆ.
  • ನಾಗಚಂದ್ರನ ಮಲ್ಲಿನಾಥ ಪುರಾಣ ಮತ್ತು ಪಂಪರಾಮಾಯಣ.
  • ನಯಸೇನನ ಧರ್ಮಾಮೃತ.
  • ಕರ್ಣಪಾರ್ಯ ನೇಮಿನಾಥ ಪುರಾಣ.
  • ಬ್ರಹ್ಮಶಿವ ಚಂದ್ರಪ್ರಭ ಪುರಾಣ.
  • ಜನ್ನ ಯಶೋಧರ ಚರಿತ ಮತ್ತು ಅನಂತನಾಥ ಪುರಾಣ.
  • ಆಂಡಯ್ಯನ ಕಬ್ಬಿಗರ ಕಾವ.
  • ಮೊದಲನೆಯ ನಾಗವರ್ಮ ಕರ್ನಾಟಕ ಕಾದಂಬರಿ.
  • ರುದ್ರ ಭಟ್ಟರ ಜಗನ್ನಾಥ ವಿಜಯ ಮತ್ತು ರಸ ಕಲಿಕೆ.
  • ಚಿಕ್ಕುಪಾಧ್ಯಾಯ ವಿಷ್ಣು ಪುರಾಣ, ರುಕ್ಮಾಂಗದ ಚರಿತ್ರೆ, ದಿವ್ಯ ಸೂರಿ ಚರಿತೆ, ಕಮಲಾ ಚಲ ಮಹಾತ್ಮ, ಅರ್ಥ ಪಂಚಕ , ತತ್ವ ಶ್ರಯ ಇತ್ಯಾದಿ.
  • ಹರಿಹರನ ಗಿರಿಜಾ ಕಲ್ಯಾಣ .
  • ಸುರಂಗ ನ ತ್ರಿಷಷ್ಠಿ ಪುರಾತನ ಚರಿತ್ರಂ.
  • ಷಡಕ್ಷರ ದೇವರ ರಾಜಶೇಖರ ವಿಳಾಸ ಮತ್ತು ಬಸವರಾಜ ವಿಳಾಸ, ಶಬರಶಂಕರ ವಿಳಾಸ.
  • ರಾಘವಾಂಕನ ಹರಿಶ್ಚಂದ್ರ ಕಾವ್ಯ.
  • ಕುಮಾರವ್ಯಾಸನ ಕುಮಾರವ್ಯಾಸ ಭಾರತ .
  • ಚಾಮರಸರ ಪ್ರಭುಲಿಂಗಲೀಲೆ.
  • ಭಾಸ್ಕರನ ಜೀವಂಧರ ಚರಿತೆ.
  • ಸಿಂಗಿರಾಜ ನ ಅಮಲ ಬಸವ ಚಾರಿತ್ರ.
  • ಕುಮಾರ ವಾಲ್ಮೀಕಿಯ ತೊರವೆ ರಾಮಾಯಣ.
  • ಮೂರನೇ ಮಂಗರಸನ ಜಯನೃಪಕಾವ್ಯ, ಸಂಯುಕ್ತ ಕಮುದಿ, ಶ್ರೀಪಾಲ ಚರಿತೆ, ಸೂಪ ಶಾಸ್ತ್ರ ಇತ್ಯಾದಿ.
  • ಲಕ್ಷ್ಮೀಶನ ಜೈಮಿನಿ ಭಾರತ.

ಆಧಾರಗಳು: ಚಂಪು ಕವಿಗಳು- ಪಿ ವಿ ನಾರಾಯಣ ಮತ್ತು ಷಟ್ಪದಿ ಸಾಹಿತ್ಯ ಕೆ ಮರುಳಸಿದ್ದಪ್ಪ.

No comments:

ಚರ್ಮದ ತುರಿಕೆ? ಹಾಗಾದರೆ ಈ 6 ಮನೆಮದ್ದುಗಳನ್ನು ಪ್ರಯತ್ನಿಸಿ

  ಚರ್ಮದ ತುರಿಕೆ ತುಂಬಾ ಕಿರಿಕಿರಿ ಉಂಟುಮಾಡುತ್ತದೆ. ನೀವು ಹೆಚ್ಚು ಕೆರೆದುಕೊಂಡರೆ ಮಾಡಿದರೆ, ಅದು ಹೆಚ್ಚು ತುರಿಕೆಯಾಗುತ್ತದೆ. ಅತಿಯಾದ ಕೆರೆಯುವಿಕೆ ಚರ್ಮವನ್ನು ಹಾನಿಗ...