ಅನೇಕ ವೈಶಿಷ್ಟ್ಯಗಳಿಗೆ ಪ್ರಸಿದ್ಧವಾದ ಎಲ್ಲೋರದ ಗುಹೆಗಳು ಶಿಲ್ಪಕಲಾ ಪ್ರಿಯರನ್ನು ಕೈಬೀಸಿ ಕರೆಯುತ್ತವೆ. ಎಲ್ಲೋರ ಗುಹೆಗಳು ವಿಶ್ವ ಪರಂಪರೆಯ ಸಂಪತ್ತು ಆಗಿ ಗುರುತಿಸಲ್ಪಟ್ಟಿದೆ[೩]. ಎಲ್ಲೋರ ಭಾರತೀಯ ರಮಣೀಯ ಶಿಲ್ಪಗಳನ್ನು ಪ್ರತಿಬಿಂಬಿಸುತ್ತದೆ. ಜೈನ,ಬೌದ್ಧ, ಹಿಂದೂ ಗುಹಾದೇಗುಲಗಳ ಸಮೂಹವೇ ಅಲ್ಲಿದ್ದರೂ ಅಪೂರ್ವವಾದ ಕೆತ್ತನೆಯಿಂದ ಮನದಲ್ಲಿ ಚಿರಕಾಲ ಉಳಿಯುವಂತಹ ಶಿಲ್ಪಕಲೆಯನ್ನು ಒಳಗೊಂಡಿರುವ ಕೈಲಾಸನಾಥ ದೇವಾಲಯ.
ಈಶಾನ್ಯದಿಂದ ಕೈಲಾಸನಾಥ ದೇವಾಲಯದ ನೋಟ.
ನೈರುತ್ಯದಿಂದ ಕೈಲಾಸನಾಥ ದೇವಾಲಯದ ನೋಟ.
ಅಪರೂಪದ ವಾಸ್ತುರಚನೆಯನ್ನು ಹೊಂದಿರುವ ಅದು ದೂರದಿಂದ ನೋಡಿದರೆ ಎರಕಹೊಯ್ದ ಅಚ್ಚಿನಂತೆ ಕಂಗೊಳಿಸುತ್ತದೆ. ಮೇಲಿನಿಂದ ನೋಡಿದರೆ ಇದು ಒಂದು ಎಕ್ಸ್ ಸಿಂಬಲ್ ಆಗಿ ಕಾಣಿಸುತ್ತದೆ. ಇದು ಕೈಲಾಸ ಪರ್ವತಕ್ಕೆ ಪ್ರತೀಕವಾಗಿ ಭಾವಿಸುತ್ತಾರೆ. ಇಲ್ಲಿ ಪರಮಶಿವನ ದೇವಾಲಯವನ್ನು ಒಂದೇ ಕಲ್ಲಿನಲ್ಲಿಯೇ ಕೆತ್ತನೆ ಮಾಡಿರುವುದು ಸೊಜಿಗದಂತೆ ಕಾಣುತ್ತದೆ.
ಯಾವುದೇ ದೇವಾಲಯವನ್ನು ಸಾಮಾನ್ಯವಾಗಿ ನೆಲದಿಂದ ಬುನಾದಿ ಪ್ರಾರಂಭಿಸುತ್ತಾರೆ. ಆದರೆ ಈ ದೇವಾಲಯವನ್ನು ಮಾತ್ರ ಶಿಖರದಿಂದಾಗಿ ಪ್ರಾರಂಭಿಸಿದ್ದಾರೆ. ಜಗತ್ತಿನಲ್ಲಿಯೇ ಅತಿ ದೊಡ್ಡ ಏಕಶಿಲಾಭವನ ಎಂಬ ಕೀರ್ತಿ ಪಡೆದಿರುವ ಇದನ್ನು ಒಂದೇ ಬಂಡೆಕಲ್ಲಿನಲ್ಲಿ ಕೆತ್ತಿ ನಿರ್ಮಿಸಲಾಗಿದೆ.
ಪ್ರಪಂಚದಲ್ಲಿನ ಏಕ ಶಿಲದ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡದಾದ ಶಿವಾಲಯವೆಂದರೆ ಕೈಲಾಸ ದೇವಾಲಯ. ಇದನ್ನು 8 ನೇ ಶತಮಾನದಲ್ಲಿ ನಿರ್ಮಾಣ ಮಾಡಿರಬಹುದು ಎಂದು ಭಾವಿಸುತ್ತಾರೆ. ರಾಷ್ಟ್ರಕೂಟ ದೊರೆ 1ನೇ ಕೃಷ್ಣ ಅಕಾಲವರ್ಷ ಶುಭತುಂಗ ಕೃಷ್ಣನಿಂದ ಈ ದೇವಾಲಯ ನಿರ್ಮಾಣವಾಗಿದೆ ಎಂಬ ಮಾತು[೧].
ಈ ದೇವಾಲಯವು ಅಥೆನ್ಸ್‌ನಲ್ಲಿನ ಪಾರ್ಥೆನಾನ್‌ಗಿಂತ ಎರಡು ಪಟ್ಟು ಹೆಚ್ಚು.
ಈ ದೇವಾಲಯದ ಸೃಷ್ಟಿ ಅತ್ಯದ್ಭುತವಾದುದು. ಮೇಲಿನಿಂದ ಕೆಳಗಿನವರೆಗೆ ಅಪೂರ್ವವಾದ ಕೆತ್ತನೆಯಿಂದ ಕಂಗೊಳಿಸುತ್ತಿವೆ ಈ ಗುಹೆಗಳು. ಈ ದೇವಾಲಯವು ಅಂದಿನ ಶಿಲ್ಪಕಲಾ ನೈಪುಣ್ಯ ನಮ್ಮ ಮುಂದೆ ನಿರ್ದಶನವಾಗಿ ನಿಂತಿದೆ.ವಾಸ್ತುಶಿಲ್ಪದ ಇತಿಹಾಸದಲ್ಲಿ ಅತ್ಯಂತ ವಿಸ್ಮಯಕಾರಿ ಕಟ್ಟಡಗಳಲ್ಲಿ ಒಂದಾಗಿರುವ ಕೈಲಾಸನಾಥ ದೇವಸ್ಥಾನ ಸುಮಾರು 60 ಅಡಿ ಎತ್ತರ ಮತ್ತು 200 ಅಡಿ ಅಗಲವನ್ನು ಹೊಂದಿದೆ. ಈ ಏಕಶಿಲೆಯ ರಚನೆಯನ್ನು ನಿರ್ಮಿಸಲು ಬಳಸಲಾದ ಬಂಡೆ ಸುಮಾರು 4,00,000 ಟನ್‌ಗಳಷ್ಟು ತೂಕವನ್ನು ಹೊಂದಿತ್ತು ಎಂದು ಅಂದಾಜಿಸಲಾಗಿದೆ.
34 ಗುಹಾಂತರ ದೇವಾಲಯಗಳಲ್ಲಿ 16ನೇ ಗುಹೆಯಾದ ಈ ದೇವಾಲಯದ ಉದ್ದ 276 ಅಡಿಗಳು. ಅಗಲ 154 ಅಡಿಗಳು ಮತ್ತು ಎತ್ತರ 100 ಅಡಿ. ದೇವಾಲಯದ ಮಧ್ಯದಲ್ಲಿ ಗರ್ಭಗೃಹ, ಪಶ್ಚಿಮದಲ್ಲಿ ಮಹಾದ್ವಾರ, ನಂದಿ ಮಂಟಪ, ಮತ್ತು ಅಂಗಳವನ್ನು ಹೊಂದಿದ್ದು ಅದು ಸನ್ಯಾಸಿ ಮಂಟಪಗಳನ್ನೂ ಹೊಂದಿದೆ[೧].
ಈ ದೇವಾಲಯವು ಎರಡು ಅಂತಸ್ತುಗಳನ್ನು ಹೊಂದಿದೆ. ದೇವಾಲಯದಲ್ಲಿ ಪೀಠ ಮತ್ತು ಆನೆ ಕೆತ್ತಲಾಗಿದ್ದು, ಅದರ ಕುಸುರಿ ಕಲೆಯ ಕೆತ್ತನೆ ಅದ್ಭುತವಾಗಿದೆ. ಈ ಆನೆಯ ಬಳಿ ಮನುಷ್ಯ ನಿಂತರೆ ಬಹಳ ಕುಬ್ಜನಾಗಿ ಕಾಣುತ್ತಾನೆ! ಇಲ್ಲಿನ ಶಿಲ್ಪಗಳ ಪಟ್ಟಿಯಲ್ಲಿ ದಶಾವತಾರ, ಭೈರವನೊಂದಿಗೆ ಕೈಲಾಸ ಪರ್ವತವನ್ನು ಎತ್ತಿ ಹಿಡಿದ ರಾವಣನ ವಿಗ್ರಹ. ಇದರಲ್ಲಿ ಹತ್ತು ತಲೆಗಳೂ ಒಂದೇ ತಲೆಯಂತೆ ರಚಿತವಾಗಿದೆ. ವೀರಮಂಡಿಯಲ್ಲಿ ಕುಳಿತಿರುವ ಭಂಗಿ ಭವ್ಯವಾಗಿದೆ. ನಟರಾಜ, ವಿಷ್ಣು,ಪಾರ್ವತಿಯರ ಭಂಗಿಗಳೂ ಸಹ ಅತ್ಯಂತ ಶ್ರೇಷ್ಠ ಕಲಾಕೃತಿಗಳಾಗಿ ಮೂಡಿವೆ.ಕೃಷ್ಣನ ಬಾಲ್ಯದ 12 ಘಟನೆಗಳ ಚಿತ್ರಣವಿರುವ ಶಿಲ್ಪಗಳನ್ನೂ ಇಲ್ಲಿ ನೋಡಬಹುದು.
ಮೊಘಲ್ ದೊರೆ ಔರಂಗಜೇಬ ಈ ದೇವಾಲಯವನ್ನು ಒಡೆಯಲು ತನ್ನ ಸಾಮರ್ಥ್ಯವನ್ನು ಮೀರಿ ಪ್ರಯತ್ನಿಸಿದನಂತೇ. ದೇವಾಲಯವನ್ನು ಸಂಪೂರ್ಣವಾಗಿ ನಾಶ ಮಾಡಲು ಆತ ಕಳಿಸಿದ್ದು ನೂರು ಇನ್ನೂರು ಸೈನಿಕರನ್ನಲ್ಲ, ಸಾವಿರಾರು ಶಸ್ತ್ರ ಸಜ್ಜಿತ ಸೈನಿಕರನ್ನು ಅವರಷ್ಟೂ ಮಂದಿ ಸತತ 3 ವರ್ಷ ಇದನ್ನು ಒಡೆಯಲು ಪ್ರಯತ್ನಿಸಿದರೂ ಆಗಲೇ ಇಲ್ಲ[೧].
ಮಳೆಗಾಲದಲ್ಲಿ ದೇವಾಲಯದ ಆವರಣದಲ್ಲಿ ಜಲಪಾತದಂತೆ ಮಳೆ ಸುರಿಯುವುದನ್ನು ನೋಡಲು ಎರಡು ಕಣ್ಣು ಸಾಲದು. ದೇವಾಲಯದ ಗೋಪುರ ಒಂದು ಹೆಲಿಪ್ಯಾಡ್‌ನಷ್ಟು ವಿಸ್ತೀರ್ಣವನ್ನು ಹೊಂದಿದೆ ಎಂದರೆ ಅದರ ಬೃಹದಾಕಾರ ಕಲ್ಪನೆಗೆ ಬಂದೇ ಬರುತ್ತದೆ.
ಈ ದೇವಾಲಯವು ವಿಶ್ವದ ಅತ್ಯಂತ ನಿಗೂಢ ರಚನೆಗಳಲ್ಲಿ ಒಂದಾಗಿದೆ ಮತ್ತು ಇದು ಇನ್ನೂ ರಹಸ್ಯವಾಗಿಯೇ ಉಳಿದಿದೆ.
ಆಧುನಿಕ ತಂತ್ರಜ್ಞಾನವನ್ನು ಬಳಸುವುದರ ಮೂಲಕವೂ ಅಂತಹ ಸಾಧನೆಯನ್ನು ಪುನರಾವರ್ತಿಸುವುದು ಅಸಾಧ್ಯ ಆದರೆ ಪ್ರಾಚೀನ ಹಿಂದೂ ಋಷಿಗಳು ತಮ್ಮ ಆಧ್ಯಾತ್ಮಿಕ ಶಕ್ತಿಗಳಿಂದ, ಭಗವಂತನ ಅಂತ್ಯವಿಲ್ಲದ ದೈವಿಕ ಆಶೀರ್ವಾದದೊಂದಿಗೆ, ನುರಿತ ಮತ್ತು ಸಮರ್ಪಿತ ಕಾರ್ಮಿಕರಿಗೆ ಚುರುಕಾದ ನಿರ್ದೇಶನ ಮಾಡಿದ್ದರಿಂದ ಸಾಧ್ಯವಾಗಿಸಿತು.
ಇದನ್ನು ಅಧಿಕೃತವಾಗಿ ವಿಶ್ವದ ಅತ್ಯುತ್ತಮ ಅದ್ಭುತಗಳಲ್ಲಿ ಒಂದೆಂದು ಘೋಷಿಸಲಿಲ್ಲಾವಾಗಿದ್ದರೂ, ನನಗೆ ಇದು ವಿಶ್ವದ ಅದ್ಭುತಗಳಲ್ಲಿ ಒಂದಾಗಿದೆ.
No comments:
Post a Comment