ಜಮ್ಮು ಮತ್ತು ಕಾಶ್ಮೀರದಲ್ಲಿರುವ ಚಿನಾಬ್ ನದಿಗೆ ಇತ್ತೀಚಿಗೆ ನಿರ್ಮಿಸಲಾದ ಸೇತುವೆ ಯು ಜಗತ್ತಿನಲ್ಲಿಯೇ ಅತ್ಯಂತ ಎತ್ತರವಾದ ರೇಲ್ವೆ ಸೇತುವೆ ಎಂದು ಪ್ರಸಿದ್ಧವಾಗಿದೆ.ಇದು ಭಾರತೀಯರೆಲ್ಲರೂ ಹೆಮ್ಮೆ ಪಡಬೇಕಾದ ವಿಷಯವೇ.
…ಇದು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಬಕ್ಕಲ್ ಮತ್ತು ಕೌರಿ ನಡುವೆ ನಿರ್ಮಿಸಲಾದ ಕಾಂಕ್ರೀಟ್ ಕಮಾನು ಸೇತುವೆಯಾಗಿದೆ.
…ಈ ಸೇತುವೆಯು 1315 ಮೀ ಉದ್ದವಾ ಗಿದ್ದು ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರದಲ್ಲಿದೆ.
ಗಂಟೆಗೆ 266 ಕಿಮೀ ವೇಗದಷ್ಟು ಗಾಳಿಯ ಒತ್ತಡವನ್ನು ಹಾಗು ಹೆಚ್ಚಿನ ತೀವ್ರತೆಯ (ವಲಯ-V) ಭೂಕಂಪನದ ಅಲೆಗಳನ್ನು ತಡೆದುಕೊಳ್ಳುವಂತೆ ಇದನ್ನು ವಿನ್ಯಾಸ ಗೊಳಿಸಲಾಗಿದೆ.
ಈ ಸೇತುವೆಯನ್ನು ನಿರ್ಮಿಸಲು 1,486 ಕೋಟಿ ರೂಪಾಯಿಗಳ ನಿಧಿಯನ್ನು ಬಳಸ ಲಾಯಿತು.
…ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (USBRL) ಯೋಜನೆಯ ಮುಖ್ಯ ಆಡಳಿತಾಧಿಕಾರಿ ಸುರೇಂದರ್ ಮಾಹಿ ಅವರ ಪ್ರಕಾರ, IIT-ರೂರ್ಕಿ, IIT-ದೆಹಲಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸಸ್ - ಬೆಂಗಳೂರು, DRDO, ನ್ಯಾಷ ನಲ್ ರಿಮೋಟ್ ಸೆನ್ಸಿಂಗ್ ಏಜೆನ್ಸಿ, GSI ಮತ್ತು ಇತರ ಏಜೆನ್ಸಿಗಳು ಸೇರಿದಂತೆ ದೇಶ ದ ಹಲವಾರು ಪ್ರತಿಷ್ಠಿತ ವೈಜ್ಞಾನಿಕ ಮತ್ತು ತಂತ್ರಜ್ಞಾನ ಸಂಸ್ಥೆಗಳ ತಾಂತ್ರಿಕ ಬೆಂಬಲ ದಿಂದ ಈ ಯೋಜನೆ ಯಶಸ್ವಿ ಯಾಯಿತು.
No comments:
Post a Comment