ಜ್ಯೂಸ್ ಕುಡಿಯಲು ಹೋದರೆ ಹೆಚ್ಚಾಗಿ ಜನರು ಇಷ್ಟಪಡುವಂತಹ ಜ್ಯೂಸ್ ಎಂದರೆ ಅದು ಚಿಕ್ಕು ಅಥವಾ ಸಪೋಟ ಜ್ಯೂಸ್ ಎಂದು ಹೇಳಬಹುದು. ಯಾಕೆಂದರೆ ಈ ಹಣ್ಣು ತುಂಬಾ ರುಚಿಕರ ಹಾಗೂ ಸಿಹಿ ಹೊಂದಿರುವುದು. ಇದರಿಂದಾಗಿ ಹೆಚ್ಚಿನವರಿಗೆ ಇದು ಇಷ್ಟವಾಗುತ್ತದೆ. ಸಪೋತಗೆ ವಿವಿಧ ರೀತಿಯ ಹೆಸರುಗಳು ಕೂಡ ಇದೆ. ಇದನ್ನು ಚಿಕ್ಕ ಚಿಕ್ಕೂ ಲಮೂತ್ ಸಪೊಡಿಲ್ಲಾ ನೋಸ್ ಬೆಗ್ರಿ ಮತ್ತು ಸಪೋಟಿ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ.
ಭಾರತದಲ್ಲಿ ಸಪೋಟ ಹಣ್ಣನ್ನು ಹೆಚ್ಚಾಗಿ ಕರ್ನಾಟಕ ಗುಜರಾತ್, ಮಹಾರಾಷ್ಟ್ರ ಪಶ್ಚಿಮ ಬಂಗಾಳ ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಬೆಳೆಯುತ್ತಾರೆ. ಸಪೋತ ಹಣ್ಣಿನ ಜ್ಯೂಸ್, ಜಾಮ್, ಸ್ಕೂಥಿ ಸಿಹಿ ತಿಂಡಿಗಳು ಇತ್ಯಾದಿಗಳನ್ನು ತಯಾರಿಸುವರು.
ಹಾಗಾದರೆ ಸಪೋತ ಹಣ್ಣಿನಲ್ಲಿ ಯಾವ ಪೋಷಕಾಂಶಗಳು ಇವೆ ಎಂದು ತಿಳಿಯಿರಿ 200 ಗ್ರಾಂ ಸಪೋಟ ದಲ್ಲಿ 3 ಕ್ಯಾಲರಿ ಇದೆ. ಆಹಾರದ ನಾರಿನಾಂಶವನ್ನು ಹೊಂದಿರುವಂತಹ ಇದು ವಿರೇಚಕ ಗುಣವನ್ನು ಹೊಂದಿದೆ.
ಈ ಹಣ್ಣಿನಲ್ಲಿ ವಿಟಮಿನ್ ಸಿ, ಎ ನಿಯಾಸಿನ್, ಫಾಲಟೆ ಮತ್ತು ಖನಿಜಾಂಶ ಗಳಾಗಿರುವಂತಹ ಕಬ್ಬಿನಾಂಶ, ಪೊಟಾಶಿಯಂ ಮತ್ತು ತಾಮ್ರವಿದೆ. ಆಂಟಿಆಕ್ಸಿಡೆಂಟ್, ಉರಿಯೂತ ಶಮನಕಾರಿ, ವೈರಲ್ ವಿರೋಧಿ, ಬ್ಯಾಕ್ಟಿರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳು ಕೂಡ ಇದರಲ್ಲಿ ಇದೆ.ಸಪೋತದ ಆರೋಗ್ಯ ಲಾಭಗಳು
ಹೊಟ್ಟೆಯ ಆರೋಗ್ಯ ಸುಧಾರಣೆ
ಸಪೋಟ ಹಣ್ಣಿನಲ್ಲಿ ಸಸ್ಯಜನ್ಯವಾಗಿರುವಂತಹ ಪಾಲಿಪೆನಾಲ್ ಇದ್ದು ಹೊಟ್ಟೆಯಲ್ಲಿ ಇದು ಆಮ್ಲದ ಸ್ರವಿಸುವಿಕೆಯನ್ನು ತಟಸ್ಥಗೊಳಿಸುವುದು. ಪರಾವಲಂಬಿ ವಿರೋಧಿ, ವೈರಲ್ ವಿರೋಧಿ, ಉರಿಯೂತ ಶಮನಕಾರಿ ಮತ್ತು ಬ್ಯಾಕ್ಟಿರಿಯಾ ವಿರೋಧಿ ಗುಣ ಹೊಂದಿರುವಂತಹ ಸಪೋತ ಹಣ್ಣು ಕಿರಿಕಿರಿ ಉಂಟು ಮಾಡುವ ಹೊಟ್ಟೆಗೆ ಶಮನ ನೀಡುವುದು.
ಗ್ಯಾಸ್ಟ್ರಿಕ್ ಹಾಗೂ ಹೊಟ್ಟೆಯ ಇತರ ಸಮಸ್ಯೆಗಳನ್ನು ಇದು ನಿವಾರಿಸುವುದು ನಾರಿನಾಂಶವು ಅಧಿಕವಾಗಿ ಇರುವ ಕಾರಣದಿಂದಾಗಿ ಜೀರ್ಣಕ್ರಿಯೆಗೆ ಇದು ಸಹಕಾರಿ ಮತ್ತು ಮಲಬದ್ಧತೆ ಇರುವವರಿಗೆ ವಿರೇಚಕವಾಗಿ ವರ್ತಿಸುವುದು. ಇದು ಹೊಟ್ಟೆಯ ಸೋಂಕನ್ನು ತಗ್ಗಿಸುವುದು.
ಚಿಕ್ಕುವಿನಲ್ಲಿ ಇರುವಂತಹ ಕೆಲವೊಂದು ಖನಿಜಾಂಶಗಳಾಗಿರುವ ಕ್ಯಾಲ್ಸಿಯಂ, ಪೋಸ್ಪರಸ್, ತಾಮ್ರ ಮತ್ತು ಕಬ್ಬಿನಾಂಶವು ಮೂಳೆಯನ್ನು ಬಲಗೊಳಿಸುವುದು ನಿಯಮಿತವಾಗಿ ಚಿಕ್ಕು ತಿಂದರೆ ಅದರಿಂದ ಮೂಳೆಗಳ ಗುಣಮಟ್ಟವು ಸುಧಾರಣೆ ಆಗುವುದು.
ತಾಮ್ರದ ಕೊರತೆ ಇದ್ದರೆ ಆಗ ಅಸ್ಥಿರಂಧ್ರತೆ ಸಮಸ್ಯೆ ಕಾಡುವುದು ಸಪೋತ ಹಣ್ಣು ಮೂಳೆಗಳು, ಸ್ನಾಯುಗಳ ಮತ್ತು ಅಂಗಾಂಶಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.
ವಿಟಮಿನ್ ಸಿ, ಎ ಮತ್ತು ಆಂಟಿಆಕ್ಸಿಡೆಂಟ್ ಒಳಗೊಂಡಿರುವ ಸಪೋತ ಹಣ್ಣು ಪ್ರತಿರೋಧಕ ಶಕ್ತಿಯನ್ನು ಬಲಿಷ್ಠವಾಗಿ ಇಡುವಲ್ಲಿ ಪ್ರಮುಖ ಪಾತ್ರ ವಹಿಸುವುದು ಇದು ಫ್ರೀ ರ್ಯಾಡಿಕಲ್ ನ್ನು ದೂರ ಮಾಡುವುದು, ಚರ್ಮದ ಆರೋಗ್ಯ ವೃದ್ಧಿಸುವುದು ಮತ್ತು ದೀರ್ಘಕಾಲಿಕ ಕಾಯಿಲೆಗಳ ಅಪಾಯ ತಗ್ಗಿಸುವುದು. ಇದು ವೈರಸ್, ಬ್ಯಾಕ್ಟಿರಿಯಾ ಮತ ಪರಾವಲಂಬಿಗಳ ದಾಳಿಯಿಂದ ರಕ್ಷಿಸುವುದು.
ಫ್ರಾಕ್ಟೋಸ್ ಮತ್ತು ಸುಕ್ರೋಸ್ ನಿಂದ ಸಮೃದ್ಧವಾಗಿರುವಂತಹ ಸಪೋತ ಹಣ್ಣಿನಲ್ಲಿ ಹೆಚ್ಚಿನ ಮಟ್ಟದ ಶಕ್ತಿ ಇದೆ. ಇದನ್ನು ವ್ಯಾಯಾಮದ ಬಳಿಕ ಸೇವನೆ ಮಾಡಿದರೆ ಅದರಿಂದ ದೇಹಕ್ಕೆ ನೈಸರ್ಗಿಕ ಶಕ್ತಿ ಸಿಗುವುದು.
ಬೆಳೆಯುವ ಮಕ್ಕಳು ಮತ್ತು ಗರ್ಭಿಣಿಯರಿಗೆ ಇದು ತುಂಬಾ ಒಳ್ಳೆಯದು. ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಇದು ಒದಗಿಸುವುದು. ಇದರಿಂದ ಆರೋಗ್ಯಕರ ಜೀವನ ಸಾಗಿಸಬಹುದು.
ಸಪೋಟ ಹಣ್ಣು ತ್ವಚೆಯ ಆರೋಗ್ಯ ಹಾಗೂಸೌಂದರ್ಯ ವೃದ್ಧಿಸುವುದು ಇದರಲ್ಲಿ ಇರುವಂತಹವಿಟಮಿನ್ ಎ, ಸಿ, ಇ ಮತ್ತು ಕೆ ಚರ್ಮವನ್ನುಹೈಡೇಟ್ ಆಗಿಡುವುದು ಮತ್ತು ಚರ್ಮದ ಅಂಗಾಂಶಗಳನ್ನು ಪುನರ್ಶ್ಚತನಗೊಳಿಸುವುದು.
ಪಾಲಿಫೆನಾಲ್, ಫ್ಲಾವನಾಯ್ಡ್ ಮತ್ತು ಆಂಟಿ ಆಕ್ಸಿಡೆಂಟ್ ಹೊಂದಿರುವ ಸಪೋತ ಹಣ್ಣು ನೆರಿಗೆ ನಿವಾರಿಸುವುದು, ಚರ್ಮದ ವಿನ್ಯಾಸ ಸುಧಾರಿಸು ವುದು ವಯಸ್ಸಾಗುವ ಲಕ್ಷಣಗಳನ್ನು ನಿಧಾನಗೊಳಿಸುವುದು ಮತ್ತು ನೈಸರ್ಗಿಕವಾಗಿ ಕಾಂತಿಯುತ ವಾಗಿಸುವುದು ಸಪೋತದಿಂದ ಹೊರಬರುವಂತಹ ಹಾಲು ಚರ್ಮದ ಶಿಲೀಂಧ್ರ ದೂರ ಮಾಡಲು ಸಹಕಾರಿ.
ಆಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿರುವಂತಹ ಸಪೋತ ಹಣ್ಣು ವಿವಿಧ ರೀತಿಯ ಕ್ಯಾನ್ಸರ್ ನ ಅಪಾಯವನ್ನು ಕಡಿಮೆ ಮಾಡವುದು. ವಿಟಮಿನ್ ಎ ಮತ್ತು ಬಿ ಲೋಳೆಯ ಒಳಪದರವನ್ನು ಆರೋಗ್ಯವಾಗಿಡುವುದು ಮತ್ತು ಇದರಿಂದ ಶ್ವಾಸಕೋಶ ಮತ್ತು ಬಾಯಿಯ ಕ್ಯಾನ್ಸರ್ ಬರದಂತೆ ತಡೆಯುವುದು.
ಆಹಾರದ ನಾರಿನಾಂಶವು ಅಧಿಕವಾಗಿ ಇರುವಂತಹ ಸಪೋತ ಹಣ್ಣು ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು ಮತ್ತು ಇದು ಕರುಳಿನ ಕ್ಯಾನ್ಸರ್ ನಿಂದ ಕಾಪಾಡುವುದು.
ಅಧಿಕ ರಕ್ತದತೊತಡ ನಿಯಂತ್ರಣದಲ್ಲಿ ಇಡಲು ಸಪೋಟ ಹಣ್ಣು ತುಂಬಾ ಪರಿಣಾಮಕಾರಿ. ಇದರಲ್ಲಿ ಇರುವಂತಹ ಪೊಟಾಶಿಯಂ ಅಂಶವು ಸೋಡಿಯಂ ಮಟ್ಟವನ್ನು ಕಡಿಮೆ ಮಾಡುವುದು ಮತ್ತು ರಕ್ತ ಸಂಚಾರನ್ನು ಸುಧಾರಿಸುವುದು ಮತ್ತು ರಕ್ತದೊತ್ತಡವನ್ನು ಇದು ನಿಯಂತ್ರಿಸುವುದು.
ಸಪೋಟ ಹಣ್ಣು ಹೆಸರು ಕೇಳುತ್ತಲೇ ಬಾಯಲ್ಲಿ ನೀರು ಬರುತ್ತದೆ. ಇದರಲ್ಲಿ ಕಾರ್ಬೋ ಹೈಡ್ರೆಟ್, ಫೈಬರ್, ಕಬ್ಬಿಣದಂಶ, ವಿಟಮಿನ್ ಎ, ವಿಟಮಿನ್ ಸಿ, ಕ್ಯಾಲ್ಸಿಯಂ ಹೇರಳವಾಗಿದೆ. ಇದು ಜೀರ್ಣ ಕ್ರಿಯೆಯನ್ನು ಸರಾಗವಾಗಿಸುತ್ತದೆ. ಮೂಳೆ ಹಾಗೂ ಹಲ್ಲುಗಳನ್ನು ಸದೃಢವಾಗಿಸುತ್ತದೆ.
ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಈ ಹಣ್ಣು ಹೊಂದಿದೆ. ಚಿಕ್ಕು ಸೇವಿಸುವುದರಿಂದ ಆಗುವ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.
ತುಂಬಾ ಸ್ನಾಯುಗಳ ನೋವು, ಗಂಟು ನೋವು ಅನುಭವಿಸುವವರಿಗೆ ಈ ಹಣ್ಣು ಉತ್ತಮವಾದದ್ದು. ಜೀರ್ಣ ಕ್ರಿಯೆಗೆ ಸಹಾಯಕಾರಿಯಾಗಿದೆ.
ಇನ್ನು ಇದರಲ್ಲಿ ಕ್ಯಾನ್ಸರ್ ಅನ್ನು ತಡೆಗಟ್ಟುವ ಗುಣ ಕೂಡ ಇದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಹೇರಳವಾಗಿದೆ. ಹಾಗಾಗಿ ಇದು ದೇಹವನ್ನು ಕ್ಯಾನ್ಸರ್ ನಿಂದ ಕಾಪಾಡುತ್ತದೆ. ಹಾಗೇ ಇದರಲ್ಲಿನ ಫೈಬರ್ ಕೂಡ ದೇಹದ ಆರೋಗ್ಯಕ್ಕೆ ತೀರಾ ಅವಶ್ಯಕ. ಈ ಹಣ್ಣನ್ನು ಸೇವಿಸುವುದರಿಂದ ಶ್ವಾಸಕೋಶ, ಬಾಯಿಯ ಕ್ಯಾನ್ಸರ್ ಬಾರದಂತೆ ರಕ್ಷಿಸಿಕೊಳ್ಳಬಹುದು,
ಇದರಲ್ಲಿ ಕ್ಯಾಲ್ಸಿಯಂ, ಕಬ್ಬಿಣದಂಶ ಹೆಚ್ಚಿರುತ್ತದೆ. ಹಾಗಾಗಿ ಮೂಳೆಗಳ ಸದೃಢತೆಗೆ ಈ ಹಣ್ಣು ಹೆಚ್ಚು ಸಹಾಯಕಾರಿ. ಇನ್ನು ಗರ್ಭಿಣಿಯರಿಗೆ ಈ ಹಣ್ಣು ತುಂಬಾ ಒಳ್ಳೆಯದು. ದೇಹದಲ್ಲಿ ಶಕ್ತಿ ಸಂಚಾರವಾಗುವಂತೆ ಮಾಡುತ್ತದೆ.
ಇದರಲ್ಲಿ ಕ್ಯಾಲ್ಸಿಯಂ, ಕಬ್ಬಿಣದಂಶ ಹೆಚ್ಚಿರುತ್ತದೆ. ಹಾಗಾಗಿ ಮೂಳೆಗಳ ಸದೃಢತೆಗೆ ಈ ಹಣ್ಣು ಹೆಚ್ಚು ಸಹಾಯಕಾರಿ. ಇನ್ನು ಗರ್ಭಿಣಿಯರಿಗೆ ಈ ಹಣ್ಣು ತುಂಬಾ ಒಳ್ಳೆಯದು. ದೇಹದಲ್ಲಿ ಶಕ್ತಿ ಸಂಚಾರವಾಗುವಂತೆ ಮಾಡುತ್ತದೆ.
ಹವಾಮಾನದ ವೈಪರೀತ್ಯದ ಶೀತ, ಕೆಮ್ಮು ಉಂಟಾದರೆ ಸಪೋಟವನ್ನು ಸೇವಿಸುವುದರಿಂದ ಕಡಿಮೆಯಾಗುತ್ತದೆ. ಇದು ಉಸಿರಾಟ ಕ್ರಿಯೆ ಸರಾಗವಾಗಿ ಆಗುವಂತೆ ಮಾಡುತ್ತದೆ.
ಸಪೋಟ ಹಣ್ಣಿನಲ್ಲಿ ಪೋಟ್ಯಾಷಿಯಂ ಹೇರಳವಾಗಿದೆ. ಹಾಗಾಗಿ ಅಧಿಕ ರಕ್ತದೊತ್ತಡ ಇರುವವರಿಗೆ ಇದು ತುಂಬಾ ಒಳ್ಳೆಯದು. ಸೋಡಿಯಂ ಮಾಡುತ್ತದೆ. ಲೆವಲ್ ಅನ್ನು ಕಡಿಮೆ
ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ದೇಹದಲ್ಲಿನ ಟಾಕ್ಸಿನ್ ಅನ್ನು ಹೊರಹಾಕುತ್ತದೆ.
No comments:
Post a Comment