ಸತಿ ಸುಲೋಚನಾ ಕನ್ನಡ ಭಾಷೆಯಲ್ಲಿ ಬಿಡುಗಡೆಗೊಂಡ ಮೊದಲ ಟಾಕಿ ಚಿತ್ರವಾಗಿದೆ. ಈ ಚಲನಚಿತ್ರ 3ನೇ ಮಾರ್ಚ್ 1934ರಲ್ಲಿ ಬಿಡುಗಡೆಯಾಯಿತು.
ಚಿತ್ರದಲ್ಲಿ ಸುಬ್ಬಯ್ಯ ನಾಯ್ಡು ಮತ್ತು ತ್ರಿಪುರಾಂಬ ಮುಖ್ಯ ಪಾತ್ರಗಳಲ್ಲಿ ನಟನೆ ಮಾಡಿದ್ದಾರೆ. ಇದನ್ನು ವೈ.ವಿ ರಾವ್ (ಯರಗುಡಿಪತಿ ವರದ ರಾವ್) ನಿರ್ದೇಶನ ಮಾಡಿದ್ದಾರೆ.
ಇದು ಪೌರಾಣಿಕ ಕಥೆಯನ್ನು ಆಧರಿಸಿದ ಚಿತ್ರವಾಗಿದೆ.
ಈ ಚಿತ್ರವು ಹಿಂದಿನ ಮೈಸೂರು ಸಾಮ್ರಾಜ್ಯದಲ್ಲಿ ಪ್ರದರ್ಶಿಸಲಾದ ಮೊದಲ ಚಲನಚಿತ್ರವಾಗಿದೆ. ಸಿನಿಮಾ ಕಥೆಯು ರಾಮಾಯಣ ಕಥೆಯನ್ನು ಆಧಾರಿಸಿದಾಗಿದೆ.
ಚಿತ್ರ ನಿರ್ಮಾಣವನ್ನು ಎಸ್.ಚಮನ್ ಲಾಲ್ ದುಂಗಾಜಿ ಮಾಡಿದ್ದಾರೆ.
ಕಥೆ & ಸಂಭಾಷಣೆಯನ್ನು ಬೆಳ್ಳಾವೆ ನರಹರಿ ಶಾಸ್ತ್ರಿ ಬರೆದಿದ್ದಾರೆ.
ಚಿತ್ರದ ಒಟ್ಟು ಬಜೆಟ್ 40,000 ರೂ. ಗಳಾಗಿತ್ತು. ಸುಮಾರು ಎರಡು ತಿಂಗಳುಗಳ ಕಾಲ ಚಿತ್ರೀಕರಣ ನಡೆದಿದೆ
(ತಾರಾಗಣ:- ಸತಿ ಸುಲೋಚನ ದಲ್ಲಿ ಇಂದ್ರಜಿತ್ ಪಾತ್ರ ವಹಿಸಿದ್ದ ಎಂ.ವಿ. ಸುಬ್ಬಯ್ಯನಾಯ್ಡು, ರಾವಣನ ಪಾತ್ರದಲ್ಲಿ ಆರ್. ನಾಗೇಂದ್ರರಾವ್, ಸುಲೋಚನೆಯಾಗಿ ತ್ರಿಪುರಾಂಬ, ಮಂಡೋದರಿಯಾಗಿ ಮೂಕಿ ಚಿತ್ರಗಳ ಸ್ಟಾರ್ ಆಗಿದ್ದ ಲಕ್ಷ್ಮೀಬಾಯಿ, ನಾರದನಾಗಿ ಸಿ.ಟಿ. ಶೇಷಾಚಲಂ, ರಾಮನಾಗಿ ಸ್ವತಃ ನಿರ್ದೇಶಕ ವೈ.ವಿ. ರಾವ್ ನಟಿಸಿದ್ದರು.)
ಸುಬ್ಬಯ್ಯ ನಾಯ್ಡು ಅವರು ಕನ್ನಡದ ನಟ, ಟಿವಿ ನಿರೂಪಕ ಮತ್ತು ನಿರ್ಮಾಪಕ ಸೃಜನ್ ಲೋಕೇಶ್ ಅವರ ತಾತ.
ಹೇಳಬೇಕೆಂದರೆ; ಈ ಚಿತ್ರಕ್ಕಿಂತ ಮೊದಲು ಭಕ್ತ ದೃವ ಚಿತ್ರದ ನಿರ್ಮಾಣ ಕಾರ್ಯಗಳು ನಡೆದಿದ್ದವು, ಆದರೆ ಸತಿ ಸುಲೋಚನ ಚಿತ್ರವು ಭಕ್ತ ದೃವ ಚಿತ್ರಕ್ಕಿಂತ ಮೊದಲಿಗೆ ಬಿಡುಗಡೆ ಗೊಂಡು ಕನ್ನಡದ ಪ್ರಥಮ ವಾಕ್ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಸತಿ ಸುಲೋಚನ 1934 ಮಾರ್ಚ್ ನಲ್ಲಿ ತೆರೆಗೊಂಡರೆ, ಭಕ್ತ ದೃವ ಚಿತ್ರವು ಅದೇ ವರ್ಷ ಏಪ್ರಿಲ್‌ನಲ್ಲಿ ಬಿಡುಗಡೆ ಗೊಂಡಿತು.
ಭಕ್ತ ದೃವ (1934)
ಕನ್ನಡದಲ್ಲಿ ಬಿಡುಗಡೆಯಾದ ಎರಡನೇ ಟಾಕಿ ಚಲನಚಿತ್ರವಾಗಿದೆ. ಇದು ಪೌರಾಣಿಕ ಕಥೆಯನ್ನು ಆಧರಿಸಿದ ಚಿತ್ರವಾಗಿದೆ.
ಈ ಚಿತ್ರವನ್ನು ಪಾರ್ಶ್ವನಾಥ್ ಅಲ್ಟೇಕರ್ ನಿರ್ದೇಶನ ಮಾಡಿದ್ದಾರೆ, ಯು.ಎಲ್ ನಾರಾಯಣ ರಾವ್ ನಿರ್ಮಾಣ ಮಾಡಿದ್ದಾರೆ. ಅದೇ, ದೇವುಡು ನರಸಿಂಹ ಶಾಸ್ತ್ರಿ ಅವರು ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ.
ಮುಂಬೈನ ಅಜಂತಾ ಸ್ಟುಡಿಯೋದಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಯಿತು. ಬೆಂಗಳೂರಿನ "ಸೆಲೆಕ್ಟ್ ಸಿನಿಮಾ" ಹಾಲ್‌ನಲ್ಲಿ ಮೊದಲ ಪ್ರದರ್ಶನ ಮಾಡಲಾಯಿತು.
ತಾರಾಗಣ: ಮಾಸ್ಟರ್ ಮುತ್ತು, ಟಿ.ದ್ವಾರಕಾನಾಥ್, ಟಿ.ಕನಕಲಕ್ಷ್ಮಮ್ಮ & ಜಿ.ನಾಗೇಶ್ ಮುಂತಾದವರು.
No comments:
Post a Comment