ಟ್ವಿಟರ್ ಹ್ಯಾಶ್‌ಟ್ಯಾಗ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ?

SANTOSH KULKARNI
By -
0

 

ಹ್ಯಾಷ್ ಟ್ಯಾಗ್ ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಅನ್ನುವುದಕ್ಕಿಂತ ಮೊದಲು ಅದರ ಇತಿಹಾಸ ಮತ್ತು ಹ್ಯಾಷ್ ಟ್ಯಾಗ್ ಎಂದರೇನು ಎನ್ನುವುದನ್ನಾ‌‌‌‌‌ ತಿಳ್ಕಳೋಣಾ.

2007 ರಲ್ಲಿ ಮೊದಲ‌ ಬಾರಿಗೆ ಹ್ಯಾಷ್ ಟ್ಯಾಗ್ ಅನ್ನು ಪರಿಚಯಿಸಲಾಯ್ತು.ಅದಾದ ನಂತರ ಅದು ನಿಧಾನವಾಗಿ ಪ್ರಸಿದ್ಧಿಯನ್ನೂ ಪಡೆಯಿತು.ಪ್ರಸ್ತುತ ಸ್ಥಿತಿಯಲ್ಲಂತೂ ಹ್ಯಾಷ್ ಟ್ಯಾಗ್ ಇಲ್ಲದೇ‌ ಇರುವ ಪೋಸ್ಟ್ ಗಳೇ ಸಿಗೋದಿಲ್ಲ.‌ ಅಸ್ಟರ ಮಟ್ಟಿಗೆ ಬೆಳೆದಿದೆ.

ಹ್ಯಾಷ್ ಟ್ಯಾಗ್ ನ್ನಾ ಏಕೆ ಬಳಸಬೇಕು ?
ನೀವು ಯಾವುದೋ‌ ನಿರ್ದಿಷ್ಟ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನಾ ಇತರ ಜನರಿಗೆ ತಿಳಿಸ್ಬೇಕು‌ ಅಂತಾ ಬಯಸ್ತೀರಿ ಆದರೆ ನಿಮ್ಮ ಅಭಿಮಾನಿಗಳು ಅಥವಾ ನಿಮಗೆ ಪರಿಚಯ ಇರುವವರು ಅಷ್ಟು ದೊಡ್ಡ ಪ್ಲಾಟ್ ಪಾರಂ ನಲ್ಲಿ ನಿಮ್ಮ ಪೋಸ್ಟನ್ನು ಹುಡುಕುವುದಾದರೂ ಹೇಗೆ ?

ಅಥವಾ ಯಾವುದೋ ವ್ಯಕ್ತಿಗೆ/ವಿಷಯಕ್ಕೆ ಎಷ್ಟು ಜನರ ಒಪ್ಪಿಗೆ/ ವಿರೋಧ ಇದೆ ಎನ್ನೋದನ್ನಾ ತಿಳಿಯೋಕೆ ಇದು ಅತ್ಯತ್ತಮ ವಿಧಾನ

ಇನ್ನೂ ಸರಳವಾಗಿ ಹೇಳಬೇಕು‌ ಅಂದ್ರೆ, ಒಂದು‌ ನಿರ್ದಿಷ್ಟ ವಿಷಯವನ್ನು ಹುಡುಕುತ್ತಿರುವವರಿಗಾಗಿ ಹ್ಯಾಷ್ ಟ್ಯಾಗ್ ಮಾಡಲ್ಪಟ್ಟಿದೆ.

ಹ್ಯಾಷ್ ಟ್ಯಾಗ್ ಹೇಗೆ ಕಾರ್ಯ ನಿರ್ವಹಿಸುತ್ತದೆ?
ಒಂದು‌ ಉದಾಹರಣೆ‌ ತೆಗದ್ ಕೊಳ್ಳೋಣ.
ನಿಮ್ಮ ಊರಿನ ಬಸ್ ಸ್ಟ್ಯಾಂಡ್ ಹತ್ರ ಒಬ್ಬ ವ್ಯಕ್ತಿ ಯಾವಾಗಲೂ ಕುತ್ಗೊಂಡಿರ್ತಾನೆ ಅಂತ ಇಟ್ಗೊಳಣಾ. ಎಲ್ಲಿಗೆ ಹೋಗೋದಿದ್ರೂ ಆ ಬಸ್ ಸ್ಟ್ಯಾಂಡ್‌ನ‌ ಮೂಲಕಾನೇ ಹೋಗ್ಬೇಕು.ಈಗ ನೀವು ಊರಿನ‌ ಇನ್ನೊಬ್ಬ ವ್ಯಕ್ತಿಯನ್ನಾ ಹುಡುಕ್ತಾ ಇದೀರಿ. ನೀವು ನಿಮ್ಗೆ ಸಿಕ್ಕ ಸಿಕ್ಕಿದವರ ಹತ್ರಾ ಎಲ್ಲಾ ಆ ವ್ಯಕ್ತಿನ‌ ಎಲ್ಲಾದ್ರು ನೋಡಿದಿರಾ ಅಂತ ಕೇಳೊ ಬದಲು ನೀವು ಆ ಬಸ್ ಸ್ಟ್ಯಾಂಡ್ ನ ಹತ್ರ ಕುತ್ಕೊಂಡಿರೋ‌ ವ್ಯಕ್ತಿ ಹತ್ರ ಹೋಗಿ ಕೇಳಿದ್ರೆ ಆತ ಎಲ್ಲಾ ಮಾಹಿತಿ ಕೊಡ್ತಾನೆ.ನಿಮ್ಮ ಹಾಗೆ ಇನ್ಯಾರೋ‌ ಇನ್ಯಾರನ್ನೋ ಹುಡುಕ್ತಾ ಇರ್ತಾರೆ ಅವ್ರೂ ಕೂಡಾ ಬಸ್ ಸ್ಟ್ಯಾಂಡ್ ನ‌
 ಬಳಿ‌ ಇರೋವ್ರ ಹತ್ರ ಹೋಗಿ ಕೇಳಿದ್ರೆ ಎಲ್ಲಾ ಮಾಹಿತಿ‌ ಸಿಕ್ ಬಿಡತ್ತೆ.

ಹಾಗೆಯೇ ಹ್ಯಾಷ್ ಟ್ಯಾಗ್ ಕೂಡಾ ನೀವು ನಿರ್ದಿಷ್ಟವಾಗಿ‌ ಹುಡುಕ್ತಾ ಇರೋ ವಿಷಯದ ಬಗ್ಗೆ ನಿಮಗೆ ಮಾಹಿತಿಯನ್ನಾ ಕೊಡತ್ತೆ.ಆ ಬಸ್ ಸ್ಟ್ಯಾಂಡ್ ನತ್ರ ಕುಳಿತ್ಕೊಂಡಿರೂ ವ್ಯಕ್ತಿಯನ್ನೇ ಅಲ್ಗೋರಿಥಂ (algorithm) ಅಂತಾ ಕರಿತಾರೆ.

ಹ್ಯಾಷ್ ಟ್ಯಾಗ್ ಗಳನ್ನಾ ವಾಟ್ಸಾಪ್ ನಲ್ಲಿ ಬಳಸೋದ್ರಿಂದ ಏನೂ ಪ್ರಯೋಜನವಾಗಲ್ಲ.
#KeepSmiling:)
ಹ್ಯಾಷ್ ಟ್ಯಾಗ್ ಗಳಲ್ಲಿ ಸ್ಷೆಶಲ್ ಕ್ಯಾರೆಕ್ಟರ್ಸ ಅಂದರೆ ಶಬ್ದ ಮತ್ತು ಸಂಖ್ಯೆಗಳನ್ನು ಬಿಟ್ಟು ಇನ್ನೇನನ್ನೂ ಬಳಸಬಾರದು.

Post a Comment

0Comments

Post a Comment (0)