ಆರ್ಎಫ್ಐಡಿ ಟ್ಯಾಗ್ ಗಳು ಹೇಗೆ ಕಾರ್ಯನಿರ್ವಹಿಸುತ್ತವೆ?

SANTOSH KULKARNI
By -
0

 RFID ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಸಿಸ್ಟಮ್.

ಇದರಲ್ಲಿ ಮುಖ್ಯವಾಗಿ ಮೂರು ಭಾಗಗಳಿರುತ್ತವೆ - ಟ್ಯಾಗ್, ಆಂಟೆನಾ ಮತ್ತು ರೀಡರ್.

ಒಂದು ಉದಾಹರಣೆ ಮೂಲಕ ಇವನ್ನು ಅರಿಯೋಣ.

ಆಭರಣಗಳ ಅಂಗಡಿಯಲ್ಲಿ ಸಾವಿರಾರು ಬೆಲೆಬಾಳುವ ಸಾಮಾನುಗಳಿರುತ್ತವೆ. ಅಂತಹ ಒಂದೊದಕ್ಕೂ ಒಂದು ಟ್ಯಾಗ್ ಅಂಟಿಸಿದ್ದರೆ ಅವು ಮೈಕ್ರೋವೇವ್ ಅಥವಾ ರೇಡಿಯೋ ಫ್ರೀಕ್ವೆನ್ಸಿಯ ಅಲೆಗಳನ್ನು ಆಂಟೆನಾ ಮೂಲಕ ಬಿತ್ತರಿಸುತ್ತವೆ. ಪ್ರತಿಯೊಂದರ ಅಲೆಯಲ್ಲೂ ಆ ವಸ್ತುವಿನ ಕೋಡ್ (ವಿವರ) ಇರುತ್ತದೆ. ಒಂದು ರೀಡರ್ ಈ ಅಲೆಗಳನ್ನು ಹಿಡಿದು ಅವುಗಳ ವಿವರಗಳನ್ನು ಕಂಪ್ಯೂಟರಲ್ಲಿ ಬರೆದಿಡುತ್ತದೆ. ಡಬ್ಬಗಳ ಒಳಗಿರುವ ಆಭರಣಗಳನ್ನೂ ಹೀಗೆ ಪತ್ತೆಹಚ್ಚಬಹುದು.

ದಿನದ ಕೊನೆಯಲ್ಲಿ ಇಡೀ ಅಂಗಡಿಯ ಸಾವಿರಾರು ಆಭರಣಗಳ ಸ್ಟಾಕ್ ಪರಿಶೀಲಿಸಲು ಇದು ತುಂಬಾ ಸಹಾಯಕಾರಿ. ಜನರು ಒಂದೊಂದು ಡಬ್ಬ ತೆಗೆದು ಆಭರಣಗಳ ಪಟ್ಟಿ ಮಾಡಲು ಇಡೀ ದಿನ ಬೇಕಾದರೆ ಆರ್ ಎಫ್ ಐಡಿ ತಂತ್ರಜ್ಞಾನದಿಂದ ಕೆಲವೇ ನಿಮಿಷಗಳಲ್ಲಿ ಕೆಲಸ ಮುಗಿಯುತ್ತದೆ.

ಭೂಗರ್ಭದಲ್ಲಿ ಗಣಿಗಳಲ್ಲಿ ಕೆಲಸ ಮಾಡುವವರ ಮೇಲೆ ಸದಾ ನಿಗಾ ಇಡಲು ಈ ತಂತ್ರಜ್ಞಾನ ಉಪಯೋಗಕ್ಕೆ ಬರುತ್ತದೆ. ಇದೇ ರೀತಿ ಸಮುದ್ರದಲ್ಲಿ ಎಣ್ಣೆ ಮತ್ತು ಅನಿಲ ತೆಗೆಯುವ ಕಡೆ ಕೆಲಸ ಮಾಡುವವರ ಮೇಲೂ ಗಮನ ಇಡಬಹುದು.

ಕಾರ್ ಕಾರ್ಖಾನೆಗಳಲ್ಲಿ ಯಾವ ಕಾರು ಯಾವ ತಯಾರಿಕೆಯ ಹಂತದಲ್ಲಿದೆ ಎಂಬ ವಿವರ ಸದಾಕಾಲ ಸಿಗುತ್ತದೆ.

ವ್ಯಾಕ್ಸೀನ್ ಮುಂತಾದ ಔಷಧಿಗಳನ್ನು ಕಾರ್ಖಾನೆಯಿಂದ ಹಿಡಿದು ಉಗ್ರಾಣದ ಮೂಲಕ ಅಂಗಡಿ ತಲುಪುವವರೆಗೆ ಟ್ರ್ಯಾಕ್ ಮಾಡಬಹುದು.

ಸಾಕುಪ್ರಾಣಿಗಳ ದೇಹದಲ್ಲೇ ಆರ್ ಎಫ್ ಐಡಿ ಟ್ಯಾಗ್ ಅಳವಡಿಸಬಹುದು.

ಲೈಬ್ರರಿ ಪುಸ್ತಕಗಳಿಗೂ ಆರ್ ಎಫ್ ಐಡಿ ಟ್ಯಾಗ್ ಅಳವಡಿಸಬಹುದು.

ಕಾರ್ ಕೀಗಳಲ್ಲೂ ಆರ್ ಎಫ್ ಐಡಿ ಟ್ರಾನ್ಸ್ ಮಿಟರ್ ಇರುತ್ತದೆ.

ಟೋಲ್ ಗೇಟ್ ಗಳಲ್ಲಿ ತುರ್ತಾಗಿ ಸುಂಕ ಪಾವತಿ ಮಾಡುವ ಫಾಸ್ಟಾಗ್ ಕೂಡ ಆರ್ ಎಫ್ ಐಡಿ ತಂತ್ರಜ್ಞಾನ ವನ್ನು ಉಪಯೋಗಿಸುತ್ತದೆ.

ಆರ್ ಎಫ್ ಐಡಿ ಟ್ಯಾಗ್ ಗಳಿಗೆ ಬ್ಯಾಟರಿ ಜೋಡಿಸಿದ್ದರೆ ಅವು ಸದಾ ಸಿಗ್ನಲ್ ಹರಡುತ್ತಿರುತ್ತವೆ. ಅವನ್ನು ಆಕ್ಟಿವ್ ಟ್ಯಾಗ್ ಎಂದು ಕರೆಯುತ್ತಾರೆ.

ಬ್ಯಾಟರಿ ಇಲ್ಲದ ಟ್ಯಾಗ್ ಗಳು ರೀಡರ್ ಕಳಿಸುವ ಅಲೆಗಳಿಂದ ಶಕ್ತಿ ಪಡೆಯುತ್ತವೆ. ಅವನ್ನು ಪ್ಯಾಸಿವ್ ಟ್ಯಾಗ್ ಎಂದು ಕರೆಯುತ್ತಾರೆ.

ಕ್ರೆಡಿಟ್ ಕಾರ್ಡ್ ಗಳಲ್ಲೂ ಪ್ಯಾಸಿವ್ ಟ್ಯಾಗ್ ಇರಬಹುದು.

Post a Comment

0Comments

Post a Comment (0)