ಫ್ರಂಟ್ ಎಂಡ್ ಡೆವಲಪರ್ ತಿಳಿದುಕೊಳ್ಳಬೇಕಾದ ಕಂಪ್ಯೂಟರ್ ಭಾಷೆಗಳು ಯಾವುವು?

SANTOSH KULKARNI
By -
0

 front end ಎಂದರೆ ಬಳಕೆದಾರರು ನೇರವಾಗಿ ಸಂವಹನ ನಡೆಸುವ ವೆಬ್‌ಸೈಟ್‌ನ ಭಾಗ. ಇದನ್ನು ಅಪ್ಲಿಕೇಶನ್‌ನ Client Side ಎನ್ನಬಹುದು. ಬಳಕೆದಾರರು ನೇರವಾಗಿ ಬಳಸುವ ಎಲ್ಲವನ್ನೂ ಇದು ಒಳಗೊಂಡಿದೆ. ಉದಾಹರಣೆಗೆ, text colors, styles, images, graphs, tables, buttons, ಮತ್ತು navigation menu. ನಾವು ವೆಬ್‌ಸೈಟ್‌ಗಳನ್ನು, ವೆಬ್ ಅಪ್ಲಿಕೇಶನ್‌ಗಳನ್ನು ಅಥವಾ ಮೊಬೈಲ್ ಅಪ್ಲಿಕೇಶನ್‌ಗಳನ್ನು ತೆರೆದಾಗ ಬ್ರೌಸರ್ ಪರದೆಯಲ್ಲಿ ಕಂಡುಬರುವ ಎಲ್ಲದರ ರಚನೆ, ವಿನ್ಯಾಸ, ನಡವಳಿಕೆಗಳನ್ನು ಫ್ರಂಟ್ ಎಂಡ್ ಎಂದು ಕರೆಯುತ್ತಾರೆ.

HTML, CSS, ಮತ್ತು Javascript ,ಇವು ಫ್ರಂಟ ಎಂಡ್ ಕೋಡಿಂಗ್‌ನ ಅತ್ಯಂತ ಮೂಲಭೂತ ಬಿಲ್ಡಿಂಗ್ ಬ್ಲಾಕ್‌ಗಳಾಗಿವೆ.

ಹಲವಾರು Front End Framework ಮತ್ತ Libraries ಕೂಡ ಇವೆ.

  • jQuery ಜಾವಾಸ್ಕ್ರಿಪ್ಟ್ ಲೈಬ್ರರಿಯಾಗಿದೆ. jQuery, ಜಾವಾಸ್ಕ್ರಿಪ್ಟ್ನೊಂದಿಗೆ ವೇಗವಾಗಿ ಮತ್ತು ಸುಲಭವಾಗಿ ಅಭಿವೃದ್ಧಿಪಡಿಸುವ ಪ್ಲಗಿನ್‌ಗಳು ಮತ್ತು ವಿಸ್ತರಣೆಗಳ ಸಂಗ್ರಹ. jQuery , ಹಲವಾರು ರೆಡಿ ಟು ಯೂಸ್ ಅಂದರೆ ಸಿಧ್ಧ ಅಂಶಗಳನ್ನು ಸೇರಿಸಲು ಅನುಮತಿಸುತ್ತದೆ, ನಂತರ ನಮ್ಮ ಅಗತ್ಯಕ್ಕೆ ತಕ್ಕಂತೆ ಕಸ್ಟಮೈಸ್ ಮಾಡಿಕೊಳ್ಳಬಹುದು. countdown timers, search form autocomplete, rearranging & resizing grid layouts, ಈ ತರಹದ ವಿಷಯಗಳಿಗಾಗಿ ನಾವು jQuery ಅನ್ನು ಬಳಸಬಹುದು.
  • AngularJs ಎನ್ನುವುದು ಜಾವಾಸ್ಕ್ರಿಪ್ಟ್ ಓಪನ್ ಸೋರ್ಸ್ ಫ್ರಂಟ್-ಎಂಡ್ ಫ್ರೇಮ್‌ವರ್ಕ್ ಆಗಿದೆ, ಇದನ್ನು ಮುಖ್ಯವಾಗಿ ಏಕ ಪುಟ ವೆಬ್ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಲು ಬಳಸಲಾಗುತ್ತದೆ
  • React ಎನ್ನುವುದು user interface ಗಳನ್ನುಪರಿಣಾಮಕಾರಿಯಾಗಿ ನಿರ್ಮಿಸಲು ಬಳಸುವ ಜಾವಾಸ್ಕ್ರಿಪ್ಟ್ ಲೈಬ್ರರಿಯಾಗಿದೆ. ಇದು ಓಪನ್-ಸೋರ್ಸ್, ಕಾಂಪೊನೆಂಟ್-ಆಧಾರಿತ ಫ್ರಂಟ್ ಎಂಡ್ ಲೈಬ್ರರಿಯಾಗಿದೆ

ಚಿತ್ರ ಕೃಪೆ : ಗೂಗಲ್

Post a Comment

0Comments

Post a Comment (0)