ಒಣಗಿದ ಚರ್ಮದ ಮೃದುತ್ವವನ್ನು ಮರಳಿ ಪಡೆಯಲು ಮನೆ ಮದ್ದುಗಳು :
- ಪ್ರತಿದಿನ ಮೈಗೆ ಎಳ್ಳೆಣ್ಣೆ,/ಕೊಬ್ಬರಿ ಎಣ್ಣೆ ಚೆನ್ನಾಗಿ ಮರ್ದನ ಮಾಡಿ ಸ್ನಾನ ಮಾಡಬಹುದು.ಸೋಪ್ ಬಳಸಿದರೆ ಚರ್ಮದಲ್ಲಿರುವ ಸಹಜ moisture ಕಳೆದುಕೊಂಡು ಕಾಂತಿಹೀನವಾಗಿ ಸುಕ್ಕುಗಟ್ಟುತ್ತದೆ ಯಾವುದಾದರೂ ಸ್ನಾನದ ಚೂರ್ಣವು ಬಳಸಬೇಕು. (ಚೂರ್ಣದ ಬಗ್ಗೆ ಗೃಹವೈದ್ಯದಲ್ಲಿ ತಿಳಿಸಿದ್ದೇನೆ )ಯಾವ ಚೂರ್ಣವು ಇಲ್ಲದ್ದಿದರೆ ಹೆಸರು ಕಾಳಿನ ಪುಡಿಯಲ್ಲಿ ಮಜ್ಜಿಗೆ ಬೆರಸಿ ಪೇಸ್ಟ್ ಮಾಡಿ ಮೈಗೆ ಹಚ್ಚಿ ಒಣಗಿದ ನಂತರ ಸ್ನಾನ ಮಾಡಬಹುದು.
ಹಾಲಿನ ಕೆನೆಯಲ್ಲಿ ಕಸ್ತೂರಿ ಅರಿಶಿನದ ಪುಡಿ ಬೆರಸಿ ಮುಖಕ್ಕೆ ಬಳಿದು ಅರ್ಧ ಗಂಟೆನಂತರ ತೊಳೆಯಬಹುದು.
ಅಲೋವೆರಾ ಲೋಳೆಯಲ್ಲಿ ಹಾಲು ಬೆರೆಸಿ ಮುಖಕ್ಕೆ ಹಚ್ಚಬಹುದು..