ಕಂಪ್ಯೂಟರ್ ನಾವು ಹೇಳುವ ಕೆಲಸಗಳನ್ನು ಹೇಗೆ ನಡೆಸುತ್ತದೆ? ನಮ್ಮ ಕಮಾಂಡ್ ಗಳನ್ನು ಯಾವ ರೀತಿಯಲ್ಲಿ ತೆಗೆದುಕೊಳ್ಳುತ್ತದೆ?

SANTOSH KULKARNI
By -
0

 ನಾವು ಕಂಪ್ಯೂಟರ್ ನಿಂದ ಕೆಲಸ ಮಾಡಿಸಿಕೊಳ್ಳಲು ಬಯಸಿದಾಗ, ಕೀಬೋರ್ಡ್ ಅಥವಾ ಇನ್ನಾವುದೋ ಇನ್ಪುಟ್ ಸಾಧನವನ್ನು ಬಳಸಿಕೊಂಡು ಸೂಚನೆಗಳನ್ನು ಕೊಡಬೇಕು. ಈ ಸೂಚನೆಗಳು ಕಂಪ್ಯೂಟರ್ ಗೆ ಅರ್ಥವಾಗುವ ಭಾಷೆಯಲ್ಲಿರಬೇಕು. ಆದ್ದರಿಂದ ನಮ್ಮ ಸೂಚನೆಗಳನ್ನು ವ್ಯಾಖ್ಯಾನಿಸಲು, ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಮ್ ಅಥವಾ ಸಾಫ್ಟ್‌ವೇರ್ ಅನ್ನು ಬಳಸುತ್ತದೆ. ಈ ಸಾಫ್ಟ್ವೇರ್ ನಮ್ಮಿಂದ ಸ್ವೀಕರಿಸಿದ ಆಜ್ಞೆಗಳನ್ನು ಅಥವಾ ಸೂಚನೆಗಳನ್ನು ಕಂಪ್ಯೂಟರ್‌ಗೆ ಅರ್ಥವಾಗುವಂತಹ ಭಾಷೆಗೆ ಭಾಷಾಂತರಿಸಲು ಮಾನವನಿಂದ ಪ್ರೋಗ್ರಾಮ್ ಮಾಡಲ್ಪಟ್ಟಿರುತ್ತದೆ.

ಕಂಪ್ಯೂಟರ್ ಬೈನರಿ ಭಾಷೆಯನ್ನು ಮಾತ್ರ ಅರ್ಥಮಾಡಿಕೊಳ್ಳುತ್ತದೆ . ಅಂದರೆ 0 (ವಿದ್ಯುತ್ ಸಂಕೇತದ ಅನುಪಸ್ಥಿತಿ) ಮತ್ತು 1 (ವಿದ್ಯುತ್ ಸಂಕೇತದ ಉಪಸ್ಥಿತಿ). ಆದರೆ ನಾವು ಇಂಗ್ಲಿಷ್, ಕನ್ನಡ, ಫ್ರೆಂಚ್, ಜರ್ಮನ್ ಹೀಗೆ ಹಲವು ಭಾಷೆಗಳಲ್ಲಿ ಮಾತನಾಡುತ್ತೇವೆ. ಆದ್ದರಿಂದ ಅವು‌ಗಳೊಂದಿಗೆ ಸಂವಹನ ನಡೆಸಲು ಎಲ್ಲಾ ಮಾನವ ಸೂಚನೆಗಳನ್ನು ಕಂಪ್ಯೂಟರ್ ಸೂಚನೆಗಳಾಗಿ ಪರಿವರ್ತಿಸಲು ಸಾಫ್ಟ್‌ವೇರ್ ಅಗತ್ಯವಿದೆ. ಇದು ನಮ್ಮ ಸೂಚನೆಗಳನ್ನು ಪ್ರಾಸೆಸ್ ಮಾಡಿ ಅದಕ್ಕನುಗುಣವಾಗಿ output ದೊರಕಿಸಿಕೊಡುತ್ತದೆ..

ಒಂದು ತುಂಬಾ ಸರಳವಾದ ಉದಾಹರಣೆಯನ್ನು ನೋಡೋಣ. ನನಗೆ ಈ ದಿನದ ದಿನಾಂಕ ಮತ್ತು ಈ ಹೊತ್ತಿನ ಸಮಯ ತಿಳಿದುಕೊಳ್ಳಬೇಕೆಂದಿದೆ ಅಂದುಕೊಳ್ಳೋಣ. ನಾನು ಲಿನಕ್ಸ್ ಮೇಲೆ ವರ್ಕ್ ಮಾಡುತ್ತಿದ್ದೇನೆ ಎಂದಿಟ್ಟುಕೊಳ್ಳೋಣ. ಈಗ ನಾನು date ಎಂದು ಸೂಚನೆ ಕೊಟ್ಟರೆ ತಕ್ಷಣ ನನಗೆ ದಿನಾಂಕ ಮತ್ತು ಸಮಯನ್ನು ಪರದೆಯ ಮೇಲೆ ಮೂಡಿಸುತ್ತದೆ. ಇದು ಹೇಗೆ ಸಾಧ್ಯವೆಂದರೆ, date, ಇದೊಂದು program. ಇದನ್ನು execute ಮಾಡಿದಾಗ, ಆ program file ನಲ್ಲಿ ಇರುವ ಎಲ್ಲ ಸೂಚನೆಗಳು execute ಆಗುತ್ತವೆ ಅದರ ಪರಿಣಾಮವಾಗಿ ನಮಗೆ ದಿನಾಂಕ ಮತ್ತು ಸಮಯ ತಿಳಿಯುತ್ತದೆ.

ನಾವು ಕಂಪ್ಯೂಟರಿಗೆ ಸೂಚನೆಗಳನ್ನು ಕೊಡಬೇಕಾದರೆ ನಮಗೆ ಬೈನರಿ ಭಾಷೆ ಗೊತ್ತಿರಬೇಕೆಂದೇನಿಲ್ಲ. ನಮಗರ್ಥವಾಗುವ ಇಂಗ್ಲೀಷ್ ಭಾಷೆಯ ಹೋಲಿಕೆಯಲ್ಲಿಯೇ ಇರುವ programming ಭಾಷೆಗಳನ್ನು ಬಳಸುತ್ತೇವೆ. ಇದನ್ನು ವ್ಯಾಖ್ಯಾನಿಸಿ ಕಂಪ್ಯೂಟರಿಗೆ ಅದರ ಅರ್ಥವನ್ನು ತಿಳಿಸುವ ಕೆಲಸ compiler ಅಥವಾ interpreter ಗಳದ್ದಾಗಿರುತ್ತದೆ. ಇವುಗಳೆಲ್ಲವನ್ನು ಅರ್ಥ ಮಾಡಿಕೊಂಡು ಅದಕ್ಕನುಗುಣವಾಗಿ processor ಕೆಲಸ ನಿರ್ವಹಿಸುತ್ತದೆ.

Tags:

Post a Comment

0Comments

Post a Comment (0)