ಕಾಣುವುದು ಎಂಬುದು ಒಂದು ಸಂಕೀರ್ಣ ಪ್ರಕ್ರಿಯೆ. ಇದರ ಪಾತ್ರಧಾರಿಗಳು ಯಾರು ಯಾರೆಂದರೆ ಏನನ್ನು ನೋಡುತ್ತೇವೋ ಆ ವಸ್ತು, ಆ ವಸ್ತುವಿನ ಮೇಲೆ ಬೀಳುವ ಬೆಳಕು, ಆ ವಸ್ತುವಿನಿಂದ ಬೆಳಕಿನ ಪ್ರತಿಫಲನ, ಆ ಬೆಳಕನ್ನು ಹೀರುವ ನಮ್ಮ ಕಂಗಳು, ನಂತರ ಕಂಗಳಿಂದ ಹೊರಡುವ ಸಂಕೇತ ಮತ್ತು ಆ ಸಂಕೇತವನ್ನು ಚಿತ್ರವಾಗಿ ಬದಲಿಸುವ ನಮ್ಮ ಮಿದುಳು.
ಇದರಲ್ಲಿ ಪ್ರತಿಯೊಬ್ಬ ಪಾತ್ರಧಾರಿಯೂ ಮುಖ್ಯ. ಯಾರೇ ಒಬ್ಬನು ಇಲ್ಲದಿದ್ದರೂ ದೃಷ್ಟಿ ಎಂಬ ಕ್ರಿಯೆ ನಡೆಯುವುದಿಲ್ಲ.
ಕತ್ತಲಲ್ಲಿ ವಸ್ತು ಯಾವ ಬೆಳಕನ್ನೂ ಪ್ರತಿಫಲಿಸುವುದಿಲ್ಲ. ಕಂಗಳಿಗೆ ಯಾವುದೇ ಇನ್‌ಪುಟ್ ಸಿಗುವುದಿಲ್ಲ. ಹಾಗಾಗಿ ನೋಡುವ ಕ್ರಿಯೆ ಎಂಬುದು ಪ್ರಾರಂಭವೇ ಆಗುವುದಿಲ್ಲ.