ಖಂಡಿತವಾಗಿ ವರ್ಗಾಯಿಸಬಹುದು. ಬ್ಯಾಂಕ್ ಖಾತೆಯಿಂದ ಅಂಚೆ ಇಲಾಖೆಯ ಖಾತೆಗೆ ಮತ್ತು ಅಂಚೆ ಇಲಾಖೆಯ ಖಾತೆಯಿಂದ ಬ್ಯಾಂಕ್ ಖಾತೆಗೆ ಅಥವಾ ಯಾರಿಗೆ ಯಾವಾಗ ಬೇಕಾದರೂ ಹಣ ವರ್ಗಾಯಿಸಬಹುದು.
- ಇಂದು ಭಾರತೀಯ ಅಂಚೆ ಕೇವಲ ಅಂಚೆಯಾಗಿ ಉಳಿದಿಲ್ಲ, ಬದಲಿಗೆ IPPB ಎನ್ನುವ ಹೆಸರಿನಿಂದ (India post payment bank) ಬ್ಯಾಂಕಿಂಗ್ ಕ್ಷೇತ್ರಕ್ಕೂ ಕಾಲಿಟ್ಟಿದೆ.
- ಇಲ್ಲಿನ ಉಳಿತಾಯ ಖಾತೆಗಳನ್ನ ಬ್ಯಾಂಕ್ ಗಳ ಉಳಿತಾಯ ಖಾತೆಯಂತೆಯೇ ಉಪಯೋಗಿಸಬಹುದು.
- ATM ಕಾರ್ಡ್ ಸೌಲಭ್ಯ ಕೂಡಾ ಇದೆ. ಯಾವುದೇ ಬ್ಯಾಂಕುಗಳ ATM ನಲ್ಲಿ ಹಣ ಪಡೆಯಬಹುದು.
- ಮೊಬೈಲ್ ರೀಚಾರ್ಜ್ ಮತ್ತು ಎಲ್ಲ ಸೇವೆಗಳ (Utility payment) ಬಿಲ್ ಪಾವತಿಸಬಹುದು.
- NEFT ಮತ್ತು RTGS ಮೂಲಕ ಹಣ ವರ್ಗಾವಣೆ ಮಾಡಬಹುದು.
ಆದರಿಲ್ಲಿ ಅಂಚೆ ಇಲಾಖೆಯ ಉಳಿತಾಯ ಖಾತೆಯನ್ನು IPPB ಖಾತೆಯನ್ನಾಗಿ ಬದಲಾಯಿಸಿಕೊಳ್ಳಬೇಕು.
- ಅದು ತುಂಬಾ ಸುಲಭವಾದ ಕೆಲಸ.
- ನೇರವಾಗಿ ಅಂಚೆ ಕಛೇರಿಗೆ ಹೋಗಿ ಈ ಸೌಲಭ್ಯ ಪಡೆದುಕೊಳ್ಳಬಹುದು ಅಥವಾ ಅಂಚೆ ಇಲಾಖೆಯ IPPB ಮೊಬೈಲ್ ಅಪ್ಲಿಕೇಶನ್ ಬಳಸಿ ಕೂಡಾ ಮಾಡಿಕೊಳ್ಳಬಹುದು.
- ಅಂಚೆ ಇಲಾಖೆಯ ಪಾಸ್ ಬುಕ್ ನಲ್ಲಿರುವ ಕೆಲವು ಮಾಹಿತಿಯನ್ನ ಅಪ್ಲಿಕೇಶನ್ ಗೆ ಫೀಡ್ ಮಾಡಬೇಕು
- ರಿಜಿಸ್ಟರ್ ಮೊಬೈಲ್ ನಂಬರಿಗೆ OTP ಬರುತ್ತದೆ ಮತ್ತು ನಮ್ಮಿಷ್ಟದ ಪಾಸ್ ವರ್ಡ್ ಅಥವಾ Mpin ಸೆಲೆಕ್ಟ್ ಮಾಡಿಕೊಳ್ಳಬೇಕು.
- ಎಲ್ಲವೂ ಆದ ನಂತರ ಹನ್ನೆರಡು ಅಂಕೆಯ ಹೊಸ ಎಕೌಂಟ್ ನಂಬರ್ ಬರುತ್ತದೆ. ಅದನ್ನ ಮುಂದಿನ ವಹಿವಾಟಿಗೆ ಉಪಯೋಗಿಸಬೇಕು.
- ಅಂಚೆ ಇಲಾಖೆಯ ಮೂಲ ಖಾತೆಯಿಂದ ಈ IPPB ಖಾತೆಗೆ ಹಣ ವರ್ಗಾಯಿಸಿಕೊಳ್ಳಬೇಕು ಮತ್ತು ಬೇರೆ ಕಡೆಯಿಂದ ವರ್ಗಾವಣೆಯಾದ ಹಣ ಕೂಡಾ IPPB ಖಾತೆಗೆ ಬರುತ್ತದೆ. ಇಲ್ಲಿಂದ ಮೂಲ ಖಾತೆಗೆ ಹಣವನ್ನ ವರ್ಗಾಯಿಸಿಕೊಳ್ಳಬಹುದು.
- ಈ Option ಗಳು ಅಪ್ಲಿಕೇಶನ್ ನಲ್ಲಿ ಇದೆ. POSB Sweep in ಮತ್ತು POSB Sweep out ಎಂದು ನಮೂದಿಸಲ್ಪಟ್ಟಿದೆ.
- ಸದ್ಯಕ್ಕೆ ದೇಶದಾದ್ಯಂತದ ಅಂಚೆ ಇಲಾಖೆಯ ಬ್ಯಾಂಕ್ ಗೆ ಒಂದೇ IFSC ಇದೆ. ಅದು IPOS0000001.