ಮಂಡ್ಯ ದಕ್ಷಿಣ ಕರ್ನಾಟಕದಲ್ಲಿದೆ. ಇದು ಬೆಂಗಳೂರಿನಿಂದ 100 ಕಿ.ಮೀ ಮತ್ತು ಮೈಸೂರಿನಿಂದ 40 ಕಿ.ಮೀ ದೂರದಲ್ಲಿದೆ. ಇದು ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿದೆ.
ಮಂಡ್ಯ ಜಿಲ್ಲೆಯ ನಕ್ಷೆ
ಮಂಡ್ಯವನ್ನು ಸಕ್ಕರೆ ನಾಡು ಎಂದು ಕರೆಯಲಾಗುತ್ತದೆ. ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಾಗಿ ಕಬ್ಬನ್ನು ಬೆಳೆಯುವ ಕಾರಣ ಅಲ್ಲಿ ಅನೇಕ ಸಕ್ಕರೆ ಕಾರ್ಖಾನೆಗಳಿವೆ.
ಹಿಂದೂ ಪುರಾಣದ ಪ್ರಕಾರ, ಮಾಂಡವ್ಯ ಎಂಬ ಋಷಿ ಇಲ್ಲಿ ವಾಸಿಸುತ್ತಿದ್ದರು, ಆದ್ದರಿಂದ ಮಂಡ್ಯ ಎಂಬ ಹೆಸರು ಬಂದಿದೆ.
ಈ ಸ್ಥಳವನ್ನು ಗಂಗರು, ಹೊಯ್ಸಳರು, ವಿಜಯನಗರ ಮತ್ತು ಮೈಸೂರು ಒಡೆಯರು ಆಳಿದರು. ಟಿಪ್ಪು ಸುಲ್ತಾನ್ ಕೂಡ ಕೆಲವು ವರ್ಷಗಳ ಕಾಲ ಆಳಿದರು.
ಇಲ್ಲಿ ಹೆಚ್ಚಾಗಿ ಕಬ್ಬು, ಭತ್ತ ಮತ್ತು ರಾಗಿಯನ್ನು ಬೆಳೆಯಲಾಗುತ್ತದೆ. ರೈತರು ಕೆಆರ್‌ಎಸ್ ಅಣೆಕಟ್ಟಿನಿಂದ ಕಾಲುವೆಗಳ ಮೂಲಕ ಕಾವೇರಿ ನದಿಯ ನೀರನ್ನು ಪಡೆಯುತ್ತಾರೆ, ಹಾಗಾಗಿ ಕಬ್ಬು ಮತ್ತು ಭತ್ತವನ್ನು ಬೆಳೆಯಲು ಸುಲಭವಾಗಿದೆ.
ಮಂಡ್ಯದಲ್ಲಿ ಬೆಳೆಯುವ ಬೆಳೆಗಳ ನಕ್ಷೆ
ಕೆಳಗೆ ಮಂಡ್ಯ ಜಿಲ್ಲಾ ನದಿ ಮತ್ತು ಕಾಲುವೆಗಳ ನಕ್ಷೆ ಇದೆ.
ಮಂಡ್ಯದ ಕೆಲವು ಪ್ರವಾಸಿ ಸ್ಥಳಗಳನ್ನು ಕೆಳಗೆ ನೀಡಲಾಗಿದೆ:
ಮದ್ದೂರು - ಶ್ರೀ ವರದರಾಜ ಸ್ವಾಮಿ ದೇವಸ್ಥಾನ
ಮದ್ದೂರಿನಲ್ಲಿ ಶಿಂಷಾ ನದಿ ಇದೆ.
ಈ ಊರು ಮದ್ದೂರು ವಡೆಗೆ ಬಹಳ ಪ್ರಸಿದ್ಧಿ, ತುಂಬಾ ರುಚಿಕರವಾದ ತಿಂಡಿಯಿದು.
ಶಿವನಸಮುದ್ರ
ಇಲ್ಲಿ ಕಾವೇರಿ ನದಿಯಿಂದ ರೂಪುಗೊಂಡ ಜಲಪಾತವಿದೆ. ಇದರ ಹೆಸರು ಗಗನಚುಕ್ಕಿ ಮತ್ತು ಬರಚುಕ್ಕಿ ಜಲಪಾತ. ಇಲ್ಲಿ ಜಲ ವಿದ್ಯುತ್ ಸ್ಥಾವರವೂ ಇದೆ.
ಶಿವನಸಮುದ್ರದಲ್ಲಿ ರಂಗನಾಥಸ್ವಾಮಿ ದೇವಾಲಯವಿದೆ. ಇದು ಮಧ್ಯ ರಂಗ ದೇವಾಲಯ.
ಆದಿ ರಂಗ ಶ್ರೀರಂಗಪಟ್ಟಣದಲ್ಲಿದೆ, ಮತ್ತು ತಮಿಳುನಾಡಿನಲ್ಲಿ ಶ್ರೀರಂಗಂ ನಲ್ಲಿ ಅಂತ್ಯ ರಂಗ ದೇವಸ್ಥಾನವಿದೆ.
ಭೀಮೇಶ್ವರಿ ವನ್ಯಜೀವಿ ಅಭಯಾರಣ್ಯ.
ಈ ಶಿಬಿರವು ಕಾವೇರಿ ನದಿಯ ದಡದಲ್ಲಿದೆ.
ಮೇಲುಕೋಟೆ
ಈ ಪಟ್ಟಣವು ದೇವಾಲಯಗಳಿಗೆ ಬಹಳ ಪ್ರಸಿದ್ಧವಾಗಿದೆ. ಇದು ವೈಷ್ಣವರಿಗೆ ತೀರ್ಥಯಾತ್ರೆಯ ಪಟ್ಟಣ.
ಶ್ರೀ ವೈಷ್ಣವ ಆಚಾರ್ಯರಾದ ಶ್ರೀ ರಾಮಾನುಜಾಚಾರ್ಯರು ಇಲ್ಲಿ 14 ವರ್ಷಗಳ ಕಾಲ ನೆಲಸಿದ್ದರು.
ಚೆಲುವನಾರಾಯಣ ಸ್ವಾಮಿ ದೇವಸ್ಥಾನ ಮತ್ತು ಯೋಗ ನರಸಿಂಹ ಸ್ವಾಮಿ ದೇವಸ್ಥಾನ ಇಲ್ಲಿವೆ. ಇವೆರಡು ಪ್ರಾಚೀನ ದೇವಾಲಯಗಳು.
ಚೆಲುವನಾರಾಯಣ ಸ್ವಾಮಿ ದೇವಸ್ಥಾನ
ಚೆಲುವನಾರಾಯಣ ಸ್ವಾಮಿ
ಬೆಟ್ಟದ ಮೇಲೆ ಯೋಗ ನರಸಿಂಹ ಸ್ವಾಮಿ ದೇವಾಲಯವಿದೆ
ಯೋಗ ನರಸಿಂಹ ಸ್ವಾಮಿ
ಕಲ್ಯಾಣಿ
ಸಂಸ್ಕೃತ ಸಂಶೋಧನಾ ಕೇಂದ್ರವೂ ಇದೆ, ಅಲ್ಲಿ ಅನೇಕ ಹಳೆಯ ಹಸ್ತಪ್ರತಿಗಳು ಮತ್ತು ತಾಳೆಗರಿಯ ಶಾಸನಗಳನ್ನು ಅಧ್ಯಯನ ಮಾಡಲಾಗುತ್ತದೆ.
ಹಳೆಯ ತಾಳೇಗರಿಗಳು
ಮೇಲುಕೋಟೆ ಪುಳಿಯೋಗರೆಗೆ ಬಹಳ ಹೆಸರುವಾಸಿ.
ಮಂಡ್ಯ ಜಿಲ್ಲೆಯಲ್ಲಿ ಅನೇಕ ಹೊಯ್ಸಳ ದೇವಾಲಯಗಳಿವೆ.
ಹೊಸಹೊಳಲು
ಹೊಸಹೊಳಲು ಲಕ್ಷ್ಮೀನಾರಾಯಣ ದೇವಸ್ಥಾನ.
ಕಿಕ್ಕೇರಿ
ಕಿಕ್ಕೇರಿ ಬ್ರಹ್ಮೇಶ್ವರ ದೇವಸ್ಥಾನ.
ಬಸರಾಳು.
ಬಸರಾಳು ಮಲ್ಲಿಕಾರ್ಜುನ ದೇವಸ್ಥಾನ.
ನಾಗಮಂಗಲ
ನಾಗಮಂಗಲ ಸೌಮ್ಯಕೇಶವ ದೇವಸ್ಥಾನ
ಇವು ಇಲ್ಲಿಯ ಕೆಲವು ಸುಪ್ರಸಿದ್ಧ ಹೊಯ್ಸಳರ ದೇವಾಲಯಗಳು.
ಕೊಕ್ಕರೆಬೆಳ್ಳೂರು.
ಕೊಕ್ಕರೆ ಪಕ್ಷಿಗಳು ಪ್ರತಿವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಸಂತಾನೋತ್ಪತ್ತಿಗೋಸ್ಕರ ಇಲ್ಲಿಗೆ ಬರುತ್ತವೆ.
ಇದು ಮದ್ದೂರು ತಾಲೂಕಿನಲ್ಲಿದೆ.
ಈ ಪಕ್ಷಿಗಳು ಬಹಳ ದೂರದಿಂದ ಬೇರೆ ದೇಶಗಳಿಂದ ಬರುತ್ತವೆ.
ಆದಿಚುಂಚನಗಿರಿ.
ಇದು ಚಿಕ್ಕ ಬೆಟ್ಟದ ಮೇಲೆ ಇದೆ.
ಇದು ನಾಥ ಸಂಪ್ರದಾಯದ ಆಧ್ಯಾತ್ಮಿಕ ಕೇಂದ್ರವಾಗಿದೆ.
ಕಾಲಭೈರವೇಶ್ವರ ದೇವಸ್ಥಾನ.
ಶ್ರೀರಂಗಪಟ್ಟಣ.
ಇದು ಬಹಳ ಪ್ರಸಿದ್ಧ ಮತ್ತು ಪ್ರಮುಖ ಪಟ್ಟಣ.
ಇದು ಹಲವು ವರ್ಷಗಳ ಕಾಲ ಮೈಸೂರು ಒಡೆಯರ ರಾಜಧಾನಿಯಾಗಿತ್ತು.
ಅದು ಟಿಪ್ಪು ಸುಲ್ತಾನ ರಾಜಧಾನಿಯು ಕೂಡ ಆಗಿತ್ತು.
ಇದು ಕಾವೇರಿ ನದಿಯಿಂದ ರೂಪುಗೊಂಡ ದ್ವೀಪ ಪಟ್ಟಣವಾಗಿದೆ.
ಶ್ರೀ ರಂಗನಾಥ ದೇವಸ್ಥಾನ.
ಟಿಪ್ಪು ಅರಮನೆ
ಕೃಷ್ಣರಾಜಸಾಗರ ಅಣೆಕಟ್ಟು
ಈ ಅಣೆಕಟ್ಟನ್ನು ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಇಲ್ಲಿ ಕಾವೇರಿ ಮತ್ತು ಹೇಮಾವತಿ ನದಿಗಳ ಸಂಗಮವಾಗುತ್ತದೆ.
ಇದು ಒಂದು ಪ್ರಮುಖ ಅಣೆಕಟ್ಟು ಏಕೆಂದರೆ ಇದು ಬೆಂಗಳೂರು , ಬೆಂಗಳೂರು ಗ್ರಾಮೀಣ, ಮೈಸೂರು, ಮಂಡ್ಯ, ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಕುಡಿಯುವ ನೀರು ಮತ್ತು ಕೃಷಿಯ ಕೆಲಸಕ್ಕೆ ನೀರನ್ನು ಪೂರೈಸುತ್ತದೆ.
ಇಲ್ಲಿ ಸುಂದರವಾದ ಬೃಂದಾವನ್ ಗಾರ್ಡನ್ ಕೂಡ ಇದೆ.
ರಾತ್ರಿ ಸಮಯದಲ್ಲಿ ಬಣ್ಣಬಣ್ಣದ ಕಾರಂಜಿಗಳು.