ಭಾರತದಿಂದ ಮಲೇಶಿಯಾ ಪ್ರಯಾಣ ಕೂಡ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ತೊಂದರೆಯಿಲ್ಲದೆ ಮಾಡಬಹುದು.
- ಮಲೇಶಿಯಾದ ರಾಜಧಾನಿ ಕೌಲಾಲಂಪೂರಗೆ ಭಾರತದಿಂದ ಹಲವಾರು ವಿಮಾನ ಯಾನಗಳಿವೆ. ಚೆನ್ನೈ, ಬೆಂಗಳೂರು, ಮುಂಬೈ, ದೆಹಲಿ, ಕಲಕತ್ತಾ, ಹೈದರಾಬಾದ ಮುಂತಾದ ನಗರಗಳಿಂದ ಕೂಡ ನೇರ ವಿಮಾನಗಳಿವೆ.
- ಭಾರತೀಯ ನಾಗರೀಕರು ಮಲೇಶಿಯಾಗೆ ಆನ್ ಲೈನ ವೀಸಾವನ್ನು ಮಾತ್ರ ೨-೩ ದಿನಗಳಲ್ಲಿ ಪಡೆಯಬಹುದು. ೧೫ ದಿನದ ಪ್ರಯಾಣಿಕರ ವೀಸಾದ ಖರ್ಚು. ರೂ. ೧೫೦೦.
- ಕೌಲಾಲಂಪೂರಗೆ ಪ್ರಯಾಣದ ಸಮಯಯೂ ಕಡಿಮೆ. ಚೆನ್ನೈಯಿಂದ ಇದು ಬರಿ ನಾಲ್ಕು ಗಂಟಿಗಳ ಪ್ರಯಾಣ. ರೂ ೧೫,೦೦೦ ದಲ್ಲಿ ಹೋಗಿಬರುವ ಟಿಕೆಟ್ ದೊರಕುತ್ತದೆ.
- ಭಾರತೀಯರಿಗೆ ವಿದೇಶ ಪ್ರಯಾಣದಲ್ಲಿ ಬರುವ ಮುಖ್ಯ ತೊಂದರೆಯೆಂದರೆ ಆಹಾರ, ಅದೂ ಸಸ್ಯಾಹಾರಿಗಳಿಗೆ. ಮಲೇಶಿಯಾದಲ್ಲಿ ಹಲವಾರು ತಮಿಳರು ನೆಲೆಸಿರುವದರಿಂದ ಭಾರತೀಯ ಆಹಾರ ಅಲ್ಲಿ ಸಿಗುತ್ತದೆ.
- ಮಲೇಶಿಯಾ ಮಲಯ ಭಾಷೆಯನ್ನುಪಯೋಗಿಸುತ್ತಿದ್ದರೂ ರೋಮನ್ ಲಿಪಿಯನ್ನು ಬಳಸುತ್ತಾರೆ. ಇದರಿಂದ ಸ್ವಲ್ಪವಾದರೂ ಬೋರ್ಡುಗಳನ್ನು ಓದಬಹುದು. ಥೈಲ್ಯಾಂಡ, ಚೀನಾ, ಜಾಪಾನಿನಂತಲ್ಲ.
ನೋಡತಕ್ಕ ಸ್ಥಳಗಳೆಂದರೆ - ಬಟು ಕೇವ್ಸ, ಮುರುಗನ್ ಟೆಂಪಲ್, ಪೆಟ್ರೊನಾಸ್ ಟಾವರ, ಪುತ್ರಜಾಯಾ ಸಿಟಿ, ಲಾಂಗ್ಕವಿ, ಗೆಂಟಿಂಗ ಹೈಲ್ಯಾಂಡ್ಸ, ರೇಡಿಯೋ ಟಾವರ, ಅರಮನೆ ಇತ್ಯಾದಿಗಳು.