Showing posts with label Travellers. Show all posts
Showing posts with label Travellers. Show all posts

Wednesday, February 19, 2025

ಭಾರತದಿಂದ ಪ್ರಯಾಣಿಸವವರಿಗೆ ಕೈಗೆಟುಕುವ ಕೆಲವು ಅಂತರರಾಷ್ಟ್ರೀಯ ಪ್ರವಾಸಿ ತಾಣಗಳು ಯಾವುವು?

 ಭಾರತದಿಂದ ಮಲೇಶಿಯಾ ಪ್ರಯಾಣ ಕೂಡ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ತೊಂದರೆಯಿಲ್ಲದೆ ಮಾಡಬಹುದು.

  • ಮಲೇಶಿಯಾದ ರಾಜಧಾನಿ ಕೌಲಾಲಂಪೂರಗೆ ಭಾರತದಿಂದ ಹಲವಾರು ವಿಮಾನ ಯಾನಗಳಿವೆ. ಚೆನ್ನೈ, ಬೆಂಗಳೂರು, ಮುಂಬೈ, ದೆಹಲಿ, ಕಲಕತ್ತಾ, ಹೈದರಾಬಾದ ಮುಂತಾದ ನಗರಗಳಿಂದ ಕೂಡ ನೇರ ವಿಮಾನಗಳಿವೆ.
  • ಭಾರತೀಯ ನಾಗರೀಕರು ಮಲೇಶಿಯಾಗೆ ಆನ್ ಲೈನ ವೀಸಾವನ್ನು ಮಾತ್ರ ೨-೩ ದಿನಗಳಲ್ಲಿ ಪಡೆಯಬಹುದು. ೧೫ ದಿನದ ಪ್ರಯಾಣಿಕರ ವೀಸಾದ ಖರ್ಚು. ರೂ. ೧೫೦೦.
  • ಕೌಲಾಲಂಪೂರಗೆ ಪ್ರಯಾಣದ ಸಮಯಯೂ ಕಡಿಮೆ. ಚೆನ್ನೈಯಿಂದ ಇದು ಬರಿ ನಾಲ್ಕು ಗಂಟಿಗಳ ಪ್ರಯಾಣ. ರೂ ೧೫,೦೦೦ ದಲ್ಲಿ ಹೋಗಿಬರುವ ಟಿಕೆಟ್ ದೊರಕುತ್ತದೆ.
  • ಭಾರತೀಯರಿಗೆ ವಿದೇಶ ಪ್ರಯಾಣದಲ್ಲಿ ಬರುವ ಮುಖ್ಯ ತೊಂದರೆಯೆಂದರೆ ಆಹಾರ, ಅದೂ ಸಸ್ಯಾಹಾರಿಗಳಿಗೆ. ಮಲೇಶಿಯಾದಲ್ಲಿ ಹಲವಾರು ತಮಿಳರು ನೆಲೆಸಿರುವದರಿಂದ ಭಾರತೀಯ ಆಹಾರ ಅಲ್ಲಿ ಸಿಗುತ್ತದೆ.
  • ಮಲೇಶಿಯಾ ಮಲಯ ಭಾಷೆಯನ್ನುಪಯೋಗಿಸುತ್ತಿದ್ದರೂ ರೋಮನ್ ಲಿಪಿಯನ್ನು ಬಳಸುತ್ತಾರೆ. ಇದರಿಂದ ಸ್ವಲ್ಪವಾದರೂ ಬೋರ್ಡುಗಳನ್ನು ಓದಬಹುದು. ಥೈಲ್ಯಾಂಡ, ಚೀನಾ, ಜಾಪಾನಿನಂತಲ್ಲ.

ನೋಡತಕ್ಕ ಸ್ಥಳಗಳೆಂದರೆ - ಬಟು ಕೇವ್ಸ, ಮುರುಗನ್ ಟೆಂಪಲ್, ಪೆಟ್ರೊನಾಸ್ ಟಾವರ, ಪುತ್ರಜಾಯಾ ಸಿಟಿ, ಲಾಂಗ್ಕವಿ, ಗೆಂಟಿಂಗ ಹೈಲ್ಯಾಂಡ್ಸ, ರೇಡಿಯೋ ಟಾವರ, ಅರಮನೆ ಇತ್ಯಾದಿಗಳು.