ಅಕ್ಕಿಗಳ ರಾಜ ಅಂತ ಕರೆಸಿಕೊಳ್ಳ ಬಹುದಾದ ಒಂದು ಅಕ್ಕಿಯನ್ನು ಹೆಸರಿಸಲು ಆಗುವುದಿಲ್ಲ.
ಒಂದೊಂದು ಭಾಗದಲ್ಲಿ ಒಂದೊಂದು ಅಕ್ಕಿಯು ತನ್ನದೇ ಆದ ಪ್ರಭುತ್ವವನ್ನು ಸಾಧಿಸಿದೆ.
ಭಾರತದಲ್ಲಿ ಬಾಸ್ಮತಿ ಅಕ್ಕಿಯನ್ನು ಉತ್ತಮವಾದ ಅಕ್ಕಿ ಅನ್ನಬಹುದು.
- ಇದು ತನ್ನದೇ ಆದ ಆಕಾರ , ರುಚಿ ಮತ್ತು ಸುವಾಸನೆಯನ್ನು ಹೊಂದಿದೆ. ಇದು ಭಾರತದಲ್ಲಿ ತಯಾರಿಸುವ ಚೈನೀಸ್ ಅಡುಗೆಗೆ ಹೆಚ್ಚು ರುಚಿ ಕೊಡುತ್ತದೆ.
ಕರ್ನಾಟಕದಲ್ಲಿ ಬೆಳೆಯುವ ವೆಹಾನಿ (Whehani rice) ಅಕ್ಕಿ ಕೂಡಾ ಬಾಸ್ಮತಿ ಅಕ್ಕಿಯಷ್ಟೇ ರುಚಿಕಟ್ಟಾಗಿದೆ.
- ಥೈಲ್ಯಾಂಡ್ ಕಡೆಗೆ ಹೋದರೆ ಅವರು ಹೆಚ್ಚಾಗಿ ಬಳಸುವುದು ಜಾಸ್ಮಿನ್ ರೈಸ್ (Jasmine rice )
- ಜಪಾನಿನಲ್ಲಿ ಕೊಶ್ಹಿಕರಿ (Koshihikari rice) ಅನ್ನುವ ಅಕ್ಕಿಯನ್ನು ವಿಶೇಷವಾಗಿ ಉಪಯೋಗಿಸುತ್ತಾರೆ.
- ಇನ್ನು , ಆಸ್ಟ್ರೇಲಿಯಾ ದಲ್ಲಿ ದೂಂಗಾರಾ (Doongara rice) ಅನ್ನುವ ಅಕ್ಕಿಯು ಹೆಚ್ಚು ಪ್ರಸಿದ್ಧಿ ಪಡೆದಿದೆ.
- ಚೈನಾ ಮತ್ತು ಇಂಡೊನೇಶಿಯಾದಲ್ಲಿ ಒಂದು ರೀತಿಯ ಕಪ್ಪು ಅಕ್ಕಿ ಹೆಚ್ಚು ಪ್ರಚಲಿತ.
- ಇದು ತುಂಬಾ ಪೌಷ್ಟಿಕಾಂಶ ಹೊಂದಿದ ಅಕ್ಕಿಯಾದ್ದರಿಂದ ಇದನ್ನು ರಾಜರ ಅಕ್ಕಿ ಅಥವಾ ನಿಷೇಧಿತ ಅಕ್ಕಿ ಅಂತ ಕರೆದು ಕೇವಲ ರಾಜರುಗಳು ಮಾತ್ರವೇ ಉಪಯೋಗಿಸುತ್ತಿದ್ದರಂತೆ!!
- ಹಾಗೆ ನೋಡಿದರೆ ಇದನ್ನೇ ಅಕ್ಕಿಯ ರಾಜ ಅಂತ ಕರೆದರೂ ತಪ್ಪಿಲ್ಲ.
ಅಕ್ಕಿಯ ರಾಜನೇ ಇರಲಿ , ಅಕ್ಕಿಯ ರಾಣಿಯೇ ಇರಲಿ , ನಮಗೆ ಬೇಕಿರುವುದು ಆರೋಗ್ಯಕ್ಕೆ ಹೊಂದಿಕೆ ಆಗುವ ಅಕ್ಕಿಯೇ ಹೊರತು ಯಾವುದೋ ರಾಜ , ರಾಣಿ ಅಂತ ಕರೆಸಿಕೊಳ್ಳುವ ಅಕ್ಕಿ ಅಲ್ಲ.
ಹಾಗೆ ನೋಡಿದರೆ ನಮ್ಮಲ್ಲಿ ಸಿಗುವ ಪಾಲಿಶ್ ಮಾಡದ ಕೆಂಪು ಅಥವಾ ಕಂದು ಬಣ್ಣದ ದಪ್ಪ ಅಕ್ಕಿಯು ಸರ್ವ ಕಾಲಕ್ಕೂ ಅಕ್ಕಿಯ ರಾಜ ಅನಿಸಿಕೊಳ್ಳುತ್ತದೆ.
ಈ ಅಕ್ಕಿಯು , ಅಕ್ಕಿಯಲ್ಲಿರಬೇಕಾದ ಎಲ್ಲ ಗುಣಗಳನ್ನೂ ಹೊಂದಿದೆಯಾದ್ದರಿಂದ ಇದು ಎಲ್ಲರಿಗೂ ಸೂಕ್ತ. ರುಚಿ ಅಷ್ಟಾಗಿ ಚೆನ್ನಾಗಿರುವುದಿಲ್ಲ ಅಷ್ಟೆ.