ಸಾಟ ಒಂದು ಕಂಪ್ಯೂಟರ್ ಬಸ್ ಇಂಟರ್ಫೇಸ್ ಆಗಿದ್ದು (ಡೇಟಾ ಟ್ರಾನ್ಸ್ಪೋರ್ಟ್ ಮಾಡಲು ಉಪೋಯೋಗಿಸುವ ಒಂದು ವಿಧದ ಕೇಬಲ್ ) ಇದು ಹಾರ್ಡ್ ಡಿಸ್ಕ್ ಅಲ್ಲ, ಸಾಟ ಕೇಬಲ್ ಅನ್ನು ಹಾರ್ಡ್ ಡಿಸ್ಕ್ ಡ್ರೈವ್ (HDD ) ಅಥವಾ ಸಾಲಿಡ್ ಸ್ಟೇಟ್ ಡ್ರೈವ್ (SSD ) ಗಳನ್ನು ಮದರ್ಬೋರ್ಡ್ ಗೆ ಸಂಪರ್ಕಿಸಲು ಉಪಯೋಗಿಸುತ್ತಾರೆ, ಸಾಲಿಡ್ ಸ್ಟೇಟ್ ಡ್ರೈವ್ (SSD ) ಯು ಎಲ್ಲ ಅಂಶಗಳಿಂದ ಉತ್ತಮವಾದ ಡಿವೈಸ್ ಆಗಿದೆ. ಆದರೆ ಬೆಲೆ ಮಾತ್ರ ಹೆಚ್ಚು. ಸಾಲಿಡ್ ಸ್ಟೇಟ್ ಡ್ರೈವ್ ಗಳಲ್ಲಿ ಎರಡು ರೀತಿಯ ಡ್ರೈವ್ ಗಳಿದ್ದು, ಒಂದು ಸಾಟ ಕೇಬಲ್ ಗೆ ಕನೆಕ್ಟ್ ಮಾಡಬಹುದು ಮತ್ತೊಂದು ಎಂ.೨ ಎಂಬ ಹೊಸ ರೀತಿಯ ಪೋರ್ಟ್ ಗೆ ಕನೆಕ್ಟ್ ಮಾಡಬಹುದಾಗಿದೆ. ಇದರಲ್ಲಿ ಎಂ.೨ ಎಸ್.ಎಸ್.ಡಿ ಯು ಉತ್ತಮವಾಗಿದೆ ಆದರೆ ನಿಮ್ಮ ಮದರ್ ಬೋರ್ಡ್ ಅಲ್ಲಿ ಎಂ.೨ ಪೋರ್ಟ್ ಇದೆಯೇ ಎಂದು ಪರೀಕ್ಷಿಸಿ ಕೊಳ್ಳಬಹುದು.
ಹಾರ್ಡ್ ಡಿಸ್ಕ್ ಡ್ರೈವ್
ಸಾಟ ಕೇಬಲ್ಗಳು
ಸಾಲಿಡ್ ಸ್ಟೇಟ್ ಡ್ರೈವ್ ಸಾಟ
ಸಾಲಿಡ್ ಸ್ಟೇಟ್ ಡ್ರೈವ್ ಎಂ.೨