Wednesday, February 19, 2025

ಕ್ಷೀರಪಥವು ಎಷ್ಟು ಹಳೆಯದು? ಎಷ್ಟು ವಯಸ್ಸಾಯಿತು?

 ಕ್ಷೀರಪಥವು 1361 ಕೋಟಿ ವರ್ಷ ಹಳೆಯದು ಎಂದು ಗೂಗಲ್ ಹೇಳುತ್ತದೆ. ಇದು ನಮ್ಮ ಬ್ರಹ್ಮಾಂಡದಷ್ಟು ಹಳೆಯದು ಎಂದು ಹೇಳಲಾಗುತ್ತದೆ.

ಅಂತೆಯೇ ಸೂರ್ಯ ಹುಟ್ಟಿದ್ದು 460ಕೋಟಿ ವರ್ಷಗಳ ಹಿಂದೆ.

ಕ್ಷೀರಪಥದ ಮೇಲ್ಕಂಡ ಚಿತ್ರ, ಕ್ಷೀರ ಸಾಗರವನ್ನು ಮಂಥಿಸುವ ಪುರಾಣದ ಟಿವಿ ಸೀರಿಯಲ್ ದೃಶ್ಯವನ್ನು ನೆನಪಿಸುತ್ತದೆ.

.

ಭೂಮಿ ಹುಟ್ಟಿದ್ದು ಸುಮಾರು 454 ಕೋಟಿ ವರ್ಷಗಳ ಹಿಂದೆ.

ಅತ್ಯಂತ ಹಳೆಯ ಗ್ರಹ ಎಂದು ಗುರುವನ್ನು ಹೇಳಬಹುದು. ಸೌರಮಂಡಲ ಹುಟ್ಟಿದ ಮೂವತ್ತು ಲಕ್ಷ ವರ್ಷಗಳ ನಂತರ ಗುರು ಹುಟ್ಟಿತು ಎಂದು ಹೇಳಲಾಗುತ್ತದೆ.

ಮೊದಲ ಜೀವಿ ಹುಟ್ಟಿದ್ದು 350 ಕೋಟಿ ವರ್ಷಗಳ ಹಿಂದೆ.

ಮನುಷ್ಯರು ಕಾಣಿಸಿಕೊಂಡಿದ್ದು 6 ದಶಲಕ್ಷ ವರ್ಷಗಳ ಹಿಂದೆ.