ಕೆಲವೇ ದಿನಗಳ ಹಿಂದೆ ನವೆಂಬರ್ 30ರಂದು ಆಚಾರ್ಯ ಜಗದೀಶ್ ಚಂದ್ರ ಬೋಸರ 162ನೇ ಜನ್ಮದಿನವಿತ್ತು. ಅದೇ ತಿಂಗಳ 23ನೇ ತಾರೀಖು ಅವರ 83ನೇ ಪುಣ್ಯ ತಿಥಿಯೂ ಇತ್ತು. ಬೋಸ್ ರವರು ಅನೇಕ ಪ್ರತಿಭೆಗಳ ವ್ಯಕ್ತಿ, ಅವರು ತಮ್ಮ ಜೀವನದಲ್ಲಿ ಹಲವಾರು ಮಹತ್ವದ ಆವಿಷ್ಕಾರಗಳನ್ನು ಮಾಡಿದರು ಆದರೆ ಯಾವ ಸಂಶೋಧನೆಗೂ ಪೇಟೆಂಟ್ ಮಾಡಿಸಲಿಲ್ಲ. ಸಂಶೋಧಕರಿಗಿಂತ ಆವಿಷ್ಕಾರ ಹೆಚ್ಚು ಮಹತ್ವದ್ದು ಎಂದು ನಂಬಿದ್ದರು.
ಜೀವಶಾಸ್ತ್ರಜ್ಞ, ಸಸ್ಯವಿಜ್ಞಾನಿ, ಭೌತವಿಜ್ಞಾನಿ, ಲೇಖಕ ಮತ್ತು ಸಂಶೋಧಕ - ಆಚಾರ್ಯ ಜಗದೀಶ್ ಚಂದ್ರ ಬೋಸ್ ಅವರು ತಮ್ಮ ಜೀವನದಲ್ಲಿ ಅನೇಕ ಕ್ಷೇತ್ರಗಳಲ್ಲಿ ಮಿಂಚಿದ ವ್ಯಕ್ತಿ.
1858 ರಲ್ಲಿ, ಬಂಗಾಳ ಪ್ರೆಸಿಡೆನ್ಸಿಯ (ಇಂದಿನ ಬಾಂಗ್ಲಾದೇಶ) ಮೈಮೆನ್ಸಿಂಗ್ ಜಿಲ್ಲೆಯಲ್ಲಿ ಜನಿಸಿದ ಬೋಸ್, ರೇಡಿಯೊ ಅಭಿವೃದ್ಧಿಯ ಕುರಿತಾದ ಸಂಶೋಧನೆಗಳಿಗಾಗಿ ಹೆಚ್ಚು ಪ್ರಸಿದ್ಧರಾಗಿದ್ದರು. ನ್ಯೂಯಾರ್ಕ್ ಮೂಲದ ಅಂತರರಾಷ್ಟ್ರೀಯ ಸಂಸ್ಥೆಯಾದ ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರ್‌ಗಳು ರೇಡಿಯೊ ತಂತ್ರಜ್ಞಾನದ ಹಿಂದಿನ ವಿಜ್ಞಾನವನ್ನು ಮೊದಲು ಬೋಸ್ ವಿವರಿಸಿದ ಕಾರಣ ಅವರನ್ನು ‘ರೇಡಿಯೊ ಸೈನ್ಸ್‌ನ ಪಿತಾಮಹ’ ಎಂದೂ ಕರೆದರು.
ರೇಡಿಯೊ ವಿಜ್ಞಾನದಲ್ಲಿ ಅವರ ಕೆಲಸವು ಅವರು ಮಾಡಿದ ಮತ್ತೊಂದು ಮಹತ್ವದ ಆವಿಷ್ಕಾರಕ್ಕೆ ಸಹಕಾರಿಯಾಗಿದೆ. ಸಸ್ಯಶಾಸ್ತ್ರಕ್ಕೂ ಜೀವವಿದೆ ಎಂದು ಸಾಬೀತುಪಡಿಸಲು - ಭೌತಶಾಸ್ತ್ರದೊಂದಿಗೆ ಸಸ್ಯಶಾಸ್ತ್ರವನ್ನು ಸಂಯೋಜಿಸುವ - ವಿಧಾನವನ್ನು ಬಳಸಿದ ಮೊದಲ ವ್ಯಕ್ತಿ ಬೋಸ್. ಅವರು ಕಂಡುಹಿಡಿದ ಕ್ರೆಸ್ಕೊಗ್ರಾಫ್ ಸಸ್ಯವನ್ನು ಕದಲಿಸಿದರೆ ಅದು ತೋರಿಸುವ ಸಣ್ಣ ಪ್ರತಿಕ್ರಿಯೆಗಳನ್ನು ಮತ್ತು ಸಸ್ಯಕೋಶಗಳಲ್ಲಿನ ಬದಲಾವಣೆಗಳನ್ನು ಅಳೆಯುತ್ತದೆ.
ಈ ಆವಿಷ್ಕಾರವು ಅವನ ಮತ್ತು ಜನಪ್ರಿಯ ಬ್ರಿಟಿಷ್ ನಾಟಕಕಾರ ಜಾರ್ಜ್ ಬರ್ನಾರ್ಡ್ ಶಾ ನಡುವಿನ ಸ್ನೇಹಕ್ಕೆ ಕಾರಣವಾಯಿತು. ಬೋಸ್ ಸಸ್ಯಗಳ ಬಗ್ಗೆ ಕಂಡುಹಿಡಿದ ನಂತರ, ಶಾ ತನ್ನ ‘ಸತ್ತ ಎಲೆಕೋಸಿಗಾಗಿ' ಕಣ್ಣೀರು ಸುರಿಸಿದ್ದಾನೆಂದು ವರದಿಯಾಗಿದೆ. ಶಾ ತನ್ನ ಅನೇಕ ನಾಟಕಗಳನ್ನು ಬೋಸ್ ರವರಿಗೆ ಅರ್ಪಿಸಿದ್ದಾನೆ. ಒಂದು ದಾಖಲೆಯಲ್ಲಿ "ನಿಕೃಷ್ಟ ಜೈವಿಕ ತಂತ್ರಜ್ಞಾನ ಶಾಸ್ತ್ರಜ್ಞನಿಂದ ಹಿಡಿದು ವಿಶ್ವದ ಶ್ರೇಷ್ಠ ಜೈವಿಕ ತಂತ್ರಜ್ಞಾನ ಶಾಸ್ತ್ರಜ್ಞನವರೆಗೆ" ಎಂದು ಹೇಳಿದ್ದಾನೆ.
ವಿದ್ವತ್ಪೂರ್ಣ ಸಾಧನೆಗಳಲ್ಲದೆ, ಬೋಸ್ ರವರು ವೈಜ್ಞಾನಿಕ ಕಾದಂಬರಿ ಸಾಹಿತ್ಯದಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದರು ಮತ್ತು ಭಾರತದಲ್ಲಿ ಆ ಪ್ರಕಾರದ ಕಥೆಗಳನ್ನು ಬರೆದ ಕೆಲವೇ ಕೆಲವು ಬರಹಗಾರರಲ್ಲಿ ಒಬ್ಬರಾಗಿದ್ದರು. ಅವರು 1896 ರಲ್ಲಿ ನಿರುದ್ದೇಶರ್ ಕಹಿನಿ (ಕಾಣೆಯಾದವರ ಕಥೆ) ಮತ್ತು 1921 ರಲ್ಲಿ ಪಲಾತಕ್ ತೂಫಾನ್ (ಪರಾರಿಯಾದ ಚಂಡಮಾರುತ) ಮುಂತಾದ ಹಲವಾರು ಸಣ್ಣ ಕಥೆಗಳನ್ನು ಬಂಗಾಳಿಯಲ್ಲಿ ಪ್ರಕಟಿಸಿದರು.
ಇಟಲಿಯ ಭೌತಶಾಸ್ತ್ರಜ್ಞ ಗೊಲಿಯೇಮೋ ಮಾರ್ಖೋನಿ ಅವರು 1897 ರಲ್ಲಿ ಮೊದಲ ಸರಿಯಾದ ರೇಡಿಯೊ ಸಂವಹನವನ್ನು ಅಭಿವೃದ್ಧಿಪಡಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಆದರೆ ಅದಕ್ಕೆ ಎರಡು ವರ್ಷ ಮೊದಲೇ ಬೋಸ್ ರವರು ರೇಡಿಯೊ ತರಂಗಗಳನ್ನು ಬಳಸುವ ವೈರ್‌ಲೆಸ್ ಸಂವಹನವನ್ನು ಮೊದಲ ಬಾರಿಗೆ ಪ್ರದರ್ಶಿಸಿದರು. ಬೋಸ್‌ಗೆ ಪೇಟೆಂಟ್ ಪಡೆಯುವಲ್ಲಿ ಒಲವು ಇರಲೇ ಇಲ್ಲ. ಹಾಗಾಗಿ ರೇಡಿಯೊ ತಂತ್ರಜ್ಞಾನದ ಅಭಿವೃದ್ಧಿಯ ಶ್ರೇಯ ಮಾರ್ಖೋನಿಗೆ ಸಲ್ಲುತ್ತದೆ. ಬೋಸ್ ರವರ ವೈಜ್ಞಾನಿಕ ಕೊಡುಗೆಯನ್ನು ಬಳಸಿ ಮಾರ್ಖೋನಿ 1901 ರಲ್ಲಿ ಅಟ್ಲಾಂಟಿಕ್ ಸಾಗರದಾಚೆಗೆ ಮೊದಲ ರೇಡಿಯೊ ಸಿಗ್ನಲ್ ಕಳುಹಿಸಲು ಸಾಧ್ಯವಾಯಿತು.
ಬೋಸ್ ಪೇಟೆಂಟ್ ಪಡೆಯುವುದರ ವಿರೋಧಿಯಾಗಿದ್ದರು. ಜ್ಞಾನವು ಎಲ್ಲರಿಗೂ ಲಭ್ಯವಿರಬೇಕು ಮತ್ತು ಪೇಟೆಂಟ್ ಮೂಲಕ ನಿರ್ಬಂಧಿಸಬಾರದು ಎಂದು ಅವರು ನಂಬಿದ್ದರು. ಇದರ ಫಲವಾಗಿ, ಅವರ ವ್ಯಾಪಕ ಪಾಂಡಿತ್ಯದ ಹೊರತಾಗಿಯೂ, ಅವರು ಪಾಶ್ಚಿಮಾತ್ಯರಲ್ಲಿ ಮತ್ತು ಇತರರಿಂದ ಬಹುತೇಕ ‘ಮರೆತುಹೋಗಿದ್ದಾರೆ’.
1917ರಲ್ಲಿ ಬೋಸ್ ರವರು ಕೊಲ್ಕಾತಾ ದಲ್ಲಿ ಒಂದು ಸಂಶೋಧನಾ ಕೇಂದ್ರ ವನ್ನು ಸ್ಥಾಪಿಸಿದರು.
ವೈರ್‌ಲೆಸ್ ದೂರಸಂಪರ್ಕ ಕ್ಷೇತ್ರದಲ್ಲಿ ಬೋಸ್ ರವರ ಸಾಧನೆಗಳನ್ನು ಗುರುತಿಸಲು, ಚಂದ್ರನ ಮೇಲಿನ ಕುಳಿಗಳಿಗೆ ಬೋಸ್‌ನ ಹೆಸರನ್ನು ಇಡಲಾಗಿದೆ. ಈ ಕುಳಿ 91 ಕಿ.ಮೀ ವ್ಯಾಸವನ್ನು ಹೊಂದಿದೆ ಮತ್ತು ಇದು ಕ್ರೇಟರ್ ಭಾಭಾ (ಭಾರತೀಯ ಪರಮಾಣು ಭೌತಶಾಸ್ತ್ರಜ್ಞ ಹೋಮಿ ಭಾಭಾ ಅವರ ಹೆಸರನ್ನು ಇಡಲಾಗಿದೆ) ಮತ್ತು ಕ್ರೇಟರ್ ಆಡ್ಲರ್ (ಜರ್ಮನ್ ರಸಾಯನಶಾಸ್ತ್ರಜ್ಞ ಕರ್ಟ್ ಆಡ್ಲರ್ ಅವರ ಹೆಸರನ್ನು ಇಡಲಾಗಿದೆ) ಬಳಿ ಇದೆ.
ಕೊಲ್ಕಾತಾ ಬಳಿಯಿರುವ ಬಟಾನಿಕಲ್ ಗಾರ್ಡನ್ ಗೆ ಆಚಾರ್ಯ ಜಗದೀಶ್ ಚಂದ್ರ ಬೋಸ್ ಬಟಾನಿಕಲ್ ಗಾರ್ಡನ್ ಎಂದು ಹೆಸರಿಡಲಾಗಿದೆ.
ಹರ್ಯಾಣದ ವಿಶ್ವವಿದ್ಯಾನಿಲಯದ ಹೆಸರನ್ನು ಬೋಸರ ಹೆಸರಿಗೆ ಬದಲಿಸಿದ್ದಾರೆ.