"ಕಲ್ಯಾಣ ಕರ್ನಾಟಕ" ಇದು ಹೈದರಾಬಾದ್ ಕರ್ನಾಟಕ ಪ್ರಾಂತ್ಯದ ಹೊಸ ಹೆಸರು.
ಇದರಲ್ಲಿ ಬೀದರ್, ಬಳ್ಳಾರಿ, ಕಲಬುರಗಿ, ಕೊಪ್ಪಳ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳು ಇವೆ . ಈ ಜಿಲ್ಲೆಗಳು ಕರ್ನಾಟಕದ ಅತ್ಯಂತ ಕಡಿಮೆ ಬೆಳವಣಿಗೆ ಹೊಂದಿದ ಜಿಲ್ಲೆಗಳು. ಇಲ್ಲಿ ಯಾವುದೇ ರೀತಿಯ ಬೆಳವಣಿಗೆಯ ಕಾರ್ಯಕ್ರಮಗಳು ಕಳೆದ ೧೦ - ೨೦ ವರ್ಷಗಳಿಂದ ನಡೆದಿಲ್ಲ. ಕೇವಲ ಈ ಜಿಲ್ಲೆಗಳಿಗೆ ಆರ್ಟಿಕಲ್ ೩೭೦- ಜೆ ಅಡಿಯಲ್ಲಿ ಮೀಸಲಾತಿ ಸಿಗುವಂತೆ ಮಾಡಲಾಗಿದೆ ಅಷ್ಠೆ. ಈ ಪ್ರಾಂತ್ಯದ ಅತಿ ದೊಡ್ಡ ಊರು ಗುಲ್ಬರ್ಗ. (ಗುಲ್ಬರ್ಗ ಕರ್ನಾಟಕದ ೫ನೆ ಅತಿ ದೊಡ್ಡ್ ಊರು ಅಂದ್ರ ನೀವ ಲೆಕ್ಕ ಹಾಕ್ರಿ!)
ಸೆಪ್ಟೆಂಬರ್ ೧೭, ೨೦೧೯ ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಪ್ರಾಂತ್ಯದ ಹೆಸರನ್ನು ಬದಲಾಯಿಸಿದರು. ಹಾಗೆಯೇ ಈ ಪ್ರಾಂತ್ಯಕ್ಕೆ ಹೆಚ್ಚು ಅನುದಾನವನ್ನು ನೀಡುವುದಾಗಿ ಆಶ್ವಾಸನೆಯನ್ನು ನೀಡಿದರು. ಇದು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತದೆ ಎಂದು ಸಮಯವೇ ಹೇಳುತ್ತದೆ.
(ನನ್ನ ಹಿಸ್ಟರಿ ಎಂ.ಎ ಇನ್ನು ಮುಗಿದಿಲ್ಲ, ಇದರ ಮೇಲೆ ಹೆಚ್ಚು ತಲೆಯನ್ನು ಓಡಿಸಬೇಡಿ)
"ಕಲ್ಯಾಣ ಕರ್ನಾಟಕ" ಎಂಬ ಹೆಸರು ಚಾಲುಕ್ಯರಿಂದ (ಕಲ್ಯಾಣಿ ಚಾಲುಕ್ಯರು) ಬಂದಿದೆ . ಅದು ಆಗಿನ ಕಾಲದಲ್ಲಿ ಶರಣ ಚಳುವಳಿ ಹಾಗು ವಚನ ಸಾಹಿತ್ಯ ರಚನೆಯ ಕೇಂದ್ರಬಿಂದು ಆಗಿತ್ತು. ಈ ಹೆಸರು ಹೈದರಾಬಾದ್ ಕರ್ನಾಟಕದ ಕಿಂತ ಸೂಕ್ತವಾದದ್ದು ಏಕೆಂದರೆ ಈಗ ಈ ಜಿಲ್ಲೆಗಳಿಗೆ ಹೈದರಾಬಾದ್ ಪ್ರಾಂತ್ಯಕ್ಕಾಗಲಿ, ತೆಲಂಗಾಣಕ್ಕಾಗಲಿ, ಹೈದರಾಬಾದ್ ನಗರಕ್ಕಾಗಲಿ ಯಾವುದೇ ಸಂಬಂಧವೂ ಇಲ್ಲ.
ಇನ್ನೊಂದು ವಿಚಾರವೇನೆಂದರೆ ಬಳ್ಳಾರಿ ಜಿಲ್ಲೆ ಹೈದರಾಬಾದ್ ಪ್ರಾಂತ್ಯದಲ್ಲಿ ಇದ್ದಿಲ್ಲ, ಅದು ಮದ್ರಾಸ್ನಲ್ಲಿ ಇತ್ತು. ಅದನ್ನು ನಂತರ ಹೈದರಾಬಾದ್ ಕರ್ನಾಟಕ ಜಿಲ್ಲೆಗಳಲ್ಲಿ ಸೇರಿಸಲಾಗಿತು. ಕೆಳಗಿನ ಪಟ್ಟಿಯನ್ನು ಗಮನಿಸಿ, ಬಳ್ಳಾರಿ ಕಲ್ಯಾಣ ಕರ್ನಾಟಕದಲ್ಲಿ ರಾಜ್ಯದ ಸರಾಸರಿ ಜಿಡಿಪಿ ಕಿಂತ ಹೆಚ್ಚು ಜಿಡಿಪಿ ಹೊಂದಿರ್ತಕ್ಕಂತಹ ತಾಲೂಕು ಇರುವ ಏಕೈಕ ಜಿಲ್ಲೆ. ಇಲ್ಲಿ ಮದ್ರಾಸಿನ ಪ್ರಭಾವ ಕಾಣುತ್ತದೆ.