ಶ್ರೀ ಹರಯೇ ನಮಃ.
ಮಾಧ್ವರು ವೈಷ್ಣವರು ಮತ್ತು ಶ್ರೀ ವಿಷ್ಣುವನ್ನು ಸರ್ವೋತ್ತಮ ಎಂದು ತಿಳಿಯುವರು.
ಆದರೂ ಕೂಡ, ಮಾಧ್ವರು ಹಲವಾರು ದೇವಸ್ಥಾನಗಳಲ್ಲಿ ಶಿವ ಲಿಂಗಗಳನ್ನು ಸ್ಥಾಪಿಸುತ್ತಾರೆ ಮತ್ತು ಶಿವನ ಪೂಜೆ ಮಾದುತ್ತಾರೆ. ಸುಮಾರು ಮಾಧ್ವ ಮಠಗಳಲ್ಲಿ ಶಿವನ ಪೂಜೆ ನಡೆಯುತ್ತೆ.
ಶ್ರೀ ಮಧ್ವಾಚಾರ್ಯರೂ ಕೂಡ ತಮ್ಮ ಗ್ರಂಥಗಳಲ್ಲಿ ಶಿವನ ಪೂಜೆಯ ವಿಧಿಗಳನ್ನು ಬರೆದಿದ್ದಾರೆ ಮತ್ತು ಪಂಚಾಕ್ಷರ ಮಂತ್ರ ಮತ್ತು ಶಿವ ಧ್ಯಾನ ಮಂತ್ರದಿಂದ ಶಿವನ ನಿತ್ಯ ಪೂಜೆ ಮಾಡುವ ಪದ್ದತಿಗಳನ್ನು ವಿವರಿಸಿದ್ದಾರೆ.
ಶ್ರೀ ಧರ್ಮಸ್ಥಾಳ ಮಂಜುನಾಥ ಮತ್ತು ಹಲವಾರು ಶಿವನ ದೇವಾಲಯಗಳಲ್ಲಿ ಮಾಧ್ವರೆ ಪೂಜೆ ಮಾಡೊದು!
ಇಲ್ಲಿಯ ಶಿವ ಲಿಂಗದ ಸ್ಥಾಪನೆಯು ಕೂಡ ಶ್ರೀ ವಾದಿರಾಜ ತೀರ್ಥರು ಮಾದಿದ್ದು.
ಶ್ರೀ ಪುರಂದರಡಾಸರು, ಶ್ರೀ ಕನಕಡಾಸರು ಮತ್ತು ಹಲವಾರು ಮಾಧ್ವ ಪಣ್ಡಿತರು ರುದ್ರದೇವರ ಮೇಲೆ ಭಜನೆಗಳನ್ನು ಕೂಡ ರಚಿಸಿದ್ದಾರೆ. ಶ್ರೀ ಕನಕ ದಾಸರ ಗುರುಗಳು, ಶ್ರೀ ವ್ಯಾಸ ತೀರ್ಥರು, ಲಘುಷ್ಹಿವ ಸ್ತುತಿ ಎಂಬ ಭಜನೆಯನ್ನು ರಚಿಸಿದ್ದಾರೆ.
ಲಲಿತಚಂದ್ರನಿಭಾನನಸುಸ್ಮಿತಂ ಶಿವಪದಂ ಶಿವಪದಂ ಸ್ಮರತಾ ಶಿವಮ್ ।
ವಿಶದಕೋಟಿತಟಿತ್ಪ್ರಭಯಾ ಯುತಂ ಶಿವಜಯಾ ಶಿವಯಾ ಯುತಮ್ ॥ ೧ ॥
ನಟನನಾಟ್ಯನಟಂ ನಟಗಾಯಕಂ ಜನಮುದಂ ಜಲಜಾಯತಲೋಚನಮ್ ।
ಭುಜಗಭೂಷಣಭೂಷಿತವಿಗ್ರಹಂ ಪ್ರಣಮ ಹೇ ಜನತೇ ಜನವಲ್ಲಭಮ್ ॥ ೨ ॥
ಶ್ರುತಿಶತಪ್ರಭಯಾ ಪ್ರಭಯಾ ಯುತಂ ಹರಿಪದಾಬ್ಜಭವಾಂ ಶಿರಸಾ ಧೃತಮ್ ।
ಶಿವ ಶಿವೇತಿ ಶಿವೇತಿ ಶಿವೇತಿ ವೈ ಭವ ಭವೇತಿ ಭವೇತಿ ಭವೇತಿ ವಾ ।
ಮೃಡ ಮೃಡೇತಿ ಮೃಡೇತಿ ಮೃಡೇತಿ ವೈ ಭಜತಿ ಯಃ ಸತತಂ ಪ್ರಣತಾಮಿಯಾತ್ ॥ ೩ ॥
ಇಷ್ಟೊಂದು ಪ್ರಮಾಣಗಳಲ್ಲಿ, ಮಾಧ್ವರು ಶಿವನಿಗೆ ಮಹತ್ವಕೊಡುವುದಿಲ್ಲ ಎನಲ್ಲು ಸಾಧ್ಯವೇ!? ಎಲ್ಲಾ ವೈಷ್ಣವ ದರ್ಶನಗಳಲ್ಲಿ, ಕೇವಲ ಮಾಧ್ವರೇ ಶಿವನಿಗೆ ಇಷ್ಟು ಪೂಜೆ ಮಾದೊದು.
ಶ್ರೀ ಕೃಷ್ಣಾರ್ಪಣಮಸ್ತು.