ಮೋಕ್ಷ ಪದದ ಅರ್ಥ ಮಾಮ್ ಅಕ್ಷ, my (unknown or known) axis, ನನ್ನ ಪರಿಮಿತಿ, ನನ್ನನ್ನು ನಾನು ನೋಡುವುದು, ನನ್ನನ್ನು ನಾನು ಮರಳಿ ಪಡೆಯುವುದು, ಈ ಪದವೇ ಮರಳಿ ಹುಟ್ಟುವುದರ ಬಗ್ಗೆ ಹೇಳುತ್ತಿದೆ, ಮೋಕ್ಷಾಪೇಕ್ಷಿಗೆ, ಮೋಕ್ಷ ಪಡೆಯುವವನಿಗೆ ಪಡೆದವರಿಗೆ ಹುಟ್ಟು ಸಾವುಗಳು ಇರದೇ ಇರಲು ಸಾಧ್ಯವಿಲ್ಲ, ಮೋಕ್ಷ ಬೇಕಾದವನು ಹುಟ್ಟಲೇ ಬೇಕು, ಸಾಯಲೇ ಬೇಕು, ಮೋಕ್ಷ ಸಾಧನೆ ಮಾಡ ಬೇಕು, ಹಾಗೆಯೇ ಮೋಕ್ಷ ಪಡೆದವರು ಕೂಡ ಹುಟ್ಟುತ್ತಾರೆ ಸಾಯುತ್ತಾರೆ, ಆದರೆ
ಮೋಕ್ಷ ಪಡೆಯದವನ ಹುಟ್ಟು ಸಾವಿಗೂ ಮತ್ತು ಮೋಕ್ಷ ಪಡೆದವರ ಹುಟ್ಟು ಸಾವಿನಲ್ಲಿ ಅಂತರ ಲೆಖ್ಖ ಕ್ಕೆ ಸಿಗದಷ್ಟು ಅಪರಿಮಿತವಾಗಿ ಆಘಾದವಾದದ್ದು, ಜೀವ ಮೋಕ್ಷದಲ್ಲಿ ತನ್ನ ಬಗೆಗಿನ, ಜಗತ್ತಿನ ಬಗೆಗಿನ ಅಜ್ಞಾನದ ನಿವೃತ್ತಿ ಹೊಂದುತ್ತಾನೆ.
ಅದರ ಅರ್ಥ ಮೋಕ್ಷದಲ್ಲಿ ತನ್ನ ಬಗ್ಗೆ ಸಂಪೂರ್ಣವಾಗಿ ತಿಳಿದು ಕೊಳ್ಳುವ ಅವಕಾಶ ಇರುವ ಜೀವ ಭಗವಂತನ ಬಗ್ಗೆ ಸಂಪೂರ್ಣವಾಗಿ ತಿಳಿದು ಬಿಡುತ್ತಾನೆ ಎಂದು ತಿಳಿಯಬಾರದು, ಮೋಕ್ಷದಲ್ಲಿಯೂ ಜೀವ ಭಗವಂತನ ಬಗೆಗಿನ ಸಂಪೂರ್ಣ ಜ್ಞಾನ ಹೊಂದಿರಲು ಸಾಧ್ಯ ಇಲ್ಲ, ಏಕೆಂದರೆ ಭಗವಂತನನ್ನು ಯಾರು ಎಂದಿಗೂ ಸಂಪೂರ್ಣವಾಗಿ ತಿಳಿಯಲು ಸಾಧ್ಯವಿಲ್ಲ, ಆದರೆ ಜೀವರು ತಮ್ಮ ಶಕ್ತಿಯ ನೂರರಷ್ಟು ಭಗವಂತನ ಬಗ್ಗೆ ತಿಳಿಯುವ ಅವಕಾಶ ಪಡೆಯಬಹುದು, ಭಗವಂತ ನಮ್ಮ ಮೋಕ್ಷದ ಹೊರಗೆ ಇದ್ದು ನಮಗೆ ಮೋಕ್ಷ ನೀಡುತ್ತಾನೆ, ನಮ್ಮ ಬಗೆಗಿನ ಅರಿವು ಜಗತ್ತಿನ ಬಗೆಗಿನ ಅರಿವು ತನ್ನ ಬಗೆಗಿನ ಅರಿವು ಭಗವಂತನಿಗೆ ಸದಾ ಇರುತ್ತದೆ, ಭಗವಂತನಿಗೆ ತನ್ನ ಜ್ಞಾನಕ್ಕಾಗಿ ಮೋಕ್ಷದ ಹಂಗಿಲ್ಲ, ಅವನು ಸದಾ ಸರ್ವದಾ ಪರಿಪೂರ್ಣ ಜ್ಞಾನಿ. ಅವನ ಅವತಾರಗಳಲ್ಲಿ ಅವನು ತಂದೆ ತಾಯಿ ಗುರುವನ್ನು ಪಡೆಯುವ ನಾಟಕ ಸಾಮಾಜಿಕ ಶಿಸ್ತಿಗಾಗಿ ಅಷ್ಟೇ, ಅವನು ತನ್ನ ಅನಂತ ಸ್ವರೂಪಗಳಲ್ಲಿಯು ಅನಂತವಾಗಿ ನಿರಂತರವಾಗಿ ಪರಿಪೂರ್ಣ ಜ್ಞಾನಿ, ಯಾರಿಗೆ ಮೋಕ್ಷದ ಅವಶ್ಯಕತೆಯೇ ಇಲ್ಲವೋ ಅವನು ಕೂಡ ಹುಟ್ಟುವ ತನ್ನ ಅವತಾರ ಮುಗಿಸುವ ನಾಟಕ ಆಡುತ್ತಾನೆ, ಹಾಗೆ ಅವನು ನಾಟಕ ಆಡುವುದು, ನಾವು ಜೀವರಿಗೆ ಹುಟ್ಟು ಸಾವುಗಳ ನಿರಂತರತೆಯ ಬಗ್ಗೆ ತಿಳಿ ಹೇಳಲೆಂದೆಯೇ.
ಮೋಕ್ಷದಲ್ಲಿ ಭಗವಂತನ ಬಗೆಗಿನ ಜ್ಞಾನ ಆಯಾ ಜೀವನಿಗೆ ನೂರಕ್ಕೆ ನೂರರಷ್ಟು ಅವರ ಯೋಗ್ಯತೆಯಷ್ಟು ಪಡೆಯುವ ಅವಕಾಶ ಇರುತ್ತದೆ, ಅಂದರೆ ಜೀವ ತನ್ನ ಬಗೆಗಿನ ಸಂಪೂರ್ಣ ಜ್ಞಾನ ಪಡೆದರೂ ಭಗವಂತನ ಬಗೆಗಿನ ಜ್ಞಾನ ಸದಾ ವೃದ್ಧಿ ಆಗುತ್ತಲೇ ಇರುತ್ತದೆ, ಆ ವೃದ್ಧಿ ನಿಂತಾಗಲೂ ಜೀವರ ಅನುಭವಗಳು ಭಗವಂತನ ಬಗ್ಗೆ ಸದಾ ವಿಭಿನ್ನ ವಾಗಿಯೇ ಇರುತ್ತವೆ, ಅಂದರೆ ಮೊಕ್ಷದಲ್ಲಿಯೂ ಎಲ್ಲ ಜೀವರ ಯೋಗ್ಯತೆ ಅನುಭವ ಎಲ್ಲವೂ ವಿಭಿನ್ನ, ಅಷ್ಟೇ ಅಲ್ಲ very important, ಯೋಗ್ಯತೆ ಎಷ್ಟೇ ಇದ್ದರೂ ಮೋಕ್ಷ ಸಿಗುವುದು ಭಗವದ್ ಕೃಪೆ ಇಂದಲೇ, ಬೇರೆ ಯಾವ ದಾರಿ ಇಲ್ಲ.
ಜೀವರೆ ದೇವರು ಎಂದುಕೊಳ್ಳುವುದು ಘೋರ ಅಜ್ಞಾನ, ಏಕೆಂದರೆ ಭಗವಂತ ಸದಾ ಜ್ಞಾನಿ, ಅವನು ಈ ಸೃಷ್ಟಿಯಲ್ಲಿ ಇದ್ದರೂ ಅದರ ಹೊರತು, ಸೃಷ್ಟಿ ನಾಶವಾದರೂ, ಅವನು ಅವಿನಾಶಿ, ಅವನಿಗೆ ಎಂದಿಗೂ ನಾಶ ಇಲ್ಲ, ಆದರೆ ಅವನು ತನ್ನ ಅವತಾರ ಸಮಾಪ್ತಿಯ ನಾಟಕ ಆಡ ಬಹುದು, ಆ ಅವತಾರದ ಹೊಸ ಲೀಲೆಗಳನ್ನು ಹಿಂದೆ ಆಡದೆ ಹೋದರು, ಭಕ್ತರಿಗೆ ತನ್ನ ವಿಭಿನ್ನ ರೂಪಗಳ ಲೀಲಿಗಳಿಂದ ಅನಂತ ಅನುಭವ ಜೀವರಿಗೇ ಜಗತ್ತಿಗೆ ಎಂದೆಂದಿಗೂ ಅನಂತವಾಗಿ ಕೊಡುತ್ತಲೇ ಇರುತ್ತಾನೆ, ಜೀವರ ಅರಿವಿಗೆ ಬಂದರು ಬಾರದಿದ್ದರೂ ಅವನ ಲೀಲೆಗಳಿಗೂ ಕೂಡ ಎಂದಿಗೂ ನಾಶ ಇಲ್ಲ.
ಭಗವಂತ ಆದಿಯಲ್ಲೂ ಇದ್ದ, ಅನಾದಿಯಲ್ಲೂ ಇರುತ್ತಾನೆ, ಅವನಿಗೆ ಸದಾಕಾಲ ಅನಂತ ಆದಿ ಅನಾದಿಗಳ ಅರಿವು ಇರುತ್ತದೆ, ಆದರೆ ಅವನಿಗೆ ಆದಿ ಅನಾದಿ ಇಲ್ಲ, ಹೀಗಾಗಿ ಭಗವಂತನೇ ನಮಗೆ ಮೋಕ್ಷ ಕೊಡುವುದು, ನಮ್ಮನ್ನು ನಮಗೆ ತೋರಿಸುವುದು ಆ ಭಗವಂತನೇ ಎಂದು ನಾವು ಅರಿಯ ಬೇಕು, ಮೋಕ್ಷದಲ್ಲಿ ಜೀವ ಮಾಡುವುದು ಆ ಭಗವಂತನ ಅನಂತ ಸೇವೆಯೇ.
ಹೀಗಾಗಿ ಮೋಕ್ಷ ಪಡೆದವರು ಕೂಡ ಜನ್ಮ ತಾಳಿ ದೇಹ ಪಡೆದು, ಭಗವದ್ ಸೇವೆಯಲ್ಲಿ ತೊಡಗಿ ಆ ದೇಹಕ್ಕೆ ನಿವೃತ್ತಿ ಕೊಡುತ್ತಾರೆ, ಅಂದರೆ ಜನ್ಮ ಮೃತ್ಯುಗಳ ಸದುಪಯೋಗ ಮೋಕ್ಷದ ನಂತರವೇ ಸಾಧ್ಯ, ಹಾಗಂತ ಕೇವಲ ಸಾಯುವುದರಿಂದ ಮೋಕ್ಷ ಸಿಗುವುದಿಲ್ಲ, ಅದು ದೇವರ ಕರುಣೆ ಇಂದಲೇ ಸಿಗುವಂತದ್ದು.
ಪುನರ್ ಜನ್ಮ ಗಳಿಂದ ಎಂದಿಗೂ ಮುಕ್ತಿ ಇಲ್ಲ, ದುಃಖದಿಂದ ಅಜ್ಞಾನದಿಂದ ನಿವೃತ್ತಿ ಮುಕ್ತಿ ಇದೆ, ಜನ್ಮಗಳು ಪುನರ್ ಜನ್ಮಗಳು ವರದಾನ ಎಂದು ಅರ್ಥವಾಗುವುದೇ, ತಿಳಿಯುವುದೇ ಮೋಕ್ಷದಲ್ಲಿ, ಆ ವರದಾನಗಳನ್ನು ಜೀವರಿಗೆ ಇರುವ ಶಕ್ತಿಯ ನೂರಕ್ಕೆ ನೂರು ಪಾಲು ಅನುಭವಿಸಲು ಸಾಧ್ಯವಾಗುವುದೇ ಮೋಕ್ಷದಲ್ಲಿ, ಸ್ವ ಸ್ವರೂಪ ಪ್ರಾದುರ್ಭಾವವೇ ಮೋಕ್ಷ.
ಎಲ್ಲರ ಮೋಕ್ಷವು ಒಂದೇ ರೀತಿ ಅಲ್ಲ, ಆದರೆ ಎಲ್ಲರೂ ಮೊಕ್ಷದಲ್ಲಿ ಪಡುವ ಆನಂದ ಅವರ ಪಾಲಿನ ನೂರಕ್ಕೆ ನೂರರಷ್ಟು, at their 100% capacity (ಯೋಗ್ಯತೆ).
ಮೋಕ್ಷದಲ್ಲಿ ಆನಂದ ಎಂದರೆ ತಾತ್ಪೂರ್ತಿಕ ಸುಖ ಅಲ್ಲ, ಅಲ್ಲಿ ಆನಂದ ಎಂದರೆ ಅಜ್ಞಾನ ನಿವೃತ್ತ ಸುಖ, ಮೂಕ್ಷದಲ್ಲಿ ಜೀವ ತನ್ನ ಬಗೆಗಿನ ಅಜ್ಞಾನದಿಂದ ನಿವೃತ್ತ ನಾಗುತ್ತಾನೆ, ಆ ಅಜ್ಞಾನ ನಿವೃತ್ತಿ ಇಂದ ದುಃಖಗಳ ನಿವೃತ್ತಿ ಆಗುತ್ತದೆ.
ಮೋಕ್ಷ ಸಿಗುವುದು ಭಗವದ್ ಕೃಪೆ ಇಂದಲೇ, ಆ ಕೃಪೆ ಭಕ್ತಿ ಇಂದ ಬಂದ ಜ್ಞಾನದಿಂದ ಆಗುತ್ತದೆ, ಭಕ್ತಿ ಬಾರದೆ ಮೋಕ್ಷದ ಶಕ್ತಿ ಸಿಗುವುದಿಲ್ಲ, ಭಕ್ತಿಯು ಕೂಡ ಅಘಾದವಾದ ಜ್ಞಾನವೇ ಆಗಿದೆ, ಆಯಾ ಭಕ್ತಿ ಇಂದ ದೊರೆತ ಜ್ಞಾನದಿಂದಲೇ ಮೋಕ್ಷ ಸಾಧನೆ ಪ್ರಶಸ್ತ ಆಗುತ್ತದೆ, ನಾವು ಮಾಡುವ ಭಕ್ತಿ ಭಗವಂತನಿಗೆ ಹೇಗೆ ಸೇರುತ್ತಿದೆ, ಅವನು ಯಾರು ಎಂದು ಶಾಸ್ತ್ರಗಳ ಜ್ಞಾನ ವಿಜ್ಞಾನದ ಸಹಾಯದಿಂದ ತಿಳಿದು ಕೊಳ್ಳುವುದೇ ಮೋಕ್ಷಕ್ಕೆ ದಾರಿ, ಮೋಕ್ಷ ಸಾಧನೆ ಜನ್ಮ ಜನ್ಮಾಂತರಗಳ ಸಾಧನೆ, ಮೋಕ್ಷವೇ ಎಲ್ಲ ಜೀವರ ಗುರಿಯಾಗಿರಬೇಕು.
ಜೈ ಶ್ರೀ ರಾಮ 🙏