Showing posts with label How it works. Show all posts
Showing posts with label How it works. Show all posts

Saturday, March 29, 2025

ಇ-ರುಪೀ ಎಂದರೇನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ?

 


ಈ ರೂಪಿ ಇದು ಒಂದು ನಗದನ್ನು ಡಿಜಿಟಲ್ ರೂಪದಲ್ಲಿ ಪಾವತಿಸುವ ವಿಧಾನ.

ನಮ್ಮ ದೇಶದ ಕೇಂದ್ರ ಬ್ಯಾಂಕ್ ಅದ ಭಾರತೀಯ ರಿಸರ್ವ್ ಬ್ಯಾಂಕ್ CBDC ಯನ್ನು ಪರಿಚಯಿಸಿದೆ. CBDC ಅಂದರೆ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಅಂತ.

RBI 01/11/2022 ರಂದು e₹ W ಪ್ರಾರಂಭಿಸಲಾಯಿತು

ಮತ್ತೆ 01/12/2022 ರಂದು e₹R ಪ್ರಾರಂಭಿಸಲಾಯಿತು.

ಇಲ್ಲಿ W ಮತ್ತು R ಅಂದರೆ wholesale &retail ಅಂತ.

ತಾವು ತಮ್ಮ ಮೊಬೈಲ್ ನ ಪ್ಲೇ ಸ್ಟೋರ್ ಆಫ್ ಗೆ ಹೋಗಿ e₹ (CBDC) app ಡೌನ್ ಲೋಡ್ ಮಾಡಿಕೊಳ್ಳಿ.ತಮ್ಮ ಬ್ಯಾಂಕ್ SBI ನಲ್ಲಿ ಖಾತೆಗೆ ಹೊಂದಿಕೊಂಡು e₹ SBI ಓಪನ್ ಆಗುತ್ತದೆ. ನಂತರ ಆಕ್ಟಿವೇಟ್ ಮಾಡಿಕೊಂಡು ಆರು ಅಂಕೆ ಯಂ ಪಿನ್ ಅಥವಾ ತಂಬ್ ಇಂಪ್ರೇಷೆನ್ (thumb impression) ಮುಖಾಂತರ ಓಪನ್ ಆಗುತ್ತದೆ. ನಂತರ ತಮ್ಮ ಖಾತೆಯಿಂದ ರೂಪಾಯಿ (ನೋಟ್ ) ಗಳನ್ನು ತರಿಸಿಕೊಂಡು ಈ ಅಫ್ ನಲ್ಲಿ ಇಟ್ಟು ಕೊಳ್ಳಬಹುದು. ನಂತರ ತಾವು ಫೇ ಟಿಯಮ್, ಫೋನ್ ಪೇ ,ಕ್ಯೂ ಆರ್ ಕೋಡ್. ತರಹ ಬಳಸಬಹುದು. ಈ ಆಫ್ ಬಳಸುವಾಗ ರೂಪಾಯಿ ಗಳನ್ನು ಕೊಡಬೇಕಾಗುತ್ತದೆ.

ಹಣ ಬೇಕೇಂದಾಗ ಖಾತೆ ಯಿಂದ ವರ್ಗಾವಣೆ ಮಾಡಿಕೊಳ್ಳಬೇಕು. ರೂಪಾಯಿ ೫೦೦,೨೦೦,೧೦೦,೫೦, ೨೦, ೧೦,೫,೨,೧ ರ ಕರೆನ್ಸಿ ನೋಟುಗಳು ಮತ್ತು ನಾಣ್ಯಗಳನ್ನು ತಮ್ಮ ಆಫ್ ಇಟ್ಟು ಕೊಳ್ಳಬಹುದು. ಆಫ್ ನ್ನು ಬಳಿಸಿದರೆ ಮಜಾ ಸಿಗುತ್ತೆ.

CBDC ಬಳಿಸಿಕೊಳ್ಳಿ.ಡಿಜಿಟಲ್ ಆಗಿ. ಈ ಕೆಳಗಿನ ಲಿಂಕ್ ಬಳಿಸಿ CBDC ಯಾವರೀತಿ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ತಿಳಿಯಿರಿ.


Monday, March 17, 2025

ಫಾಸ್ಟ್ಯಾಗ್ ಹೇಗೆ ಕೆಲಸ ಮಾಡುತ್ತದೆ ?

 ಒಟ್ಟೂ 7 ರೀತಿಯ/ಬಣ್ಣದ ಫಾಸ್ಟ್ ಟ್ಯಾಗ್ ಗಳಿವೆ.

ಇದು ಆರ್ ಎಫ್ಐಡಿ ( RFID) ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಟೆಕ್ನಾಲಜಿಯಿಂದ ಕೆಲಸ‌ ಮಾಡುತ್ತದೆ.
ಇದರಲ್ಲಿ ಪ್ರಮುಖವಾಗಿ 2 ಭಾಗಗಳಿವೆ. 
ಮೊದಲನೆಯದು RFID ಟ್ಯಾಗ್ ಅಥವಾ ಫಾಸ್ಟ್ಯಾಗ್ ಮತ್ತು ಇನ್ನೊಂದು RFID ಸ್ಕ್ಯಾನರ್, ನಿಮ್ಮ ವಾಹನ ಫಾಸ್ಟ್ಯಾಗ್ ಲೇನ್ ಗೆ ಪ್ರವೇಶ ಮಾಡುತ್ತಿದ್ದಂತೆಯೆ ಈ ಸ್ಕ್ಯಾನರ್ ನಿಮ್ಮ ವಾಹನಕ್ಕಿರುವ ಫಾಸ್ಟ್ಯಾಗ್ ನ್ನು ಸ್ಕ್ಯಾನ್ ಮಾಡಲು ಪ್ರಾರಂಭಿಸುತ್ತದೆ.

ಫಾಸ್ಟ್ಯಾಗ್ ನಲ್ಲಿ ಚಿಪ್ ಮತ್ತು ಎಂಟಿನಾ ಇರುತ್ತದೆ. ಇವು ಬರಿಗಣ್ಣಿಗೆ ಕಾಣುವುದಿಲ್ಲ.

ಈ ಚಿಪ್ ನಲ್ಲಿ ನಿಮ್ಮ ವಾಹನದ ಕ್ಲಾಸ್, ತೂಕ, ಫಾಸ್ಟ್ಯಾಗ್ ಐಡಿ, ವಾಹನ ನೋಂದಣಿ ಸಂಖ್ಯೆ ಮತ್ತು ವೀಲ್ ಬೇಸ್ ಗಳ ಮಾಹಿತಿ ಇರುತ್ತದೆ. RFID ಸ್ಕ್ಯಾನರ್ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ಟೋಲ್ ಪ್ಲಾಝಾ ಸಿಸ್ಟಮ್ ಅಂದರೆ ಕಂಪ್ಯೂಟರ್ ಗೆ ಕಳುಹಿಸುತ್ತದೆ. ನೀವು ನೋಡಿರಬಹುದು ಆ ಕಂಪ್ಯೂಟರ್ ನ ಸ್ಕ್ರೀನ್ ನಲ್ಲಿ ಈ ಎಲ್ಲಾ ಮಾಹಿತಿಗಳು ಸಂಗ್ರಹವಾಗುತ್ತದೆ. ಆ ಕಂಪ್ಯೂಟರ್ ನಿಂದ ಮಾಹಿತಿ ಅಕ್ವಾಯರ್ ಬ್ಯಾಂಕ್ ಗೆ ವರ್ಗಾವಣೆ ಆಗುತ್ತದೆ.

ಇದರಲ್ಲಿ 2 ಮುಖ್ಯ ಅಂಶಗಳಿವೆ,
ಅಕ್ವಾಯರ್ ಬ್ಯಾಂಕ್ ಮತ್ತು ಇಶ್ಯುವರ್ ಬ್ಯಾಂಕ್.ಇದನ್ನು ಒಂದು ಉದಾಹರಣೆಯ ಮೂಲಕ ತಿಳಿಯೋಣ. ಶಾಪಿಂಗ್ ಮಾಡಿದ ಬಳಿಕ ನಾನು ನನ್ನ ಕ್ರೆಡಿಟ್ ಕಾರ್ಡ್ ನಿಂದ ಬಿಲ್ ನ್ನು ಪಾವತಿ ಮಾಡುತ್ತೇನೆ, ನನ್ನ ಕ್ರೆಡಿಟ್ ಕಾರ್ಡ್ ಇಶ್ಯು ಮಾಡಿದ ಬ್ಯಾಂಕ್ ಇಶ್ಯುವರ್ ಬ್ಯಾಂಕ್ ಅಗಿದೆ. ಮತ್ತು ನನ್ನ ಕಾರ್ಡ್ ನಲ್ಲಿ ಹಣವಿದೆಯೆ, ನನ್ನ ಕಾರ್ಡ್ ವಹಿವಾಟಿಗೆ ಅರ್ಹವಿದೆಯೆ ಎಂದು ಆ ಅಂಗಡಿ ಮಾಲೀಕನ ಬ್ಯಾಂಕ್ ಪರಿಶೀಲಿಸುತ್ತದೆ ಆ ಬ್ಯಾಂಕ್ ಅಕ್ವಾಯರ್ ಬ್ಯಾಂಕ್ ಎನಿಸಿಕೊಳ್ಳುತ್ತದೆ.ಹಾಗೆಯೇ ಟೋಲ್ ಗೆ ಕಾರ್ಡ್ ನ್ನು ಇಶ್ಯು ಮಾಡಿದ ಬ್ಯಾಂಕ್ ಇಶ್ಯುವರ್ ಬ್ಯಾಂಕ್ ಆಗುತ್ತದೆ ಮತ್ತು ಟೋಲ್ ನವರ ಪರವಾಗಿ ಕೆಲಸ ಮಾಡುವ ಬ್ಯಾಂಕ್ ಅಂದರೆ ಆ ಕಾರ್ಡ್ ಗಳನ್ನು ಸ್ವೀಕರಿಸುವ ಬ್ಯಾಂಕ್ ಅಕ್ವಾಯರ್ ಕಾರ್ಡ್ ಆಗುತ್ತದೆ.

ಅಕ್ವಾಯರ್ ಬ್ಯಾಂಕ್ ಗೆ ಕಾರ್ಡ್ ನ ಮಾಹಿತಿಗಳು ಸಿಗುತ್ತಿದ್ದಂತೆಯೆ ಬ್ಯಾಂಕ್ ಅವಮಾಡುತ್ತದೆ. NETC ಮ್ಯಾಪರ್ ಗೆ ವರ್ಗಾವಣೆ ಮಾಡುತ್ತದೆ.ಅದರಲ್ಲಿ ಇವತ್ತಿನವರೆಗೆ ಇಶ್ಯು ಆಗಿದ (ಪ್ರಸ್ತುತ 2 ಕೋಟಿ) ಎಲ್ಲಾ ಕಾರ್ಡ್ ಗಳ ಮಾಹಿತಿ ಇರುತ್ತದೆ.NETC ಮ್ಯಾಪರ್ ಆ ಕಾರ್ಡ್ ನ ಮಾಹಿತಿಗಳು ಸರಿ ಇದೆಯೆ ಇಲ್ಲವೆ ಎಂದು ಪರಿಶೀಲಿಸಿ ಅಕ್ವಾಯರ್ ಬ್ಯಾಂಕ್ ಗೆ ಕಳುಹಿಸುತ್ತದೆ.
ಮಾಹಿತಿ ಸರಿ ಇಲ್ಲದಿದ್ದರೆ ಅಕ್ವಾಯರ್ ಬ್ಯಾಂಕ್ ಟೋಲ್ ಕಂಪ್ಯೂಟರ್ ಗೆ ಫಾಸ್ಟ್ಯಾಗ್ ಸರಿ ಇಲ್ಲ ಎಂದು ತಿಳಿಸುತ್ತದೆ. ಫಾಸ್ಟ್ಯಾಗ್ ವ್ಯಾಲಿಡ್ ಇದ್ದರೆ ಅಕ್ವಾಯರ್ ಬ್ಯಾಂಕ್ ಮೊತ್ತವನ್ನು ಲೆಕ್ಕಹಾಕಿ NETC ಮ್ಯಾಪರ್ ಗೆ ಡೆಬಿಟ್ ರಿಕ್ವೆಸ್ಟ್ ನ್ನು ಕಳುಹಿಸುತ್ತದೆ.NETC ಮ್ಯಾಪರ್ ಆ ಡೆಬಿಟ್ ರಿಕ್ವೆಸ್ಟ್ ನ್ನು ಇಶ್ಯುವರ್ ಬ್ಯಾಂಕ್ ಗೆ ಕಳುಹಿಸುತ್ತದೆ. ಇಶ್ಯುವರ್ ಬ್ಯಾಂಕ್ ಬಳಕೆದಾರನ ಖಾತೆಯಿಂದ ಹಣವನ್ನು ತೆಗೆದು NETC ಮ್ಯಾಪರ್ ಗೆ ಇನ್ಫಾರ್ಮ್ ಮಾಡುತ್ತದೆ.NETC ಮ್ಯಾಪರ್ ಅಕ್ವಾಯರ್ ಬ್ಯಾಂಕ್ ಗೆ ಇನ್ಫಾರ್ಮ್ ಮಾಡುತ್ತದೆ ಮತ್ತು ಅಕ್ವಾಯರ್ ಬ್ಯಾಂಕ್ ಟೋಲ್ ಸಿಸ್ಟಮ್ ಗೆ ವ್ಯವಹಾರ ಯಶಸ್ವಿಯಾಗಿದೆ ಎಂದು ಸಂದೇಶ ಕಳುಹಿಸುತ್ತದೆ ಮತ್ತು ಗೇಟ್ ತೆರೆದುಕೊಳ್ಳುತ್ತದೆ.

Friday, February 14, 2025

ಆರ್ಎಫ್ಐಡಿ ಟ್ಯಾಗ್ ಗಳು ಹೇಗೆ ಕಾರ್ಯನಿರ್ವಹಿಸುತ್ತವೆ?

 RFID ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಸಿಸ್ಟಮ್.

ಇದರಲ್ಲಿ ಮುಖ್ಯವಾಗಿ ಮೂರು ಭಾಗಗಳಿರುತ್ತವೆ - ಟ್ಯಾಗ್, ಆಂಟೆನಾ ಮತ್ತು ರೀಡರ್.

ಒಂದು ಉದಾಹರಣೆ ಮೂಲಕ ಇವನ್ನು ಅರಿಯೋಣ.

ಆಭರಣಗಳ ಅಂಗಡಿಯಲ್ಲಿ ಸಾವಿರಾರು ಬೆಲೆಬಾಳುವ ಸಾಮಾನುಗಳಿರುತ್ತವೆ. ಅಂತಹ ಒಂದೊದಕ್ಕೂ ಒಂದು ಟ್ಯಾಗ್ ಅಂಟಿಸಿದ್ದರೆ ಅವು ಮೈಕ್ರೋವೇವ್ ಅಥವಾ ರೇಡಿಯೋ ಫ್ರೀಕ್ವೆನ್ಸಿಯ ಅಲೆಗಳನ್ನು ಆಂಟೆನಾ ಮೂಲಕ ಬಿತ್ತರಿಸುತ್ತವೆ. ಪ್ರತಿಯೊಂದರ ಅಲೆಯಲ್ಲೂ ಆ ವಸ್ತುವಿನ ಕೋಡ್ (ವಿವರ) ಇರುತ್ತದೆ. ಒಂದು ರೀಡರ್ ಈ ಅಲೆಗಳನ್ನು ಹಿಡಿದು ಅವುಗಳ ವಿವರಗಳನ್ನು ಕಂಪ್ಯೂಟರಲ್ಲಿ ಬರೆದಿಡುತ್ತದೆ. ಡಬ್ಬಗಳ ಒಳಗಿರುವ ಆಭರಣಗಳನ್ನೂ ಹೀಗೆ ಪತ್ತೆಹಚ್ಚಬಹುದು.

ದಿನದ ಕೊನೆಯಲ್ಲಿ ಇಡೀ ಅಂಗಡಿಯ ಸಾವಿರಾರು ಆಭರಣಗಳ ಸ್ಟಾಕ್ ಪರಿಶೀಲಿಸಲು ಇದು ತುಂಬಾ ಸಹಾಯಕಾರಿ. ಜನರು ಒಂದೊಂದು ಡಬ್ಬ ತೆಗೆದು ಆಭರಣಗಳ ಪಟ್ಟಿ ಮಾಡಲು ಇಡೀ ದಿನ ಬೇಕಾದರೆ ಆರ್ ಎಫ್ ಐಡಿ ತಂತ್ರಜ್ಞಾನದಿಂದ ಕೆಲವೇ ನಿಮಿಷಗಳಲ್ಲಿ ಕೆಲಸ ಮುಗಿಯುತ್ತದೆ.

ಭೂಗರ್ಭದಲ್ಲಿ ಗಣಿಗಳಲ್ಲಿ ಕೆಲಸ ಮಾಡುವವರ ಮೇಲೆ ಸದಾ ನಿಗಾ ಇಡಲು ಈ ತಂತ್ರಜ್ಞಾನ ಉಪಯೋಗಕ್ಕೆ ಬರುತ್ತದೆ. ಇದೇ ರೀತಿ ಸಮುದ್ರದಲ್ಲಿ ಎಣ್ಣೆ ಮತ್ತು ಅನಿಲ ತೆಗೆಯುವ ಕಡೆ ಕೆಲಸ ಮಾಡುವವರ ಮೇಲೂ ಗಮನ ಇಡಬಹುದು.

ಕಾರ್ ಕಾರ್ಖಾನೆಗಳಲ್ಲಿ ಯಾವ ಕಾರು ಯಾವ ತಯಾರಿಕೆಯ ಹಂತದಲ್ಲಿದೆ ಎಂಬ ವಿವರ ಸದಾಕಾಲ ಸಿಗುತ್ತದೆ.

ವ್ಯಾಕ್ಸೀನ್ ಮುಂತಾದ ಔಷಧಿಗಳನ್ನು ಕಾರ್ಖಾನೆಯಿಂದ ಹಿಡಿದು ಉಗ್ರಾಣದ ಮೂಲಕ ಅಂಗಡಿ ತಲುಪುವವರೆಗೆ ಟ್ರ್ಯಾಕ್ ಮಾಡಬಹುದು.

ಸಾಕುಪ್ರಾಣಿಗಳ ದೇಹದಲ್ಲೇ ಆರ್ ಎಫ್ ಐಡಿ ಟ್ಯಾಗ್ ಅಳವಡಿಸಬಹುದು.

ಲೈಬ್ರರಿ ಪುಸ್ತಕಗಳಿಗೂ ಆರ್ ಎಫ್ ಐಡಿ ಟ್ಯಾಗ್ ಅಳವಡಿಸಬಹುದು.

ಕಾರ್ ಕೀಗಳಲ್ಲೂ ಆರ್ ಎಫ್ ಐಡಿ ಟ್ರಾನ್ಸ್ ಮಿಟರ್ ಇರುತ್ತದೆ.

ಟೋಲ್ ಗೇಟ್ ಗಳಲ್ಲಿ ತುರ್ತಾಗಿ ಸುಂಕ ಪಾವತಿ ಮಾಡುವ ಫಾಸ್ಟಾಗ್ ಕೂಡ ಆರ್ ಎಫ್ ಐಡಿ ತಂತ್ರಜ್ಞಾನ ವನ್ನು ಉಪಯೋಗಿಸುತ್ತದೆ.

ಆರ್ ಎಫ್ ಐಡಿ ಟ್ಯಾಗ್ ಗಳಿಗೆ ಬ್ಯಾಟರಿ ಜೋಡಿಸಿದ್ದರೆ ಅವು ಸದಾ ಸಿಗ್ನಲ್ ಹರಡುತ್ತಿರುತ್ತವೆ. ಅವನ್ನು ಆಕ್ಟಿವ್ ಟ್ಯಾಗ್ ಎಂದು ಕರೆಯುತ್ತಾರೆ.

ಬ್ಯಾಟರಿ ಇಲ್ಲದ ಟ್ಯಾಗ್ ಗಳು ರೀಡರ್ ಕಳಿಸುವ ಅಲೆಗಳಿಂದ ಶಕ್ತಿ ಪಡೆಯುತ್ತವೆ. ಅವನ್ನು ಪ್ಯಾಸಿವ್ ಟ್ಯಾಗ್ ಎಂದು ಕರೆಯುತ್ತಾರೆ.

ಕ್ರೆಡಿಟ್ ಕಾರ್ಡ್ ಗಳಲ್ಲೂ ಪ್ಯಾಸಿವ್ ಟ್ಯಾಗ್ ಇರಬಹುದು.

ಟ್ವಿಟರ್ ಹ್ಯಾಶ್‌ಟ್ಯಾಗ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ?

 

ಹ್ಯಾಷ್ ಟ್ಯಾಗ್ ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಅನ್ನುವುದಕ್ಕಿಂತ ಮೊದಲು ಅದರ ಇತಿಹಾಸ ಮತ್ತು ಹ್ಯಾಷ್ ಟ್ಯಾಗ್ ಎಂದರೇನು ಎನ್ನುವುದನ್ನಾ‌‌‌‌‌ ತಿಳ್ಕಳೋಣಾ.

2007 ರಲ್ಲಿ ಮೊದಲ‌ ಬಾರಿಗೆ ಹ್ಯಾಷ್ ಟ್ಯಾಗ್ ಅನ್ನು ಪರಿಚಯಿಸಲಾಯ್ತು.ಅದಾದ ನಂತರ ಅದು ನಿಧಾನವಾಗಿ ಪ್ರಸಿದ್ಧಿಯನ್ನೂ ಪಡೆಯಿತು.ಪ್ರಸ್ತುತ ಸ್ಥಿತಿಯಲ್ಲಂತೂ ಹ್ಯಾಷ್ ಟ್ಯಾಗ್ ಇಲ್ಲದೇ‌ ಇರುವ ಪೋಸ್ಟ್ ಗಳೇ ಸಿಗೋದಿಲ್ಲ.‌ ಅಸ್ಟರ ಮಟ್ಟಿಗೆ ಬೆಳೆದಿದೆ.

ಹ್ಯಾಷ್ ಟ್ಯಾಗ್ ನ್ನಾ ಏಕೆ ಬಳಸಬೇಕು ?
ನೀವು ಯಾವುದೋ‌ ನಿರ್ದಿಷ್ಟ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನಾ ಇತರ ಜನರಿಗೆ ತಿಳಿಸ್ಬೇಕು‌ ಅಂತಾ ಬಯಸ್ತೀರಿ ಆದರೆ ನಿಮ್ಮ ಅಭಿಮಾನಿಗಳು ಅಥವಾ ನಿಮಗೆ ಪರಿಚಯ ಇರುವವರು ಅಷ್ಟು ದೊಡ್ಡ ಪ್ಲಾಟ್ ಪಾರಂ ನಲ್ಲಿ ನಿಮ್ಮ ಪೋಸ್ಟನ್ನು ಹುಡುಕುವುದಾದರೂ ಹೇಗೆ ?

ಅಥವಾ ಯಾವುದೋ ವ್ಯಕ್ತಿಗೆ/ವಿಷಯಕ್ಕೆ ಎಷ್ಟು ಜನರ ಒಪ್ಪಿಗೆ/ ವಿರೋಧ ಇದೆ ಎನ್ನೋದನ್ನಾ ತಿಳಿಯೋಕೆ ಇದು ಅತ್ಯತ್ತಮ ವಿಧಾನ

ಇನ್ನೂ ಸರಳವಾಗಿ ಹೇಳಬೇಕು‌ ಅಂದ್ರೆ, ಒಂದು‌ ನಿರ್ದಿಷ್ಟ ವಿಷಯವನ್ನು ಹುಡುಕುತ್ತಿರುವವರಿಗಾಗಿ ಹ್ಯಾಷ್ ಟ್ಯಾಗ್ ಮಾಡಲ್ಪಟ್ಟಿದೆ.

ಹ್ಯಾಷ್ ಟ್ಯಾಗ್ ಹೇಗೆ ಕಾರ್ಯ ನಿರ್ವಹಿಸುತ್ತದೆ?
ಒಂದು‌ ಉದಾಹರಣೆ‌ ತೆಗದ್ ಕೊಳ್ಳೋಣ.
ನಿಮ್ಮ ಊರಿನ ಬಸ್ ಸ್ಟ್ಯಾಂಡ್ ಹತ್ರ ಒಬ್ಬ ವ್ಯಕ್ತಿ ಯಾವಾಗಲೂ ಕುತ್ಗೊಂಡಿರ್ತಾನೆ ಅಂತ ಇಟ್ಗೊಳಣಾ. ಎಲ್ಲಿಗೆ ಹೋಗೋದಿದ್ರೂ ಆ ಬಸ್ ಸ್ಟ್ಯಾಂಡ್‌ನ‌ ಮೂಲಕಾನೇ ಹೋಗ್ಬೇಕು.ಈಗ ನೀವು ಊರಿನ‌ ಇನ್ನೊಬ್ಬ ವ್ಯಕ್ತಿಯನ್ನಾ ಹುಡುಕ್ತಾ ಇದೀರಿ. ನೀವು ನಿಮ್ಗೆ ಸಿಕ್ಕ ಸಿಕ್ಕಿದವರ ಹತ್ರಾ ಎಲ್ಲಾ ಆ ವ್ಯಕ್ತಿನ‌ ಎಲ್ಲಾದ್ರು ನೋಡಿದಿರಾ ಅಂತ ಕೇಳೊ ಬದಲು ನೀವು ಆ ಬಸ್ ಸ್ಟ್ಯಾಂಡ್ ನ ಹತ್ರ ಕುತ್ಕೊಂಡಿರೋ‌ ವ್ಯಕ್ತಿ ಹತ್ರ ಹೋಗಿ ಕೇಳಿದ್ರೆ ಆತ ಎಲ್ಲಾ ಮಾಹಿತಿ ಕೊಡ್ತಾನೆ.ನಿಮ್ಮ ಹಾಗೆ ಇನ್ಯಾರೋ‌ ಇನ್ಯಾರನ್ನೋ ಹುಡುಕ್ತಾ ಇರ್ತಾರೆ ಅವ್ರೂ ಕೂಡಾ ಬಸ್ ಸ್ಟ್ಯಾಂಡ್ ನ‌
 ಬಳಿ‌ ಇರೋವ್ರ ಹತ್ರ ಹೋಗಿ ಕೇಳಿದ್ರೆ ಎಲ್ಲಾ ಮಾಹಿತಿ‌ ಸಿಕ್ ಬಿಡತ್ತೆ.

ಹಾಗೆಯೇ ಹ್ಯಾಷ್ ಟ್ಯಾಗ್ ಕೂಡಾ ನೀವು ನಿರ್ದಿಷ್ಟವಾಗಿ‌ ಹುಡುಕ್ತಾ ಇರೋ ವಿಷಯದ ಬಗ್ಗೆ ನಿಮಗೆ ಮಾಹಿತಿಯನ್ನಾ ಕೊಡತ್ತೆ.ಆ ಬಸ್ ಸ್ಟ್ಯಾಂಡ್ ನತ್ರ ಕುಳಿತ್ಕೊಂಡಿರೂ ವ್ಯಕ್ತಿಯನ್ನೇ ಅಲ್ಗೋರಿಥಂ (algorithm) ಅಂತಾ ಕರಿತಾರೆ.

ಹ್ಯಾಷ್ ಟ್ಯಾಗ್ ಗಳನ್ನಾ ವಾಟ್ಸಾಪ್ ನಲ್ಲಿ ಬಳಸೋದ್ರಿಂದ ಏನೂ ಪ್ರಯೋಜನವಾಗಲ್ಲ.
#KeepSmiling:)
ಹ್ಯಾಷ್ ಟ್ಯಾಗ್ ಗಳಲ್ಲಿ ಸ್ಷೆಶಲ್ ಕ್ಯಾರೆಕ್ಟರ್ಸ ಅಂದರೆ ಶಬ್ದ ಮತ್ತು ಸಂಖ್ಯೆಗಳನ್ನು ಬಿಟ್ಟು ಇನ್ನೇನನ್ನೂ ಬಳಸಬಾರದು.

Wednesday, February 12, 2025

ಎಲೆಕ್ಟ್ರಾನಿಕ್ ಥರ್ಮೋಮೀಟರ್ ಹೇಗೆ ಕೆಲಸ ಮಾಡುತ್ತದೆ?

 ಎಲೆಕ್ಟ್ರಾನಿಕ್ ಥರ್ಮಾಮೀಟರಿನಲ್ಲಿ ಒಂದು ಥರ್ಮಿಸ್ಟರ್ ಇರುತ್ತದೆ. ಅದು ತಾಪಮಾನಕ್ಕೆ ತಕ್ಕಂತೆ ತನ್ನ ರೆಸಿಸ್ಟನ್ಸ್ ಬದಲಿಸುತ್ತದೆ.

ಈ ಬದಲಾವಣೆಯನ್ನು ಒಂದು ಮೈಕ್ರೋಚಿಪ್ ಮೂಲಕ ತಾಪಮಾನವನ್ನು ಲೆಕ್ಕ ಹಾಕಿ ಅದನ್ನು ಅಂಕಿಗಳಲ್ಲಿ ತೋರಿಸುತ್ತದೆ.