ಫಾಸ್ಟ್ಯಾಗ್ ಹೇಗೆ ಕೆಲಸ ಮಾಡುತ್ತದೆ ?

SANTOSH KULKARNI
By -
1 minute read
0

 ಒಟ್ಟೂ 7 ರೀತಿಯ/ಬಣ್ಣದ ಫಾಸ್ಟ್ ಟ್ಯಾಗ್ ಗಳಿವೆ.

ಇದು ಆರ್ ಎಫ್ಐಡಿ ( RFID) ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಟೆಕ್ನಾಲಜಿಯಿಂದ ಕೆಲಸ‌ ಮಾಡುತ್ತದೆ.
ಇದರಲ್ಲಿ ಪ್ರಮುಖವಾಗಿ 2 ಭಾಗಗಳಿವೆ. 
ಮೊದಲನೆಯದು RFID ಟ್ಯಾಗ್ ಅಥವಾ ಫಾಸ್ಟ್ಯಾಗ್ ಮತ್ತು ಇನ್ನೊಂದು RFID ಸ್ಕ್ಯಾನರ್, ನಿಮ್ಮ ವಾಹನ ಫಾಸ್ಟ್ಯಾಗ್ ಲೇನ್ ಗೆ ಪ್ರವೇಶ ಮಾಡುತ್ತಿದ್ದಂತೆಯೆ ಈ ಸ್ಕ್ಯಾನರ್ ನಿಮ್ಮ ವಾಹನಕ್ಕಿರುವ ಫಾಸ್ಟ್ಯಾಗ್ ನ್ನು ಸ್ಕ್ಯಾನ್ ಮಾಡಲು ಪ್ರಾರಂಭಿಸುತ್ತದೆ.

ಫಾಸ್ಟ್ಯಾಗ್ ನಲ್ಲಿ ಚಿಪ್ ಮತ್ತು ಎಂಟಿನಾ ಇರುತ್ತದೆ. ಇವು ಬರಿಗಣ್ಣಿಗೆ ಕಾಣುವುದಿಲ್ಲ.

ಈ ಚಿಪ್ ನಲ್ಲಿ ನಿಮ್ಮ ವಾಹನದ ಕ್ಲಾಸ್, ತೂಕ, ಫಾಸ್ಟ್ಯಾಗ್ ಐಡಿ, ವಾಹನ ನೋಂದಣಿ ಸಂಖ್ಯೆ ಮತ್ತು ವೀಲ್ ಬೇಸ್ ಗಳ ಮಾಹಿತಿ ಇರುತ್ತದೆ. RFID ಸ್ಕ್ಯಾನರ್ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ಟೋಲ್ ಪ್ಲಾಝಾ ಸಿಸ್ಟಮ್ ಅಂದರೆ ಕಂಪ್ಯೂಟರ್ ಗೆ ಕಳುಹಿಸುತ್ತದೆ. ನೀವು ನೋಡಿರಬಹುದು ಆ ಕಂಪ್ಯೂಟರ್ ನ ಸ್ಕ್ರೀನ್ ನಲ್ಲಿ ಈ ಎಲ್ಲಾ ಮಾಹಿತಿಗಳು ಸಂಗ್ರಹವಾಗುತ್ತದೆ. ಆ ಕಂಪ್ಯೂಟರ್ ನಿಂದ ಮಾಹಿತಿ ಅಕ್ವಾಯರ್ ಬ್ಯಾಂಕ್ ಗೆ ವರ್ಗಾವಣೆ ಆಗುತ್ತದೆ.

ಇದರಲ್ಲಿ 2 ಮುಖ್ಯ ಅಂಶಗಳಿವೆ,
ಅಕ್ವಾಯರ್ ಬ್ಯಾಂಕ್ ಮತ್ತು ಇಶ್ಯುವರ್ ಬ್ಯಾಂಕ್.ಇದನ್ನು ಒಂದು ಉದಾಹರಣೆಯ ಮೂಲಕ ತಿಳಿಯೋಣ. ಶಾಪಿಂಗ್ ಮಾಡಿದ ಬಳಿಕ ನಾನು ನನ್ನ ಕ್ರೆಡಿಟ್ ಕಾರ್ಡ್ ನಿಂದ ಬಿಲ್ ನ್ನು ಪಾವತಿ ಮಾಡುತ್ತೇನೆ, ನನ್ನ ಕ್ರೆಡಿಟ್ ಕಾರ್ಡ್ ಇಶ್ಯು ಮಾಡಿದ ಬ್ಯಾಂಕ್ ಇಶ್ಯುವರ್ ಬ್ಯಾಂಕ್ ಅಗಿದೆ. ಮತ್ತು ನನ್ನ ಕಾರ್ಡ್ ನಲ್ಲಿ ಹಣವಿದೆಯೆ, ನನ್ನ ಕಾರ್ಡ್ ವಹಿವಾಟಿಗೆ ಅರ್ಹವಿದೆಯೆ ಎಂದು ಆ ಅಂಗಡಿ ಮಾಲೀಕನ ಬ್ಯಾಂಕ್ ಪರಿಶೀಲಿಸುತ್ತದೆ ಆ ಬ್ಯಾಂಕ್ ಅಕ್ವಾಯರ್ ಬ್ಯಾಂಕ್ ಎನಿಸಿಕೊಳ್ಳುತ್ತದೆ.ಹಾಗೆಯೇ ಟೋಲ್ ಗೆ ಕಾರ್ಡ್ ನ್ನು ಇಶ್ಯು ಮಾಡಿದ ಬ್ಯಾಂಕ್ ಇಶ್ಯುವರ್ ಬ್ಯಾಂಕ್ ಆಗುತ್ತದೆ ಮತ್ತು ಟೋಲ್ ನವರ ಪರವಾಗಿ ಕೆಲಸ ಮಾಡುವ ಬ್ಯಾಂಕ್ ಅಂದರೆ ಆ ಕಾರ್ಡ್ ಗಳನ್ನು ಸ್ವೀಕರಿಸುವ ಬ್ಯಾಂಕ್ ಅಕ್ವಾಯರ್ ಕಾರ್ಡ್ ಆಗುತ್ತದೆ.

ಅಕ್ವಾಯರ್ ಬ್ಯಾಂಕ್ ಗೆ ಕಾರ್ಡ್ ನ ಮಾಹಿತಿಗಳು ಸಿಗುತ್ತಿದ್ದಂತೆಯೆ ಬ್ಯಾಂಕ್ ಅವಮಾಡುತ್ತದೆ. NETC ಮ್ಯಾಪರ್ ಗೆ ವರ್ಗಾವಣೆ ಮಾಡುತ್ತದೆ.ಅದರಲ್ಲಿ ಇವತ್ತಿನವರೆಗೆ ಇಶ್ಯು ಆಗಿದ (ಪ್ರಸ್ತುತ 2 ಕೋಟಿ) ಎಲ್ಲಾ ಕಾರ್ಡ್ ಗಳ ಮಾಹಿತಿ ಇರುತ್ತದೆ.NETC ಮ್ಯಾಪರ್ ಆ ಕಾರ್ಡ್ ನ ಮಾಹಿತಿಗಳು ಸರಿ ಇದೆಯೆ ಇಲ್ಲವೆ ಎಂದು ಪರಿಶೀಲಿಸಿ ಅಕ್ವಾಯರ್ ಬ್ಯಾಂಕ್ ಗೆ ಕಳುಹಿಸುತ್ತದೆ.
ಮಾಹಿತಿ ಸರಿ ಇಲ್ಲದಿದ್ದರೆ ಅಕ್ವಾಯರ್ ಬ್ಯಾಂಕ್ ಟೋಲ್ ಕಂಪ್ಯೂಟರ್ ಗೆ ಫಾಸ್ಟ್ಯಾಗ್ ಸರಿ ಇಲ್ಲ ಎಂದು ತಿಳಿಸುತ್ತದೆ. ಫಾಸ್ಟ್ಯಾಗ್ ವ್ಯಾಲಿಡ್ ಇದ್ದರೆ ಅಕ್ವಾಯರ್ ಬ್ಯಾಂಕ್ ಮೊತ್ತವನ್ನು ಲೆಕ್ಕಹಾಕಿ NETC ಮ್ಯಾಪರ್ ಗೆ ಡೆಬಿಟ್ ರಿಕ್ವೆಸ್ಟ್ ನ್ನು ಕಳುಹಿಸುತ್ತದೆ.NETC ಮ್ಯಾಪರ್ ಆ ಡೆಬಿಟ್ ರಿಕ್ವೆಸ್ಟ್ ನ್ನು ಇಶ್ಯುವರ್ ಬ್ಯಾಂಕ್ ಗೆ ಕಳುಹಿಸುತ್ತದೆ. ಇಶ್ಯುವರ್ ಬ್ಯಾಂಕ್ ಬಳಕೆದಾರನ ಖಾತೆಯಿಂದ ಹಣವನ್ನು ತೆಗೆದು NETC ಮ್ಯಾಪರ್ ಗೆ ಇನ್ಫಾರ್ಮ್ ಮಾಡುತ್ತದೆ.NETC ಮ್ಯಾಪರ್ ಅಕ್ವಾಯರ್ ಬ್ಯಾಂಕ್ ಗೆ ಇನ್ಫಾರ್ಮ್ ಮಾಡುತ್ತದೆ ಮತ್ತು ಅಕ್ವಾಯರ್ ಬ್ಯಾಂಕ್ ಟೋಲ್ ಸಿಸ್ಟಮ್ ಗೆ ವ್ಯವಹಾರ ಯಶಸ್ವಿಯಾಗಿದೆ ಎಂದು ಸಂದೇಶ ಕಳುಹಿಸುತ್ತದೆ ಮತ್ತು ಗೇಟ್ ತೆರೆದುಕೊಳ್ಳುತ್ತದೆ.

Post a Comment

0Comments

Post a Comment (0)