ಟೆಕ್ ಮಹಿಂದ್ರಾ ಲಿಮಿಟೆಡ್ (Tech Mahindra Ltd) ಒಂದು ಮಹೀಂದ್ರಾ ಗ್ರೂಪ್‌ನ ಭಾರತೀಯ ಬಹುರಾಷ್ಟ್ರೀಯ ಅಂಗಸಂಸ್ಥೆಯಾಗಿದ್ದು, ವಿವಿಧ ಮಾರುಕಟ್ಟೆಗಳಲ್ಲಿರುವ ಕಂಪನಿಗಳಿಗೆ ಮಾಹಿತಿ ತಂತ್ರಜ್ಞಾನ (ಐಟಿ) ಸೇವೆಗಳು ಮತ್ತು ವ್ಯವಹಾರ ಪ್ರಕ್ರಿಯೆ ಹೊರಗುತ್ತಿಗೆ ಅಂದರೆ (ಬಿಪಿಓ) ಸೇವೆಗಳನ್ನುಒದಗಿಸುತ್ತಿದೆ.
ಆನಂದ್ ಮಹಿಂದ್ರಾ: ಟೆಕ್ ಮಹೀಂದ್ರಾ ಸ್ಥಾಪಕ
ಆನಂದ್ ಮಹಿಂದ್ರಾ ಈ ಕಂಪನಿ ಸ್ಥಾಪಕರಾಗಿದ್ದು, ಇದರ ಪ್ರಧಾನ ಕಚೇರಿ ಪುಣೆಯಲ್ಲಿದೆ ಮತ್ತು ಮುಂಬೈನಲ್ಲಿ ಇದು ನೋಂದಾಯಿತ ಕಚೇರಿಯನ್ನು ಹೊಂದಿದೆ.
ಮೊದಲಿಗೆ ಮಹೀಂದ್ರಾ ಮತ್ತು ಮಹೀಂದ್ರಾ ಎಂಬ ಹೆಸರಿನಿಂದ 1986ರಲ್ಲಿ ಬ್ರಿಟಿಷ್ ಟೆಲಿಕಾಂ ತಂತ್ರಜ್ಞಾನ ಹೊರಗುತ್ತಿಗೆ ಸಂಸ್ಥೆಯೊಂದಿಗೆ ತನ್ನ ಜಂಟಿ ಉದ್ಯಮವನ್ನು ಪ್ರಾರಂಭ ಮಾಡಲು ಆರಂಬಿಸಿತು, ನಂತರ 2008-09ರ ಸತ್ಯಂ ಹಗರಣದ ನಂತರ ಟೆಕ್ ಮಹೀಂದ್ರಾ ಸತ್ಯಂ ಕಂಪ್ಯೂಟರ್ ಸೇವೆಗಳಿಗಾಗಿ ಬಿಡ್ ಮಾಡಿ, ಮತ್ತು ಕಂಪನಿಯ ಸರಿ ಸುಮಾರು 31 ಶೇಕಡಾ ಪಾಲನ್ನು ತನ್ನದಾಗಿಸಿಕೊಂಡಿತು.
ಮುಂದಿನ ದಿನಗಳಲ್ಲಿ ಅಂದರೆ 2006 ರ ಫೆಬ್ರವರಿ 3 ರಂದು ತನ್ನ ಕಂಪನಿಯ ಹೆಸರನ್ನು ಮಹೀಂದ್ರಾ-ಬ್ರಿಟಿಷ್ ಟೆಲಿಕಾಂ ಲಿಮಿಟೆಡ್ನಿಂದ ಹೀಗಿರುವ ಟೆಕ್ ಮಹೀಂದ್ರಾ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಯಿತು.
ಟೆಕ್ ಮಹೀಂದ್ರಾ ಲಿಮಿಟೆಡ್ ಡಿಜಿಟಲ್ ಟ್ರಾನ್ಸ್‌ಫರ್ಮೇಷನ್, ಕನ್ಸಲ್ಟಿಂಗ್ ಮತ್ತು ಬಿಸಿನೆಸ್ ರೀ-ಎಂಜಿನಿಯರಿಂಗ್ ಪರಿಹಾರಗಳಲ್ಲಿ ಪರಿಣತರಾಗಿದ್ದು, ಸುಮಾರು ಮೈಲಿಗಲ್ಲುಗಳನ್ನು ತನ್ನದಾಗಿಸಿಕೊಂಡಿದೆ, ಭಾರತದ ಹೊರಗಿನ ಅತಿದೊಡ್ಡ ಜಾಗತಿಕ ಅಭಿವೃದ್ಧಿ ಕೇಂದ್ರ (ಮೆಲ್ಬೋರ್ನ್‌ನಲ್ಲಿ) ಕಾರ್ಯಾಚರಣೆಯನ್ನು 2005ರಲ್ಲಿ ಪ್ರಾರಂಭಿಸುತ್ತದೆ ಹಾಗು ಸಿಂಗಾಪುರದಲ್ಲಿ ಮೊದಲ "ಗ್ಲೋಬಲ್ ಇನ್ನೋವೇಶನ್ ಹಬ್" ಅನ್ನು2006ರಲ್ಲಿ ಸ್ಥಾಪಿಸಿದೆ.
ಟೆಕ್ ಮಹಿಂದ್ರಾ ದ ಮಹತ್ತರವಾದ ಸಮಾಜದ ಕೊಡುಗೆ ಏನೆಂದರೆ ಸಮಾಜದ ಸೇವೆ ಹಾಗು ವಿಶೇಷವಾಗಿ ಮಕ್ಕಳ ಅಗತ್ಯತೆಗಳನ್ನು ಪರಿಹರಿಸಲು ಟೆಕ್ ಮಹೀಂದ್ರಾ ಫೌಂಡೇಶನ್ (Tech Mahindra Foundation) ಅನ್ನು ಪ್ರಾರಂಭಮಾಡಲಾಯಿತು, ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಅಂಗವೈಕಲ್ಯ ಇದರ ಮೊದಲ ದ್ಯೇಯವಾಗಿದೆ.
ಸಿ.ಪಿ ಗುರ್ನಾನಿ: ಟೆಕ್ ಮಹೀಂದ್ರಾ CEO (24 ಮೇ 2012– ಪ್ರಸ್ತುತ)
ಸಿ.ಪಿ ಗುರ್ನಾನಿ ಸಿಇಒ ಮತ್ತು ಟೆಕ್ ಮಹೀಂದ್ರಾ ವ್ಯವಸ್ಥಾಪಕ ನಿರ್ದೇಶಕ (24 ಮೇ 2012– ಪ್ರಸ್ತುತ) ರಾಗಿ ಕಾರ್ಯನಿರ್ವಯಿಸುತ್ತಿದ್ದಾರೆ.
ಜನವರಿ 2018 ರಂತೆ ಸುಮಾರು 1,21,840 ನೌಕರರು ಕಾರ್ಯನಿರ್ವಹಿಸುತಿದ್ದಾರೆ ಹಾಗು ಸುಮಾರು 90 ದೇಶಗಳಲ್ಲಿ ಶಾಖೆಗಳು ಒಳಗೊಂಡಿದೆ, ಹಾಗು ಫಾರ್ಚೂನ್ ಇಂಡಿಯಾ 500 ಪಟ್ಟಿಯಲ್ಲಿ ಟೆಕ್ ಮಹಿಂದ್ರಾ ಒಂದಾಗಿದೆ.