ದೇಶದ ಅಭಿವೃದ್ಧಿ ಗಾಗಿ ಮತ್ತು ಸಾರ್ವಜನಿಕರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಂಬಿಕೆ ಬರಲು ಬ್ಯಾಂಕ್ ಗಳನ್ನ ರಾಷ್ಟ್ರೀಕರಣ ಮಾಡಲಾಯಿತು.
- ಖಾಸಗಿ ಒಡೆತನದಲ್ಲಿದ್ದ ಬ್ಯಾಂಕ್ ಗಳ ಆಸ್ತಿಯನ್ನ, "ವಶಪಡಿಸಿಕೊಂಡು ತನ್ನ ಹೆಸರಿಗೆ ವರ್ಗಾಯಿಸಿಕೊಳ್ಳುವ" ಸುಗ್ರೀವಾಜ್ಞೆಯನ್ನ ಹೊರಡಿಸುವ ಮೂಲಕ ಬ್ಯಾಂಕ್ ಗಳನ್ನ ರಾಷ್ಟ್ರೀಕರಣ ಮಾಡಾಯಿತು.
ಇದರ ಬಗ್ಗೆ ಸ್ವಲ್ಪ ವಿವರವಾಗಿ ನೋಡೋಣ.
- ತಮ್ಮಅನುಕೂಲಕ್ಕಾಗಿ , ನಮ್ಮ ದೇಶಕ್ಕೆ ಬಹಳಷ್ಟು ಹೊಸತನ್ನ ಪರಿಚಯಿಸಿದ ಬ್ರಿಟಿಷರೇ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕೂಡಾ ಪರಿಚಯಿಸಿದ್ದು.
- ಅವರು ೧೮೦೯ ರಲ್ಲಿ ಬ್ಯಾಂಕ್ ಆಫ್ ಬೆಂಗಾಲ್, ೧೮೪೦ ರಲ್ಲಿ ಬ್ಯಾಂಕ್ ಆಫ್ ಬಾಂಬೆ ಮತ್ತು ೧೮೪೩ ರಲ್ಲಿ ಬ್ಯಾಂಕ್ ಆಫ್ ಮದ್ರಾಸ್ ಅನ್ನು ಸ್ಥಾಪಿಸಿದರು. ಈ ಮೂರು ಬ್ಯಾಂಕ್ ಗಳು ಸೇರಿ ಇಂಪೀರಿಯಲ್ ಬ್ಯಾಂಕ್ ಆಯಿತು.
- ಅನಂತರ ೧೯೫೫ ರಲ್ಲಿ ಅದನ್ನ ರಾಷ್ಟ್ರೀಕರಣ ಮಾಡಿ "ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ" ಎಂದು ನಾಮಕರಣ ಮಾಡಕಾಯಿತು.
- ಹಾಗೂ ಇದು ಭಾರತದ ಎರಡನೆಯ ರಾಷ್ಟ್ರೀಕೃತ ಬ್ಯಾಂಕ್ ಆಯಿತು.
- "ಭಾರತೀಯ ರಿಸರ್ವ್ ಬ್ಯಾಂಕ್" ಅಥವಾ "ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ" ಮೊದಲ ರಾಷ್ಟ್ರೀಕೃತ ಬ್ಯಾಂಕ್.
ಮೊದಲ ವಿಶ್ವ ಯುದ್ಧದ ನಂತರ, ಆರ್ಥಿಕತೆಗೆ ಒತ್ತು ಕೊಡುವುದಕ್ಕೋಸ್ಕರ, ೧೯೩೫ ರ ಎಪ್ರಿಲ್ ಒಂದರಂದು ಐದು ಕೋಟಿ ರುಪಾಯಿಯಿಗಳ ಬಂಡವಾಳದೊಂದಿಗೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವನ್ನ ಖಾಸಗಿ ಒಡೆತನದಲ್ಲಿ ಸ್ಥಾಪಿಸಲಾಯಿತು.
- ಅನಂತರ ೧೯೪೯ ರಲ್ಲಿ ಅದನ್ನ ರಾಷ್ಟ್ರೀಕರಣ ಗೊಳಿಸಲಾಯಿತು. ಬ್ಯಾಂಕ್ ಗಳ ರಾಷ್ಟ್ರೀಕರಣಕ್ಕೆ ಅದೇ ನಾಂದಿಯಾಯಿತು.
ರಾಷ್ಟ್ರೀಕರಣದ ಹಿನ್ಬೆಲೆ.
ಸ್ವಾತಂತ್ರ್ಯದ ನಂತರ ಭಾರತ ಸರಕಾರವು ಆರ್ಥಿಕ ವೃದ್ಧಿಗಾಗಿ ಮತ್ತು ದೇಶದ ಅಭಿವೃದ್ಧಿಗಾಗಿ ಬಹಳಷ್ಟು ಕಾರ್ಯಕ್ರಮ ಗಳನ್ನು ರೂಪಿಸಿತು.
ಆದರೆ,
- ಆ ಸಮಯದಲ್ಲಿ ಭಾರತದ ಎಲ್ಲ ಬ್ಯಾಂಕ್ ಗಳು (SBI ಹೊರತು ಪಡಿಸಿ) ಖಾಸಗಿ ಒಡೆತನದಲ್ಲಿದ್ದವು.
- ಅದು ಸಾರ್ವಜನಿಕರ ಬಂಡವಾಳ ಸಂಗ್ರಹಕ್ಕೆ ಅಡ್ಡಿಯಾಗುತ್ತಿತ್ತು.
- ಕೃಷಿ ಕ್ಷೇತ್ರವನ್ನ ಬ್ಯಾಂಕಿಂಗ್ ವಲಯಕ್ಕೆ ತರಲು ಖಾಸಗಿಯವರು ಹಿಂದೇಟು ಹಾಕುತ್ತಿದ್ದರು. ದೇಶದ ಅಭಿವೃದ್ಧಿಗೆ ಕೃಷಿ ಚಟುವಟಿಕೆಯನ್ನ ಉತ್ತೇಜಿಸಲೇ ಬೇಕಿತ್ತು.
- ಅದಕ್ಕಾಗಿ ದೇಶದ ಮೂಲೆ ಮೂಲೆಗೂ ಬ್ಯಾಂಕಿಂಗ್ ಸೇವೆ ತಲುಪಬೇಕಿತ್ತು.
- ಬ್ಯಾಂಕಿಂಗ್ ಕ್ಷೇತ್ರದಲ್ಲಿ ಖಾಸಗಿಯವರದೇ ಚಕ್ರಾಧಿಪತ್ಯ ವಾಗಿತ್ತು. ಅದನ್ನ ಅವರಿಂದ ಮುಕ್ತ ಗೊಳಿಸಬೇಕಿತ್ತು.
- ಬ್ಯಾಂಕಿಂಗ್ ಕ್ಷೇತ್ರಕ್ಕೆ ಒಂದು ಏಕರೂಪದ ಚೌಕಟ್ಟಿನ ಅವಶ್ಯಕತೆ ಇತ್ತು.
ಇವೆಲ್ಲ ಹಿನ್ನೆಲೆಯಲ್ಲಿ , ದೇಶದ ಅಭಿವೃದ್ಧಿಯ ಮಂತ್ರದೊಂದಿಗೆ ಅತ್ಯಂತ ಕಠಿಣವಾದ ದಿಟ್ಟ ನಿರ್ಧಾರಕ್ಕೆ ಧೈರ್ಯ ಮಾಡಿದ್ದು ಅಂದಿನ ಪ್ರಧಾನಿ ಇಂದಿರಾಗಾಂಧಿ.
- ಒಟ್ಟು ಬ್ಯಾಂಕ್ ಡಿಪಾಸಿಟ್ ಮೊತ್ತದ ೮೫% ನಷ್ಷು ಮೊತ್ತವನ್ನ ಹೊಂದಿದ ೧೪ ಖಾಸಗಿ ಒಡೆತನದ ಬ್ಯಾಂಕ್ ಗಳನ್ನ ೧೯೬೯ ರ ಜುಲೈ ೧೯ ರಂದು ರಾಷ್ಟ್ರೀಕರಣ ಗೊಳಿಸಿದರು.
- ಅನಂತರ ೧೯೮೦ ರಲ್ಲಿ ಮತ್ತೆ ಆರು ಬ್ಯಾಂಕ್ ಗಳನ್ನ ರಾಷ್ಟ್ರೀಕರಣ ಮಾಡಲಾಯಿತು.
೧೯೬೯ ರಲ್ಲಿ ರಾಷ್ಟ್ರೀಕರಣ ಗೊಂಡ ಬ್ಯಾಂಕ್ ಗಳು.
- ಅಲಹಾಬಾದ್ ಬ್ಯಾಂಕ್
- ಬ್ಯಾಂಕ ಆಫ್ ಬರೋಡಾ
- ಬ್ಯಾಂಕ ಆಫ್ ಇಂಡಿಯಾ
- ಬ್ಯಾಂಕ್ ಆಫ್ ಮಹಾರಾಷ್ಟ್ರ
- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
- ಕೆನರಾ ಬ್ಯಾಂಕ್
- ದೇನಾ ಬ್ಯಾಂಕ್
- ಇಂಡಿಯನ್ ಬ್ಯಾಂಕ್
- ಇಂಡಿಯನ್ ಓವರ್ಸೀಸ್ ಬ್ಯಾಂಕ್
- ಪಂಜಾಬ್ ನ್ಯಾಷನಲ್ ಬ್ಯಾಂಕ್
- ಸಿಂಡಿಕೇಟ್ ಬ್ಯಾಂಕ್
- ಯೂಕೊ ಬ್ಯಾಂಕ್
- ಯೂನಿಯನ್ ಬ್ಯಾಂಕ್
- ಯನೈಟೆಡ್ ಬ್ಯಾಂಕ್ ಆಫ್ ಇಂಡಿಯಾ.
೧೯೮೦ ರಲ್ಲಿ ರಾಷ್ಟ್ರೀಕರಣ ಗೊಂಡ ಬ್ಯಾಂಕ್ ಗಳು.
- ಪಂಜಾಬ್ ಮತ್ತು ಸಿಂಧ್ ಬ್ಯಾಂಕ್
- ವಿಜಯಾ ಬ್ಯಾಂಕ್
- ಓರಿಯಙಟಲ್ ಬ್ಯಾಂಕ್ ಆಫ್ ಇಂಡಿಯಾ
- ಕಾರ್ಪೊರೇಷನ್ ಬ್ಯಾಂಕ್
- ಆಂಧ್ರಾ ಬ್ಯಾಂಕ್
- ನ್ಯೂ ಬ್ಯಾಂಕ್ ಆಫ್ ಇಂಡಿಯಾ
ಇಂದು ಇರುವ ರಾಷ್ಟ್ರೀಕೃತ ಬ್ಯಾಂಕ್ ಗಳು. (ಇವು ಎಪ್ರಿಲ್ ಒಂದು ೨೦೨೦ ರ ನಂತರದ ಚಿತ್ರಣ)
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
- ಪಂಜಾಬ್ ನ್ಯಾಷನಲ್ ಬ್ಯಾಂಕ್
- ಬ್ಯಾಂಕ ಆಫ್ ಬರೋಡಾ
- ಬ್ಯಾಂಕ ಆಫ್ ಇಂಡಿಯಾ
- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
- ಕೆನರಾ ಬ್ಯಾಂಕ್
- ಯೂನಿಯನ್ ಬ್ಯಾಂಕ್
- ಇಂಡಿಯನ್ ಓವರ್ಸೀಸ್ ಬ್ಯಾಂಕ್
- ಪಂಜಾಬ್ ಮತ್ತು ಸಿಂಧ್ ಬ್ಯಾಂಕ್
- ಇಂಡಿಯನ್ ಬ್ಯಾಂಕ್
- ಯೂಕೊ ಬ್ಯಾಂಕ್
- ಬ್ಯಾಂಕ್ ಆಫ್ ಮಹಾರಾಷ್ಟ್ರ.
ಖಾಸಗಿಯವರ ಹಿಡಿತದಲ್ಲಿದ್ದ ಉದ್ಯಮಗಳನ್ನ ದೇಶದ ಅಭಿವೃದ್ಧಿಗಾಗಿ ಸರಕಾರಿ ಉದ್ಯಮವಾಗಿಸಿದ್ದರು. ಆದರೆ ಅವುಗಳನ್ನ ಮತ್ತೆ ಖಾಸಗಿಯವರ ಕಪಿಮುಷ್ಟಿಗೆ ಹಾಕುತ್ತಿರುವುದು ವಿಪರ್ಯಾಸವೇ ಸರಿ. ಮತ್ತೆ ನಾವು ಹಿಂದಕ್ಕೆ ಪ್ರಯಾಣಿಸುತ್ತಿದ್ದೇವೇನೋ ಅನಿಸುತ್ತದೆ, ಅಥವಾ ಕೊಬ್ಬಿದ ಸರಕಾರಿ ಒಡೆತನಕ್ಕೆ ಚಿಕಿತ್ಸೆಯ ಅಗತ್ಯವಿದೆ ಅಂತ ಕೂಡಾ ಅನಿಸುತ್ತದೆ.