'ಉತ್ತರ ಕನ್ನಡ' ಜಿಲ್ಲೆಯು ದಕ್ಷಿಣ ಕರ್ನಾಟದಲ್ಲಿ ಬರುತ್ತದೆಯೋ? ಅಥವಾ ಉತ್ತರ ಕರ್ನಾಟದಲ್ಲಿ ಬರುತ್ತದೆಯೋ?

SANTOSH KULKARNI
By -
1 minute read
0

 

ಉತ್ತರ ಕನ್ನಡ ಜಿಲ್ಲೆಯು ಭೌಗೋಳಿಕವಾಗಿ ಕರ್ನಾಟಕದ ಉತ್ತರ ಭಾಗದಲ್ಲಿ ಇದ್ದರೂ ಅದು ಉತ್ತರ ಕರ್ನಾಟಕದ ಭಾಗ ಅಲ್ಲ!

  • ಉತ್ತರ ಕನ್ನಡದ ಒಂದೆರಡು ತಾಲೂಕುಗಳು ಉತ್ತರ ಕರ್ನಾಟಕದ ಪ್ರಭಾವವನ್ನು ಸ್ವಲ್ಪ ಮಟ್ಟಿಗೆ ಹೊಂದಿವೆ ಅಷ್ಟೆ.

ಭೌಗೋಳಿಕವಾಗಿ ಮತ್ತು ಐತಿಹಾಸಿಕವಾಗಿ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ( ಈಗ ಉಡುಪಿ ಕೂಡಾ ) ಕರ್ನಾಟಕದ ಕರಾವಳಿ ಜಿಲ್ಲೆಗಳೆಂದು ಗುರುತಿಸಿಕೊಳ್ಳುತ್ತವೆ.

ಇವು ಕೆನರಾ ಪ್ರದೇಶದ ಭಾಗಗಳು.

ಇಲ್ಲಿ ಉತ್ತರಕನ್ನಡವು ಕೆನರಾ ಪ್ರದೇಶದ ಉತ್ತರ ಭಾಗದಲ್ಲಿರುವುದರಿಂದ ಅದು ಉತ್ತರಕನ್ನಡವಾಯಿತು. ಹಾಗೆಯೇ ಕೆನರಾ ಪ್ರದೇಶದ ದಕ್ಷಿಣ ಭಾಗದ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡವಾಯಿತು.

  • ಕೇರಳ ಮತ್ತು ಕರ್ನಾಟಕದ ಸುಮಾರು 480 ಕಿ.ಮಿ ಉದ್ದದ , ಅರಬ್ಬಿ ಸಮುದ್ರದಿಂದ ಪಶ್ಚಿಮ ಘಟ್ಟದ ವರೆಗೂ ಹರಡಿಕೊಂಡಿರುವ ಈ ಹಸಿರು ಪಟ್ಟಿಯನ್ನು ಕೆನರಾ ಪ್ರದೇಶವೆಂದು ಬ್ರಿಟಿಷ್ ಕಾಲದಿಂದ ಕರೆಯಲಾಗುತ್ತಿತ್ತು.
  • ನಾರ್ತ್ ಕೆನರಾ (ಉತ್ತರ ಕನ್ನಡ) , ಸೌತ್ ಕೆನರಾ (ದಕ್ಷಿಣ ಕನ್ನಡ ಮತ್ತು ಉಡುಪಿ) , ಸೆಂಟ್ರಲ್ ಕೆನರಾ (ಶಿವಮೊಗ್ಗ ಮತ್ತು ಚಿಕ್ಕಮಗಳೂರು) ಮತ್ತು ಕಾಸರಗೋಡು(ಈಗ ಕೇರಳ) ಈ ಕೆನರಾ ಪಟ್ಟಿಯಲ್ಲಿರುವ ನಾಲ್ಕು ಭಾಗಗಳು.

ಇದಕ್ಕೆ ಕೆನರಾ‌ ಅನ್ನುವ ಹೆಸರು ಹೇಗೆ ಬಂತು?

  • ಕೊಂಕಣಿಯ ಕೊಂಕರ್ (Konkar , ಅಂದರೆ ಕರಾವಳಿ ) ಪದದಿಂದ ಬಂದಿರಬಹುದು ಅನ್ನುವುದು ಒಂದು ವಾದವಾದರೆ , ತುಳುವಿನ ಕನಾರಾ (Kanara ಅಂದರೆ ಕರಾವಳಿ) ಪದದಿಂದ ಬಂತು ಅನ್ನುವುದು ಇನ್ನೊಂದು ವಾದ.
  • ಇನ್ನೂ ಕೆಲವು ಇತಿಹಾಕಾರರ ಪ್ರಕಾರ ಸಂಸ್ಕೃತದ ಕಾನನ ( ಅಂದರೆ ಕಾಡು) ಪದದಿಂದ ಕೆನರಾ ಉಗಮವಾಯಿತು .

ಆದರೆ ನಿಜವಾಗಿಯೂ ಕೆನರಾ ಶಬ್ದದ ಮೂಲಕ್ಕೆ ಸರಿಯಾದ ಆಧಾರವಿಲ್ಲ.

  • ಭೌಗೋಳಿಕವಾಗಿ ಮತ್ತು ನೈಸರ್ಗಿಕವಾಗಿ ಇವಕ್ಕೆ ತುಂಬಾ ಸಾಮ್ಯತೆ ಇರುವುದರಿಂದ ಈ ಎಲ್ಲವನ್ನೂ ಒಟ್ಟಿಗೇ ಸೇರಿಸಿ ಕೆನರಾ ಪ್ರದೇಶ (Canara region) ಎಂದು ಕರೆಯಲಾಗುತ್ತದೆ.

ಇಲ್ಲಿನವರ ಜೀವನ ಶೈಲಿ , ವೇಶಭೂಷಣ , ಆಹಾರಪದ್ಧತಿ , ಹಬ್ಬ ಹರಿದಿನಗಳು , ಸಂಪ್ರದಾಯ , ಕಲೆ , ಸಂಸ್ಕೃತಿ ಮತ್ತು ಆಚರಣೆ , ಹವಾಮಾನ , ಹೀಗೆ ಎಲ್ಲವೂ ಒಂದು ರೀತಿಯಲ್ಲಿ ಸಾಮ್ಯತೆಯನ್ನ ಹೊಂದಿವೆ ಹಾಗೂ ಅವೆಲ್ಲವೂ ಅನನ್ಯ ಕೂಡಾ.

Post a Comment

0Comments

Post a Comment (0)