Friday, March 21, 2025

ಕರ್ನಾಟಕ ಏಕೀಕರಣವಾಗಿದ್ದು ಯಾವಾಗ?

 ಕರ್ನಾಟಕದ ಏಕೀಕರಣ (1916-1956)

ಸರಳವಾಗಿ ಹೇಳಬೇಕೆಂದರೆಕರ್ನಾಟಕದ ಏಕೀಕರಣಕ್ಕೆ ಕಾರಣ ಕರ್ನಾಟಕದ ಸಂಕೀರ್ಣ

ಕರ್ನಾಟಕದ ಪರಂಪರೆ

  • ಶಾತವಾಹನರು
  • ಕದಂಬರು
  • ಗಂಗರು
  • ಬಾದಾಮಿ ಚಾಲುಕ್ಯರು
  • ರಾಷ್ಟ್ರಕೂಟರು
  • ಕಲ್ಯಾಣಿ ಚಾಲುಕ್ಯರು
  • ಹೊಯ್ಸಳರು
  • ಸೇವುಣರು
  • ವಿಜಯನಗರ ಸಾಮ್ರಾಜ್ಯ

ಒಂದು ಕಾಲದಲ್ಲಿ ಇಡೀ ದಕ್ಷಿಣ ಭಾರತವನ್ನೆಲ್ಲ ಆಕ್ರಮಿಸಿಕೊಂಡಿದ್ದ ಕರ್ನಾಟಕವು ಮೈಸೂರು ಒಡೆಯರ ಕಾಲದಲ್ಲಿ ಹಿಡಿಯಷ್ಟಾಯಿತು. ಈ ಪರಿಸ್ಥಿತಿ ಹೀಗೇಕೆ ಆಯಿತು. ? ಕರ್ನಾಟಕದ ಸಂಕೀರ್ಣತೆಗೆ ಕಾರಣಗಳು , ಏನು ? ಎಂಬಂದಕ್ಕೆ ಕಾರಣ ತಿಳಿಯೋಣ.

ಇದಕ್ಕೆ ಕಾರಣ

  • ವಿಜಯನಗರದ ಪತನ ಮೊದಲ ಕಾರಣ.
  • ಮುಸ್ಲಿಂಮರ ಆಳ್ವಿಕೆಯ ನಂತರ ಛಿದ್ರಗೊಂಡ ಕರ್ನಾಟಕ
  • ಸಂಸ್ಥಾನಗಳ ಆಳ್ವಿಕೆ
  • ಬ್ರಿಟಿಷರ ಒಡೆದು ಆಳುವ ನೀತಿ
  • 19ನೇ ಶತಮಾನದ ಕೊನೆಯಲ್ಲಿ ರಾಷ್ಟ್ರೀಯತೆ ಭಾವದಿಂದ - ಕನ್ನಡಿಗರಲ್ಲಿ ಹುಟ್ಟಿಕೊಂಡ ರಾಷ್ಟ್ರೀಯತೆಯ ಭಾವ

ಬ್ರಿಟಿಷರ ಆಡಳಿತದಲ್ಲಿ ಹರಿದು ಹಂಚಿ ಹೋಗಿದ ಆಡಳಿತ ಘಟಕಗಳು :

  • ಮೈಸೂರು ಸಂಸ್ಥಾನ

ಮದ್ರಾಸ್ ಪ್ರಾಂತ್ಯ : ನೀಲಗಿರಿ , ದಕ್ಷಿಣಕನ್ನಡ , ಬಳ್ಳಾರಿ ಜಿಲ್ಲೆ , ಕೊಳ್ಳೆಗಾಲ , ಹೊಸೂರು, ಮತ್ತು ಮಡಕಶಿರಾ

  • ಬೊಂಬಾಯಿ ಪ್ರಾಂತ್ಯ

ಉತ್ತರ ಕನ್ನಡ, ಬೆಳಗಾವಿ , ಧಾರವಾಡ ಬಿಜಾಪುರ ಮಂಗಳವಾಡ, ದಕ್ಷಿಣ - ಉತ್ತರ ಸೊಲ್ಲಾಪುರ ಮಂಗಳವೇಡೆ.

  • ಕೊಡಗು

ಪ್ರಧಾನ ಆಯುಕ್ತರ ಅಧೀನದಲ್ಲಿತ್ತು.

  • ಹೈದರಬಾದ್ ಸಂಸ್ಥಾನ

ಕಲ್ಬುರ್ಗಿ , ಬೀದರ್ , ರಾಯಚೂರು , ಕೊಪ್ಪಳ ಮತ್ತು ಜಹಗೀರುಗಳು (ಸ್ವಯಂ ಅಧಿಪತ್ಯ)

  • ಕೊಲ್ಲಾಪುರ ಸಂಸ್ಥಾನ

ರಾಯಭಾಗ ಕಟಕೋಳ , ತೋರಗಲ್ಲು

  • ಸಾಂಗ್ಲಿ ಸಂಸ್ಥಾನ

ತೇರವಾಳ , ಶಹಪುರ , ದೊಡ್ಡವಾಡ ,ಶಿರಹಟ್ಟಿ

  • ಮೀರಜ್ ಸಂಸ್ಥಾನ

ಲಕ್ಷ್ಮೇಶ್ವರ

  • ಮೀರಜ್ ಮತ್ತು ಗುಡಗೇರಿ
  • ಹಿರಿಯ ಕುರಂದವಾಡ ಮತ್ತು ಕಿರಿ ಕುರಂದವಾಡ , ವಡಗಾಂವ್ ಸಂಸ್ಥಾನ
  • ಜಮಖಂಡಿ ಸಂಸ್ಥಾನ : ಕುಂದಗೋಳ , ಚಿಪ್ಪಲಕಟ್ಟಿ
  • ಮುಧೋಳ ಸಂಸ್ಥಾನ
  • ಜತ್ ಸಂಸ್ಥಾನ
  • ಅಕ್ಕಲಕೋಟೆ ಸಂಸ್ಥಾನ
  • ಚಾಂಧಸಂಸ್ಥಾನ : ಗುಣದಾಳ ಗ್ರಾಮ
  • ರಾಯದುರ್ಗ ಸಂಸ್ಥಾನ
  • ಸೊಂಡೂರು ಸಂಸ್ಥಾನ
  • ಸವಣೂರು ಸಂಸ್ಥಾನ
  • ಕೇಂದ್ರ ಸರ್ಕಾರದ ಸಂಸ್ಥಾನ : ಬೆಂಗಳೂರು , ಬಳ್ಳಾರಿ , ಬೆಳಗಾವಿದ೦ಡು ಪ್ರದೇಶ (ಕಂಟೋನ್ಮೆಂಟ್ಸ್)

ಇಂದರಿಂದ ಕನ್ನಡಿಗರು ಅನುಭವಿಸಿದ ತೊಂದರೆಗಳು ಶಿಕ್ಷಣಕ್ಷೇತ್ರದಲ್ಲಿ - ಮತ್ತು ಆಡಳಿತದಲ್ಲಿ ಈ ಕೆಳಗಿನಂತಿವೆ.

  • ಬೊಂಬಾಯಿ ಪ್ರಾಂತ್ಯದವರು ಮರಾಠಿ ಕಲಿಯಬೇಕು.
  • ಮದ್ರಾಸ್ ಪ್ರಾಂತ್ಯದವರು ತಮಿಳು ಕಲಿಯಬೇಕು
  • ಹೈದ್ರಾಬಾದ್ ಉರ್ದು
  • ಮುಧೋಳ , ಜಮಖಂಡಿ ,ಜತ್ತ , ಅಕ್ಕಲಕೋಟಿಗರ ಮೇಲೆ ಮರಾಠಿ ಪ್ರಾಭಲ್ಯದಲ್ಲಿ ನಲುಗಿದವು.

ಈ ಭಿನ್ನತೆಯಿಂದ ಕನ್ನಡ ನುಡಿ , ಸಾಹಿತ್ಯ , ಹಾಗೂ ಕನ್ನಡ ಸಂಸ್ಕೃತಿಯ ಮೇಲೆ ದಬ್ಬಾಳಿಕೆಗಳು ನಡೆದು ಮಲತಾಯಿ ಧೋರಣೆಯಿಂದ ಕನ್ನಡ ಸಂಸ್ಕೃತಿ - ಕನ್ನಡಿಗರ ಸ್ಥಿತಿ ತಬ್ಬಲಿತನವಾಯಿತು.

  • ಕರ್ನಾಟಕ ಏಕೀಕರಣಕ್ಕೆ ಮೂಲ

ಬುದ್ಧಿಜೀವಿಗಳು ,ಲೇಖಕರು , ಕವಿಗಳು , ಪತ್ರಕರ್ತ ರು ಸ್ವಾತಂತ್ರ್ಯ ಭಾವನೆಯಲ್ಲಿದ ಜನರ ಮನಸ್ಥಿತಿ ನವೋದಯ ಶಿಕ್ಷಿತರು.

1856 ರಲ್ಲಿ ಡೆಪ್ಯುಟಿ ಚೆನ್ನಬಸಪ್ಪನವರು ಉತ್ತರ ಕರ್ನಾಟಕದಲ್ಲಿ ಪ್ರಾರಂಭಿಸಿದ್ದ ಚಳುವಳಿ ಆದಿಯದಾಯಿತು.

  1. 1890 ರಲ್ಲಿ ಪ್ರಾರಂಭವಾದ ಕರ್ನಾಟಕಸಂಘ

ಈ ಸಂಸ್ಥೆಯ ಬೆನಗಲ್ ರಾಮರಾಯರು

ಕನ್ನಡ ಕುಲ ಪುರೋಹಿತ ಆಲೂರು ವೆಂಕಟ ರಾಯರು .

ಪತ್ರಿಕೋದ್ಯಮಿಯಾಗಿದ್ದ ಬೆನಗಲ್ ರಾಮರಾಯರು ಕನ್ನಡ ಏಕೀಕರಣದ ಬಗ್ಗೆ ಅನೇಕ ಲೇಖನಗಳನ್ನು ಬರೆದು , "ಸುವಾಸಿನಿ " -ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದುದು

  1. ಕವಿಗಳು ಸಾಹಿತಿಗಳು ರಚಿಸಿದ ಕವಿತೆ ಮತ್ತು ಸಾಹಿತ್ಯಗಳು, ಪ್ರಾಚ್ಯ ಸಂಶೋಧನೆಗಳು ಮತ್ತು
  2. ಆಲೂರು ವೆಂಕಟರಾಯರ "ಕರ್ನಾಟಕ ಗತವೈಭವ" ಗ್ರಂಥದ ಕನ್ನಡಾರ್ಪಪಣೆ
  3. ಹುಯಿಲಗೋಳ ನಾರಾಯಣ ರಾಯರ "ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು " ..... ಕವನ
  4. ಶಾಂತಕವಿ
  5. ಮಂಗೇಶ ಪೈ
  6. ಬಿ.ಎಂ.ಶ್ರೀಕಂಠಯ್ಯ
  7. ಕೆ.ವಿ ಪುಟ್ಟಪ್ಪನಂತಹ ಅನೇಕ ಸಾಹಿತಿಗಳ ಸಾಹಿತ್ಯಗಳು ಕವನಗಳು ಜಾಗೃತಿ ಮೂಡಿಸಿದವು.
  • ಕನ್ನಡದ ಮಕ್ಕಳೆಲ್ಲ.. ಒಂದಾಗಿ ಬನ್ನೀ....
  • ತಾಯೆ ಬಾರ ಮೊಗವ ತೋರ...
  • ಭಾರಿಸು ಕನ್ನಡ
  • ರಕ್ಷಿಸು ಕರ್ನಾಟಕ ದೇವಿ .....
  • ಹಕ್ಕಿ ಹಾರುತಿದೆ....
  • ಹಾರಿಸಿ... ಏರಿಸಿ ... ಕನ್ನಡದ ಬಾವುಟ
  • ಜೈಭಾರತ ಜನನಿಯ .. ತನುಜಾತೆ ಜನಮಾನಸದಲ್ಲಿ ಪ್ರೇರಣೆಯ ಕಿಚ್ಚನ್ನು ಹಚ್ಚಿದವು.
  • ಕನ್ನಡ ಸಾಹಿತ್ಯಪರಿಷತ್ತು : 1915 ಮಹಾರಾಜರ ಪೋಷಣೆಯಲ್ಲಿ ಪ್ರಾರಂಭಿಸಿ ಇದರಲ್ಲಿ ದುಡಿದವರು
  • ಆಲೂರು ವೆಂಕಟರಾಯರು
  • ಮುಧ್ವೀಡ ಕೃಷ್ಣರಾಯರು
  • ಫ . ಗು. ಹಳಕಟ್ಟೆ
  • ಬೆನಗಲ್ ರಾಮರಾಯರು
  • ಕೆ.ರಾಜಗೋಪಾಲ ಕೃಷ್ಣರಾಯರು
  • ತಮ್ಮಣ್ಣಪ್ಪ (ಚಿಕ್ಕೋಡಿ)
  • ಎಚ್ ವಿ . ನಂಜುಂಡಯ್ಯ
  • ಕೆ.ಪಿ.ಪುಟ್ಟಣ್ಣ ಚೆಟ್ಟಿ
  • ಕರ್ಪೂರ ಶ್ರೀನಿವಾಸರಾಯರು
  • ಕೆಂಗಲ್ ಹನುಮಂತರಾಯರು
  • ಕಡಿದಾಳ್ ಮಂಜಪ್ಪ,
  • ಎಂ.ಕಾಂತರಾಜೇ ಅರಸ್
  • ಎಂ. ವೆಂಕಟ ಕೃಷ್ಣಯ್ಕ
  • ನಿಜಲಿಂಗಪ್ಪ
  • ಆರ್ ರಾಜ ಬಹದ್ದೂರ್.......
  • ಮುಂತಾದ ಕನ್ನಡ... ಮಕ್ಕಳು 

  • ಕರ್ನಾಟಕಏಕೀಕರಣಕ್ಕಾಗಿ ಹೋರಾಡಿದ ಹೋರಾಟಗಳು
  1. ಕರ್ನಾಟಕ ಸಭಾ (1916)- ಸ್ಥಾಪನೆ ಧಾರವಾಡ . ಕಡಪ ರಾಘವೇಂದ್ರ ರಾವ್ , ಮುದವೀಡು ಕೃಷ್ಣರಾವ್ - ಈ ಸಭೆ ಅಖಿಲ ಭಾರತ ಕಾಂಗ್ರೇಸ್ ನೊಂದಿಗೆ ಸಂಬಂಧ ಬೆಳೆಸಿ ಸಭೆಗಳಲ್ಲಿ ಕರ್ನಾಟಕರಚನೆ ಬಗ್ಗೆ ರಾಗ ತೆಗೆಯುತ್ತಿತ್ತು. ನಿತ್ಯದ ಕೂಗಾಗಿ ಪರಿಣಮಿಸಿತು
  2. ಕಾಂಗ್ರೆಸ್ ಮತ್ತು ಭಾಷಾವಾರು ಪ್ರಾಂತ್ಯ - 1920-ಅಧ್ಯಕ್ಷತೆ - ವಿ.ಪಿ. ಮಾಧವರಾವ್
  • ವಿ.ಪಿ.ಮಾಧವ ರಾವ್ ಸಂಯುಕ್ತ ಕರ್ನಾಟಕ ನಿರ್ಣಯವನ್ನು ಅಂಗೀಕರಿಸಿತು. ನಾಗಪುರ ಅಧಿವೇಶನಕ್ಕೆ - 800 ಜನ ಕನ್ನಡಿಗರು ಭಾಗವಹಿಸಿದರು.
  1. ಕರ್ನಾಟಕ ಏಕೀಕರಣ ಸಭಾ - 1924 - ಶ್ರೀ ಸಿದ್ಧಪ್ಪ ಕಂಬಳಿ ಅಧ್ಯಕ್ಷತೆ ಬೆಳಗಾವಿಯಲ್ಲಿ ಎಸ್.ನಿಜಲಿಂಗಪ್ಪನವರ - ಸಹಯೋಗದೊಂದಿಗೆ 2 ವರ್ಷಗಳಿಗೊಮ್ಮೆ ಅಧಿವೇಶನ ನಡೆಸಿ ಪ್ರಭಲ ಹೋರಾಟ ಪ್ರಾರಂಭಿಸಿತು ಮುಂಬೈ ನ ಅಧಿವೇಶನದಲ್ಲಿ ಹಲವು ಗೊತ್ತುವಳಿಗಳನ್ನು ಮಂಡಿಸಲಾಯಿತು.
  2. ಮೋ ತಿ ಲಾಲ್ ನೆಹರೂ ಸಮಿತಿ - 1928- ಸುಭಾಷ್ ಚಂದ್ರಭೋಸ್ , ಸರ್ತೇ ಬಹುದ್ದಾರ್ , ಶಾಹೀನ್ ಖುರೇಷಿ , ಸರ್ ಆಲಿ ಇಮಾಮ್ ಮುಂತಾದವರು ಸದಸ್ಯರಾಗಿದ್ದರು.
  1. ಕರ್ನಾಟಕ ಏಕೀಕರಣ ಸಮಿತಿ - 1946- ನಿಜಲಿಂಗಪ್ಪ ಅಂದಾನಪ್ಪ ದೊಡ್ಡಮೇಟಿ ಮಂಗಳವೇಡೆ. ಇತರರು
  2. ಧಾರ್ ಸಮಿತಿ 1998 : ಐಕ್ಯತೆಗೆ ಧಕ್ಕೆ ತರುತ್ತದೆಂದು ಧಾರ್ ಸಮಿತಿ ಏಕೀಕರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು. 1947 - ಅಕ್ಟೋಬರ್ - ಮಹಾರಾಜರ ಅಧಿಕಾರ -ದಿಂದ ರಾಜ್ಯಪಾಲ ಹುದ್ದೆಗೆ ನೇಮಿಸ.ಲಾಯಿತು. ಬ್ರಿಟಿಷ್ ಅಧಿಪತ್ಯ - ದಲ್ಲಿದ್ದ (ಮದ್ರಾಸ್ ಪ್ರಾಂತ್ಯ ಪ್ರದೇಶಗಳನ್ನು) ಪ್ರದೇಶಗಳನ್ನು ದೇಶೀಯ ಸಂಸ್ಥಾನಕ್ಕೆ ಬಿಟ್ಟು ಕೂಡ ಬೇಕೆ? ಎಂಬಂದರ ಚರ್ಚೆಗಳು ನಡೆದವು
  3. ಜೆ.ವಿ.ಪಿ ಕಮಿಟಿ (1948). ಈ ವೇಳೆಗಾಗಲೇ ಏಕೀಕರಣ ಹೋರಾಟ ಬೃಹದಾಗಿ ಬೆಳೆದುದರಿಂದ ಈ ಸಮಸ್ಯೆ ಬಗೆಹರಿಸಲು ನೆಹರು ಸರ್ದಾರ್ ವಲ್ಲಭಭಾಯಿ ಪಟೇಲ್ ಪಟ್ಟಾಭಿ ಸೀತಾರಾಮಯ್ಯ - ಈ 3 ಜನರ ಸಮಿತಿ (ಜೆ. ವಿ. ಪಿ .)- ಭಾಷಾವಾರು ಪ್ರಾಂತ್ಯಕ್ಕೆ ಶಿಫಾರಸ್ಸು ಮಾಡಿತು.
  4. 1952 ರಲ್ಲಿ ಆಂಧ್ರದ ಪೊಟ್ಟ ಶ್ರೀರಾಮಲು ಉಪವಾಸ ಕೈಗೊಂಡರು. ಇದರ ನಂತರ ಆಂಧ್ರಪ್ರದೇಶ ಅಸ್ತಿತ್ವಕ್ಕೆ ಬಂದಿತು.
  5. ವಾಂಚೂ ಕಮಿಟಿ : - 30 - 1953- ಜಸ್ಪೀಸ್-ವಾಂಚೂ ರವರು - ಬಳ್ಳಾರಿಯ - ಜಿಲ್ಲೆಯ ಆದವಾನಿ ಆಲೂರು ರಾಯದುರ್ಗ ಆಂಧ್ರಕ್ಕೂ - ಬಳ್ಳಾರಿ - ಉಳಿದ ತಾಲ್ಲೂಕುಗಳಂ ಮೈಸೂರಿಗೆ ಸೇರಲು . ತೀರ್ಪಿನ ನಂತರ ಬಳ್ಳಾರಿ ನಮ್ಮ ಕಡೆ ಬಂದಿತು.
  6. ಉಪವಾಸ ಸತ್ಯಾಗ್ರಹ : ಕೇಂದ್ರ ಸರ್ಕಾರ ಆಶ್ವಾಸನೆಯಂತೆ ನಡೆದು ಕೊಂಡಿಲ್ಲವೆಂದು ದೊಡ್ಡಮೇಟಿ ಅಂದಾನಪ್ಪನವರು ಏಕೀಕರಣಕ್ಕೆ ಒತ್ತಾಯಿಸಿ ಧಾರವಾಡ ಜಿಲ್ಲೆಯ - ಜಕ್ಕಲಿಯ ಲ್ಲಿ ಅಮರಣಾಂತರ ಉಪವಾಸ ಕೈಗೊಂಡರು. ಗೋರೂರು ರಾಮಸ್ವಾಮಿ ಅಯ್ಯಂಗಾರರು ರಾಜ್ಯಾದ್ಯಂತ ಏಕೀಕರಣ ಭಾಷಣ ಮಾಡಿದರು.
  7. ರಾಜ್ಯ ಪುನರ್ ವಿಂಗಡಣಾ ಸಮಿತಿ : 1953- ಡಿ - 29- ಇದರಲ್ಲಿ ಎಸ್. ಫೆಜಲ್ ಆಲಿ (ಅಧ್ಯಕ್ಷರು) ಲಕ್ಷಾಂತರ ಜನರನ್ನು ಸಂದರ್ಶನ ನಡೆಸಿ ಅಹವಾಲು ಪರಿಶೀಲಿಸಿ 1955 ಸೆಪ್ಟಂಬರ್ 30 ರಂದು ವರದಿ ಸಲ್ಲಿಸಿತು.
  • ಎಚ್ ಎನ್ ಕುಂಜ್ರು ಮತ್ತು ಕೆ.ಎಂ. ಪಣಿಕ್ಕರ್ ಈ ಸಮಿತಿ ರಾಷ್ಟ್ರಾದ್ಯಂತ ಪ್ರವಾಸ ಕೈಗೊಂಡು ಲಕ್ಷಾಂತರ ಜನರನ್ನು ಸಂಧರ್ಶಿಸಿ ಅಹವಾಲು ಸ್ವೀಕರಿಸಿ - 1955 ಸೆಪ್ಪೆಂಬರ್ 30 ರಂದು ಸರ್ಕಾರಕ್ಕೆ ವರದಿ ಸಲ್ಲಿಸಿತು.

ಆಮೂಲಕ ಎಲ್ಲರಿಗೂ ಅಪಾರವಾದ ಸಂತಸ ಮುಗಿಲೇರಿತು .ಆಲೂರು ವೆಂಕಟರಾಯರಾದಿಯಾಗಿ - ಹೋರಾಟಗಾರರೆಲ್ಲ ಸೇರಿ - ಕನ್ನಡ ನಾಡಿಗೆ ಮೈಸೂರು ರಾಜ್ಯ ಎ೦ದು ನಾಮಕರಣವಾಯಿತು.

ಮೈಸೂರು ರಾಜ್ಯಕ್ಕೆ ಒಳಪಟ್ಟ -9 - ಜಿಲ್ಲೆಗಳು .

  1. ಬೆಂಗಳೂರು
  2. ಮೈಸೂರು
  3. ಕೋಲಾರ
  4. ತುಮಕೂರು
  5. ಮಂಡ್ಯ
  6. ಚಿಕ್ಕಮಗಳೂರು
  7. ಹಾಸನ
  8. ಶಿವಮೊಗ್ಗ
  9. ಚಿತ್ರದುರ್ಗ

ಮದ್ರಾಸ್ ಪ್ರಾಂತ್ಯಕ್ಕೆ ಒಳಪಟ್ಟಿದ್ದ 4 ಜಿಲ್ಲೆಗಳು

  1. ದಕ್ಷಿಣ ಕನ್ನಡ ಜಿಲ್ಲೆ
  2. ಕೊಳ್ಳೇಗಾಲ
  3. ಕೊಡಗು
  4. ಬಳ್ಳಾರಿ (1953 ರ ಲ್ಲೇ ಸೇರಿತ್ತು.)

ಹೈದ ರಾ ಬಾದ್ ಪ್ರಾಂತ್ಯದಿಂದ

  1. ರಾಯಚೂರು
  2. ಬೀದರ್ಗುಲ್ಬರ್ಗ
  3. ಗುಲ್ಬರ್ಗ

ಸ್ವತಂತ್ರ ಸಂಸ್ಥಾನಗಳು :

  1. ಸೊಂಡೂರು
  2. ಜಮಖಂಡಿ
  3. ಮುಧೋಳ
  4. ಸಮಣೂರು

ನಮ್ಮಿಂದ ಹೊರ ರಾಜ್ಯಗಳಿಗೆ ಸೇರ್ಪಡೆಗೊಂಡ ಪ್ರದೇಶಗಳು :

  1. ಕೇರಳಕ್ಕೆ : ಕಾಸರಗೋಡು
  2. ಆಂಧ್ರಕ್ಕೆ : ಆಲೂರು , ಆದವಾನಿ , ರಾಯದುರ್ಗ , ಮಾಡಿಕಶಿರಾ ,
  3. ತಮಿಳುನಾಡು : ತಾಳವಾಡಿ , ಹೊಸೂರು , ,
  4. ಮಹಾರಾಷ್ಟ್ರ : ಚಂದಗಡ , ಜತ್ತ , ಗಡಹಿಂಗ್ಲಜ , ಸೊಲ್ಲಾಪುರ , ಅಕ್ಕಲಕೋಟಿ ಪ್ರದೇಶಗಳು.

ಏಕೀಕರಣಗೊಂಡ ಮೈಸೂರುರಾಜ್ಯ ಒಟ್ಟು 1 9 ಜಿಲ್ಲೆಗಳನ್ನು ಒಳಗೊಂಡಿತ್ತು.

ಮೈಸೂರು, ಮಂಡ್ಯ ,ಕೊಡಗು ,ದಕ್ಷಿಣ ಕನ್ನಡ ಉತ್ತರ ಕನ್ನಡ, ಕೋಲಾರ ,ಹಾಸನ , ತುಮಕೂರು ಚಿಕ್ಕಮಗಳೂರು ,ಶಿವಮೊಗ್ಗ , ಚಿತ್ರದುರ್ಗ , ಬಳ್ಳಾರಿ ಬೆಳಗಾವಿ , ಬಿಜಾಪುರ , ರಾಯಚೂರು , ಗುಲ್ಬರ್ಗ ಮತ್ತು ಬಿದರೆ

ಮಹಾಜನ್ ಆಯೋಗ (1965 - )

ಹೆಚ್ಚಿನ ಸಂಖ್ಯೆಯಲ್ಲಿರುವ ಕನ್ನಡಿ ಗ ಪ್ರದೇಶಗಳಾದ

ಕಾಸರಗೋಡು, ನೀಲಗಿರಿ , ತಾಳವಾಡಿ , ಆಲೂರು , ಆದವಾನಿ , ದೇಗಲೂರು , ಸೊಲ್ಲಾಪುರ ,ಅಕ್ಕಲಕೋಟೆ , ಜತ್ತ , ಗಡಹಿಂಗ್ಲೇಜ - ಈ ಭಾಗಗಳು ಕನ್ನಡಿಗರಿಗೆ ಸೇರಬೇಕೆಂದು - ಇವುಗಳನ್ನು ಹೊಂದಿರುವ - ಮಹಾರಾಷ್ಟ್ರ ಆಂಧ್ರ ಕೇರಳಗಳಿಗೆ ಕರ್ನಾಟಕಕ್ಕೆ ಬಿಟ್ಟು ಕೊಡುವ ಮನೋಭಾವವಿಲ್ಲ. ಮೈಸೂರು - ಮಹಾರಾಷ್ಟ್ರ - ಗಡಿ ವಿವಾದವನ್ನು ಇತ್ಯರ್ಥಗೊಳಿಸಲು 1965 ರಲ್ಲೂ ಮಹಾಜನ್ - ಏಕಸದಸ್ಯ - ಪೀಠ - ನೇಮಿಸಿದರೂ - ಈ ಆಯೋಗ ತೀರ್ಪಿಗೆ ಎರಡೂ ರಾಜ್ಯಗಳು ಸಮ್ಮತಿಸಿದವು.

ವಿವಾದಕ್ಕೆ ಒಳಪಟ್ಟ ಪ್ರದೇಶಗಳಾದ ಜತ್ತ ಕಾಸರಗೋಡು ಮೈಸೂರಿಗೆ ಸೇರಬೇಕೆಂದು ನಿಪ್ಪಾಣಿ ಖಾನಾಪುರ ಹಲ್ಯಾಳ ಮಹಾರಾಷ್ಟ್ರಕ್ಕೆ ಸೇರುವುದೆಂದೂ ಬೆಳಗಾವಿ ಮಾತ್ರ ಮೈಸೂರಲ್ಲೇ ಉಳಿಯಬೇಕೆಂದು 1967 ರಲ್ಲಿ ವರದಿ ಸಲ್ಲಿಸಿತು.

ಹೆಚ್ಚು ಪ್ರದೇಶಗಳನ್ನು ನಿರೀಕ್ಷಿಸಿದ್ದ ಮಹಾರಾಷ್ಟ್ರ ಹೆಚ್ಚು ಕಳೆದು ಕೊಳ್ಳುವ ಪ್ರಸಂಗ ಒದಗಿ ಬಂದುದರಿಂದ ಮಹಾಜನ್ ವರದಿಯನ್ನು ಗಾಳಿಗೆ ತೂರಿ ಆಗಾಗ್ಗೆ ಗಡಿ ಸಮಸ್ಯೆ ಕಿಡಿಗೆ ಗಾಳಿ ಬೀಸಿ ರಾಜಕೀಯ ಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಿದೆ. ಈ ಸಮಸ್ಯೆ ಕೇಂದ್ರ ಸರ್ಕಾರದ ಮುಂದಿರುವುದರಿಂದ ಈ ಸಮಸ್ಯೆ ಜಟಿಲವಾಗಿ ಯಥಾಸ್ಥಿತಿಯಲ್ಲೇ ಇದೆ.

ಆಧಾರ : . ಕರ್ನಾಟಕ ಸಂಸ್ಕೃತಿ - ಫಾಲಾಕ್ಷ ಕರ್ನಾಟಕ ಗೆಜೆಟಿಯರ್ - ಗೂಗಲ್ ಕೃಪೆಯ - ಚಿತ್ರಗಳು