ಈಗ ನಮ್ಮ ಪದ್ಧತಿಗಳೇ ಸರಿಯಿದೆ ಅಂತ ವಿದೇಶಿಯರಿಗೆ ಗೊತ್ತಾಗಿದೆ.ಅವರುಗಳು ನಮ್ಮ ಆಚರಣೆಗಳನ್ನು ಅನುಸರಿಸುವಲ್ಲಿ ಮುಂದೆ ಇದಾರೆ.ಆದರೆ ನಮ್ಮ ಭಾರತೀಯರಿಗೆ ಹಿತ್ತಲ ಗಿಡ ಮದ್ದಲ್ಲ..ಆಸ್ಪತ್ರೆ ವಾಸಿಯಾಗುತ್ತಿದ್ದಾರೆ..😃😃
ನಮ್ಮ ಪ್ರತಿಯೊಂದು ಆಚರಣೆಯ ಹಿಂದೆಯೂ ಆರೋಗ್ಯ ಅಡಗಿತ್ತು.ಅದನ್ನು ಈಗಿನ ನಮ್ಮವರು ಮೂಢನಂಬಿಕೆ ಅಂದರು.ಮೊದಲು ಇದ್ದಲು,
ಉಪ್ಪು,ಬೇವಿನಕಡ್ಡಿ ಉಪಯೋಗಿಸಿ ಹಲ್ಲುಜ್ಜುತಿ ದ್ದೆವು.ಆದ್ರೆ ವಿದೇಶಿ ಕಂಪನಿಗಳು ಈಗ ನಮ್ಮದೇ ದಾರಿಗೆ ಬಂದು "ನಿಮ್ಮ ಟೂತ್ ಪೇಸ್ಟ್ ನಲ್ಲಿ ಉಪ್ಪು ಇದೆಯಾ, ಲವಂಗ ಇದ್ಯಾ" ಅಂತ ಕೇಳ್ತಾ ಇವೆ..😃😃
ನಮ್ಮ ಹಿರಿಯರು "ಬೆಳಿಗ್ಗೆ ಎದ್ದ ಕೂಡಲೇ ರಾತ್ರಿ ತುಂಬಿಟ್ಟ ತಾಮ್ರದ ತಂಬಿಗೆಯ ನೀರು ಕುಡಿಬೇಕು" ಅಂತ ಹೇಳ್ತಾ ಇದ್ದರು.ಈಗ ವಾಟರ್ filter ಕಂಪನಿಯವರು ಅದನ್ನೇ ಹೇಳುತ್ತಿದ್ದಾರೆ."ತಾಮ್ರದ ತಂಬಿಗೆಯಲ್ಲಿ ನೀರು ಸಂಗ್ರಹಿಸಿ ಕುಡಿಯಿರಿ, ಪ್ಲಾಸ್ಟಿಕ್ ನಲ್ಲಿ ಸಂಗ್ರಹಿಸಿದ ನೀರು ಕ್ಯಾನ್ಸರ್ ಕಾರಕ." ಅಂತ..!!
ಮಡಿ, ಮುಸುರೆ,ಎಂಜಲು ಹೀಗೆ ಬೇರೆ ಬೇರೆ ಇಡುವ ಪದ್ಧತಿಯಿತ್ತು.ಎಲ್ರಿಗೂ ಇದು ಹಾಸ್ಯಾಸ್ಪದವಾಗಿದೆ ಇವತ್ತು.ಆದರೆ,
ಸ್ನಾನದಿಂದ ದೇಹ ಪ್ರಫುಲ್ಲಿತ ಆಗುತ್ತೆ. ಸ್ವಚ್ಛ ಅನ್ಸುತ್ತೆ + ಇನ್ನೂ ಅನೇಕ ಉತ್ತಮ ಅಂಶಗಳು= ಇದು ಮಡಿ.
ಹಾಲು,ಮೊಸರು,ಅನ್ನ ಮುಂತಾದವು ಬೇಗ ಹಾಳಾಗುವ ಪದಾರ್ಥ.ಬ್ಯಾಕ್ಟೀರಿಯಾ ಬೇಗ ಬೆಳೆಯುತ್ತದೆ, ಆಹಾರದ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ =ಇದು ಮುಸುರೆ
ಇನ್ನು ಒಬ್ಬರು ತಿಂದು ಬಿಟ್ಟಿದ್ದನ್ನು ಮತ್ತೊಬ್ಬರಿಗೆ ಕೊಡುತ್ತಿರಲಿಲ್ಲ= ಇದು ಎಂಜಲು.ಈಗ ಡಾಕ್ಟರ್ ಇದನ್ನೇ ಹೇಳ್ತಾ ಇರೋದು. ಸಾಂಕ್ರಾಮಿಕ ರೋಗಗಳು ಬರದಂತೆ ತಡೆಗಟ್ಟಲು ಇದು ಸಹಾಯಕಾರಿ ಅಂತ..😃😃
ಆಯಾಕಾಲಕ್ಕೆ ತಕ್ಕಂತೆ ಹಬ್ಬಗಳು.ಅದಕ್ಕೆ ತಕ್ಕಂತೆ ತಿನಿಸುಗಳು.ಚಳಿಗಾಲದ ಸಮಯದಲ್ಲಿ ಬರುವ ಸಂಕ್ರಾಂತಿಗೆ ತಿನ್ನುವ ಎಳ್ಳು ಬೆಲ್ಲ ಚಳಿಗಾಲದಲ್ಲಿ ಒಣಗಿದ ಚರ್ಮಕ್ಕೆ ಬೇಕಾದ ಎಣ್ಣೆ ಅಂಶ ದೇಹಕ್ಕೆ ಒದಗಿಸುತ್ತದೆ.ಹಬ್ಬಹಬ್ಬಕ್ಕೆ ಮಾಡುವ ಅಭ್ಯಂಗ ದೇಹಕ್ಕೆ ಶಕ್ತಿ ಕೊಡುತ್ತದ್ದೆ. ಎಣ್ಣೆ ನೀರು ದೇಹದ ರಕ್ತ ಸಂಚಾರ ಹೆಚ್ಚಾಗುವಂತೆ ಮಾಡುತ್ತದೆ.
ಮುಂಬಾಗಿಲಲ್ಲಿ ಹಾಕುವ ಸಗಣಿ ನೀರು ಕ್ರಿಮಿ ಕೀಟಗಳು ಮನೆಯಒಳಗೆ ಬರುವುದನ್ನು ತಪ್ಪಿಸುತ್ತದೆ.
ತಿಂಗಳಿಗೊಮ್ಮೆ ಮಾಡುವ ಸಂಕಷ್ಟಿ ಉಪವಾಸ, 2 ಏಕಾದಶಿ ಉಪವಾಸ ದೇಹದ ಪಚನಕ್ರಿಯೆಗೆ ಒಂದಷ್ಟು ವಿಶ್ರಾಂತಿ ಕೊಟ್ಟು ದೇಹವನ್ನು ಆರೋಗ್ಯವನ್ನಾಗಿ ಇಡುತ್ತದೆ.ವಿಠ್ಠಲ ನಾಮಸ್ಮರಣೆಯಿಂದ ಹೃದಯಾಘಾತ ತಪ್ಪುತ್ತದೆ. ಆದ್ರೆ ಉಚ್ಚಾರಣೆಯು ತುಂಬಾ ಮುಖ್ಯ. ಸಂಧ್ಯಾವಂದನೆ ಒಂದು ಆಚರಣೆಯಲ್ಲ.ಇದು ಯೋಗ,ಪ್ರಾಣಾಯಾಮ ಸೇರಿದ ಅಭ್ಯಾಸ. ಇದರಲ್ಲಿ ಪ್ರಾಣಾಯಮವಿದೆ.ಅರ್ಘ್ಯ ನೀಡಲು ಕೂರುವುದು, ಏಳುವುದು ದೇಹಕ್ಕೆ ಒಳ್ಳೆಯ ವ್ಯಾಯಾಮ.
ಮನೆಯಲ್ಲಿ ಯಾವುದಾದರೂ ದೇವರಪೂಜೆ,ಪಿತೃ ಕಾರ್ಯವಿದ್ದರೆ ಹಿಂದಿನ ದಿನ ರಾತ್ರಿ ಫಲಾಹಾರ. ಬೆಳಿಗ್ಗೆ ಉಪವಾಸ.ಆಹಾರವನ್ನು ಸೇವಿಸದೆ ಕಾರ್ಯಗಳನ್ನು ಮಾಡಿದ ಮೇಲೆ ವಿಶೇಷ ಭೋಜನ ಸೇವಿಸಿದಾಗ ಹೊಟ್ಟೆಯಲ್ಲಿ ಸುಲಭವಾಗಿ ಜೀರ್ಣವಾಗಲು ಸಹಕಾರಿ.ಆಹಾರ ಪದಾರ್ಥಗಳನ್ನ ಸಾತ್ವಿಕ, ತಾಮಸಿಕ, ರಾಜಸಿಕ ಅಂಶದ ಪದಾರ್ಥಗಳು ಅಂತ ಹಿರಿಯರು ವಿಂಗಡಿಸಿದ್ದಾರೆ ಹಿರಿಯರು.ತಾಮಸ ಮತ್ತು ರಾಜಸಿಕ ಅಂಶದ ಪದಾರ್ಥಗಳು ಆರೋಗ್ಯವನ್ನು ಏರುಪೇರು ಮಾಡುತ್ತದೆ.
ಬಾಳೆಎಲೆಯಲ್ಲಿ ಊಟ ಮಾಡುವುದು ಏಕೆಂದರೆ ಅದು ದೇಹಕ್ಕೆ ಅಗತ್ಯವಿದ್ದ ಒಳ್ಳೆ ಅಂಶವನ್ನು ನೀಡುತ್ತದೆ. ಹಾಗೆಯೇ ವಿಷದ ಪದಾರ್ಥ ಅದರಮೇಲೆ ಬಿದ್ದರೆ ಅದು ಕಪ್ಪಾಗುತ್ತದೆ. ಊಟದ ವಿಷಯದಲ್ಲೂ ನಿಯಮವಿದೆ.ನಾವು ಎಲ್ಲವನ್ನು ತಿನ್ನಬೇಕು. ಒಂದೊಂದು ತುತ್ತು 32 ಸಲ ಅಗೆದು ತಿನ್ನಿ ಅಂತ.ಈ ರೀತಿಯಲ್ಲಿ ತಿನ್ನೋ ಹೊತ್ತಿಗೆ ಅಷ್ಟು ಊಟ ಸಾಕು ಅನಿಸುತ್ತೆ.ಇದನ್ನೇ ಮಾಡಿದರೆ ಆರೋಗ್ಯಕರ ದೇಹ ಗ್ಯಾರಂಟಿ. ಊಟದ ಮೊದಲು ಎಲೆ ಸುತ್ತ ನೀರು ಹಾಕುವುದು ಯಾವುದೇ ಸಣ್ಣ ಕ್ರಿಮಿಕೀಟಗಳು ಬಾಳೆಲೆಗೆ ಬಾರದಿರಲಿ ಅಂತ.ಬೆಳ್ಳಿಯಲ್ಲಿ ರೋಗನಿರೋಧಕ ಶಕ್ತಿ ಇರೋದ್ರಿಂದ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿ ಅಂತ ಹೇಳ್ತಾ ಇದ್ರು.
ಸಂಜೆ ಕತ್ತಲಾದ ಮೇಲೆ ಕಸಗುಡಿಸಿ ಕಸ ಹೊರಗೆ ಹಾಕಿದ್ರೆ ಅಮೂಲ್ಯವಾದ ವಸ್ತುಗಳು ಏನಾದ್ರೂ ಇದ್ದು ಕತ್ತಲೆಗೆ ಕಾಣದೆ ಇದ್ರೆ ಕಷ್ಟ ಅಂತ.ಮೈ ಮೇಲೆ ಚೂರಾದ್ರು ಬೆಳ್ಳಿ, ಬಂಗಾರ ಇರ್ಲಿ ಅಂತ ಹೇಳ್ತಿದ್ರು ಅಲ್ವಾ? ಬೆಳ್ಳಿ, ಬಂಗಾರದ ಮೇಲೆ ಬಿದ್ದ ನೀರು ಮೈಮೇಲೆ ಬಿದ್ರೆ ಒಳ್ಳೇದು ಅಂತ.
ಹೀಗೆ ಹೇಳುತ್ತಾ ಹೋದರೆ ಒಂದು ಪುಸ್ತಕ ಆಗಬಹುದು.