ಮೂತ್ರವ್ಯಾದಿ ಉರಿಮೂತ್ರ ಮುಂತಾದ ಮೂತ್ರ ಸಮಸ್ಯೆಗಳಿಗೆ ಮನೆಮದ್ದುಗಳು

SANTOSH KULKARNI
By -
1 minute read
0

ಪ್ರೀಯ ಸ್ನೇಹಿತರೆ ಬದಲಾಗುತ್ತಿರುವ ಜೀವನ ಶೈಲಿಯಿಂದ ನಮ್ಮ ದೇಹಹದಲ್ಲಿ ಆರೋಗ್ಯದ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತದೆ. ಈ ಸಮಸ್ಯೆಗೆ ಒತ್ತಡ ವೇಗದ ಕೆಲಸಗಳು ಕಾರಣವಾದರೆ ನಾವು ಉಪಯೋಗಿಸುವ ಆಹಾರ ಪದ್ದತಿಗಳು ಮುಂತಾದವುಗಳಾಗಿದೆ. ಇದರಲ್ಲಿ ಮುಖ್ಯವಾಗಿ ಮೂತ್ರನಾಳದ ಸೋಂಕುಗಳು ಒಂದಾಗಿದೆ ನಾವು ಈ ಮೂತ್ರರೋಗ,ಉರಿಮೂತ್ರ ಮುಂತಾದ ಸೊಂಕಿಗೆ ಮನೆಮದ್ದುಗಳನ್ನು ಇಲ್ಲಿ ತಿಳಿಯೋಣ.

muthra roga
ಹೆಚ್ಚು ಮೂತ್ರವಿಸರ್ಜನೆ ಆಗುತ್ತಿದ್ದರೆ ದಾಲ್ಟಿನ್ನಿ ಪುಡಿಯನ್ನು ಜೇನುತುಪ್ಪದಲ್ಲಿ ಮಿಶ್ರ ಮಾಡಿ ಸೇವಿಸಿದರೆ ಗುಣ ಆಗುವುದು. ಬೂದಗುಂಬಳವನ್ನು ಸೇವಿಸುವುದರಿಂದ ಮೂತ್ರವಿಸರ್ಜನೆ ಸಲೀಸಾಗುವುದು.
ಸೋಂಪು ಕಾಳನ್ನು ನುಣ್ಣಗೆ ಅರೆದು, ಹೊಟ್ಟೆಯ ಮೇಲೆ ಪಟ್ಟಿ ಹಾಕಿದರೆ ಮೂತ್ರ ತಡೆ ನಿವಾರಣೆ ಆಗುವುದು.
ಸೋಂಪಿನ ಕಾಳಿನ ಕಷಾಯವನ್ನು ಜೇನುತುಪ್ಪದೊಂದಿಗೆ ಸೇರಿಸಿ,ಸೇವಿಸುವುದರಿಂದ ಮೂತ್ರವಿಸರ್ಜನೆ ಸಲೀಸಾಗಿ ಆಗುವುದು. ಸೋರೇಕಾಯಿಯ ರಸಕ್ಕೆ ನಿಂಬೆಹಣ್ಣು ಹಿಂಡಿ, ಕುಡಿಯುವುದರಿಂದ ಉರಿಮೂತ್ರ ನಿಲ್ಲುವುದು.
ಹುರುಳಿಕಾಳನ್ನು ದಿನವೂ ಅಡಿಗೆಯಲ್ಲಿ ಹಲವಾರು ರೀತಿಯಲ್ಲಿ ಉಪಯೋಗಿಸುವುದರಿಂದ ಮೂತ್ರಕೋಶ ಹಾಗೂ ಮೂತ್ರನಾಳದ ತೊಂದರೆಗಳು ನಿವಾರಣೆ ಆಗುವುದು.
ನೀರಿಗೆ ನಿಂಬೆರಸ, ಉಪ್ಪು ಬೆರೆಸಿ ಕುಡಿಯುವುದರಿಂದ ಉರಿ ಮೂತ್ರರೋಗ ನಿವಾರಣೆ ಆಗುವುದು.
ಕುದಿಸಿ, ಆರಿಸಿದ ನೀರನ್ನು ಕುಡಿಯುವುದರಿಂದಲೂ ಉರಿಮೂತ್ರ ರೋಗ ನಿವಾರಣೆ ಆಗುವುದು.
ಹೀರೇಕಾಯಿಯನ್ನು ಅಡಿಗೆಯಲ್ಲಿ ಹೇರಳವಾಗಿ ತಪ್ಪದೆ ಉಪಯೋಗಿಸುವುದರಿಂದ ಮೂತ್ರವು ಸುಸೂತ್ರವಾಗಿ ಹೊರಗೆ ಬರುವುದು.
ಕಬ್ಬಿನ ಹಾಲು, ಎಳೆನೀರು, ಹಸಿಯ ಶುಂಠಿರಸ, ನಿಂಬೆರಸ ಇವೆಲ್ಲವನ್ನು ಒಟ್ಟಿಗೆ ಸೇರಿಸಿ ಕುಡಿಯುವುದರಿಂದ ಮೂತ್ರಬಾಧೆ ಇಲ್ಲದಂತಾಗುವುದು.
ಮೊಸರನ್ನಕ್ಕೆ ಬೆಲ್ಲ ಮತ್ತು ಹುರಿದ ಕರಿ ಮೆಣಸು, ಪುಡಿಯನ್ನು ಸೇರಿಸಿ, ಊಟ ಮಾಡುವುದರಿಂದ ಮೂತ್ರ, ಗುದದ್ವಾರದ ಉರಿ ಕಡಿಮೆ ಆಗುವುದಲ್ಲದೆ, ತೊಂದರೆ ಇಲ್ಲದೆ ಮೂತ್ರ ಮಲ ವಿಸರ್ಜನೆಯಾಗುವುದು.
ಒಂದು ಬಟ್ಟಲು ಎಳನೀರಿಗೆ ಸ್ವಲ್ಪ ಬೆಲ್ಲ, ಅರ್ಧ ಚಮಚ ಕೊತ್ತುಂಬರಿ ಬೀಜದ ಪುಡಿ ಸೇರಿಸಿ, ದಿನವೂ ಎರಡು ಬಾರಿ ಸೇವಿಸುವುದರಿಂದ ಉರಿಮೂತ್ರರೋಗ ನಿವಾರಣೆ ಆಗುವುದು.
ಶುದ್ಧವಾದ ಜೇನುತುಪ್ಪವನ್ನು ಊಟದ ನಂತರ, ಮಲಗುವ ಮೊದಲು ದಿನವೂ ಸ್ವಲ್ಪ ಸ್ವಲ್ಪ ಸೇವಿಸುತ್ತಿದ್ದರೆ ಬಹುಮೂತ್ರ ರೋಗವೂ ಕಡಿಮೆ ಆಗುವುದು.
ನಾಲ್ಕಾರು ಏಲಕ್ಕಿ ಪುಡಿಯನ್ನು ಹಾಲಿನೊಂದಿಗೆ ಬೆರಸಿ, ಎಳೆನೀರಿನೊಂದಿಗೆ ಕುಡಿದರೆ ಮೂತ್ರಕಟ್ಟುವಿಕೆ ಸಡಿಲ ಆಗುವುದು.
ಬಾಳೆ ಹೂವಿನ ರಸವನ್ನು ಸೌತೆಕಾಯಿ ರಸದೊಂದಿಗೆ ಸೇರಿಸಿ ಕುಡಿದರೆ ಮೂತ್ರವಿಸರ್ಜನೆಗೆ ಅಡ್ಡಿ ಕಡಿಮೆ ಆಗುವುದು.ಜೊತೆಗೆ ಮೂತ್ರಕೋಶ, ಮೂತ್ರನಾಳದಲ್ಲಿ ಯಾವ ತೊಂದರೆಯೂ ಉಂಟಾಗದು.
ಎಳೆನೀರಿಗೆ ನಿಂಬೆರಸವನ್ನು ಬೆರೆಸಿ ಕುಡಿದರೆ ಬಹುಮೂತ್ರ ರೋಗ ನಿವಾರಣೆ ಆಗುವುದರ ಜೊತೆಗೆ ಮೂತ್ರ ವಿಸರ್ಜನೆ ಸಲೀಸಾಗಿ ಆಗುವುದು.
ಮೂತ್ರ ರೋಗಕ್ಕೆ ಮನೆಮದ್ದು...
ನೀರು ಬೆರೆಸದೇ ಇರುವ ಗರಿಕೆಯ ರಸ ನಾಲ್ಕು ಚಮಚವನ್ನು ನೊರೆ ಹಾಲಿನಲ್ಲಿ ಸೇವಿಸುವುದರಿಂದ ಉರಿ ನಿವಾರಣೆಯಾಗುವುದು.
ನೆಗ್ಗಿಲ ಗಿಡದ ಸಮೂಲ ಅಥವಾ ನೆಗ್ಗಿಲ ಮುಳ್ಳಿನ ಕಷಾಯ ಕುಡಿಯಲು ಉರಿಮೂತ್ರ ತಗ್ಗುತ್ತದೆ.
ಶುಂಠಿ, ಬಿಳಿಗಾರ, ಸ್ಪಟಿಕ ಎಳನೀರಿನಲ್ಲಿ ಕದಡಿ ಕುಡಿಸಲು ಮೂತ್ರದ ಕಲ್ಲು ಕರಗಿ ಬೀಳುತ್ತದೆ.
ಸೌತೆಬೀಜ ಅರೆದು ಸೈಂಧವ ಲವಣ ಹಾಕಿ ಕದಡಿ ಕುಡಿಸಲು ಮೂತ್ರದ ಕಲ್ಲುಕರಗಿ ಬೀಳುತ್ತದೆ.
ಲಕ್ಕಿ ಬೇರನ್ನು ಎಳನೀರಿನಲ್ಲಿ ಕಲ್ಲುಸಕ್ಕರೆ ಬೆರೆಸಿ ಕುಡಿದರೆ ಮೂತ್ರದ ಕಲ್ಲು ಕರಗುವುದು.
ಹುಣಸ ಸೊಪ್ಪಿನ ರಸ ಎಮ್ಮೆ ಮೊಸರಿನಲ್ಲಿ ಸೇವಿಸಲು ಮೂತ್ರ ಸಲೀಸಾಗಿ ಸಾಗುವುದು.
ಜಾಜಿಯ ಬೇರು ಆಡಿನ ಹಾಲಿನಲ್ಲಿ ಕುಡಿಯಲು ಮೂತ್ರರೋಗ ಗುಣವಾಗುವವು.
ರಕ್ತದೊಂದಿಗೆ ಮೂತ್ರ ಹೋಗುತ್ತಿದ್ದರೆ ಉತ್ತರಣಿ ಸೊಪ್ಪಿನ ರಸದಲ್ಲಿ ಮೆಣಸಿನ ಚೂರ್ಣ ಸೇರಿಸಿ ಕುಡಿದರೆ ದೋಷ ನಿವಾರಣೆಯಾಗುವುದು.
Tags:

Post a Comment

0Comments

Post a Comment (0)